ಅರಣ್ಯಕಾಂಡ 9:1-23

  • ಪಸ್ಕ ತಡವಾಗಿ ಆಚರಿಸೋ ಅವಕಾಶ (1-14)

  • ಪವಿತ್ರ ಡೇರೆಯ ಮೇಲೆ ಮೋಡ ಮತ್ತು ಬೆಂಕಿ (15-23)

9  ಇಸ್ರಾಯೇಲ್ಯರು ಈಜಿಪ್ಟ್‌ ದೇಶ ಬಿಟ್ಟು ಬಂದ ಎರಡನೇ ವರ್ಷದ ಮೊದಲನೇ ತಿಂಗಳಲ್ಲಿ+ ಯೆಹೋವ ಮೋಶೆ ಜೊತೆ ಸಿನಾಯಿ ಕಾಡಲ್ಲಿ ಮಾತಾಡಿದನು. ಆತನು ಮೋಶೆಗೆ  ”ಇಸ್ರಾಯೇಲ್ಯರು ಸರಿಯಾದ ಸಮಯದಲ್ಲಿ+ ಪಸ್ಕದ ಬಲಿ+ ಸಿದ್ಧ ಮಾಡಬೇಕು.  ಸರಿಯಾದ ಸಮಯದಲ್ಲಿ ಅಂದ್ರೆ ಈ ತಿಂಗಳ 14ನೇ ದಿನ ಸೂರ್ಯ ಮುಳುಗಿದ ಮೇಲೆ* ಅದನ್ನ ಸಿದ್ಧ ಮಾಡಬೇಕು. ಈಗಾಗ್ಲೇ ಹೇಳಿರೋ ನಿಯಮ, ವಿಧಾನಗಳ ಪ್ರಕಾರ ಅದನ್ನ ಸಿದ್ಧ ಮಾಡಬೇಕು”+ ಅಂದನು.  ಅದಕ್ಕೆ ಮೋಶೆ ಇಸ್ರಾಯೇಲ್ಯರಿಗೆ ಪಸ್ಕದ ಬಲಿ ಸಿದ್ಧ ಮಾಡೋಕೆ ಹೇಳಿದ.  ಅವರು ಸಿನಾಯಿ ಕಾಡಲ್ಲಿ ಮೊದಲನೇ ತಿಂಗಳ 14ನೇ ದಿನ ಸೂರ್ಯ ಮುಳುಗಿದ ಮೇಲೆ* ಪಸ್ಕದ ಬಲಿ ಸಿದ್ಧ ಮಾಡಿದ್ರು. ಯೆಹೋವ ಮೋಶೆಗೆ ಹೇಳಿದ ಹಾಗೇ ಇಸ್ರಾಯೇಲ್ಯರು ಮಾಡಿದ್ರು.  ಆದ್ರೆ ಸ್ವಲ್ಪ ಜನ ಶವ ಮುಟ್ಟಿ ಅಶುದ್ಧ ಆಗಿದ್ರಿಂದ+ ಆ ದಿನ ಅವ್ರಿಗೆ ಪಸ್ಕದ ಬಲಿ ಸಿದ್ಧ ಮಾಡೋಕೆ ಆಗಲಿಲ್ಲ. ಹಾಗಾಗಿ ಅವರು ಅದೇ ದಿನ ಮೋಶೆ ಆರೋನನ ಹತ್ರ ಬಂದು+  ಮೋಶೆಗೆ “ನಾವು ಶವ ಮುಟ್ಟಿ ಅಶುದ್ಧ ಆಗಿದ್ದೀವಿ. ಆದ್ರೆ ನಾವು ಸರಿಯಾದ ಸಮಯಕ್ಕೆ ಇಸ್ರಾಯೇಲ್ಯರ ಜೊತೆ ಸೇರಿ ಯೆಹೋವನಿಗೆ ಬಲಿ ಕೊಡೋಕೆ ಬಯಸ್ತೀವಿ. ನಾವು ಏನು ಮಾಡಬೇಕು ಅಂತ ಹೇಳು”+ ಅಂದ್ರು.  ಅದಕ್ಕೆ ಮೋಶೆ “ಸ್ವಲ್ಪ ಹೊತ್ತು ಇಲ್ಲೇ ಇರಿ. ಯೆಹೋವ ದೇವರು ಏನು ಹೇಳ್ತಾನೆ ಅಂತ ಕೇಳ್ಕೊಂಡು ಬರ್ತಿನಿ”+ ಅಂದ.  ಯೆಹೋವ ಮೋಶೆಗೆ ಹೇಳಿದ್ದು ಏನಂದ್ರೆ 10  “ಅವರಿಗೆ ಹೀಗೆ ಹೇಳು: ‘ನಿಮ್ಮಲ್ಲಿ ಅಥವಾ ನಿಮ್ಮ ವಂಶದವರಲ್ಲಿ ಯಾರಾದ್ರೂ ಶವ ಮುಟ್ಟಿ ಅಶುದ್ಧರಾಗಿದ್ರೆ,+ ಪ್ರಯಾಣ ಮಾಡ್ತಾ ನಿಮ್ಮ ದೇಶದಿಂದ ತುಂಬ ದೂರ ಇದ್ರೆ ಅವನು ಕೂಡ ಯೆಹೋವನಿಗೆ ಗೌರವ ಕೊಡೋಕೆ ಪಸ್ಕದ ಬಲಿ ಸಿದ್ಧ ಮಾಡ್ಲೇಬೇಕು. 11  ಅವನು ಎರಡನೇ ತಿಂಗಳ+ 14ನೇ ದಿನ ಸೂರ್ಯ ಮುಳುಗಿದ ಮೇಲೆ* ಅದನ್ನ ಸಿದ್ಧ ಮಾಡಬೇಕು. ಅವನು ಆ ಬಲಿ ಪ್ರಾಣಿಯ ಮಾಂಸನ ಹುಳಿ ಇಲ್ಲದ ರೊಟ್ಟಿ, ಕಹಿಯಾದ ಸೊಪ್ಪು ಜೊತೆ ತಿನ್ನಬೇಕು.+ 12  ಅದ್ರಲ್ಲಿ ಸ್ವಲ್ಪಾನೂ ಬೆಳಿಗ್ಗೆಗೆ ಅಂತ ಉಳಿಸ್ಕೊಬಾರದು.+ ಅದ್ರ ಒಂದೇ ಒಂದು ಮೂಳೆನೂ ಮುರಿಬಾರದು.+ ಪಸ್ಕ ಹಬ್ಬದ ಎಲ್ಲ ನಿಯಮಗಳ ಪ್ರಕಾರ ಅದನ್ನ ಆಚರಿಸಬೇಕು. 13  ಆದ್ರೆ ಒಬ್ಬ ಶುದ್ಧನಾಗಿದ್ರೂ ಪ್ರಯಾಣ ಮಾಡ್ತಾ ಇಲ್ಲದಿದ್ರೂ ಪಸ್ಕ ಹಬ್ಬವನ್ನ ಅಸಡ್ಡೆ ಮಾಡಿ ಆಚರಿಸದೇ ಇದ್ರೆ ಅವನನ್ನ ಸಾಯಿಸಬೇಕು.+ ಯಾಕಂದ್ರೆ ಅವನು ಸರಿಯಾದ ಸಮಯಕ್ಕೆ ಯೆಹೋವನಿಗೆ ಬಲಿ ಅರ್ಪಿಸಲಿಲ್ಲ. ಅವನು ಮಾಡಿದ ಆ ಪಾಪಕ್ಕಾಗಿ ಅವನಿಗೆ ಶಿಕ್ಷೆ ಆಗಬೇಕು. 14  ನಿಮ್ಮ ಮಧ್ಯ ಇರೋ ವಿದೇಶಿನೂ ಯೆಹೋವನಿಗೆ ಗೌರವ ಕೊಡೋಕೆ ಪಸ್ಕದ ಬಲಿ ಸಿದ್ಧ ಮಾಡಬೇಕು.+ ಈಗಾಗ್ಲೇ ತಿಳಿಸಿರೋ ನಿಯಮ, ವಿಧಾನದ ಪ್ರಕಾರ ಅವನು ಅದನ್ನ ಸಿದ್ಧ ಮಾಡಬೇಕು.+ ನಿಮಗೂ ನಿಮ್ಮ ಮಧ್ಯ ಇರೋ ವಿದೇಶಿಗೂ ಒಂದೇ ನಿಯಮ ಇರುತ್ತೆ.’”+ 15  ಪವಿತ್ರ ಡೇರೆಯ ಭಾಗಗಳನ್ನ ಜೋಡಿಸಿದ+ ದಿನ ಮೋಡ ಪವಿತ್ರ ಡೇರೆ ಅಂದ್ರೆ ಸಾಕ್ಷಿ ಡೇರೆನ ಮುಚ್ಕೊಳ್ತು. ಅದು ಸಂಜೆ ಬೆಂಕಿ ತರ ಕಾಣಿಸ್ತಾ ಇತ್ತು. ಬೆಳಿಗ್ಗೆ ತನಕ ಪವಿತ್ರ ಡೇರೆ ಮೇಲೆನೇ ಇತ್ತು.+ 16  ಹೀಗೆ ಪ್ರತಿದಿನ ಹಗಲಲ್ಲಿ ಪವಿತ್ರ ಡೇರೆನ ಮೋಡ ಮುಚ್ಚಿರುತ್ತಿತ್ತು, ರಾತ್ರಿಯಲ್ಲಿ ಬೆಂಕಿ ತರ ಕಾಣಿಸ್ತಾ ಇತ್ತು.+ 17  ಪವಿತ್ರ ಡೇರೆನ ಮುಚ್ಚಿದ್ದ ಮೋಡ ಮೇಲೆದ್ದಾಗೆಲ್ಲ ಇಸ್ರಾಯೇಲ್ಯರು ತಕ್ಷಣ ತಮ್ಮ ಡೇರೆನ ಕಿತ್ತು ಅಲ್ಲಿಂದ ಮುಂದೆ ಹೋಗ್ತಾ ಇದ್ರು.+ ಎಲ್ಲಿ ಆ ಮೋಡ ನಿಲ್ತಿತ್ತೋ ಅಲ್ಲೇ ಡೇರೆ ಹಾಕೊಳ್ತಾ ಇದ್ರು.+ 18  ಯೆಹೋವ ಹೇಳಿದಾಗ ಹೋಗ್ತಿದ್ರು. ಯೆಹೋವ ಹೇಳಿದಾಗ ಡೇರೆ ಹಾಕೊಳ್ತಾ ಇದ್ರು.+ ಆ ಮೋಡ ಪವಿತ್ರ ಡೇರೆ ಮೇಲೆನೇ ಇರೋ ತನಕ ಅವರು ಇದ್ದ ಜಾಗದಲ್ಲೇ ಇರ್ತಿದ್ರು. 19  ಆ ಮೋಡ ತುಂಬ ದಿನದ ತನಕ ಪವಿತ್ರ ಡೇರೆ ಮೇಲೆನೇ ಇದ್ರೆ ಇಸ್ರಾಯೇಲ್ಯರು ಯೆಹೋವನ ಮಾತು ಕೇಳ್ತಾ ಆ ಎಲ್ಲ ದಿನ ಅಲ್ಲೇ ಇರ್ತಿದ್ರು.+ 20  ಕೆಲವೊಮ್ಮೆ ಆ ಮೋಡ ಪವಿತ್ರ ಡೇರೆ ಮೇಲೆ ಸ್ವಲ್ಪ ದಿನ ಮಾತ್ರ ಇರ್ತಿತ್ತು. ಯೆಹೋವ ಅಪ್ಪಣೆ ಕೊಟ್ಟಾಗ್ಲೇ ಇಸ್ರಾಯೇಲ್ಯರು ತಮ್ಮ ಡೇರೆ ಹಾಕೊಳ್ತಾ ಇದ್ರು. ಯೆಹೋವ ಅಪ್ಪಣೆ ಕೊಟ್ಟಾಗ್ಲೇ ಅವರು ಮುಂದೆ ಹೋಗ್ತಿದ್ರು. 21  ಕೆಲವೊಮ್ಮೆ ಆ ಮೋಡ ಪವಿತ್ರ ಡೇರೆ ಮೇಲೆ ಸಂಜೆಯಿಂದ ಬೆಳಿಗ್ಗೆ ತನಕ ಮಾತ್ರ ಇರ್ತಿತ್ತು. ಬೆಳಿಗ್ಗೆ ಮೋಡ ಮೇಲೆ ಎದ್ದಾಗ ಇಸ್ರಾಯೇಲ್ಯರೂ ಹೋಗ್ತಿದ್ರು. ಹಗಲಿರಲಿ ರಾತ್ರಿ ಇರಲಿ ಮೋಡ ಮೇಲೆ ಎದ್ದಾಗೆಲ್ಲ ಅವರೂ ಹೋಗ್ತಿದ್ರು.+ 22  ಮೋಡ ಪವಿತ್ರ ಡೇರೆ ಮೇಲೆ ಎರಡು ದಿನ ಇದ್ರೂ ಒಂದು ತಿಂಗಳಿದ್ರೂ ಅದಕ್ಕಿಂತ ಜಾಸ್ತಿ ಸಮಯ ಇದ್ರೂ ಇಸ್ರಾಯೇಲ್ಯರು ಇದ್ದ ಸ್ಥಳದಲ್ಲೇ ಇರ್ತಿದ್ರು. ಅದು ಪವಿತ್ರ ಡೇರೆ ಮೇಲೆ ಇದ್ದಷ್ಟು ಸಮಯ ಅವರು ಮುಂದೆ ಹೋಗ್ತಾ ಇರಲಿಲ್ಲ. ಆದ್ರೆ ಮೋಡ ಮೇಲೆ ಎದ್ದಾಗ ಹೋಗ್ತಿದ್ರು. 23  ಯೆಹೋವ ಹೇಳಿದಾಗ ಅವರು ಡೇರೆ ಹಾಕೊಳ್ತಾ ಇದ್ರು. ಯೆಹೋವ ಹೇಳಿದಾಗ ಹೋಗ್ತಿದ್ರು. ಅವರು ಯೆಹೋವ ಹೇಳಿದ್ದನ್ನೆಲ್ಲ ಮಾಡಿದ್ರು. ಯೆಹೋವ ಮೋಶೆ ಮೂಲಕ ಹೇಳಿದ ತರಾನೇ ಅವರು ಮಾಡಿದ್ರು.

ಪಾದಟಿಪ್ಪಣಿ

ಅಕ್ಷ. “ಎರಡು ಸಂಜೆಗಳ ಮಧ್ಯ.” ಇದು, ಸೂರ್ಯ ಮುಳುಗಿದ ಮೇಲೆ ಪೂರ್ತಿ ಕತ್ತಲಾಗೋ ಮುಂಚೆ ಇರಬೇಕು.
ಅಕ್ಷ. “ಎರಡು ಸಂಜೆಗಳ ಮಧ್ಯ.” ಇದು, ಸೂರ್ಯ ಮುಳುಗಿದ ಮೇಲೆ ಪೂರ್ತಿ ಕತ್ತಲಾಗೋ ಮುಂಚೆ ಇರಬೇಕು.
ಅಕ್ಷ. “ಎರಡು ಸಂಜೆಗಳ ಮಧ್ಯ.” ಹೆಚ್ಚಿನಾಂಶ ಇದು, ಸೂರ್ಯ ಮುಳುಗಿದ ಮೇಲೆ ಪೂರ್ತಿ ಕತ್ತಲಾಗೋ ಮುಂಚೆ.