ಅಪೊಸ್ತಲರ ಕಾರ್ಯ 18:1-28

  • ಕೊರಿಂಥದಲ್ಲಿ ಪೌಲನ ಸೇವೆ (1-17)

  • ಸಿರಿಯಾದ ಅಂತಿಯೋಕ್ಯಕ್ಕೆ ವಾಪಸ್‌ (18-22)

  • ಪೌಲ ಗಲಾತ್ಯ ಮತ್ತು ಫ್ರುಗ್ಯಕ್ಕೆ ಹೋದ (23)

  • ಹುರುಪಿನ ಅಪೊಲ್ಲೋಸನಿಗೆ ಸಹಾಯ ಸಿಕ್ತು (24-28)

18  ಇದಾದ ಮೇಲೆ ಪೌಲ ಅಥೆನ್ಸಿಂದ ಕೊರಿಂಥಕ್ಕೆ ಬಂದ.  ಅಲ್ಲಿ ಅಕ್ವಿಲ+ ಅನ್ನೊ ಒಬ್ಬ ಯೆಹೂದ್ಯ ಅವನಿಗೆ ಸಿಕ್ಕಿದ. ಅವನ ಸ್ವಂತ ಊರು ಪೊಂತ ಆಗಿತ್ತು. ಎಲ್ಲ ಯೆಹೂದ್ಯರು ರೋಮ್‌ ಪಟ್ಟಣವನ್ನ ಬಿಟ್ಟುಹೋಗಬೇಕು ಅಂತ ಕ್ಲೌದಿಯ ಚಕ್ರವರ್ತಿ ಆಜ್ಞೆ ಕೊಟ್ಟಿದ್ದ. ಹಾಗಾಗಿ ಅಕ್ವಿಲ ತನ್ನ ಹೆಂಡತಿ ಪ್ರಿಸ್ಕಿಲ್ಲ ಜೊತೆ ಇಟಲಿಯಿಂದ ಇಲ್ಲಿಗೆ ಬಂದು ಸ್ವಲ್ಪ ಸಮಯ ಆಗಿತ್ತಷ್ಟೆ. ಪೌಲ ಅವ್ರ ಹತ್ರ ಹೋದ.  ಅವರು ಸಹ ಪೌಲನ ತರಾನೇ ಡೇರೆ ಮಾಡೋ ಕೆಲಸ ಮಾಡ್ತಿದ್ರು.+ ಪೌಲ ಅವ್ರ ಮನೆಯಲ್ಲೇ ಇದ್ಕೊಂಡು ಅವ್ರ ಜೊತೆ ಕೆಲಸಮಾಡ್ತಿದ್ದ.  ಆದ್ರೂ ಸಬ್ಬತ್‌ ದಿನ+ ಬಂದಾಗೆಲ್ಲ ಸಭಾಮಂದಿರಕ್ಕೆ+ ಹೋಗಿ ಭಾಷಣ ಕೊಡ್ತಿದ್ದ. ಯೆಹೂದ್ಯರು ಮತ್ತು ಗ್ರೀಕರು ತನ್ನ ಮಾತನ್ನ ನಂಬೋ ತರ ಮಾತಾಡ್ತಿದ್ದ.  ಸೀಲ+ ಮತ್ತು ತಿಮೊತಿ+ ಮಕೆದೋನ್ಯದಿಂದ ಬಂದ ಮೇಲೆ ಪೌಲ ಜಾಸ್ತಿ ಸಮಯ ಸಿಹಿಸುದ್ದಿ ಸಾರೋಕೆ ಕೊಡ್ತಿದ್ದ. ಯೇಸುನೇ ಕ್ರಿಸ್ತ ಅಂತ ಯೆಹೂದ್ಯರಿಗೆ ಆಧಾರ ತೋರಿಸಿ ವಿವರಿಸ್ತಿದ್ದ.+  ಆದ್ರೆ ಆ ಯೆಹೂದ್ಯರು ಪೌಲನನ್ನ ವಿರೋಧಿಸಿದ್ರು. ಹಾಗಾಗಿ ಪೌಲ ತನ್ನ ಬಟ್ಟೆ ಝಾಡಿಸಿ+ ಅವ್ರಿಗೆ “ನಿಮ್ಗೆ ಏನೇ ಆದ್ರೂ ಅದಕ್ಕೆ ಕಾರಣ ನೀವೇ.+ ಅದಕ್ಕೆ ಜವಾಬ್ದಾರಿ ನಾನಲ್ಲ.+ ಇವತ್ತಿಂದ ನಾನು ಯೆಹೂದ್ಯರಲ್ಲದ ಜನ್ರ ಹತ್ರ ಹೋಗ್ತೀನಿ”+ ಅಂದ.  ಹೀಗೆ ಪೌಲ ಸಭಾಮಂದಿರವನ್ನ ಬಿಟ್ಟು ದೇವಭಕ್ತಿಯಿದ್ದ ತೀತ ಯುಸ್ತ ಅನ್ನುವವನ ಮನೆಗೆ ಹೋದ. ಅವನ ಮನೆ ಸಭಾಮಂದಿರದ ಪಕ್ಕದಲ್ಲೇ ಇತ್ತು.  ಸಭಾಮಂದಿರದ ಅಧಿಕಾರಿ ಕ್ರಿಸ್ಪ+ ಮತ್ತು ಅವನ ಕುಟುಂಬದವರು ಯೇಸು ಕ್ರಿಸ್ತನ ಶಿಷ್ಯರಾದ್ರು. ಕೊರಿಂಥದಲ್ಲಿದ್ದ ತುಂಬ ಜನ್ರೂ ಸಿಹಿಸುದ್ದಿ ಕೇಳಿಸ್ಕೊಂಡು ನಂಬಿ ದೀಕ್ಷಾಸ್ನಾನ ತಗೊಂಡ್ರು.  ಅಷ್ಟೇ ಅಲ್ಲ ರಾತ್ರಿ ಪೌಲನಿಗೆ ಒಂದು ದರ್ಶನ ಬಂತು. ಅದ್ರಲ್ಲಿ ಪ್ರಭು ಅವನಿಗೆ “ಭಯಪಡಬೇಡ, ಮಾತಾಡ್ತಾನೇ ಇರು, ಸುಮ್ಮನಿರಬೇಡ. 10  ಯಾಕಂದ್ರೆ, ನಾನು ನಿನ್ನ ಜೊತೆ ಇದ್ದೀನಿ.+ ಯಾರೂ ನಿಂಗೆ ಹಾನಿ ಮಾಡಲ್ಲ. ನನ್ನ ಮೇಲೆ ನಂಬಿಕೆ ಇಡುವವರು ಈ ಪಟ್ಟಣದಲ್ಲಿ ಇನ್ನೂ ತುಂಬ ಜನ ಇದ್ದಾರೆ” ಅಂದನು. 11  ಹಾಗಾಗಿ ಪೌಲ ಒಂದೂವರೆ ವರ್ಷ ಅಲ್ಲೇ ಇದ್ದು ಅವ್ರಿಗೆ ದೇವ್ರ ಸಂದೇಶ ಕಲಿಸ್ತಿದ್ದ. 12  ಗಲ್ಲಿಯೋನ ಅಖಾಯದ ರಾಜ್ಯಪಾಲನಾಗಿದ್ದಾಗ ಯೆಹೂದ್ಯರೆಲ್ಲ ಸೇರ್ಕೊಂಡು ಪೌಲನ ವಿರುದ್ಧ ಹೋದ್ರು. ಅವನನ್ನ ರಾಜ್ಯಪಾಲನ ಮುಂದೆ ವಿಚಾರಣೆಗೆ ಕರ್ಕೊಂಡು ಬಂದ್ರು. 13  ಅವರು ರಾಜ್ಯಪಾಲನಿಗೆ “ಇವನು ಕಾನೂನಿಗೆ ವಿರುದ್ಧವಾದ ರೀತಿಯಲ್ಲಿ ದೇವ್ರನ್ನ ಆರಾಧಿಸೋಕೆ ಜನ್ರಿಗೆ ಕಲಿಸ್ತಿದ್ದಾನೆ” ಅಂದ್ರು. 14  ಆಗ ಪೌಲ ಇನ್ನೇನು ಮಾತಾಡಬೇಕಂತ ಇದ್ದಾಗ ಗಲ್ಲಿಯೋನ ಆ ಯೆಹೂದ್ಯರಿಗೆ ಹೀಗಂದ “ಯೆಹೂದ್ಯರೇ, ಇವನು ಮಾಡಿದ್ದು ತಪ್ಪಾಗಿದ್ರೆ, ಘೋರ ಅಪರಾಧ ಆಗಿದ್ರೆ ನೀವು ಹೇಳೋದನ್ನೆಲ್ಲ ನಾನು ಸಮಾಧಾನದಿಂದ ಕೇಳಿಸ್ಕೊಳ್ತಿದ್ದೆ. 15  ಆದ್ರೆ ನಿಮ್ಮ ಜಗಳ ನಿಮ್ಮದೇ ನಿಯಮದ ಬಗ್ಗೆ ಆಗಿದ್ರೆ,+ ಅವನು ಆಡಿದ ಯಾವುದೋ ಮಾತಿನ ಬಗ್ಗೆ ಆಗಿದ್ರೆ, ಜನ್ರ ಬಗ್ಗೆ ಆಗಿದ್ರೆ ಅದನ್ನ ನೀವೇ ನೋಡ್ಕೊಳ್ಳಿ. ಅದ್ರ ಬಗ್ಗೆ ನ್ಯಾಯತೀರಿಸೋಕೆ ನಂಗಿಷ್ಟ ಇಲ್ಲ.” 16  ಹೀಗೆ ಹೇಳಿದ ಮೇಲೆ ಅವನು ಅವ್ರನ್ನೆಲ್ಲ ಅಲ್ಲಿಂದ ಕಳಿಸಿಬಿಟ್ಟ. 17  ಹಾಗಾಗಿ ಅವ್ರೆಲ್ಲ ಸೇರಿ ಸಭಾಮಂದಿರದ ಅಧಿಕಾರಿಯಾಗಿದ್ದ ಸೋಸ್ಥೆನನನ್ನ+ ಹಿಡ್ಕೊಂಡು ಅಲ್ಲೇ ಹೊಡೆಯೋಕೆ ಶುರುಮಾಡಿದ್ರು. ಆದ್ರೆ ಗಲ್ಲಿಯೋನ ಅದ್ರ ಬಗ್ಗೆ ತಲೆಕೆಡಿಸ್ಕೊಳ್ಳಲಿಲ್ಲ. 18  ಆದ್ರೆ ಪೌಲ ತುಂಬ ದಿನ ಅಲ್ಲೇ ಇದ್ದ. ಆಮೇಲೆ ಸಹೋದರರಿಗೆ ಮತ್ತೆ ಸಿಗ್ತೀನಿ ಅಂತ ಹೇಳಿ ಕೆಂಕ್ರೆಗೆ+ ಹೋದ. ಅಲ್ಲಿ ಪೌಲ ದೇವ್ರಿಗೆ ಹರಕೆ ಮಾಡಿದ ಹಾಗೇ ತನ್ನ ತಲೆಕೂದಲನ್ನ ಕತ್ತರಿಸಿದ. ಅಲ್ಲಿಂದ ಹಡಗು ಹತ್ತಿ ಸಿರಿಯಗೆ ಹೊರಟ. ಅವನ ಜೊತೆ ಪ್ರಿಸ್ಕಿಲ್ಲ ಮತ್ತು ಅಕ್ವಿಲ ಸಹ ಇದ್ರು. 19  ಅವರು ಎಫೆಸಕ್ಕೆ ತಲಪಿದಾಗ ಪೌಲ ಅವ್ರನ್ನ ಅಲ್ಲೇ ಬಿಟ್ಟು ಸಭಾಮಂದಿರಕ್ಕೆ ಹೋದ. ಅಲ್ಲಿ ಯೆಹೂದ್ಯರಿಗೆ ವಚನಗಳನ್ನ ವಿವರಿಸ್ತಾ ಅವ್ರಿಗೆ ಅರ್ಥ ಮಾಡಿಸಿದ.+ 20  ಅವರು ಪೌಲನಿಗೆ ಇನ್ನೂ ಸ್ವಲ್ಪ ದಿನ ತಮ್ಮ ಜೊತೆನೇ ಇರೋಕೆ ಕೇಳ್ಕೊಂಡ್ರೂ ಅವನು ಒಪ್ಪಲಿಲ್ಲ. 21  ಅವನು ಅವ್ರಿಗೆ “ಯೆಹೋವನಿಗೆ* ಇಷ್ಟ ಇದ್ರೆ ನಾನು ಮತ್ತೆ ನಿಮ್ಮ ಹತ್ರ ಬರ್ತೀನಿ” ಅಂತ ಹೇಳಿ ಅಲ್ಲಿಂದ ಹೋದ. ಅವನು ಎಫೆಸದಿಂದ ಹಡಗು ಹತ್ತಿ 22  ಕೈಸರೈಯಕ್ಕೆ ಬಂದ. ಅವನು ಯೆರೂಸಲೇಮ್‌ ಸಭೆಗೆ ಹೋಗಿ ಸಹೋದರರನ್ನ ಮಾತಾಡಿಸಿ ಅಂತಿಯೋಕ್ಯಕ್ಕೆ ಬಂದ.+ 23  ಪೌಲ ಸ್ವಲ್ಪ ಸಮಯ ಅಲ್ಲಿದ್ದು, ಆಮೇಲೆ ಗಲಾತ್ಯ, ಫ್ರುಗ್ಯ ದೇಶದ ಒಂದು ಊರಿಂದ ಇನ್ನೊಂದು ಊರಿಗೆ+ ಹೋಗ್ತಾ ಶಿಷ್ಯರನ್ನ ಬಲಪಡಿಸ್ತಿದ್ದ.+ 24  ಅಪೊಲ್ಲೋಸ+ ಅನ್ನೋ ಒಬ್ಬ ಯೆಹೂದಿ ಎಫೆಸಕ್ಕೆ ಬಂದ. ಅವನ ಊರು ಅಲೆಕ್ಸಾಂದ್ರಿಯ. ಅವನು ಚೆನ್ನಾಗಿ ಭಾಷಣ ಕೊಡ್ತಾ ಇದ್ದ. ಅವನಿಗೆ ಎಲ್ಲಾ ವಚನಗಳು ಚೆನ್ನಾಗಿ ಗೊತ್ತಿದ್ದವು. 25  ಅವನಿಗೆ ಯೆಹೋವನ* ಮಾರ್ಗದ ಬಗ್ಗೆ ಕಲಿಸಲಾಗಿತ್ತು. ದೇವ್ರ ಪವಿತ್ರಶಕ್ತಿ ಅವನ ಮೇಲೆ ಇತ್ತು. ಹಾಗಾಗಿ ಅವನು ಹುರುಪಿಂದ ಯೇಸು ಬಗ್ಗೆ ಸರಿಯಾದ ವಿಷ್ಯಗಳನ್ನೇ ಹೇಳ್ತಾ, ಕಲಿಸ್ತಾ ಇದ್ದ. ಆದ್ರೆ ಯೋಹಾನ ಮಾಡಿಸ್ತಿದ್ದ ದೀಕ್ಷಾಸ್ನಾನದ ಬಗ್ಗೆ ಮಾತ್ರ ಅವನಿಗೆ ಗೊತ್ತಿತ್ತು. 26  ಅವನು ಸಭಾಮಂದಿರದಲ್ಲಿ ಧೈರ್ಯವಾಗಿ ಮಾತಾಡೋಕೆ ಶುರುಮಾಡಿದ. ಪ್ರಿಸ್ಕಿಲ್ಲ ಮತ್ತು ಅಕ್ವಿಲ+ ಅವನು ಹೇಳೋದನ್ನ ಕೇಳಿಸ್ಕೊಂಡಾಗ ಅವನನ್ನ ತಮ್ಮ ಜೊತೆ ಕರ್ಕೊಂಡು ಹೋಗಿ ದೇವ್ರ ಮಾರ್ಗದ ಬಗ್ಗೆ ಇನ್ನೂ ಸರಿಯಾಗಿ ವಿವರಿಸಿದ್ರು. 27  ಆಮೇಲೆ ಅಪೊಲ್ಲೋಸ ಸಮುದ್ರ ದಾಟಿ ಅಖಾಯಕ್ಕೆ ಹೋಗಬೇಕಂತ ಅಂದ್ಕೊಂಡ. ಹಾಗಾಗಿ ಸಹೋದರರು ಅಲ್ಲಿದ್ದ ಶಿಷ್ಯರಿಗೆ ಪತ್ರ ಬರೆದು ಇವನನ್ನ ಪ್ರೀತಿಯಿಂದ ಸ್ವಾಗತಿಸೋಕೆ ಪ್ರೋತ್ಸಾಹಿಸಿದ್ರು. ಅವನು ಅಲ್ಲಿಗೆ ಹೋದಾಗ ದೇವ್ರ ಅಪಾರ ಕೃಪೆಯಿಂದ ಶಿಷ್ಯರಿಗೆ ತುಂಬ ಸಹಾಯ ಮಾಡಿದ. 28  ಯೇಸುನೇ ಕ್ರಿಸ್ತ ಅಂತ ವಚನಗಳಿಂದ ಸ್ಪಷ್ಟವಾಗಿ ತೋರಿಸಿದ. ಹೀಗೆ ಯೆಹೂದ್ಯರು ಕಲಿಸ್ತಾ ಇರೋದು ತಪ್ಪು ಅಂತ ಎಲ್ರ ಮುಂದೆ ಧೈರ್ಯವಾಗಿ ಮಾತಾಡಿದ.+

ಪಾದಟಿಪ್ಪಣಿ