ಅರಣ್ಯಕಾಂಡ 34:1-29

  • ಕಾನಾನಿನ ಗಡಿಗಳು (1-15)

  • ದೇಶವನ್ನ ಹಂಚೋಕೆ ನೇಮಿಸಲಾದ ಗಂಡಸ್ರು (16-29)

34  ಯೆಹೋವ ಮೋಶೆಗೆ ಇನ್ನೂ ಹೇಳಿದ್ದು ಏನಂದ್ರೆ  “ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞೆ ಕೊಡು: ‘ನಿಮಗೆ ಆಸ್ತಿಯಾಗಿ ಕೊಡೋ ಕಾನಾನ್‌ ದೇಶದ+ ಗಡಿಗಳು+ ಯಾವುದಂದ್ರೆ,  ನಿಮ್ಮ ದೇಶದ ದಕ್ಷಿಣ ಗಡಿ, ಎದೋಮ್‌ ಹತ್ರ ಇರೋ ಚಿನ್‌ ಕಾಡಿಂದ ಶುರು ಆಗುತ್ತೆ. ದಕ್ಷಿಣ ಮತ್ತೆ ಪೂರ್ವದ ಮಧ್ಯ ಇರೋ* ಗಡಿ ಲವಣ ಸಮುದ್ರದ* ಕೊನೆಯಿಂದ ಶುರು ಆಗುತ್ತೆ.+  ಆ ಗಡಿ ಅಕ್ರಬ್ಬೀಮಿನ+ ಇಳಿಜಾರಿನ ದಕ್ಷಿಣ ದಿಕ್ಕಿಗೆ ತಿರುಗುತ್ತೆ. ಅಲ್ಲಿಂದ ಚಿನ್‌ ತನಕ ಹೋಗುತ್ತೆ. ಅಲ್ಲಿಂದ ಕಾದೇಶ್‌-ಬರ್ನೇಯದ+ ದಕ್ಷಿಣದಲ್ಲಿ ಕೊನೆ ಆಗುತ್ತೆ. ಆಮೇಲೆ ಆ ಗಡಿ ಹಚರದ್ದಾರಿಗೆ,+ ಅಲ್ಲಿಂದ ಅಚ್ಮೋನಿನ ತನಕ ಹೋಗುತ್ತೆ.  ಅದು ಈಜಿಪ್ಟಿನ ನಾಲೆ* ಕಡೆಗೆ ತಿರುಗಿ ಮಹಾ ಸಮುದ್ರದ* ಹತ್ರ ಕೊನೆ ಆಗುತ್ತೆ.+  ಪಶ್ಚಿಮ ಗಡಿ, ಮಹಾ ಸಮುದ್ರ* ಮತ್ತೆ ಅದ್ರ ಕರಾವಳಿ. ಇದೇ ನಿಮ್ಮ ದೇಶದ ಪಶ್ಚಿಮ ಗಡಿ.+  ಮಹಾ ಸಮುದ್ರದಿಂದ ಹೋರ್‌ ಬೆಟ್ಟದ+ ತನಕ ಉತ್ತರದ ಗಡಿಯನ್ನ ಗುರುತು ಮಾಡಬೇಕು.  ಹೋರ್‌ ಬೆಟ್ಟದಿಂದ ಲೆಬೋ-ಹಾಮಾತಿನ ತನಕ* ಗಡಿಯನ್ನ+ ಗುರುತು ಮಾಡಬೇಕು. ಅದು ಚೆದಾದಿನಲ್ಲಿ ಕೊನೆ ಆಗುತ್ತೆ.+  ಆ ಗಡಿ ಜಿಫ್ರೋನ್‌ ತನಕ ಹೋಗಿ ಹಚರ್‌-ಏನಾನಿನಲ್ಲಿ ಕೊನೆ ಆಗುತ್ತೆ.+ ಇದು ನಿಮ್ಮ ದೇಶದ ಉತ್ತರ ಗಡಿ. 10  ನಿಮ್ಮ ದೇಶದ ಪೂರ್ವ ಗಡಿಯನ್ನ ಹಚರ್‌-ಏನಾನಿಂದ ಶೆಫಾಮ್‌ ತನಕ ಗುರುತು ಮಾಡಬೇಕು. 11  ಆ ಗಡಿ ಶೆಫಾಮಿಂದ ಅಯಿನಿನ ಪೂರ್ವಕ್ಕೆ ಇರೋ ರಿಬ್ಲ ತನಕ ಇದೆ. ಆ ಗಡಿ ಕೆಳಗೆ ಕಿನ್ನೆರೆತ್‌ ಸಮುದ್ರದ*+ ಪೂರ್ವದ ಇಳಿಜಾರನ್ನ ಹಾದುಹೋಗುತ್ತೆ. 12  ಯೋರ್ದನ್‌ ತನಕ ಹೋಗಿ ಲವಣ ಸಮುದ್ರದ+ ಹತ್ರ ಕೊನೆ ಆಗುತ್ತೆ. ಇದೇ ನಿಮ್ಮ ದೇಶ,+ ಅದ್ರ ಸುತ್ತ ಇರೋ ಗಡಿಗಳು.’” 13  ಮೋಶೆ ಇಸ್ರಾಯೇಲ್ಯರಿಗೆ “ನೀವು ಚೀಟು ಹಾಕಿ ಆಸ್ತಿಯಾಗಿ ಹಂಚ್ಕೊಳ್ಳಬೇಕಾದ ದೇಶ ಇದೇ.+ ಯೆಹೋವನ ಆಜ್ಞೆ ಪ್ರಕಾರ ನೀವು ಈ ದೇಶವನ್ನ ಒಂಬತ್ತುವರೆ ಕುಲಗಳಿಗೆ ಹಂಚ್ಕೊಡಬೇಕು. 14  ರೂಬೇನ್‌ ಕುಲದವರು, ಗಾದ್‌ ಕುಲದವರು ಮತ್ತೆ ಮನಸ್ಸೆ ಕುಲದಲ್ಲಿ ಅರ್ಧ ಜನ್ರು ಈಗಾಗ್ಲೇ ತಮ್ಮ ಆಸ್ತಿ ಪಡ್ಕೊಂಡಿದ್ದಾರೆ.+ 15  ಈ ಎರಡೂವರೆ ಕುಲದವರು ಯೆರಿಕೋವಿನ ಮುಂದೆ, ಯೋರ್ದನ್‌ ಪ್ರದೇಶದ ಪೂರ್ವ ದಿಕ್ಕಲ್ಲಿ ಆಸ್ತಿ ಪಡ್ಕೊಂಡಿದ್ದಾರೆ”+ ಅಂದ. 16  ಯೆಹೋವ ಮೋಶೆಗೆ ಹೇಳಿದ್ದು ಏನಂದ್ರೆ 17  “ಪುರೋಹಿತ ಎಲ್ಲಾಜಾರ್‌,+ ನೂನನ ಮಗ ಯೆಹೋಶುವ+ ನಿಮಗೆ ದೇಶ ಹಂಚ್ಕೊಡ್ತಾರೆ. 18  ಇದಕ್ಕಾಗಿ ಅವರಿಗೆ ಸಹಾಯ ಮಾಡೋಕೆ ನೀವು ಪ್ರತಿಯೊಂದು ಕುಲದಿಂದ ಒಬ್ಬೊಬ್ಬ ಪ್ರಧಾನನನ್ನ ಆರಿಸ್ಕೊಳ್ಳಬೇಕು.+ 19  ಆರಿಸ್ಕೊಳ್ಳಬೇಕಾದ ಗಂಡಸರು ಯಾರಂದ್ರೆ, ಯೆಹೂದ ಕುಲದಿಂದ+ ಯೆಫುನ್ನೆಯ ಮಗ ಕಾಲೇಬ್‌,+ 20  ಸಿಮೆಯೋನ್‌ ಕುಲದಿಂದ+ ಅಮ್ಮೀಹೂದನ ಮಗ ಶೆಮೂವೇಲ್‌, 21  ಬೆನ್ಯಾಮೀನ್‌ ಕುಲದಿಂದ+ ಕಿಸ್ಲೋನನ ಮಗ ಎಲೀದಾದ್‌, 22  ದಾನ್‌ ಕುಲದಿಂದ+ ಯೊಗ್ಲೀಯ ಮಗನೂ ಪ್ರಧಾನನೂ ಆದ ಬುಕ್ಕಿ, 23  ಯೋಸೇಫನ+ ಮಗನಾದ ಮನಸ್ಸೆ+ ಕುಲದಿಂದ ಏಫೋದನ ಮಗನೂ ಪ್ರಧಾನನೂ ಆದ ಹನ್ನೀಯೇಲ್‌, 24  ಎಫ್ರಾಯೀಮ್‌ ಕುಲದಿಂದ+ ಶಿಫ್ಟಾನನ ಮಗನೂ ಪ್ರಧಾನನೂ ಆದ ಕೆಮೂವೇಲ್‌, 25  ಜೆಬುಲೂನ್‌ ಕುಲದಿಂದ+ ಪರ್ನಾಕನ ಮಗನೂ ಪ್ರಧಾನನೂ ಆದ ಎಲೀಚಾಫಾನ್‌, 26  ಇಸ್ಸಾಕಾರ್‌ ಕುಲದಿಂದ+ ಅಜ್ಜಾನನ ಮಗನೂ ಪ್ರಧಾನನೂ ಆದ ಪಲ್ಟೀಯೇಲ್‌, 27  ಅಶೇರ್‌ ಕುಲದಿಂದ+ ಶೆಲೋಮಿಯ ಮಗನೂ ಪ್ರಧಾನನೂ ಆದ ಅಹೀಹೂದ್‌, 28  ನಫ್ತಾಲಿ ಕುಲದಿಂದ+ ಅಮ್ಮೀಹೂದನ ಮಗನೂ ಪ್ರಧಾನನೂ ಆದ ಪೆದಹೇಲ್‌.” 29  ಕಾನಾನ್‌ ದೇಶದಲ್ಲಿ ಇಸ್ರಾಯೇಲ್ಯರಿಗೆ ಜಮೀನು ಹಂಚ್ಕೊಡಬೇಕು+ ಅಂತ ಯೆಹೋವ ಈ ಗಂಡಸರಿಗೆ ಆಜ್ಞೆ ಕೊಟ್ಟನು.

ಪಾದಟಿಪ್ಪಣಿ

ಅಥವಾ “ಆಗ್ನೇಯದ.”
ಅಂದ್ರೆ, ಮೃತ ಸಮುದ್ರ.
ಅದು, ಮೆಡಿಟರೇನಿಯನ್‌ ಸಮುದ್ರ.
ಅದು, ಮೆಡಿಟರೇನಿಯನ್‌ ಸಮುದ್ರ.
ಅಥವಾ “ಹಾಮಾತಿನ ಬಾಗಿಲ ತನಕ.”
ಅದು ಗೆನೆಜರೇತ್‌ ಸರೋವರ ಅಥವಾ ಗಲಿಲಾಯ ಸಮುದ್ರ.