ಆಮೋಸ 4:1-13

  • ಬಾಷಾನಿನ ಹಸುಗಳ ವಿರುದ್ಧ ಸಂದೇಶ (1-3)

  • ಇಸ್ರಾಯೇಲ್ಯರ ಸುಳ್ಳು ಆರಾಧನೆಯನ್ನ ಯೆಹೋವ ಹೀಯಾಳಿಸ್ತಾನೆ (4, 5)

  • ಇಸ್ರಾಯೇಲ್‌ ಶಿಸ್ತನ್ನ ಸ್ವೀಕರಿಸಲ್ಲ (6-13)

    • “ನಿನ್ನ ದೇವರ ಮುಂದೆ ಬರೋಕೆ ಸಿದ್ಧನಾಗು” (12)

    • ‘ದೇವರು ತನ್ನ ಆಲೋಚನೆಗಳನ್ನ ಮನುಷ್ಯನಿಗೆ ಹೇಳ್ತಾನೆ’ (13)

4  “ಸಮಾರ್ಯದ ಬೆಟ್ಟಗಳ ಮೇಲೆ ವಾಸಿಸೋ+ ಸ್ತ್ರೀಯರೇ ನೀವು ಬಾಷಾನಿನ ಹಸುಗಳ ತರ ಇದ್ದೀರ,ಕಷ್ಟದಲ್ಲಿ ಇರುವವ್ರಿಗೆ ನೀವು ಮೋಸ ಮಾಡ್ತೀರ,+ ಬಡವ್ರನ್ನ ತುಳಿತೀರ,ನಿಮ್ಮ ಗಂಡಂದಿರಿಗೆ* ‘ನಮಗೆ ಕುಡಿಯೋಕೆ ಮದ್ಯವನ್ನ ತಂದ್ಕೊಡಿ!’ ಅಂತ ಹೇಳ್ತೀರ. ನೀವೀಗ ಈ ಮಾತುಗಳನ್ನ ಕೇಳಿ:   ವಿಶ್ವದ ರಾಜ ಯೆಹೋವ ತನ್ನ ಪವಿತ್ರತೆ ಮೇಲೆ ಆಣೆಯಿಟ್ಟು ಹೇಳೋದು ಏನಂದ್ರೆ,‘“ನೋಡಿ, ಮಾಂಸ ನೇತುಹಾಕೋ ಕೊಕ್ಕೆಗಳಿಂದ ಶತ್ರುಗಳು ನಿಮ್ಮನ್ನ ಎತ್ತೋ ದಿನಗಳು ಬರ್ತಿವೆ,ನಿಮ್ಮಲ್ಲಿ ಉಳಿದವ್ರನ್ನ ಮೀನುಗಾಳಗಳಿಂದ ಎತ್ತುತ್ತಾರೆ.   ನಿಮ್ಮಲ್ಲಿ ಪ್ರತಿಯೊಬ್ಬರು ನಿಮ್ಮ ಮುಂದೆ ಇರೋ ಗೋಡೆಯ ಬಿರುಕಿನೊಳಗಿಂದ ನೇರವಾಗಿ ಹೊರಗೆ ಹೋಗ್ತೀರ,ಅವರು ನಿಮ್ಮನ್ನ ಹರ್ಮೋನಿಗೆ ಎಸೆದುಬಿಡ್ತಾರೆ” ಅಂತ ಯೆಹೋವ ಹೇಳ್ತಾನೆ.’   ‘ಬೆತೆಲಿಗೆ ಬಂದು ಅಪರಾಧ* ಮಾಡಿ,+ಗಿಲ್ಗಾಲಿಗೆ ಬಂದು ಇನ್ನೂ ಹೆಚ್ಚು ಅಪರಾಧ ಮಾಡಿ!+ ಬೆಳಿಗ್ಗೆ ನಿಮ್ಮ ಬಲಿಗಳನ್ನ ತನ್ನಿ,+ಮೂರನೇ ದಿನ ಹತ್ತನೇ ಒಂದು ಭಾಗವನ್ನ* ತನ್ನಿ.+   ಕೃತಜ್ಞತಾ ಬಲಿಯಾಗಿ ಹುಳಿ ರೊಟ್ಟಿಗಳನ್ನ ಸುಡಿ,+ನಿಮ್ಮ ಸ್ವಇಷ್ಟದ ಕಾಣಿಕೆಗಳ ಬಗ್ಗೆ ಡಂಗುರ ಸಾರಿ! ಯಾಕಂದ್ರೆ ಇಸ್ರಾಯೇಲ್ಯರೇ, ಹೀಗೆ ಮಾಡೋದೇ ನಿಮಗೆ ಇಷ್ಟ ಅಲ್ವಾ?’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.   ‘ನಿಮ್ಮೆಲ್ಲ ಪಟ್ಟಣಗಳ ಜನ್ರಿಗೆ ಹೊಟ್ಟೆಗೆ ಏನೂ ಇಲ್ಲದ ಹಾಗೆ* ನಾನು ಮಾಡ್ದೆ,ನಿಮ್ಮೆಲ್ಲ ಮನೆಗಳಲ್ಲಿ ತಿನ್ನೋಕೆ ಆಹಾರ ಇಲ್ಲದ ಹಾಗೆ ಮಾಡ್ದೆ,+ಆದ್ರೂ ನೀವು ನನ್ನ ಹತ್ರ ವಾಪಸ್‌ ಬರಲಿಲ್ಲ’+ ಅಂತ ಯೆಹೋವ ಹೇಳ್ತಾನೆ.   ‘ಅಷ್ಟೇ ಅಲ್ಲ ಕೊಯ್ಲಿಗೆ ಮೂರು ತಿಂಗಳಿರುವಾಗ ನಾನು ಮಳೆಯನ್ನ ತಡೆಹಿಡಿದೆ,+ಒಂದು ಪಟ್ಟಣದಲ್ಲಿ ಮಳೆ ಬರೋ ತರ, ಇನ್ನೊಂದು ಪಟ್ಟಣದಲ್ಲಿ ಮಳೆ ಬರದೆ ಇರೋ ತರ ಮಾಡ್ದೆ,ಒಂದು ಹೊಲದಲ್ಲಿ ಮಳೆ ಆಗ್ತಿತ್ತು. ಆದ್ರೆ ಇನ್ನೊಂದು ಹೊಲ ಮಳೆಯಾಗದೆ ಒಣಗಿಹೋಗ್ತಿತ್ತು.   ಎರಡು ಮೂರು ಪಟ್ಟಣಗಳ ಜನ ನೀರು ಕುಡಿಯೋಕೆ ಒಂದು ಪಟ್ಟಣಕ್ಕೆ ಬಳಲಿ ತೂರಾಡ್ತಾ ಹೋಗ್ತಿದ್ರು,+ಆದ್ರೂ ಅವ್ರಿಗೆ ದಾಹ ತೀರಲಿಲ್ಲ,ಇಷ್ಟೆಲ್ಲ ನಡೆದ್ರೂ ನೀವು ನನ್ನ ಹತ್ರ ವಾಪಸ್‌ ಬರಲಿಲ್ಲ,’+ ಅಂತ ಯೆಹೋವ ಹೇಳ್ತಾನೆ.   ‘ನಿಮ್ಮ ಬೆಳೆಗಳಿಗೆ ಬಿಸಿಗಾಳಿ ಬೀಸೋ ತರ ಹಾಗೂ ರೋಗ ಬಂದು ಬೆಳೆಗಳೆಲ್ಲ ನಾಶವಾಗೋ ತರ ನಾನು ಮಾಡ್ದೆ.+ ನೀವು ನಿಮ್ಮ ತೋಟಗಳನ್ನೂ ದ್ರಾಕ್ಷಿತೋಟಗಳನ್ನೂ ಹೆಚ್ಚಿಸ್ಕೊಳ್ತಾ ಇದ್ದೀರ,ಆದ್ರೆ ಮಿಡತೆಗಳು ಬಂದು ನಿಮ್ಮ ಅಂಜೂರದ ಮರಗಳನ್ನೂ ಆಲಿವ್‌ ಮರಗಳನ್ನೂ ತಿಂದುಬಿಡ್ತಿದ್ವು,+ಇಷ್ಟೆಲ್ಲ ಆದ್ರೂ ನೀವು ನನ್ನ ಹತ್ರ ವಾಪಸ್‌ ಬರಲಿಲ್ಲ’+ ಅಂತ ಯೆಹೋವ ಹೇಳ್ತಾನೆ. 10  ‘ಈಜಿಪ್ಟಲ್ಲಿ ತಂದ ಕಾಯಿಲೆಯನ್ನ ನಿಮ್ಮ ಮೇಲೆ ನಾನು ತಂದೆ.+ ಕತ್ತಿಯಿಂದ ನಾನು ನಿಮ್ಮ ಯುವಕರನ್ನ ಸಾಯಿಸಿದೆ,+ ನಿಮ್ಮ ಕುದುರೆಗಳನ್ನ ವಶ ಮಾಡ್ಕೊಂಡೆ.+ ನಿಮ್ಮ ಪಾಳೆಯಗಳಲ್ಲಿರೋ ಶವಗಳ ದುರ್ವಾಸನೆ ಎಲ್ಲಾ ಕಡೆ ಹರಡೋ ತರ ಮಾಡಿದೆ,+ಆದ್ರೂ ನೀವು ನನ್ನ ಹತ್ರ ವಾಪಸ್‌ ಬರಲಿಲ್ಲ’ ಅಂತ ಯೆಹೋವ ಹೇಳ್ತಾನೆ. 11  ‘ನಾನು ಸೊದೋಮ್‌ ಮತ್ತು ಗೊಮೋರವನ್ನ ನಾಶಮಾಡಿದ+ ಹಾಗೆ ನಿಮ್ಮ ದೇಶವನ್ನ ನಾಶಮಾಡಿದೆ,ಉರಿಯೋ ಬೆಂಕಿಯಿಂದ ಹೊರಗೆ ಎಳೆದ ಕಟ್ಟಿಗೆ ತರ ನೀವಿದ್ದೀರ,ಆದ್ರೂ ನೀವು ನನ್ನ ಹತ್ರ ವಾಪಸ್‌ ಬರಲಿಲ್ಲ’+ ಅಂತ ಯೆಹೋವ ಹೇಳ್ತಾನೆ. 12  ಹಾಗಾಗಿ ಇಸ್ರಾಯೇಲೇ, ನಾನು ನಿನಗೆ ಮತ್ತೆ ಶಿಕ್ಷೆ ಕೊಡ್ತೀನಿ. ನಾನು ನಿನಗೆ ಹೀಗೆ ಮಾಡ್ತೀನಿ,ಹಾಗಾಗಿ ನಿನ್ನ ದೇವರ ಮುಂದೆ ಬರೋಕೆ ಸಿದ್ಧನಾಗು! 13  ಯಾಕಂದ್ರೆ ಬೆಟ್ಟಗಳನ್ನ ರೂಪಿಸಿದವನೂ+ ಗಾಳಿಯನ್ನ ಸೃಷ್ಟಿಸಿದವನೂ ಆತನೇ,+ಆತನು ತನ್ನ ಆಲೋಚನೆಗಳನ್ನ ಮನುಷ್ಯನಿಗೆ ಹೇಳ್ತಾನೆ,ಆತನು ಮುಂಜಾನೆಯ ಬೆಳಕನ್ನ ಕತ್ತಲೆಯಾಗಿ ಮಾಡ್ತಾನೆ,+ಭೂಮಿಯ ಎತ್ತರವಾದ ಸ್ಥಳಗಳಲ್ಲಿ ನಡಿತಾನೆ,+ಸೈನ್ಯಗಳ ದೇವರಾದ ಯೆಹೋವ ಅನ್ನೋದು ಆತನ ಹೆಸ್ರು.”

ಪಾದಟಿಪ್ಪಣಿ

ಅಥವಾ “ಧಣಿಗಳಿಗೆ.”
ಅಥವಾ “ದಂಗೆ.”
ಅಥವಾ “ದಶಮಾಂಶವನ್ನ.”
ಅಕ್ಷ. “ನಿಮ್ಮ ಹಲ್ಲಿಗೆ ಏನೂ ಸಿಗದ ಹಾಗೆ.”