ಅರಣ್ಯಕಾಂಡ 2:1-34

  • ಮೂರು ಮೂರು ಕುಲಗಳ ಪ್ರಕಾರ ಡೇರೆ (1-34)

    • ಪೂರ್ವದಲ್ಲಿ ಯೆಹೂದ ಕುಲದ ದಳ (3-9)

    • ದಕ್ಷಿಣದಲ್ಲಿ ರೂಬೇನ್‌ ಕುಲದ ದಳ (10-16)

    • ಮಧ್ಯದಲ್ಲಿ ಲೇವಿಯರ ದಳ (17)

    • ಪಶ್ಚಿಮದಲ್ಲಿ ಎಫ್ರಾಯೀಮ್‌ ಕುಲದ ದಳ (18-24)

    • ಉತ್ತರದಲ್ಲಿ ದಾನ್‌ ಕುಲದ ದಳ (25-31)

    • ಪಟ್ಟಿಯಾದ ಗಂಡಸ್ರ ಒಟ್ಟು ಸಂಖ್ಯೆ (32-34)

2  ಮೋಶೆ, ಆರೋನನಿಗೆ ಯೆಹೋವ ಹೇಳಿದ್ದು ಏನಂದ್ರೆ  “ಇಸ್ರಾಯೇಲ್ಯರ ಪ್ರತಿಯೊಂದು ದಳ*+ ದೇವದರ್ಶನ ಡೇರೆಯ ನಾಲ್ಕು ದಿಕ್ಕಲ್ಲಿ ಡೇರೆ ಹಾಕಬೇಕು. ಪ್ರತಿಯೊಬ್ಬ ಗಂಡಸು ತಾನು ಇರಬೇಕಾದ ದಳದಲ್ಲಿ, ತನ್ನ ತಂದೆಯ ಮನೆತನದ ಗುರುತುಚಿಹ್ನೆ ಇರೋ ಹತ್ರಾನೇ ಡೇರೆ ಹಾಕಬೇಕು. ಪ್ರತಿಯೊಬ್ರ ಡೇರೆ ದೇವದರ್ಶನ ಡೇರೆಯ ಕಡೆ ಮುಖ ಮಾಡಿರಬೇಕು.  ದೇವದರ್ಶನ ಡೇರೆಯ ಪೂರ್ವ ದಿಕ್ಕಿಗೆ ಒಂದು ದಳ ಡೇರೆ ಹಾಕಬೇಕು. ಈ ದಳದಲ್ಲಿ ಯೆಹೂದ ಕುಲ ಮುಂದಾಳತ್ವ ವಹಿಸುತ್ತೆ. ಅಮ್ಮೀನಾದಾಬನ ಮಗ ನಹಶೋನ+ ಯೆಹೂದ ಕುಲದ ಪ್ರಧಾನ.  ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 74,600.+  ಯೆಹೂದ ಕುಲದ ಒಂದು ಪಕ್ಕದಲ್ಲಿ ಇಸ್ಸಾಕಾರ್‌ ಕುಲದವರು ಡೇರೆ ಹಾಕಬೇಕು. ಚೂವಾರನ ಮಗ ನೆತನೇಲ್‌+ ಇಸ್ಸಾಕಾರ್‌ ಕುಲದ ಪ್ರಧಾನ.  ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 54,400.+  ಯೆಹೂದ ಕುಲದ ಇನ್ನೊಂದು ಪಕ್ಕದಲ್ಲಿ ಜೆಬುಲೂನ್‌ ಕುಲದವರು ಡೇರೆ ಹಾಕಬೇಕು. ಹೇಲೋನನ ಮಗ ಎಲೀಯಾಬ್‌+ ಜೆಬುಲೂನ್‌ ಕುಲದ ಪ್ರಧಾನ.  ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 57,400.+  ಯೆಹೂದ ಕುಲದ ದಳಕ್ಕೆ ಸೇರಿದ ಗಂಡಸರ ಸಂಖ್ಯೆ 1,86,400. ಎಲ್ಲ ಇಸ್ರಾಯೇಲ್ಯರು ಬೇರೆ ಜಾಗಕ್ಕೆ ಹೋಗುವಾಗ ಮೊದ್ಲು ಡೇರೆ ತೆಗಿಬೇಕಾದವರು ಇವರೇ.+ 10  ದೇವದರ್ಶನ ಡೇರೆಯ ದಕ್ಷಿಣಕ್ಕೆ ಒಂದು ದಳ ಡೇರೆ ಹಾಕಬೇಕು. ಈ ದಳದಲ್ಲಿ ರೂಬೇನ್‌+ ಕುಲ ಮುಂದಾಳತ್ವ ವಹಿಸುತ್ತೆ. ಶೆದೇಯೂರನ ಮಗ ಎಲೀಚೂರ್‌+ ರೂಬೇನ್‌ ಕುಲದ ಪ್ರಧಾನ. 11  ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 46,500.+ 12  ರೂಬೇನ್‌ ಕುಲದ ಪಕ್ಕ ಸಿಮೆಯೋನ್‌ ಕುಲದವರು ಡೇರೆ ಹಾಕಬೇಕು. ಚೂರೀಷದೈಯ ಮಗ ಶೆಲುಮೀಯೇಲ್‌+ ಸಿಮೆಯೋನ್‌ ಕುಲದ ಪ್ರಧಾನ. 13  ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 59,300.+ 14  ರೂಬೇನ್‌ ಕುಲದ ಇನ್ನೊಂದು ಕಡೆ ಗಾದ್‌ ಕುಲದವರು ಡೇರೆ ಹಾಕಬೇಕು. ರೆಗೂವೇಲನ* ಮಗ ಎಲ್ಯಾಸಾಫ್‌+ ಗಾದ್‌ ಕುಲದ ಪ್ರಧಾನ. 15  ಅವನ ಸೈನ್ಯದಲ್ಲಿರೋ ಸೈನಿಕರ ಸಂಖ್ಯೆ 45,650.+ 16  ರೂಬೇನ್‌ ಕುಲದ ದಳದ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 1,51,450. ಎಲ್ಲ ಇಸ್ರಾಯೇಲ್ಯರು ಬೇರೆ ಜಾಗಕ್ಕೆ ಹೋಗುವಾಗ ಡೇರೆ ತೆಗಿಬೇಕಾದ ಎರಡನೇ ದಳ ಇವರದ್ದೇ.+ 17  ದೇವದರ್ಶನ ಡೇರೆಯನ್ನ ಬೇರೆ ಜಾಗಕ್ಕೆ ತಗೊಂಡು ಹೋಗುವಾಗ+ ಲೇವಿಯರ ದಳ ಬೇರೆಲ್ಲ ದಳಗಳ ಮಧ್ಯ ಇರಬೇಕು. ಇಸ್ರಾಯೇಲ್ಯರು ಒಂದೊಂದು ದಳವಾಗಿ ಡೇರೆ ಹಾಕೊಂಡ ಅದೇ ಕ್ರಮದಲ್ಲಿ ಪ್ರಯಾಣ ಮಾಡಬೇಕು.+ ಅವ್ರವರಿಗೆ ನೇಮಿತವಾದ ಜಾಗವನ್ನ ಯಾರೂ ಬಿಟ್ಟು ಹೋಗಬಾರದು. 18  ದೇವದರ್ಶನ ಡೇರೆಯ ಪಶ್ಚಿಮ ದಿಕ್ಕಿಗೆ ಒಂದು ದಳ ಡೇರೆ ಹಾಕಬೇಕು. ಈ ದಳದಲ್ಲಿ ಎಫ್ರಾಯೀಮ್‌ ಕುಲ ಮುಂದಾಳತ್ವ ವಹಿಸುತ್ತೆ. ಅಮ್ಮೀಹೂದನ ಮಗ ಎಲೀಷಾಮ+ ಎಫ್ರಾಯೀಮ್‌ ಕುಲದ ಪ್ರಧಾನ. 19  ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 40,500.+ 20  ಎಫ್ರಾಯೀಮ್‌ ಕುಲದ ಪಕ್ಕದಲ್ಲಿ ಮನಸ್ಸೆ+ ಕುಲದವರು ಡೇರೆ ಹಾಕಬೇಕು. ಪೆದಾಚೂರನ ಮಗ ಗಮ್ಲೀಯೇಲ್‌+ ಮನಸ್ಸೆ ಕುಲದ ಪ್ರಧಾನ. 21  ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 32,200.+ 22  ಎಫ್ರಾಯೀಮ್‌ ಕುಲದ ಇನ್ನೊಂದು ಪಕ್ಕದಲ್ಲಿ ಬೆನ್ಯಾಮೀನ್‌ ಕುಲದವರು ಡೇರೆ ಹಾಕಬೇಕು. ಗಿದ್ಯೋನಿಯ ಮಗ ಅಬೀದಾನ್‌+ ಬೆನ್ಯಾಮೀನ್‌ ಕುಲದ ಪ್ರಧಾನ. 23  ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 35,400.+ 24  ಎಫ್ರಾಯೀಮ್‌ ಕುಲದಲ್ಲಿರೋ ಸೈನಿಕರ ಸಂಖ್ಯೆ 1,08,100. ಎಲ್ಲ ಇಸ್ರಾಯೇಲ್ಯರು ಬೇರೆ ಜಾಗಕ್ಕೆ ಹೋಗುವಾಗ ಡೇರೆಗಳನ್ನ ತೆಗಿಬೇಕಾದ ಮೂರನೇ ದಳ ಇವರದ್ದೇ.+ 25  ದೇವದರ್ಶನ ಡೇರೆಯ ಉತ್ತರ ದಿಕ್ಕಿಗೆ ಒಂದು ದಳ ಡೇರೆ ಹಾಕಬೇಕು. ಈ ದಳದಲ್ಲಿ ದಾನ್‌ ಕುಲ ಮುಂದಾಳತ್ವ ವಹಿಸುತ್ತೆ. ಅಮ್ಮೀಷದೈಯ ಮಗ ಅಹೀಗೆಜೆರ್‌+ ದಾನ್‌ ಕುಲದ ಪ್ರಧಾನ. 26  ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 62,700.+ 27  ದಾನ್‌ ಕುಲದ ಪಕ್ಕದಲ್ಲಿ ಅಶೇರ್‌ ಕುಲದವರು ಡೇರೆ ಹಾಕಬೇಕು. ಓಕ್ರಾನನ ಮಗ ಪಗೀಯೇಲ್‌+ ಅಶೇರ್‌ ಕುಲದ ಪ್ರಧಾನ. 28  ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 41,500.+ 29  ದಾನ್‌ ಕುಲದ ಇನ್ನೊಂದು ಪಕ್ಕದಲ್ಲಿ ನಫ್ತಾಲಿ ಕುಲದವರು ಡೇರೆ ಹಾಕಬೇಕು. ಏನಾನನ ಮಗ ಅಹೀರ+ ನಫ್ತಾಲಿ ಕುಲದ ಪ್ರಧಾನ. 30  ಅವನ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 53,400.+ 31  ದಾನ್‌ ಕುಲದ ದಳದ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 1,57,600. ಎಲ್ಲ ಇಸ್ರಾಯೇಲ್ಯರು ಬೇರೆ ಜಾಗಕ್ಕೆ ಒಂದು ದಳವಾಗಿ ಹೋಗುವಾಗ ಕೊನೇಲಿ ಡೇರೆಗಳನ್ನ ತೆಗಿಬೇಕಾದ ದಳ ಇವರದ್ದೇ.”+ 32  ಈ ಎಲ್ಲ ಇಸ್ರಾಯೇಲ್ಯರ ಹೆಸ್ರುಗಳನ್ನ ಅವರವ್ರ ತಂದೆಯ ಮನೆತನಗಳ ಪ್ರಕಾರ ಬರ್ಕೊಂಡ್ರು. ಎಲ್ಲ ದಳಗಳಿಂದ ಸೈನ್ಯದಲ್ಲಿರೋ ಗಂಡಸರ ಸಂಖ್ಯೆ 6,03,550.+ 33  ಆದ್ರೆ ಯೆಹೋವ ಮೋಶೆಗೆ ಹೇಳಿದ ಹಾಗೆ ಲೇವಿಯರ ಹೆಸ್ರುಗಳನ್ನ ಬೇರೆ ಇಸ್ರಾಯೇಲ್ಯರ ಹೆಸ್ರು ಜೊತೆ+ ಬರೀಲಿಲ್ಲ.+ 34  ಯೆಹೋವ ಮೋಶೆಗೆ ಹೇಳಿದನ್ನೆಲ್ಲ ಇಸ್ರಾಯೇಲ್ಯರು ಮಾಡಿದ್ರು. ಈ ರೀತಿ ಇಸ್ರಾಯೇಲ್ಯರು ದಳಗಳಿಗೆ+ ತಕ್ಕ ಹಾಗೆ ತಮ್ಮ ಕುಟುಂಬದ, ತಂದೆಯ ಮನೆತನಗಳ ಪ್ರಕಾರ ಡೇರೆ ಹಾಕ್ತಾ ಇದ್ರು ತೆಗಿತಾ ಇದ್ರು.+

ಪಾದಟಿಪ್ಪಣಿ

ಒಂದು ದಳದಲ್ಲಿ ಮೂರು ಕುಲ ಇರುತ್ತೆ.
ಅರಣ್ಯಕಾಂಡ 1:14, 7:42 ಮತ್ತು 10:20ರಲ್ಲಿ ಇವನನ್ನ ದೆಗೂವೇಲ ಅಂತ ಹೇಳಲಾಗಿದೆ.