ಆಮೋಸ 5:1-27
5 “ಇಸ್ರಾಯೇಲ್ ಜನ್ರೇ, ನಾನು ನಿಮ್ಮ ಬಗ್ಗೆ ಶೋಕಗೀತೆಯಾಗಿ ಹೇಳೋ ಮಾತುಗಳನ್ನ ಕೇಳಿ:
2 ‘ಇಸ್ರಾಯೇಲ್ ಅನ್ನೋ ಕನ್ಯೆ ಬಿದ್ದುಬಿಟ್ಟಿದ್ದಾಳೆ,ಮತ್ತೆ ಎದ್ದೇಳೋಕೆ ಅವಳಿಂದ ಆಗಲ್ಲ.
ಅವಳನ್ನ ಅವಳ ಸ್ವಂತ ದೇಶದಲ್ಲೇ ತೊರೆದುಬಿಡಲಾಗಿದೆ,ಅವಳನ್ನ ಎತ್ತುವವರು ಯಾರೂ ಇಲ್ಲ.’
3 ಯಾಕಂದ್ರೆ ವಿಶ್ವದ ರಾಜ ಯೆಹೋವ ಹೀಗೆ ಹೇಳ್ತಾನೆ:
‘ಒಂದು ಪಟ್ಟಣದಿಂದ ಸಾವಿರ ಜನ ಯುದ್ಧಕ್ಕೆ ಹೋದ್ರೆ ಅವ್ರಲ್ಲಿ ನೂರು ಜನ ಮಾತ್ರ ಉಳಿತಾರೆ,ಒಂದು ಪಟ್ಟಣದಿಂದ ನೂರು ಜನ ಯುದ್ಧಕ್ಕೆ ಹೋದ್ರೆ ಅವ್ರಲ್ಲಿ ಹತ್ತು ಜನ ಮಾತ್ರ ಉಳಿತಾರೆ,ಇಸ್ರಾಯೇಲ್ ಜನ್ರಿಗೆ ಹೀಗೇ ಆಗುತ್ತೆ.’+
4 ಯಾಕಂದ್ರೆ ಯೆಹೋವ ಇಸ್ರಾಯೇಲ್ಯರಿಗೆ ಹೀಗೆ ಹೇಳ್ತಾನೆ:
‘ನನ್ನ ಹತ್ರ ವಾಪಸ್ ಬನ್ನಿ,* ಆಗ ಬಾಳ್ತೀರ.+
5 ನೀವು ಬೆತೆಲಿಗೆ ಹೋಗ್ತಾ ಇರೋದನ್ನ ನಿಲ್ಲಿಸಿ,+ಗಿಲ್ಗಾಲಿಗೆ ಹೋಗಬೇಡಿ,+ ಗಡಿ ದಾಟಿ ಬೇರ್ಷೆಬಕ್ಕೆ ಹೋಗಬೇಡಿ,+ಯಾಕಂದ್ರೆ ಗಿಲ್ಗಾಲ್ ಖಂಡಿತ ಕೈದಿಯಾಗಿ ಹೋಗುತ್ತೆ,+ಬೆತೆಲ್ ಪಾಳು ಬೀಳುತ್ತೆ.*
6 ಯೆಹೋವನ ಹತ್ರ ವಾಪಸ್ ಬನ್ನಿ,* ಆಗ ಬಾಳ್ತೀರ,+ಇಲ್ಲದಿದ್ರೆ ಆತನು ಯೋಸೇಫನ ವಂಶದವರ ಮೇಲೆ ಬೆಂಕಿ ತರ ಸಿಡಿದೇಳ್ತಾನೆ,ಬೆತೆಲನ್ನ ಸುಟ್ಟುಬಿಡ್ತಾನೆ, ಅದನ್ನ ಆರಿಸೋಕೆ ಯಾರಿಗೂ ಆಗಲ್ಲ.
7 ನೀವು ಅನ್ಯಾಯವಾಗಿ ತೀರ್ಪು ಮಾಡ್ತೀರ,ಹೀಗೆ ಜನ್ರ ಜೀವನದಲ್ಲಿ ಕಷ್ಟ, ನೋವನ್ನ ತುಂಬಿಸಿದ್ದೀರ,ನೀವು ನೀತಿಯನ್ನ ನೆಲಕ್ಕೆ ಹಾಕಿ ತುಳಿದಿದ್ದೀರ.+
8 ಕೈಮಾ ನಕ್ಷತ್ರಪುಂಜವನ್ನೂ* ಕೀಸಿಲ್ ನಕ್ಷತ್ರಪುಂಜವನ್ನೂ* ಮಾಡಿದಾತನು,+ಕಾರ್ಗತ್ತಲೆಯನ್ನ ಬೆಳಗಿನ ಬೆಳಕನ್ನಾಗಿ ಮಾಡುವಾತನು,ಹಗಲನ್ನ ಇರುಳಿನಷ್ಟು ಕತ್ತಲೆಯನ್ನಾಗಿ ಮಾಡುವಾತನು,+ಭೂಮಿ ಮೇಲೆ ಸುರಿಯೋ ತರ ಸಮುದ್ರದ ನೀರಿಗೆ ಆಜ್ಞೆ ಕೊಡುವಾತನು+ ಯೆಹೋವನೇ.
—ಇದೇ ಆತನ ಹೆಸ್ರು.
9 ಆತನು ಬಲಿಷ್ಠರ ಮೇಲೆ ತಟ್ಟನೆ ನಾಶನ ತರ್ತಾನೆ,ಭದ್ರ ಸ್ಥಳಗಳನ್ನ ನಾಶ ಮಾಡ್ತಾನೆ.
10 ಪಟ್ಟಣದ ಬಾಗಿಲ ಹತ್ರ ನಿಮಗೆ ತಿದ್ದುಪಾಟು ಕೊಡೋ ನ್ಯಾಯಾಧೀಶರನ್ನ ನೀವು ದ್ವೇಷಿಸ್ತೀರ,ಸತ್ಯ ಹೇಳುವವ್ರನ್ನ ಕೀಳಾಗಿ ನೋಡ್ತೀರ.+
11 ನೀವು ಬಡವರಿಗೆ ಹೊಲದ ಗೇಣಿ* ಕೊಡೋಕೆ ಒತ್ತಾಯ ಮಾಡ್ತೀರ,ಅವರು ಬೆಳೆದ ಧಾನ್ಯವನ್ನ ಅವ್ರಿಂದ ಕಿತ್ಕೊಳ್ತೀರ.+
ಹಾಗಾಗಿ ಕತ್ತರಿಸಿದ ಕಲ್ಲುಗಳಿಂದ ನೀವು ಕಟ್ಟಿದ ಮನೆಗಳಲ್ಲಿ ಇನ್ನು ಮುಂದೆ ನೀವು ವಾಸಿಸಲ್ಲ,+ನೀವು ನೆಟ್ಟ ಒಳ್ಳೊಳ್ಳೇ ದ್ರಾಕ್ಷಿತೋಟಗಳ ಹಣ್ಣುಗಳಿಂದ ಮಾಡಿದ ದ್ರಾಕ್ಷಾಮದ್ಯವನ್ನ ಕುಡಿಯಲ್ಲ.+
12 ಯಾಕಂದ್ರೆ ನೀವು ಎಷ್ಟು ಸಲ ದಂಗೆ* ಎದ್ದಿದ್ದೀರ ಅಂತ,ನೀವು ಎಷ್ಟು ದೊಡ್ಡದೊಡ್ಡ ಪಾಪಗಳನ್ನ ಮಾಡಿದ್ದೀರ ಅಂತ ನಂಗೊತ್ತು.
ನೀವು ನೀತಿವಂತರನ್ನ ಪೀಡಿಸ್ತೀರ,ಲಂಚ* ತಗೊಳ್ತೀರ,ಪಟ್ಟಣದ ಬಾಗಿಲ ಹತ್ರ ಬಡವನ ಹಕ್ಕುಗಳನ್ನ ಕಿತ್ಕೊಳ್ತೀರ.+
13 ಕಷ್ಟ ಕಾಲ ಬರುತ್ತೆ,+ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯ ಇರುವವನು* ಆಗ ಸುಮ್ನೆ ಇರ್ತಾನೆ.
14 ಕೆಟ್ಟದ್ದನ್ನಲ್ಲ, ಒಳ್ಳೇದನ್ನ ಮಾಡಿ,+ಆಗ ನೀವು ಬಾಳ್ತೀರ.+
ಆಗಲಾದ್ರೂ ನೀವು ಹೇಳ್ಕೊಳ್ಳೋ ತರ,ಸೈನ್ಯಗಳ ದೇವರಾದ ಯೆಹೋವ ನಿಮ್ಮ ಜೊತೆ ಇರಬಹುದು.+
15 ಕೆಟ್ಟದ್ದನ್ನ ದ್ವೇಷಿಸಿ, ಒಳ್ಳೇದನ್ನ ಪ್ರೀತಿಸಿ,+ಪಟ್ಟಣದ ನ್ಯಾಯಾಧೀಶರು ನ್ಯಾಯವಾಗೇ ತೀರ್ಪು ಕೊಡಲಿ.+
ಆಗಲಾದ್ರೂ ಸೈನ್ಯಗಳ ದೇವರಾದ ಯೆಹೋವ ಯೋಸೇಫನ ವಂಶದವರಲ್ಲಿ ಉಳಿದವ್ರಿಗೆ ದಯೆ ತೋರಿಸಬಹುದು.’+
16 ಹಾಗಾಗಿ ಯೆಹೋವ, ಸೈನ್ಯಗಳ ದೇವರಾದ ಯೆಹೋವ ಹೇಳೋದು ಏನಂದ್ರೆ,‘ಜನ ಎಲ್ಲ ಪಟ್ಟಣಗಳ ಮುಖ್ಯಸ್ಥಳಗಳಲ್ಲಿ* ಗೋಳಾಡ್ತಾರೆ,ಎಲ್ಲ ಬೀದಿಗಳಲ್ಲಿ “ಅಯ್ಯೋ, ಅಯ್ಯೋ!” ಅಂತ ಕೂಗ್ತಾರೆ,ಶೋಕಿಸೋಕೆ ಅವರು ರೈತರನ್ನ ಕರಿತಾರೆ,ಗೋಳಾಡೋಕೆ ಶೋಕಿಸುವವ್ರನ್ನ ಹಣ ಕೊಟ್ಟು ಕರಿಸ್ತಾರೆ.’
17 ‘ಪ್ರತಿಯೊಂದು ದ್ರಾಕ್ಷಿತೋಟದಲ್ಲಿ ಗೋಳಾಟ ಕೇಳಿಬರುತ್ತೆ,+ಯಾಕಂದ್ರೆ ನಿಮ್ಮನ್ನ ಶಿಕ್ಷಿಸೋಕೆ ನಾನು ನಿಮ್ಮ ಮಧ್ಯದಿಂದ ದಾಟಿ ಹೋಗ್ತೀನಿ,’ಇದು ಯೆಹೋವನ ಮಾತು.
18 ‘ಯೆಹೋವನ ದಿನಕ್ಕಾಗಿ ತವಕದಿಂದ ಕಾಯುವವ್ರ ಗತಿ ಏನು ಹೇಳಲಿ?+
ಯೆಹೋವನ ದಿನದಲ್ಲಿ ನಿಮಗೆ ಏನಾಗುತ್ತೆ ಅಂತ ನೀವು ಅಂದ್ಕೊಳ್ತೀರ?+
ಅದು ಬೆಳಕಿನ ದಿನವಲ್ಲ, ಕತ್ತಲೆಯ ದಿನ.+
19 ಅದು, ಸಿಂಹದಿಂದ ತಪ್ಪಿಸ್ಕೊಂಡು ಓಡಿಹೋಗುವವನಿಗೆ ಕರಡಿ ಎದುರಾದ ತರ ಇರುತ್ತೆ,ಅವನು ಮನೆಗೆ ಓಡಿ ಬಂದು ಗೋಡೆ ಮೇಲೆ ಕೈ ಊರಿದಾಗ ಹಾವು ಕಚ್ಚಿದ ಹಾಗೆ ಇರುತ್ತೆ.
20 ಯೆಹೋವನ ದಿನ ಬೆಳಕಿನ ದಿನವಲ್ಲ, ಕತ್ತಲೆಯ ದಿನ.
ಅದು ಪ್ರಕಾಶಮಾನವಾದ ದಿನವಲ್ಲ, ಮಬ್ಬಿನ ದಿನ.
21 ನಿಮ್ಮ ಹಬ್ಬಗಳನ್ನ ನಾನು ದ್ವೇಷಿಸ್ತೀನಿ, ಅವುಗಳನ್ನ ತಿರಸ್ಕಾರದಿಂದ ನೋಡ್ತೀನಿ,+ವಿಶೇಷ ಸಮ್ಮೇಳನಗಳಲ್ಲಿ ನೀವು ಕೊಡೋ ಬಲಿಗಳ ಸುವಾಸನೆ ನನಗೆ ಇಷ್ಟ ಇಲ್ಲ.
22 ನೀವು ನನಗೆ ಸರ್ವಾಂಗಹೋಮ ಬಲಿಗಳನ್ನ, ಉಡುಗೊರೆ ಅರ್ಪಣೆಗಳನ್ನ ಕೊಟ್ರೂನನಗೆ ಅದ್ರಿಂದ ಸಂತೋಷ ಆಗಲ್ಲ,+ನೀವು ಕೊಬ್ಬಿದ ಪ್ರಾಣಿಗಳನ್ನ ಸಮಾಧಾನ ಬಲಿಯಾಗಿ ಅರ್ಪಿಸಿದ್ರೂ ನಾನು ನಿಮ್ಮನ್ನ ಮೆಚ್ಚಲ್ಲ.+
23 ನಿಮ್ಮ ಹಾಡುಗಳ ಅಬ್ಬರ ನಿಲ್ಲಿಸಿ,ನಿಮ್ಮ ತಂತಿವಾದ್ಯಗಳ ಸಂಗೀತವನ್ನ ನಾನು ಕೇಳಲ್ಲ.+
24 ನಿಮ್ಮ ದೇಶದಲ್ಲಿ ನ್ಯಾಯ ನದಿ ತರ ಹರಿಲಿ,+ನೀತಿ ಬತ್ತಿಹೋಗದ ತೊರೆ ತರ ಸದಾ ಹರಿಲಿ.
25 ಇಸ್ರಾಯೇಲ್ ಜನ್ರೇ, ನೀವು 40 ವರ್ಷ ಕಾಡಲ್ಲಿದ್ದಾಗನನಗೆ ಬಲಿಗಳನ್ನ, ಉಡುಗೊರೆ ಅರ್ಪಣೆಗಳನ್ನ ತಂದ್ಕೊಟ್ರಾ?+
26 ಈಗ ನೀವು ಮಾಡ್ಕೊಂಡಿರೋ ನಕ್ಷತ್ರ ದೇವರಸಿಕ್ಕೂತ್ ಮತ್ತು ಕಿಯೂನ್* ಮೂರ್ತಿಗಳನ್ನ ಹೊತ್ಕೊಂಡು ಹೋಗಬೇಕಾಗುತ್ತೆ,
27 ನಾನು ನಿಮ್ಮನ್ನ ದಮಸ್ಕದಿಂದ ತುಂಬ ದೂರದ ದೇಶಕ್ಕೆ ಕೈದಿಯಾಗಿ ಹೋಗೋ ತರ ಮಾಡ್ತೀನಿ,’+ಈ ಮಾತನ್ನ ಹೇಳಿದ್ದು ಸೈನ್ಯಗಳ ದೇವರಾದ ಯೆಹೋವನೇ. ಇದೇ ಆತನ ಹೆಸ್ರು.”+
ಪಾದಟಿಪ್ಪಣಿ
^ ಅಕ್ಷ. “ನನ್ನನ್ನ ಹುಡುಕಿ.”
^ ಬಹುಶಃ, “ಮಾಯಾಶಕ್ತಿಯ ಸ್ಥಳವಾಗುತ್ತೆ.”
^ ಅಕ್ಷ. “ಯೆಹೋವನನ್ನ ಹುಡುಕಿ.”
^ ಬಹುಶಃ ಮೃಗಶಿರ ನಕ್ಷತ್ರಪುಂಜ.
^ ಬಹುಶಃ ವೃಷಭ ನಕ್ಷತ್ರಪುಂಜದಲ್ಲಿರೋ ಕೃತ್ತಿಕಾ ನಕ್ಷತ್ರಗಳು.
^ ಅಥವಾ “ಬಾಡಿಗೆಯಾಗಿ.”
^ ಅಥವಾ “ಬಾಯಿ ಮುಚ್ಚಿಸೋಕೆ ಕೊಡೋ ಹಣ.”
^ ಅಥವಾ “ಅಪರಾಧಗಳು.”
^ ಅಕ್ಷ. “ಒಳನೋಟ ಇರುವವನು.”
^ ಈ ದೇವರುಗಳು ಅವರು ಆರಾಧಿಸ್ತಿದ್ದ ಶನಿ ಗ್ರಹವನ್ನ ಸೂಚಿಸ್ತಿರಬಹುದು.