ಅರಣ್ಯಕಾಂಡ 1:1-54

  • ಸೈನ್ಯಕ್ಕೆ ಸೇರಿಸಿದ ಗಂಡಸ್ರ ಪಟ್ಟಿ (1-46)

  • ಸೈನ್ಯಕ್ಕೆ ಲೇವಿಯರ ಹೆಸ್ರು ಸೇರಿಸಲಿಲ್ಲ (47-51)

  • ಪಾಳೆಯದ ಸುವ್ಯವಸ್ಥಿತ ಏರ್ಪಾಡು (52-54)

1  ಇಸ್ರಾಯೇಲ್ಯರು ಈಜಿಪ್ಟಿಂದ* ಹೊರಟ ಎರಡನೇ ವರ್ಷದ ಎರಡನೇ ತಿಂಗಳ ಮೊದಲನೇ ದಿನ+ ಸಿನಾಯಿ ಕಾಡಲ್ಲಿದ್ದಾಗ*+ ದೇವದರ್ಶನ ಡೇರೆಯಲ್ಲಿ+ ಯೆಹೋವ ಮೋಶೆಗೆ ಹೀಗೆ ಹೇಳಿದನು:  “ನೀನು ಮತ್ತು ಆರೋನ ಇಸ್ರಾಯೇಲ್ಯರ ಎಲ್ಲ ಗಂಡಸರ ಹೆಸ್ರನ್ನ ಪಟ್ಟಿಮಾಡಿ.+ ಅವರವರ ಕುಟುಂಬಕ್ಕೆ, ತಂದೆಯ ಮನೆತನಕ್ಕೆ ತಕ್ಕ ಹಾಗೆ ಪಟ್ಟಿಮಾಡಿ.  ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾಗಿರೋ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಗಂಡಸರ ಹೆಸ್ರು ಬರೀರಿ.+ ಹೆಸ್ರನ್ನ ಆಯಾ ದಳದ* ಪ್ರಕಾರ* ಬರೀರಿ.  ಪ್ರತಿಯೊಂದು ಕುಲದಿಂದ ಒಬ್ಬೊಬ್ಬ ಮುಖ್ಯಸ್ಥನನ್ನ ಆರಿಸಿ.+  ಅವರು ನಿಮಗೆ ಸಹಾಯಕರಾಗಿ ಇರ್ತಾರೆ. ನೀವು ಯಾರನ್ನ ಆರಿಸ್ಕೊಳ್ಳಬೇಕಂದ್ರೆ, ರೂಬೇನ್‌ ಕುಲದಿಂದ ಶೆದೇಯೂರನ ಮಗ ಎಲೀಚೂರ್‌,+  ಸಿಮೆಯೋನ್‌ ಕುಲದಿಂದ ಚೂರೀಷದೈಯ ಮಗ ಶೆಲುಮೀಯೇಲ್‌,+  ಯೆಹೂದ ಕುಲದಿಂದ ಅಮ್ಮೀನಾದಾಬನ ಮಗ ನಹಶೋನ್‌,+  ಇಸ್ಸಾಕಾರ್‌ ಕುಲದಿಂದ ಚೂವಾರನ ಮಗ ನೆತನೇಲ್‌,+  ಜೆಬುಲೂನ್‌ ಕುಲದಿಂದ ಹೇಲೋನನ ಮಗ ಎಲೀಯಾಬ್‌,+ 10  ಯೋಸೇಫನ ಮಕ್ಕಳಲ್ಲಿ: ಎಫ್ರಾಯೀಮನ+ ಕುಲದಿಂದ ಅಮ್ಮೀಹೂದನ ಮಗ ಎಲೀಷಾಮ, ಮನಸ್ಸೆ ಕುಲದಿಂದ ಪೆದಾಚೂರನ ಮಗ ಗಮ್ಲೀಯೇಲ್‌, 11  ಬೆನ್ಯಾಮೀನ್‌ ಕುಲದಿಂದ ಗಿದ್ಯೋನಿಯ ಮಗ ಅಬೀದಾನ್‌,+ 12  ದಾನ್‌ ಕುಲದಿಂದ ಅಮ್ಮೀಷದೈಯ ಮಗ ಅಹೀಗೆಜೆರ್‌,+ 13  ಅಶೇರ್‌ ಕುಲದಿಂದ ಓಕ್ರಾನನ ಮಗ ಪಗೀಯೇಲ್‌,+ 14  ಗಾದ್‌ ಕುಲದಿಂದ ದೆಗೂವೇಲನ ಮಗ ಎಲ್ಯಾಸಾಫ್‌,+ 15  ನಫ್ತಾಲಿ ಕುಲದಿಂದ ಏನಾನನ ಮಗ ಅಹೀರ.+ 16  ಇವರು ಇಸ್ರಾಯೇಲ್ಯರಿಂದ ಆಯ್ಕೆಯಾದ ಗಂಡಸರು. ಇವರು ತಮ್ಮ ತಂದೆಯ ಕುಲಕ್ಕೆ ಪ್ರಧಾನರು.+ ಸಾವಿರಾರು ಇಸ್ರಾಯೇಲ್ಯರ ದಳಗಳಿಗೆ* ಮುಖ್ಯಸ್ಥರು.”+ 17  ದೇವರು ಆರಿಸಿದ ಈ ಗಂಡಸರನ್ನ ಮೋಶೆ ಆರೋನ ತಮ್ಮ ಸಹಾಯಕರಾಗಿ ತಗೊಂಡ್ರು. 18  ಅವರು ಎರಡನೇ ತಿಂಗಳ ಮೊದಲನೇ ದಿನ ಎಲ್ಲ ಇಸ್ರಾಯೇಲ್ಯರನ್ನ ಸೇರಿಸಿ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ+ ಹೆಸ್ರನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. 19  ಹೀಗೆ ಯೆಹೋವ ಹೇಳಿದ ಹಾಗೆ ಮೋಶೆ ಸಿನಾಯಿ ಕಾಡಲ್ಲಿ ಹೆಸ್ರನ್ನ ಬರ್ಕೊಂಡ.+ 20  ಇಸ್ರಾಯೇಲನ ಮೊದಲ ಮಗ ರೂಬೇನನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರನ್ನ ಬರ್ಕೊಂಡ್ರು. 21  ರೂಬೇನ್‌ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 46,500. 22  ಸಿಮೆಯೋನನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 23  ಸಿಮೆಯೋನ್‌ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 59,300. 24  ಗಾದನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 25  ಗಾದ್‌ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 45,650. 26  ಯೆಹೂದನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 27  ಯೆಹೂದ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 74,600. 28  ಇಸ್ಸಾಕಾರನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 29  ಇಸ್ಸಾಕಾರ್‌ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 54,400. 30  ಜೆಬುಲೂನನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 31  ಜೆಬುಲೂನ್‌ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 57,400. 32  ಎಫ್ರಾಯೀಮನ+ ಮೂಲಕ ಬಂದ ಯೋಸೇಫನ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 33  ಎಫ್ರಾಯೀಮ್‌ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 40,500. 34  ಮನಸ್ಸೆಯ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 35  ಮನಸ್ಸೆ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 32,200. 36  ಬೆನ್ಯಾಮೀನನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 37  ಬೆನ್ಯಾಮೀನ್‌ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 35,400. 38  ದಾನನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 39  ದಾನ್‌ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 62,700. 40  ಅಶೇರನ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 41  ಅಶೇರ್‌ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 41,500. 42  ನಫ್ತಾಲಿಯ+ ವಂಶದವರ ಹೆಸ್ರುಗಳನ್ನ ಅವರವರ ಕುಟುಂಬ, ತಂದೆ ಮನೆತನದ ಪ್ರಕಾರ ಪಟ್ಟಿ ಮಾಡಿದ್ರು. ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರು ಬರ್ಕೊಂಡ್ರು. 43  ನಫ್ತಾಲಿ ಕುಲದಿಂದ ಪಟ್ಟಿ ಆದವ್ರ ಸಂಖ್ಯೆ 53,400. 44  ಈ ಎಲ್ಲ ಹೆಸ್ರನ್ನ ಆರೋನ ಮತ್ತು ಇಸ್ರಾಯೇಲ್ಯರ 12 ಪ್ರಧಾನರ ಸಹಾಯದಿಂದ ಮೋಶೆ ಪಟ್ಟಿಮಾಡಿದ. ಆ ಪ್ರಧಾನರು ಅವರವರ ಕುಲಗಳಿಗೆ ಮುಖ್ಯಸ್ಥರು ಆಗಿದ್ರು. 45  ಇಸ್ರಾಯೇಲ್‌ ಸೈನ್ಯದಲ್ಲಿ ಕೆಲಸ ಮಾಡೋಕೆ ಯೋಗ್ಯರಾದ 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನ ಎಲ್ಲ ಗಂಡಸರ ಹೆಸ್ರನ್ನ ಅವರವರ ತಂದೆಯ ಮನೆತನದ ಪ್ರಕಾರ ಬರ್ಕೊಂಡ್ರು. 46  ಇಸ್ರಾಯೇಲ್ಯರಲ್ಲಿ ಬರ್ಕೊಂಡ ಗಂಡಸರ ಒಟ್ಟು ಸಂಖ್ಯೆ 6,03,550.+ 47  ಆದ್ರೆ ಅವ್ರ ಜೊತೆ ಲೇವಿ+ ಕುಲದ ಕುಟುಂಬಗಳನ್ನ ಸೇರಿಸ್ಕೊಳ್ಳಲಿಲ್ಲ.+ 48  ಮೋಶೆಗೆ ಯೆಹೋವ ಹೀಗೆ ಹೇಳಿದನು: 49  “ನೀನು ಲೇವಿ ಕುಲದ ಗಂಡಸರ ಹೆಸ್ರನ್ನ ಮಾತ್ರ ಸೇರಿಸ್ಕೊಳ್ಳಬಾರದು. ಅವ್ರ ಸಂಖ್ಯೆಯನ್ನ ಬೇರೆ ಇಸ್ರಾಯೇಲ್ಯರ ಸಂಖ್ಯೆ ಜೊತೆ ಸೇರಿಸಬಾರದು.+ 50  ಸಾಕ್ಷಿ ಮಂಜೂಷ+ ಇರೋ ಪವಿತ್ರ ಡೇರೆಯನ್ನ, ಅದ್ರ ಎಲ್ಲ ಉಪಕರಣಗಳನ್ನ, ಪವಿತ್ರ ಡೇರೆಗೆ ಸಂಬಂಧಪಟ್ಟ ಎಲ್ಲ ವಸ್ತುಗಳನ್ನ+ ನೋಡ್ಕೊಳ್ಳೋಕೆ ನೀನು ಲೇವಿಯರನ್ನ ನೇಮಿಸಬೇಕು. ಅವರು ಪವಿತ್ರ ಡೇರೆಯನ್ನ, ಅದ್ರ ಎಲ್ಲ ಉಪಕರಣಗಳನ್ನ ಹೊತ್ಕೊಂಡು ಹೋಗಬೇಕು.+ ಅವರೇ ಆ ಡೇರೆಯ ಕೆಲಸಗಳನ್ನ ಮಾಡಬೇಕು.+ ಪವಿತ್ರ ಡೇರೆ ಸುತ್ತ ಲೇವಿಯರು ಡೇರೆಗಳನ್ನ ಹಾಕ್ಬೇಕು.+ 51  ಪವಿತ್ರ ಡೇರೆಯನ್ನ ಬೇರೆ ಜಾಗಕ್ಕೆ ತಗೊಂಡು ಹೋಗುವಾಗೆಲ್ಲ ಲೇವಿಯರು ಆ ಡೇರೆಯ ಭಾಗಗಳನ್ನ ಬಿಡಿಸಬೇಕು.+ ಒಂದು ಜಾಗದಲ್ಲಿ ಪವಿತ್ರ ಡೇರೆ ಹಾಕುವಾಗ ಲೇವಿಯರೇ ಆ ಡೇರೆ ಭಾಗಗಳನ್ನ ಜೋಡಿಸಬೇಕು. ಲೇವಿಯರನ್ನ ಬಿಟ್ಟು ಬೇರೆ ಯಾರಾದ್ರೂ ಅದ್ರ ಹತ್ರ ಬಂದ್ರೆ ಅವರನ್ನ ಸಾಯಿಸಬೇಕು.+ 52  ಯಾವ ದಳ* ಎಲ್ಲಿ ಡೇರೆ ಹಾಕಬೇಕು ಅಂತ ಹೇಳಿದ್ರೋ ಅಲ್ಲೇ ಪ್ರತಿಯೊಬ್ಬ ಇಸ್ರಾಯೇಲ್ಯ ತನ್ನ* ಡೇರೆ ಹಾಕಬೇಕು.+ 53  ಸಾಕ್ಷಿ ಮಂಜೂಷ ಇರೋ ಪವಿತ್ರ ಡೇರೆ ಸುತ್ತ ಲೇವಿಯರು ಡೇರೆ ಹಾಕೊಬೇಕು. ಹೀಗೆ ಮಾಡಿದ್ರೆ ನಾನು ಇಸ್ರಾಯೇಲ್ಯರ ಮೇಲೆ ಕೋಪ ಮಾಡ್ಕೊಳ್ಳಲ್ಲ.+ ಆ ಪವಿತ್ರ ಡೇರೆಯನ್ನ ನೋಡ್ಕೊಳ್ಳೋ* ಜವಾಬ್ದಾರಿ ಲೇವಿಯರದ್ದು.”+ 54  ಯೆಹೋವ ಮೋಶೆ ಮೂಲಕ ಕೊಟ್ಟ ಎಲ್ಲ ಆಜ್ಞೆಯನ್ನ ಇಸ್ರಾಯೇಲ್ಯರು ಪಾಲಿಸಿದ್ರು. ದೇವರು ಹೇಳಿದ ಹಾಗೆ ಅವರು ಮಾಡಿದ್ರು.

ಪಾದಟಿಪ್ಪಣಿ

ಪದವಿವರಣೆಯಲ್ಲಿ “ಅರಣ್ಯಪ್ರದೇಶ” ನೋಡಿ.
ಅಥವಾ “ಐಗುಪ್ತದಿಂದ.”
ಒಂದು ದಳದಲ್ಲಿ ಮೂರು ಕುಲ ಇರುತ್ತೆ.
ಅಕ್ಷ. “ಸೈನ್ಯಸೈನ್ಯವಾಗಿ.”
ಅಕ್ಷ. “ಸೈನ್ಯಸೈನ್ಯಗಳಿಗೆ.”
ಒಂದು ದಳದಲ್ಲಿ ಮೂರು ಕುಲ ಇರುತ್ತೆ.
ಅಥವಾ “ಅವರವರ ಗುರುತುಚಿಹ್ನೆಗಳಿರೋ ಸ್ಥಳಗಳ ಹತ್ರ.”
ಅಥವಾ “ಕಾವಲು ಕಾಯೋ, ಡೇರೆ ಕೆಲಸಗಳನ್ನ ಮಾಡೋ.”