ಅರಣ್ಯಕಾಂಡ 33:1-56

  • ಕಾಡಲ್ಲಿ ಉಳ್ಕೊಂಡ ಸ್ಥಳಗಳು (1-49)

  • ಕಾನಾನನ್ನ ವಶ ಮಾಡೋಕೆ ನಿರ್ದೇಶನ (50-56)

33  ಇಸ್ರಾಯೇಲ್ಯರು ಮೋಶೆ, ಆರೋನ ಹೇಳಿದ ಹಾಗೇ+ ತಮ್ಮ ತಮ್ಮ ದಳದ ಪ್ರಕಾರ*+ ಈಜಿಪ್ಟಿಂದ ಬಂದ ಮೇಲೆ+ ಪ್ರಯಾಣದ ಉದ್ದಕ್ಕೂ ಬೇರೆ ಬೇರೆ ಜಾಗಗಳಲ್ಲಿ ಉಳ್ಕೊಂಡ್ರು.  ಇಸ್ರಾಯೇಲ್ಯರು ಎಲ್ಲಿಂದ ಎಲ್ಲಿಗೆ ಹೋದ್ರು, ಎಲ್ಲೆಲ್ಲಿ ಉಳ್ಕೊಂಡ್ರು ಅನ್ನೋ ಮಾಹಿತಿಯನ್ನ ಯೆಹೋವ ಹೇಳಿದ ಹಾಗೆ ಮೋಶೆ ಬರೆದಿಡ್ತಾ ಇದ್ದ. ಅವನು ಬರೆದ ಆ ಜಾಗಗಳ ಹೆಸ್ರು ಏನಂದ್ರೆ+  ಇಸ್ರಾಯೇಲ್ಯರು ಮೊದಲನೇ ತಿಂಗಳ 15ನೇ ದಿನದಲ್ಲಿ+ ರಮ್ಸೇಸಿನಿಂದ+ ಹೊರಟ್ರು. ಪಸ್ಕ ಹಬ್ಬದ ಮಾರನೇ ದಿನಾನೇ+ ಅವರು ಎಲ್ಲ ಈಜಿಪ್ಟ್‌ ಜನ್ರ ಕಣ್ಮುಂದೆ ಧೈರ್ಯವಾಗಿ ಹೊರಟ್ರು.  ಆ ಸಮಯದಲ್ಲಿ ಈಜಿಪ್ಟ್‌ ಜನ್ರು ತಮ್ಮ ಮೊದಲ ಗಂಡು ಮಕ್ಕಳ ಶವಗಳನ್ನ ಹೂಣಿಡ್ತಾ ಇದ್ರು. ಯಾಕಂದ್ರೆ ಯೆಹೋವ ಈಜಿಪ್ಟ್‌ ಜನ್ರ ದೇವರುಗಳಿಗೆ ಶಿಕ್ಷೆ ಕೊಟ್ಟಿದ್ದನು,+ ಯೆಹೋವ ಈಜಿಪ್ಟ್‌ ಜನ್ರ ಎಲ್ಲ ಮೊದಲ ಗಂಡು ಮಕ್ಕಳನ್ನ ಸಾಯಿಸಿದ್ದನು.+  ಇಸ್ರಾಯೇಲ್ಯರು ರಮ್ಸೇಸಿಂದ ಹೋಗಿ ಸುಕ್ಕೋತಲ್ಲಿ ಉಳ್ಕೊಂಡ್ರು.+  ಸುಕ್ಕೋತಿಂದ ಹೋಗಿ ಕಾಡಿನ ಅಂಚಲ್ಲಿರೋ ಏತಾಮಲ್ಲಿ ಉಳ್ಕೊಂಡ್ರು.+  ಏತಾಮಿಂದ ಹಿಂದೆ ಪ್ರಯಾಣ ಮಾಡಿ ಪೀಹಹೀರೋತಿನ ಕಡೆಗೆ ಬಂದ್ರು. ಅಲ್ಲಿಂದ ಬಾಳ್ಚೆಫೋನ್‌ ಕಾಣ್ತಾ ಇತ್ತು.+ ಅವರು ಮಿಗ್ದೋಲಿನ ಮುಂದೆ ಉಳ್ಕೊಂಡ್ರು.+  ಆಮೇಲೆ ಪೀಹಹೀರೋತಿಂದ ಸಮುದ್ರದ ಮಧ್ಯದಲ್ಲಿ ನಡೆದು+ ಕಾಡಿಗೆ ಹೋದ್ರು.+ ಏತಾಮಿನ ಕಾಡಲ್ಲಿ+ ಮೂರು ದಿನ ಪ್ರಯಾಣ ಮಾಡಿ ಮಾರಾ ಅನ್ನೋ ಜಾಗದಲ್ಲಿ ಉಳ್ಕೊಂಡ್ರು.+  ಮಾರಾದಿಂದ ಏಲೀಮಿಗೆ ಬಂದ್ರು. ಅಲ್ಲಿ 12 ನೀರಿನ ಬುಗ್ಗೆ, 70 ಖರ್ಜೂರ ಮರ ಇತ್ತು. ಹಾಗಾಗಿ ಅಲ್ಲಿ ಉಳ್ಕೊಂಡ್ರು.+ 10  ಏಲೀಮಿಂದ ಹೋಗಿ ಕೆಂಪು ಸಮುದ್ರದ ಹತ್ರ ಉಳ್ಕೊಂಡ್ರು. 11  ಆಮೇಲೆ ಕೆಂಪು ಸಮುದ್ರದ ಹತ್ರದಿಂದ ಹೋಗಿ ಸೀನ್‌ ಕಾಡಲ್ಲಿ ಉಳ್ಕೊಂಡ್ರು.+ 12  ಸೀನ್‌ ಕಾಡಿಂದ ಹೋಗಿ ದೊಪ್ಕದಲ್ಲಿ ಉಳ್ಕೊಂಡ್ರು. 13  ದೊಪ್ಕದಿಂದ ಹೋಗಿ ಆಲೂಷಲ್ಲಿ ಉಳ್ಕೊಂಡ್ರು. 14  ಆಲೂಷಿಂದ ಹೋಗಿ ರೆಫೀದೀಮಲ್ಲಿ ಉಳ್ಕೊಂಡ್ರು.+ ಅಲ್ಲಿ ಜನ್ರಿಗೆ ಕುಡಿಯೋ ನೀರು ಇರಲಿಲ್ಲ. 15  ರೆಫೀದೀಮಿಂದ ಹೋಗಿ ಸಿನಾಯಿ ಕಾಡಲ್ಲಿ ಉಳ್ಕೊಂಡ್ರು.+ 16  ಅವರು ಸಿನಾಯಿ ಕಾಡಿಂದ ಹೋಗಿ ಕಿಬ್ರೋತ್‌-ಹತಾವಾದಲ್ಲಿ ಉಳ್ಕೊಂಡ್ರು.+ 17  ಕಿಬ್ರೋತ್‌-ಹತಾವಾದಿಂದ ಹೋಗಿ ಹಚೇರೋತಲ್ಲಿ ಉಳ್ಕೊಂಡ್ರು.+ 18  ಹಚೇರೋತಿಂದ ಹೋಗಿ ರಿತ್ಮದಲ್ಲಿ ಉಳ್ಕೊಂಡ್ರು. 19  ರಿತ್ಮದಿಂದ ಹೋಗಿ ರಿಮ್ಮೋನ್‌-ಪೆರೆಚಿನಲ್ಲಿ ಉಳ್ಕೊಂಡ್ರು. 20  ರಿಮ್ಮೋನ್‌-ಪೆರೆಚಿಂದ ಹೋಗಿ ಲಿಬ್ನದಲ್ಲಿ ಉಳ್ಕೊಂಡ್ರು. 21  ಲಿಬ್ನದಿಂದ ಹೋಗಿ ರಿಸ್ಸದಲ್ಲಿ ಉಳ್ಕೊಂಡ್ರು. 22  ರಿಸ್ಸದಿಂದ ಹೋಗಿ ಕೆಹೇಲಾತದಲ್ಲಿ ಉಳ್ಕೊಂಡ್ರು. 23  ಕೆಹೇಲಾತದಿಂದ ಹೋಗಿ ಶೆಫೆರ್‌ ಬೆಟ್ಟದ ಹತ್ರ ಉಳ್ಕೊಂಡ್ರು. 24  ಆಮೇಲೆ ಶೆಫೆರ್‌ ಬೆಟ್ಟದಿಂದ ಹೋಗಿ ಹರಾದದಲ್ಲಿ ಉಳ್ಕೊಂಡ್ರು. 25  ಹರಾದದಿಂದ ಹೋಗಿ ಮಖೇಲೋತಲ್ಲಿ ಉಳ್ಕೊಂಡ್ರು. 26  ಮಖೇಲೋತಿಂದ ಹೋಗಿ+ ತಹತಿನಲ್ಲಿ ಉಳ್ಕೊಂಡ್ರು. 27  ತಹತಿಂದ ಹೋಗಿ ತೆರಹದಲ್ಲಿ ಉಳ್ಕೊಂಡ್ರು. 28  ತೆರಹದಿಂದ ಹೋಗಿ ಮಿತ್ಕದಲ್ಲಿ ಉಳ್ಕೊಂಡ್ರು. 29  ಮಿತ್ಕದಿಂದ ಹೋಗಿ ಹಷ್ಮೋನದಲ್ಲಿ ಉಳ್ಕೊಂಡ್ರು. 30  ಹಷ್ಮೋನದಿಂದ ಹೋಗಿ ಮೋಸೇರೋತಲ್ಲಿ ಉಳ್ಕೊಂಡ್ರು. 31  ಮೋಸೇರೋತಿಂದ ಹೋಗಿ ಬೆನೇ-ಯಾಕಾನಲ್ಲಿ ಉಳ್ಕೊಂಡ್ರು.+ 32  ಬೆನೇ-ಯಾಕಾನಿಂದ ಹೋಗಿ ಹೋರ್‌-ಹಗಿದ್ಗಾದಿನಲ್ಲಿ ಉಳ್ಕೊಂಡ್ರು. 33  ಹೋರ್‌-ಹಗಿದ್ಗಾದಿನಿಂದ ಹೋಗಿ ಯೊಟ್ಬಾತದಲ್ಲಿ ಉಳ್ಕೊಂಡ್ರು.+ 34  ಯೊಟ್ಬಾತದಿಂದ ಹೋಗಿ ಅಬ್ರೋನದಲ್ಲಿ ಉಳ್ಕೊಂಡ್ರು. 35  ಅಬ್ರೋನದಿಂದ ಹೋಗಿ ಎಚ್ಯೋನ್‌-ಗೆಬೆರಿನಲ್ಲಿ ಉಳ್ಕೊಂಡ್ರು.+ 36  ಎಚ್ಯೋನ್‌-ಗೆಬೆರಿಂದ ಹೋಗಿ ಚಿನ್‌ ಕಾಡಲ್ಲಿರೋ+ ಕಾದೇಶಲ್ಲಿ ಉಳ್ಕೊಂಡ್ರು. 37  ಕಾದೇಶಿಂದ ಹೋಗಿ ಎದೋಮ್‌ ದೇಶದ ಮೇರೆಯಲ್ಲಿ ಇರೋ ಹೋರ್‌ ಬೆಟ್ಟದ ಹತ್ರ ಉಳ್ಕೊಂಡ್ರು.+ 38  ಯೆಹೋವ ಹೇಳಿದ ಹಾಗೇ ಪುರೋಹಿತ ಆರೋನ ಆ ಬೆಟ್ಟ ಹತ್ತಿದ, ಅಲ್ಲೇ ತೀರಿಹೋದ. ಇಸ್ರಾಯೇಲ್ಯರು ಈಜಿಪ್ಟ್‌ ದೇಶ ಬಿಟ್ಟು ಬಂದ 40ನೇ ವರ್ಷದ ಐದನೇ ತಿಂಗಳ ಮೊದಲನೇ ದಿನದಲ್ಲಿ ಅವನು ತೀರಿಹೋದ.+ 39  ಹೋರ್‌ ಬೆಟ್ಟದ ಮೇಲೆ ಆರೋನ ತೀರಿಕೊಂಡಾಗ ಅವನಿಗೆ 123 ವರ್ಷ. 40  ಕಾನಾನ್‌ ದೇಶಕ್ಕೆ ಸೇರಿದ ಅರಾದ್‌ ಪಟ್ಟಣದ ರಾಜ+ ಆ ದೇಶದ ನೆಗೆಬಲ್ಲಿ ವಾಸ ಮಾಡ್ತಿದ್ದ. ಅವನಿಗೆ ಇಸ್ರಾಯೇಲ್ಯರು ಬರ್ತಾ ಇದ್ದಾರೆ ಅನ್ನೋ ಸುದ್ದಿ ಸಿಕ್ತು. 41  ಆಮೇಲೆ ಇಸ್ರಾಯೇಲ್ಯರು ಹೋರ್‌ ಬೆಟ್ಟದಿಂದ ಹೋಗಿ+ ಚಲ್ಮೋನದಲ್ಲಿ ಉಳ್ಕೊಂಡ್ರು. 42  ಚಲ್ಮೋನದಿಂದ ಹೋಗಿ ಪೂನೋನಲ್ಲಿ ಉಳ್ಕೊಂಡ್ರು. 43  ಪೂನೋನಿಂದ ಹೋಗಿ ಓಬೋತಿನಲ್ಲಿ ಉಳ್ಕೊಂಡ್ರು.+ 44  ಓಬೋತಿಂದ ಹೋಗಿ ಮೋವಾಬ್‌ ಗಡಿಯಲ್ಲಿರೋ ಇಯ್ಯೇ-ಅಬಾರೀಮಲ್ಲಿ ಉಳ್ಕೊಂಡ್ರು.+ 45  ಇಯ್ಯೀಮಿಂದ* ಹೋಗಿ ದೀಬೋನ್‌-ಗಾದಲ್ಲಿ+ ಉಳ್ಕೊಂಡ್ರು. 46  ದೀಬೋನ್‌-ಗಾದಿಂದ ಹೋಗಿ ಅಲ್ಮೋನ್‌-ದಿಬ್ಲಾತಯಿಮಲ್ಲಿ ಉಳ್ಕೊಂಡ್ರು. 47  ಅಲ್ಮೋನ್‌-ದಿಬ್ಲಾತಯಿಮಿಂದ ಹೋಗಿ ನೆಬೋ ಮುಂದೆ+ ಅಬಾರೀಮ್‌ ಬೆಟ್ಟಗಳಲ್ಲಿ+ ಉಳ್ಕೊಂಡ್ರು. 48  ಕೊನೆಗೆ ಅವರು ಅಬಾರೀಮ್‌ ಬೆಟ್ಟಗಳಿಂದ ಹೋಗಿ ಯೆರಿಕೋ ಪಟ್ಟಣದ ಹತ್ರ ಯೋರ್ದನ್‌ ನದಿ ಪಕ್ಕದಲ್ಲಿ+ ಇರೋ ಮೋವಾಬ್‌ ಬಯಲು ಪ್ರದೇಶಗಳಲ್ಲಿ ಉಳ್ಕೊಂಡ್ರು. 49  ಅವರು ಮೋವಾಬ್‌ ಬಯಲು ಪ್ರದೇಶಗಳಲ್ಲಿ ಯೋರ್ದನ್‌ ತೀರದುದ್ದಕ್ಕೂ ಅಂದ್ರೆ ಬೇತ್‌-ಯೆಷಿಮೋತಿಂದ ಹಿಡಿದು ಆಬೇಲ್‌-ಶಿಟ್ಟೀಮಿನ+ ತನಕ ಉಳ್ಕೊಂಡ್ರು. 50  ಯೆರಿಕೋ ಪಟ್ಟಣದ ಹತ್ರ ಯೋರ್ದನ್‌ ನದಿ ಪಕ್ಕದಲ್ಲಿರೋ ಮೋವಾಬ್‌ ಬಯಲು ಪ್ರದೇಶಗಳಲ್ಲಿ ಯೆಹೋವ ಮೋಶೆಗೆ ಹೇಳಿದ್ದು ಏನಂದ್ರೆ 51  “ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ನೀವು ಯೋರ್ದನ್‌ ನದಿ ದಾಟಿ ಕಾನಾನ್‌ ದೇಶಕ್ಕೆ ಹೋಗ್ತೀರ.+ 52  ಹೋದ್ಮೇಲೆ ಆ ದೇಶದ ಎಲ್ಲ ಜನ್ರನ್ನ ಅಲ್ಲಿಂದ ಓಡಿಸಿಬಿಡಬೇಕು. ಅವರ ಹತ್ರ ಇರೋ ಕಲ್ಲಲ್ಲಿ ಕೆತ್ತಿದ ಎಲ್ಲ ಮೂರ್ತಿಗಳನ್ನ,+ ಅಚ್ಚಲ್ಲಿ ಲೋಹ ಹೊಯ್ದು ಮಾಡಿದ ಮೂರ್ತಿಗಳನ್ನ+ ನಾಶಮಾಡಬೇಕು. ಅವರು ತಮ್ಮ ದೇವರುಗಳನ್ನ ಆರಾಧಿಸೋ ಎಲ್ಲ ಜಾಗಗಳನ್ನ* ನೆಲಸಮ ಮಾಡಬೇಕು.+ 53  ಆ ದೇಶವನ್ನ ಆಸ್ತಿಯಾಗಿ ಮಾಡ್ಕೊಂಡು ಅದ್ರಲ್ಲಿ ನೀವು ವಾಸ ಮಾಡ್ತೀರ. ಯಾಕಂದ್ರೆ ಆ ದೇಶವನ್ನ ಖಂಡಿತ ನಿಮ್ಮ ಕೈಗೆ ಕೊಡ್ತೀನಿ.+ 54  ನೀವು ಚೀಟು ಹಾಕಿ+ ದೇಶವನ್ನ ಪ್ರತಿಯೊಂದು ಕುಲಕ್ಕೆ, ಕುಟುಂಬಕ್ಕೆ ಹಂಚಿಕೊಡಬೇಕು. ಜಾಸ್ತಿ ಜನ ಇರೋ ಕುಲಕ್ಕೆ ಜಾಸ್ತಿ ಜಮೀನನ್ನ, ಕಮ್ಮಿ ಜನ ಇರೋ ಕುಲಕ್ಕೆ ಕಮ್ಮಿ ಜಮೀನನ್ನ ಆಸ್ತಿಯಾಗಿ ಕೊಡಬೇಕು.+ ಚೀಟು ಹಾಕಿದಾಗ ಯಾವ ಕುಟುಂಬಕ್ಕೆ ಯಾವ ಜಮೀನು ಬರುತ್ತೋ ಅದೇ ಜಮೀನನ್ನ ಕೊಡಬೇಕು. ಪ್ರತಿಯೊಂದು ಕುಟುಂಬಕ್ಕೆ ಅವನವನ ಕುಲಕ್ಕೆ ಸಿಕ್ಕಿರೋ ಜಮೀನಿಂದಾನೇ ಆಸ್ತಿ ಕೊಡಬೇಕು.+ 55  ನೀವು ಆ ದೇಶದ ಜನ್ರನ್ನ ಅಲ್ಲಿಂದ ಓಡಿಸಿ ಬಿಡದೆ ನಿಮ್ಮ ಜೊತೆ ವಾಸ ಮಾಡೋಕೆ ಬಿಟ್ರೆ+ ಅವರು ನಿಮ್ಮ ದೇಶದಲ್ಲಿ ಇದ್ದು ನಿಮ್ಮನ್ನೇ ಪೀಡಿಸ್ತಾರೆ. ಅವರು ಕಣ್ಣಿಗೆ ಬಿದ್ದು ಕಿರಿಕಿರಿ ಮಾಡೋ ಮರದ ಚೂರು ತರ, ದೇಹಕ್ಕೆ* ಚುಚ್ಚೋ ಮುಳ್ಳು ತರ ಇರ್ತಾರೆ.+ 56  ಅಷ್ಟೇ ಅಲ್ಲ ನಾನು ಅವ್ರಿಗೆ ಏನು ಮಾಡಬೇಕಂತ ಅಂದ್ಕೊಂಡಿದ್ದೀನೋ ಅದನ್ನ ನಿಮಗೆ ಮಾಡ್ತೀನಿ.’”+

ಪಾದಟಿಪ್ಪಣಿ

ಅಕ್ಷ. “ಸೈನ್ಯಸೈನ್ಯವಾಗಿ.”
ಇದು ಇಯ್ಯೇ-ಅಬಾರೀಮಿನ ಸಂಕ್ಷಿಪ್ತ ರೂಪ ಆಗಿರಬಹುದು.
ಅಕ್ಷ. “ಎತ್ತರ ಸ್ಥಳಗಳನ್ನ.”
ಅಕ್ಷ. “ನಿಮ್ಮ ಪಕ್ಕೆಗಳಲ್ಲಿ.”