ಆದಿಕಾಂಡ 46:1-34

  • ಯಾಕೋಬನ ಕುಟುಂಬ ಈಜಿಪ್ಟಲ್ಲಿ (1-7)

  • ಈಜಿಪ್ಟಿಗೆ ಬಂದವರ ಹೆಸರುಗಳು (8-27)

  • ಗೋಷೆನಿನಲ್ಲಿ ಯೋಸೇಫ ಮತ್ತು ತಂದೆಯ ಭೇಟಿ (28-34)

46  ಇಸ್ರಾಯೇಲ ತನ್ನ ಎಲ್ಲ ಸೊತ್ತು ತಗೊಂಡು ತನ್ನ ಕುಟುಂಬದ ಜೊತೆ ಹೊರಟ. ಅವನು ಪ್ರಯಾಣಮಾಡಿ ಬೇರ್ಷೆಬಕ್ಕೆ+ ಬಂದಾಗ ಅಲ್ಲಿ ತನ್ನ ತಂದೆಯಾದ ಇಸಾಕನ ದೇವರಿಗೆ+ ಬಲಿಗಳನ್ನ ಅರ್ಪಿಸಿದ.  ರಾತ್ರಿಯಲ್ಲಿ ದೇವರು ಇಸ್ರಾಯೇಲನ ಜೊತೆ ಒಂದು ದರ್ಶನದಲ್ಲಿ ಮಾತಾಡಿದನು. ಆತನು “ಯಾಕೋಬ, ಯಾಕೋಬ!” ಅಂತ ಕರೆದನು. ಅದಕ್ಕೆ ಅವನು “ಹೇಳು ಸ್ವಾಮಿ!” ಅಂದ.  ದೇವರು ಯಾಕೋಬನಿಗೆ “ನಾನು ಸತ್ಯ ದೇವರು, ನಿನ್ನ ತಂದೆಯ ದೇವರು.+ ನೀನು ಈಜಿಪ್ಟಿಗೆ ಹೋಗೋಕೆ ಭಯಪಡಬೇಡ. ಯಾಕಂದ್ರೆ ಅಲ್ಲಿ ನಿನ್ನಿಂದ ಒಂದು ದೊಡ್ಡ ಜನಾಂಗ ಆಗೋ ತರ ನಾನು ಮಾಡ್ತೀನಿ.+  ನಾನೇ ನಿನ್ನ ಜೊತೆಯಲ್ಲಿ ಈಜಿಪ್ಟಿಗೆ ಬರ್ತಿನಿ. ಅಲ್ಲಿಂದ ನಿನ್ನನ್ನ ಈ ದೇಶಕ್ಕೆ ಮತ್ತೆ ನಾನೇ ಕರ್ಕೊಂಡು ಬರ್ತಿನಿ.+ ಅಷ್ಟೇ ಅಲ್ಲ ನೀನು ತೀರಿಕೊಂಡಾಗ ಯೋಸೇಫ ತನ್ನ ಕೈಯಿಂದ ನಿನ್ನ ಕಣ್ಣು ಮುಚ್ತಾನೆ” ಅಂದನು.+  ಆಮೇಲೆ ಯಾಕೋಬ ಬೇರ್ಷೆಬದಿಂದ ಹೊರಟ. ಅವನ ಗಂಡುಮಕ್ಕಳು ಅವನನ್ನ,* ತಮ್ಮ ಹೆಂಡತಿ ಮಕ್ಕಳನ್ನ ಫರೋಹ ಕಳಿಸಿದ ಬಂಡಿಯಲ್ಲಿ ಕೂರಿಸಿದ್ರು.  ಅವರು ಕಾನಾನ್‌ ದೇಶದಲ್ಲಿ ಸಂಪಾದಿಸಿದ್ದ ಎಲ್ಲ ಪ್ರಾಣಿಗಳನ್ನ, ವಸ್ತುಗಳನ್ನ ತಗೊಂಡ್ರು. ಯಾಕೋಬ ಮತ್ತು ಅವನ ಕುಟುಂಬದವರೆಲ್ಲ ಪ್ರಯಾಣ ಮಾಡ್ತಾ ಈಜಿಪ್ಟಿಗೆ ಬಂದ್ರು.  ಹೀಗೆ ಯಾಕೋಬ ತನ್ನ ಇಡೀ ಕುಟುಂಬವನ್ನ ಅಂದ್ರೆ ತನ್ನ ಎಲ್ಲ ಗಂಡುಹೆಣ್ಣುಮಕ್ಕಳನ್ನ, ಎಲ್ಲ ಮೊಮ್ಮಕ್ಕಳನ್ನ ಕರ್ಕೊಂಡು ಈಜಿಪ್ಟಿಗೆ ಬಂದ.  ಈಜಿಪ್ಟಿಗೆ ಬಂದ ಇಸ್ರಾಯೇಲನ ಅಂದ್ರೆ ಯಾಕೋಬನ ಗಂಡುಮಕ್ಕಳ ವಿವರ:+ ಯಾಕೋಬನ ದೊಡ್ಡಮಗ ರೂಬೇನ್‌.+  ರೂಬೇನನ ಮಕ್ಕಳು ಹನೋಕ್‌, ಪಲ್ಲೂ, ಹೆಚ್ರೋನ್‌, ಕರ್ಮೀ.+ 10  ಸಿಮೆಯೋನನ+ ಮಕ್ಕಳು ಯೆಮೂವೇಲ್‌, ಯಾಮೀನ್‌, ಓಹದ್‌, ಯಾಕೀನ್‌, ಚೋಹರ್‌ ಮತ್ತು ಕಾನಾನ್ಯ ಸ್ತ್ರೀಯಿಂದ ಹುಟ್ಟಿದ ಶೌಲ.+ 11  ಲೇವಿಯ+ ಮಕ್ಕಳು ಗೇರ್ಷೋನ್‌, ಕೆಹಾತ್‌, ಮೆರಾರೀ.+ 12  ಯೆಹೂದನ+ ಮಕ್ಕಳು ಏರ್‌, ಓನಾನ್‌, ಶೇಲಹ,+ ಪೆರೆಚ್‌+ ಮತ್ತು ಜೆರಹ.+ ಆದ್ರೆ ಏರ್‌ ಮತ್ತು ಓನಾನ ಕಾನಾನ್‌ ದೇಶದಲ್ಲೇ ಸತ್ರು.+ ಪೆರೆಚನ ಮಕ್ಕಳು ಹೆಚ್ರೋನ್‌ ಮತ್ತು ಹಾಮೂಲ್‌.+ 13  ಇಸ್ಸಾಕಾರನ ಮಕ್ಕಳು ತೋಲಾ, ಪುವ್ವಾ, ಯೋಬ್‌, ಶಿಮ್ರೋನ್‌.+ 14  ಜೆಬುಲೂನನ+ ಮಕ್ಕಳು ಸೆರೆದ್‌, ಏಲೋನ್‌, ಯಹ್ಲೇಲ್‌.+ 15  ಇವರೆಲ್ಲ ಯಾಕೋಬನಿಗೆ ಲೇಯಳಿಂದ ಹುಟ್ಟಿದ ವಂಶದವರು. ಯಾಕೋಬನ ಈ ಮಕ್ಕಳು ಮತ್ತು ಮಗಳಾದ ದೀನ+ ಪದ್ದನ್‌-ಅರಾಮಿನಲ್ಲಿ ಹುಟ್ಟಿದ್ರು. ಲೇಯಳಿಂದ ಬಂದ ಯಾಕೋಬನ ವಂಶದವರು ಒಟ್ಟು 33 ಜನ. 16  ಗಾದನ+ ಮಕ್ಕಳು ಚಿಪ್ಯೋನ್‌, ಹಗ್ಗೀ, ಶೂನೀ, ಎಚ್ಬೋನ್‌, ಏರೀ, ಅರೋದೀ, ಅರೇಲೀ.+ 17  ಅಶೇರನ+ ಮಕ್ಕಳು ಇಮ್ನಾ, ಇಷ್ವ, ಇಷ್ವಿ, ಬೆರೀಯ. ಇವರ ಸಹೋದರಿ ಹೆಸರು ಸೆರಹ. ಬೆರೀಯನ ಮಕ್ಕಳು ಹೆಬೆರ್‌, ಮಲ್ಕೀಯೇಲ್‌.+ 18  ಇವರೆಲ್ಲ ಲಾಬಾನ ತನ್ನ ಮಗಳಾದ ಲೇಯಗೆ ಸೇವಕಿಯಾಗಿ ಕೊಟ್ಟ ಜಿಲ್ಪಳ+ ವಂಶದವರು. ಜಿಲ್ಪಳಿಂದ ಬಂದ ಯಾಕೋಬನ ವಂಶದವರು ಒಟ್ಟು 16 ಜನ. 19  ಯಾಕೋಬನ ಹೆಂಡತಿಯಾದ ರಾಹೇಲಳ ಮಕ್ಕಳು ಯೋಸೇಫ+ ಮತ್ತು ಬೆನ್ಯಾಮೀನ್‌.+ 20  ಯೋಸೇಫನಿಗೆ ಓನ್‌* ಪಟ್ಟಣದ ಪುರೋಹಿತನಾದ ಪೋಟೀಫರನ ಮಗಳಾದ ಆಸನತಳಿಂದ+ ಮನಸ್ಸೆ+ ಮತ್ತು ಎಫ್ರಾಯೀಮ್‌+ ಹುಟ್ಟಿದ್ರು. 21  ಬೆನ್ಯಾಮೀನನ+ ಮಕ್ಕಳು ಬೆಳ, ಬೆಕೆರ್‌, ಅಷ್ಬೇಲ್‌, ಗೇರ,+ ನಾಮಾನ್‌, ಏಹೀ, ರೋಷ್‌, ಮುಪ್ಪೀಮ್‌, ಹುಪ್ಪೀಮ್‌+ ಮತ್ತು ಅರ್ದ್‌.+ 22  ಇವರೆಲ್ಲ ಯಾಕೋಬನಿಗೆ ರಾಹೇಲಳಿಂದ ಹುಟ್ಟಿದ ವಂಶದವರು, ಒಟ್ಟು 14 ಜನ. 23  ದಾನನ+ ಮಗ* ಹುಶೀಮ್‌.+ 24  ನಫ್ತಾಲಿಯ+ ಮಕ್ಕಳು ಯಹಚೇಲ್‌, ಗೂನೀ, ಯೇಜೆರ್‌, ಶಿಲ್ಲೇಮ್‌.+ 25  ಇವರೆಲ್ಲ ಲಾಬಾನ ತನ್ನ ಮಗಳಾದ ರಾಹೇಲಗೆ ಸೇವಕಿಯಾಗಿ ಕೊಟ್ಟ ಬಿಲ್ಹಾಳ ವಂಶದವರು. ಬಿಲ್ಹಾಳಿಂದ ಬಂದ ಯಾಕೋಬನ ವಂಶದವರು ಒಟ್ಟು ಏಳು ಜನ. 26  ಯಾಕೋಬನ ಜೊತೆ ಈಜಿಪ್ಟಿಗೆ ಬಂದ ಅವನ ವಂಶದವರು ಒಟ್ಟು 66 ಜನ.+ ಇದ್ರಲ್ಲಿ ಯಾಕೋಬನ ಸೊಸೆಯರ ಸಂಖ್ಯೆ ಸೇರಿಲ್ಲ. 27  ಈಜಿಪ್ಟಲ್ಲಿ ಯೋಸೇಫನಿಗೆ ಇಬ್ಬರು ಮಕ್ಕಳು ಹುಟ್ಟಿದ್ರು. ಹೀಗೆ ಈಜಿಪ್ಟಲ್ಲಿ ಯಾಕೋಬನ ಕುಟುಂಬದವರು ಒಟ್ಟು 70 ಜನ ಇದ್ರು.+ 28  ತಾನು ಗೋಷೆನಿಗೆ ಬರ್ತಿರೋ ಸುದ್ದಿಯನ್ನ ಯೋಸೇಫನಿಗೆ ಹೇಳೋಕೆ ಯಾಕೋಬ ಯೆಹೂದನನ್ನ+ ಮುಂಚೆನೇ ಕಳಿಸಿದ. ಅವರು ಗೋಷೆನ್‌+ ಪ್ರದೇಶಕ್ಕೆ ಬಂದಾಗ 29  ಯೋಸೇಫ ತನ್ನ ರಥ ಸಿದ್ಧಮಾಡಿ ತಂದೆ ಇಸ್ರಾಯೇಲನನ್ನ ನೋಡೋಕೆ ಅಲ್ಲಿಗೆ ಬಂದ. ಯೋಸೇಫ ತಂದೆಯನ್ನ ನೋಡಿದ ತಕ್ಷಣ ಅವನನ್ನ ಅಪ್ಪಿಕೊಂಡು ತುಂಬ ಹೊತ್ತು ಅತ್ತ.* 30  ಆಗ ಇಸ್ರಾಯೇಲ ಯೋಸೇಫನಿಗೆ “ಕೊನೆಗೂ ನಾನು ನಿನ್ನ ಮುಖ ನೋಡ್ದೆ. ನೀನು ಬದುಕಿದ್ದೀಯ, ನನಗೆ ಅಷ್ಟೇ ಸಾಕು. ಈಗ ನಾನು ನೆಮ್ಮದಿಯಿಂದ ಸಾಯಬಹುದು” ಅಂದ. 31  ಆಮೇಲೆ ಯೋಸೇಫ ತನ್ನ ಅಣ್ಣತಮ್ಮಂದಿರಿಗೆ, ತನ್ನ ತಂದೆಯ ಕುಟುಂಬದವರಿಗೆ “ನಾನು ಫರೋಹನ ಹತ್ರ ಹೋಗಿ ನೀವು ಬಂದಿರೋ ಸುದ್ದಿ ತಿಳಿಸ್ತೀನಿ.+ ‘ಕಾನಾನ್‌ ದೇಶದಲ್ಲಿದ್ದ ನನ್ನ ಅಣ್ಣತಮ್ಮಂದಿರು ಮತ್ತು ನನ್ನ ತಂದೆಯ ಕುಟುಂಬದವರು ಇಲ್ಲಿಗೆ ಬಂದಿದ್ದಾರೆ.+ 32  ಅವರು ಕುರುಬರು,+ ಪ್ರಾಣಿಗಳನ್ನ ಸಾಕ್ತಾರೆ.+ ತಮ್ಮೆಲ್ಲ ಪ್ರಾಣಿ ಹಿಂಡುಗಳನ್ನ ಮತ್ತು ತಮ್ಮೆಲ್ಲ ಸೊತ್ತುಗಳನ್ನ ತಗೊಂಡು ಇಲ್ಲಿಗೆ ಬಂದಿದ್ದಾರೆ’ ಅಂತ ಹೇಳ್ತೀನಿ.+ 33  ಫರೋಹ ನಿಮ್ಮನ್ನ ಕರೆದು ‘ನೀವೇನು ಕೆಲಸ ಮಾಡ್ತೀರ?’ ಅಂತ ಕೇಳಿದ್ರೆ 34  ‘ನಿನ್ನ ಸೇವಕರಾದ ನಾವು ನಮ್ಮ ಪೂರ್ವಜರ ತರ+ ಚಿಕ್ಕಂದಿನಿಂದಾನೂ ಪ್ರಾಣಿಗಳನ್ನ ಸಾಕ್ತಾ ಬಂದಿದ್ದೀವಿ’ ಅಂತ ಹೇಳಬೇಕು. ಆಗ ಫರೋಹ ನಿಮಗೆ ಗೋಷೆನ್‌+ ಪ್ರದೇಶದಲ್ಲಿ ಇರೋಕೆ ಅನುಮತಿ ಕೊಡ್ತಾನೆ. ಯಾಕಂದ್ರೆ ಈಜಿಪ್ಟಿನವರಿಗೆ ಕುರುಬರಂದ್ರೆ ಅಸಹ್ಯ” ಅಂದ.+

ಪಾದಟಿಪ್ಪಣಿ

ಅಕ್ಷ. “ಇಸ್ರಾಯೇಲನನ್ನ.”
ಅದು, ಹಿಲಿಯೋಪೊಲಿಸ್‌.
ಅಕ್ಷ. “ಗಂಡುಮಕ್ಕಳು.” ಬಹುಶಃ ಬೇರೆ ಮಕ್ಕಳು ಇದ್ದಿರಬಹುದು. ಆದ್ರೆ ಅವ್ರ ಹೆಸ್ರುಗಳನ್ನ ಕೊಟ್ಟಿಲ್ಲ.
ಅಥವಾ “ಮತ್ತೆ ಮತ್ತೆ ಅಪ್ಕೊಂಡು ಅತ್ತ.”