ಆದಿಕಾಂಡ 36:1-43
36 ಇದು ಏಸಾವನ ಅಂದ್ರೆ ಎದೋಮನ ಚರಿತ್ರೆ.+
2 ಏಸಾವ ಕಾನಾನ್ಯ ಸ್ತ್ರೀಯರನ್ನ ಮದುವೆ ಮಾಡ್ಕೊಂಡ. ಅವರು ಯಾರಂದ್ರೆ ಹಿತ್ತಿಯನಾದ ಏಲೋನನ+ ಮಗಳು ಆದಾ,+ ಅನಾಹನ ಮಗಳೂ ಹಿವ್ವಿಯನಾದ ಸಿಬೆಯೋನನ ಮೊಮ್ಮಗಳೂ ಆಗಿದ್ದ ಒಹೊಲೀಬಾಮ+
3 ಮತ್ತು ಇಷ್ಮಾಯೇಲನ ಮಗಳೂ ನೆಬಾಯೋತನ+ ತಂಗಿಯೂ ಆಗಿದ್ದ ಬಾಸೆಮತ್.+
4 ಏಸಾವ ಮತ್ತು ಆದಾಳಿಗೆ ಎಲೀಫಜ ಹುಟ್ಟಿದ, ಬಾಸೆಮತ್‌ಗೆ ರೆಗೂವೇಲ ಹುಟ್ಟಿದ.
5 ಒಹೊಲೀಬಾಮಗೆ ಯೆಗೂಷ್, ಯಳಾಮ್, ಕೋರಹ ಹುಟ್ಟಿದ್ರು.+
ಇವರು ಕಾನಾನ್ ದೇಶದಲ್ಲಿ ಏಸಾವನಿಗೆ ಹುಟ್ಟಿದ ಮಕ್ಕಳು.
6 ಆಮೇಲೆ ಏಸಾವ ತನ್ನ ಹೆಂಡತಿಯರನ್ನ, ಗಂಡುಹೆಣ್ಣು ಮಕ್ಕಳನ್ನ, ಮನೆಯಲ್ಲಿದ್ದ ಎಲ್ಲರನ್ನ, ತನಗಿದ್ದ ಎಲ್ಲ ಸಾಕುಪ್ರಾಣಿಗಳನ್ನ ಮತ್ತು ಕಾನಾನ್ ದೇಶದಲ್ಲಿ ಸಂಪಾದಿಸಿದ್ದ ಎಲ್ಲ ಆಸ್ತಿ+ ತಗೊಂಡು ಬೇರೆ ದೇಶಕ್ಕೆ ಹೋದ. ಹೀಗೆ ಯಾಕೋಬನಿದ್ದ ಸ್ಥಳದಿಂದ ದೂರ ಹೋದ.+
7 ಅವರಿಬ್ಬರಿಗೆ ತುಂಬ ಸಂಪತ್ತು, ಪ್ರಾಣಿಗಳು ಇತ್ತು. ಅವರಿಬ್ಬರಿಗೂ ಒಂದೇ ಸ್ಥಳದಲ್ಲಿ ವಾಸಿಸೋಕೆ* ಕಷ್ಟ ಆಯ್ತು.
8 ಆಗ ಏಸಾವ ಸೇಯೀರ್ ಬೆಟ್ಟ+ ಪ್ರದೇಶಕ್ಕೆ ಹೋಗಿ ಅಲ್ಲಿ ವಾಸ ಮಾಡಿದ. ಏಸಾವನಿಗೆ ಎದೋಮ್ ಅನ್ನೋ ಹೆಸರು ಕೂಡ ಇತ್ತು.+
9 ಇದು ಸೇಯೀರ್ ಬೆಟ್ಟ ಪ್ರದೇಶದಲ್ಲಿದ್ದ ಎದೋಮ್ಯರ ಪೂರ್ವಜನಾದ ಏಸಾವನ ಚರಿತ್ರೆ.+
10 ಏಸಾವನ ಮಕ್ಕಳು ಎಲೀಫಜ ಮತ್ತು ರೆಗೂವೇಲ. ಎಲೀಫಜ ಏಸಾವನಿಗೆ ಆದಾಳಿಂದ ಹುಟ್ಟಿದ ಮಗ. ರೆಗೂವೇಲ ಏಸಾವನಿಗೆ ಬಾಸೆಮತಳಿಂದ ಹುಟ್ಟಿದ ಮಗ.+
11 ಎಲೀಫಜನ ಮಕ್ಕಳು ತೇಮಾನ್,+ ಓಮಾರ್, ಚೆಫೋ, ಗತಾಮ್ ಮತ್ತು ಕೆನಜ್.+
12 ಏಸಾವನ ಮಗನಾದ ಎಲೀಫಜನ ಉಪಪತ್ನಿ ಹೆಸ್ರು ತಿಮ್ನ. ಎಲೀಫಜನಿಗೆ ಇವಳಿಂದ ಹುಟ್ಟಿದ ಮಗ ಅಮಾಲೇಕ.+ ಇವರೆಲ್ಲ ಏಸಾವನ ಹೆಂಡತಿ ಆದಾಳ ಮೊಮ್ಮಕ್ಕಳು.
13 ರೆಗೂವೇಲನ ಮಕ್ಕಳು ನಹತ್, ಜೆರಹ, ಶಮ್ಮಾ, ಮಿಜ್ಜಾ. ಇವರು ಏಸಾವನ ಹೆಂಡತಿ ಬಾಸೆಮತಳ+ ಮೊಮ್ಮಕ್ಕಳು.
14 ಅನಾಹನ ಮಗಳೂ ಸಿಬೆಯೋನನ ಮೊಮ್ಮಗಳೂ ಆದ ಒಹೊಲೀಬಾಮ ಏಸಾವನ ಹೆಂಡತಿ. ಏಸಾವನಿಗೆ ಅವಳಿಂದ ಯೆಗೂಷ್, ಯಳಾಮ್, ಕೋರಹ ಅನ್ನೋ ಮಕ್ಕಳು ಹುಟ್ಟಿದ್ರು.
15 ಏಸಾವನ ವಂಶದಿಂದ ಬಂದ ಶೇಕ್‌ಗಳ*+ ಹೆಸ್ರು: ಏಸಾವನ ಮೊದಲ ಮಗನಾದ ಎಲೀಫಜನ ಮಕ್ಕಳು: ತೇಮಾನ್, ಓಮಾರ್, ಚೆಫೋ, ಕೆನಜ್,+
16 ಕೋರಹ, ಗತಾಮ್, ಅಮಾಲೇಕ್. ಎಲೀಫಜನ ಗಂಡುಮಕ್ಕಳಾದ+ ಇವರು ಎದೋಮ್ಯರ ದೇಶದಲ್ಲಿ ಶೇಕ್ ಆಗಿದ್ರು. ಇವರು ಆದಾಳ ಮೊಮ್ಮಕ್ಕಳು.
17 ಏಸಾವನ ಮಗನಾದ ರೆಗೂವೇಲನ ಮಕ್ಕಳು: ನಹತ್, ಜೆರಹ, ಶಮ್ಮಾ ಮತ್ತು ಮಿಜ್ಜಾ. ರೆಗೂವೇಲನ ಗಂಡುಮಕ್ಕಳಾದ ಇವರು ಎದೋಮ್ಯರ ದೇಶದಲ್ಲಿ+ ಶೇಕ್ ಆಗಿದ್ರು. ಇವರು ಏಸಾವನ ಹೆಂಡತಿ ಬಾಸೆಮತಳ ಮೊಮ್ಮಕ್ಕಳು.
18 ಏಸಾವನಿಗೆ ಒಹೊಲೀಬಾಮಳಿಂದ ಹುಟ್ಟಿದ ಮಕ್ಕಳು: ಯೆಗೂಷ್, ಯಳಾಮ್, ಕೋರಹ. ಅನಾಹನ ಮಗಳೂ ಏಸಾವನ ಹೆಂಡತಿಯೂ ಆದ ಒಹೊಲೀಬಾಮಳ ಗಂಡುಮಕ್ಕಳಾದ ಇವರು ಶೇಕ್ ಆಗಿದ್ರು.
19 ಇವರು ಏಸಾವನ ಮಕ್ಕಳು ಮತ್ತು ಅವರಿಂದ ಬಂದ ಶೇಕ್‌ಗಳು. ಏಸಾವನಿಗಿದ್ದ ಇನ್ನೊಂದು ಹೆಸರು ಎದೋಮ್.+
20 ಎದೋಮ್ಯರ ದೇಶದ ಮೂಲನಿವಾಸಿಗಳು ಹೋರಿಯರು.+ ಹೋರಿಯನಾದ ಸೇಯೀರನ ವಂಶದವರು ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ,+
21 ದೀಶೋನ್, ಏಚೆರ್ ಮತ್ತು ದೀಶಾನ್.+ ಸೇಯೀರನ ವಂಶದವರಾದ ಇವರು ಎದೋಮ್ಯರ ದೇಶದಲ್ಲಿ ಶೇಕ್ ಆಗಿದ್ರು. ಈ ಶೇಕ್‌ಗಳು ಹೋರಿಯರು ಆಗಿದ್ರು.
22 ಲೋಟಾನನ ಮಕ್ಕಳು ಹೋರಿ ಮತ್ತು ಹೇಮಾಮ್. ಲೋಟಾನನ ಸಹೋದರಿ ತಿಮ್ನ.+
23 ಶೋಬಾಲನ ಮಕ್ಕಳು ಅಲ್ವಾನ್, ಮಾನಹತ್, ಏಬಾಲ್, ಶೆಫೋ, ಓನಾಮ್.
24 ಸಿಬೆಯೋನನ ಮಕ್ಕಳು+ ಅಯ್ಯಾಹ ಮತ್ತು ಅನಾಹ. ಈ ಅನಾಹನೇ ತನ್ನ ತಂದೆಯಾದ ಸಿಬೆಯೋನನ ಕತ್ತೆಗಳನ್ನ ಕಾಡಲ್ಲಿ ಮೇಯಿಸ್ತಿದ್ದಾಗ ಬಿಸಿನೀರಿನ ಬುಗ್ಗೆಗಳನ್ನ ನೋಡಿದ್ದ.
25 ಅನಾಹನ ಮಗನ ಹೆಸ್ರು ದೀಶೋನ್ ಮತ್ತು ಮಗಳ ಹೆಸ್ರು ಒಹೊಲೀಬಾಮ.
26 ದೀಶೋನನ ಮಕ್ಕಳು ಹೆಮ್ದಾನ್, ಎಷ್ಬಾನ್, ಇತ್ರಾನ್, ಕೆರಾನ್.+
27 ಏಚೆರನ ಮಕ್ಕಳು ಬಿಲ್ಹಾನ್, ಜಾವಾನ್, ಅಕಾನ್.
28 ದೀಶಾನನ ಮಕ್ಕಳು ಊಚ್, ಅರಾನ್.+
29 ಹೋರಿಯರ ಶೇಕ್‌ಗಳು: ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ,
30 ದೀಶೋನ್, ಏಚೆರ್ ಮತ್ತು ದೀಶಾನ್.+ ಇವರು ಸೇಯೀರ್ ಪ್ರದೇಶದಲ್ಲಿದ್ದ ಹೋರಿಯರ ಶೇಕ್‌ಗಳು.
31 ಇಸ್ರಾಯೇಲ್ಯರಲ್ಲಿ ರಾಜರ ಆಳ್ವಿಕೆ ಶುರು ಆಗೋ ಮುಂಚೆ ಎದೋಮ್ಯರ ದೇಶ+ ಆಳಿದ ರಾಜರ ವಿವರ:+
32 ಬೆಯೋರನ ಮಗ ಬೆಳ ಎದೋಮನ್ನ ಆಳಿದ. ಅವನಿದ್ದ ಪಟ್ಟಣದ ಹೆಸ್ರು ದಿನ್ಹಾಬಾ.
33 ಬೆಳ ತೀರಿಹೋದ ಮೇಲೆ ಬೊಚ್ರದವನೂ ಜೆರಹನ ಮಗನೂ ಆದ ಯೋಬಾಬ ರಾಜನಾಗಿ ಆಳಿದ.
34 ಯೋಬಾಬ ತೀರಿಹೋದ ಮೇಲೆ ತೇಮಾನೀಯರ ದೇಶದವನಾದ ಹುಷಾಮ ರಾಜನಾಗಿ ಆಳಿದ.
35 ಹುಷಾಮ ತೀರಿಹೋದ ಮೇಲೆ ಬೆದದನ ಮಗನಾದ ಹದದ ರಾಜನಾಗಿ ಆಳಿದ. ಅವನಿದ್ದ ಪಟ್ಟಣದ ಹೆಸ್ರು ಅವೀತ್. ಹದದ ಮೋವಾಬ್ ಪ್ರದೇಶದಲ್ಲಿ ಮಿದ್ಯಾನ್ಯರನ್ನ+ ಸೋಲಿಸಿದ್ದ.
36 ಹದದ ತೀರಿಹೋದ ಮೇಲೆ ಮಸ್ರೇಕದವನಾದ ಸಮ್ಲಾಹ ರಾಜನಾಗಿ ಆಳಿದ.
37 ಸಮ್ಲಾಹ ತೀರಿಹೋದ ಮೇಲೆ ನದಿ ಹತ್ರ ಇದ್ದ ರೆಹೋಬೋತ್ ಪಟ್ಟಣದವನಾದ ಶೌಲ ರಾಜನಾಗಿ ಆಳಿದ.
38 ಶೌಲ ತೀರಿಹೋದ ಮೇಲೆ ಅಕ್ಬೋರನ ಮಗನಾದ ಬಾಳ್-ಹಾನಾನ ರಾಜನಾಗಿ ಆಳಿದ.
39 ಅವನು ತೀರಿಹೋದ ಮೇಲೆ ಹದರ ರಾಜನಾಗಿ ಆಳಿದ. ಅವನಿದ್ದ ಪಟ್ಟಣದ ಹೆಸ್ರು ಪಾಗು. ಹದರನ ಹೆಂಡತಿ ಹೆಸ್ರು ಮಹೇಟಬೇಲ್. ಅವಳು ಮಟ್ರೇದಳ ಮಗಳು ಮತ್ತು ಮೆಜಾಹಾಬನ* ಮೊಮ್ಮಗಳು.
40 ಏಸಾವನ ವಂಶದಿಂದ ಬಂದ ಶೇಕ್‌ಗಳಲ್ಲಿ ಪ್ರತಿಯೊಬ್ಬ ಶೇಕ್‌ನ ಕುಟುಂಬಕ್ಕೆ ಮತ್ತು ಜಾಗಕ್ಕೆ ಆ ಶೇಕ್‌ನ ಹೆಸರನ್ನೇ ಕೊಡಲಾಗಿತ್ತು. ಅವರು ಯಾರಂದ್ರೆ ತಿಮ್ನ, ಅಲ್ವಾ, ಯೆತೇತ್,+
41 ಒಹೊಲೀಬಾಮ, ಏಲಾ, ಪೀನೋನ್,
42 ಕೆನಜ್, ತೇಮಾನ್, ಮಿಬ್ಜಾರ್,
43 ಮಗ್ದೀಯೇಲ್, ಗೀರಾಮ್. ಇವರು ಎದೋಮ್ಯರ ಶೇಕ್‌ಗಳು ಮತ್ತು ಇವುಗಳೇ ಅವರ ದೇಶದಲ್ಲಿ ಅವರಿದ್ದ ಪ್ರದೇಶಗಳ ಹೆಸರುಗಳು.+ ಏಸಾವ ಎದೋಮ್ಯರ ಪೂರ್ವಜ.+