ಅರಣ್ಯಕಾಂಡ 17:1-13

  • ಆರೋನನ ಕೋಲು ಮೊಗ್ಗುಬಿಡ್ತು (1-13)

17  ಯೆಹೋವ ಮೋಶೆಗೆ  “ಇಸ್ರಾಯೇಲ್ಯರ ಪ್ರತಿಯೊಂದು ಕುಲದ ಪ್ರಧಾನ+ ಒಂದೊಂದು ಕೋಲನ್ನ ನಿನಗೆ ಕೊಡಬೇಕಂತ ಹೇಳು. ಹೀಗೆ ಅವರಿಂದ ಒಟ್ಟು 12 ಕೋಲು ತಗೊ. ಪ್ರತಿಯೊಬ್ಬ ಪ್ರಧಾನನ ಕೋಲಿನ ಮೇಲೆ ಅವನವನ ಹೆಸ್ರು ಬರಿ.  ಲೇವಿ ಕುಲದ ಕೋಲಿನ ಮೇಲೆ ಆರೋನನ ಹೆಸ್ರು ಬರಿ. ಪ್ರತಿಯೊಂದು ಕುಲದ ಮುಖ್ಯಸ್ಥನಿಗಾಗಿ ಒಂದೊಂದು ಕೋಲು ಇರಬೇಕು.  ಆ ಕೋಲುಗಳನ್ನ ದೇವದರ್ಶನ ಡೇರೆಯಲ್ಲಿ ನಾನು ನಿನಗೆ ಯಾವಾಗ್ಲೂ ಕಾಣಿಸ್ಕೊಳ್ಳೋ+ ಸಾಕ್ಷಿ ಮಂಜೂಷದ ಮುಂದೆ ಇಡು.+  ನಾನು ಯಾರನ್ನ ಆರಿಸ್ಕೊಳ್ತೀನೋ+ ಅವನ ಕೋಲು ಮೊಗ್ಗು ಬಿಡೋ ತರ ಮಾಡ್ತೀನಿ. ಹೀಗೆ, ಇಸ್ರಾಯೇಲ್ಯರು ನನ್ನ ವಿರುದ್ಧ+ ನಿನ್ನ ವಿರುದ್ಧ ಗೊಣಗೋದನ್ನ+ ನಿಲ್ಲಿಸ್ತೀನಿ” ಅಂದನು.  ಈ ಮಾತುಗಳನ್ನ ಮೋಶೆ ಇಸ್ರಾಯೇಲ್ಯರಿಗೆ ಹೇಳಿದ. ಆಗ ಪ್ರತಿಯೊಂದು ಕುಲದ ಪ್ರಧಾನ ಒಂದೊಂದು ಕೋಲನ್ನ ಕೊಟ್ಟ. ಹೀಗೆ ಮೋಶೆ 12 ಕೋಲು ತಗೊಂಡ. ಅವುಗಳಲ್ಲಿ ಆರೋನನ ಕೋಲೂ ಇತ್ತು.  ಆಮೇಲೆ ಮೋಶೆ ಆ ಕೋಲುಗಳನ್ನ ಸಾಕ್ಷಿ ಡೇರೆಯಲ್ಲಿ ಯೆಹೋವನ ಮುಂದೆ ಇಟ್ಟ.  ಮಾರನೇ ದಿನ ಮೋಶೆ ಸಾಕ್ಷಿ ಡೇರೆಯಲ್ಲಿ ಹೋಗಿ ನೋಡಿದಾಗ ಆಹಾ! ಲೇವಿ ಕುಲದ ಆರೋನನ ಕೋಲು ಮೊಗ್ಗು ಬಿಟ್ಟಿತ್ತು. ಅದ್ರಲ್ಲಿ ಮೊಗ್ಗುಗಳು ಇತ್ತು, ಹೂಗಳು ಅರಳಿತ್ತು, ಬಾದಾಮಿ ಹಣ್ಣುಗಳು ಇತ್ತು.  ಮೋಶೆ ಯೆಹೋವನ ಮುಂದೆ ಇದ್ದ ಆ ಎಲ್ಲ ಕೋಲು ತಗೊಂಡು ಇಸ್ರಾಯೇಲ್ಯರ ಹತ್ರ ಹೋದ. ಅವರು ಅವುಗಳನ್ನ ನೋಡಿ ಪ್ರತಿಯೊಬ್ಬ ತನ್ನ ತನ್ನ ಕೋಲನ್ನ ತಗೊಂಡ. 10  ಆಮೇಲೆ ಯೆಹೋವ ಮೋಶೆಗೆ “ಆರೋನನ ಕೋಲನ್ನ+ ತಗೊಂಡು ಹೋಗಿ ಮತ್ತೆ ಸಾಕ್ಷಿ ಮಂಜೂಷದ ಮುಂದೆ ಇಡು. ದಂಗೆ ಏಳೋ ಸ್ವಭಾವ ಇರೋ ಜನ+ ಇನ್ನು ಮುಂದೆ ನನ್ನ ವಿರುದ್ಧ ಗೊಣಗಿ ನಾಶ ಆಗದೇ ಇರೋ ತರ ಆ ಕೋಲು ಎಚ್ಚರಿಕೆಯ ಗುರುತಾಗಿರಲಿ”+ ಅಂದನು. 11  ತಕ್ಷಣ ಮೋಶೆ ಯೆಹೋವ ಆಜ್ಞೆ ಕೊಟ್ಟ ಹಾಗೇ ಮಾಡಿದ. 12  ಆಗ ಇಸ್ರಾಯೇಲ್ಯರು ಮೋಶೆಗೆ “ಈಗ ನಾವು ಯಾರೂ ಬದುಕಿ ಉಳಿಯಲ್ಲ ಅನಿಸುತ್ತೆ. ನಾವೆಲ್ಲ ಖಂಡಿತ ನಾಶ ಆಗಿ ಹೋಗ್ತೀವಿ, ಒಬ್ರೂ ಉಳಿಯಲ್ಲ. 13  ಯೆಹೋವನ ಪವಿತ್ರ ಡೇರೆ ಹತ್ರ ಹೋದ್ರೆ ಸಾಕು ಸತ್ತು ಹೋಗ್ತೀವಿ.+ ನಾವೆಲ್ಲ ಹೀಗೇ ಸಾಯಬೇಕಾ?”+ ಅಂದ್ರು.

ಪಾದಟಿಪ್ಪಣಿ