ಆಮೋಸ 8:1-14

  • ಬೇಸಿಗೆ ಕಾಲದ ಹಣ್ಣುಗಳಿರೋ ಬುಟ್ಟಿಯ ದರ್ಶನ (1-3)

  • ದಬ್ಬಾಳಿಕೆ ಮಾಡುವವ್ರನ್ನ ಖಂಡಿಸಿದ್ದು (4-14)

    • ಯೆಹೋವನ ಮಾತುಗಳಿಗೆ ಬರ (11)

8  ವಿಶ್ವದ ರಾಜ ಯೆಹೋವ ನನಗೆ ಒಂದು ದರ್ಶನ ತೋರಿಸಿದನು. ಆ ದರ್ಶನದಲ್ಲಿ ನನಗೆ ಒಂದು ಬುಟ್ಟಿ ಕಾಣಿಸ್ತು, ಅದ್ರಲ್ಲಿ ಬೇಸಿಗೆ ಕಾಲದ ಹಣ್ಣುಗಳಿದ್ದವು.*  ಆತನು ನನಗೆ “ಆಮೋಸ, ನಿನಗೆ ಏನು ಕಾಣಿಸ್ತಿದೆ?” ಅಂತ ಕೇಳಿದನು. ಅದಕ್ಕೆ ನಾನು “ಒಂದು ಬುಟ್ಟಿಯಲ್ಲಿ ಬೇಸಿಗೆ ಕಾಲದ ಹಣ್ಣುಗಳಿವೆ” ಅಂದೆ. ಆಗ ಯೆಹೋವ ಹೀಗಂದನು: “ನನ್ನ ಜನ್ರಾದ ಇಸ್ರಾಯೇಲ್ಯರಿಗೆ ಕಡೆಗಾಲ ಬಂದಿದೆ. ನಾನು ಇನ್ನು ಅವ್ರನ್ನ ಕ್ಷಮಿಸೋದೇ ಇಲ್ಲ.+  ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಆ ದಿನದಲ್ಲಿ ದೇವಾಲಯದಿಂದ ಗೀತೆಗಳ ಬದಲಿಗೆ ಗೋಳಾಟ ಕೇಳಿಬರುತ್ತೆ.+ ಎಲ್ಲ ಕಡೆಗಳಲ್ಲೂ ಶವಗಳು ಬಿದ್ದಿರುತ್ತೆ.+ ಹಾಗಾಗಿ ಎಲ್ಲೆಲ್ಲೂ ಮೌನ ಆವರಿಸಿರುತ್ತೆ!’   ಬಡವ್ರನ್ನ ತುಳಿಯುವವ್ರೇ,ದೇಶದಲ್ಲಿರೋ ಸೌಮ್ಯಭಾವದ ಜನ್ರನ್ನ ನಾಶ ಮಾಡುವವ್ರೇ ಕೇಳಿ,+   ‘ಅಮಾವಾಸ್ಯೆಯ ಹಬ್ಬ ಯಾವಾಗ ಮುಗಿಯುತ್ತೋ,+ ನಾವು ಹೋಗಿ ಧಾನ್ಯ ಮಾರಬೇಕು,ಸಬ್ಬತ್‌ ಯಾವಾಗ ಮುಗಿಯುತ್ತೋ,+ ನಾವು ಧಾನ್ಯ ಮಾರಾಟಕ್ಕೆ ಹೋಗಬೇಕು,ಆಗ ನಾವು ಅಳತೆಯನ್ನ ಚಿಕ್ಕದು ಮಾಡಿ ಬೆಲೆಯನ್ನ ಹೆಚ್ಚು ಮಾಡಬಹುದು,ಜನ್ರನ್ನ ಮೋಸ ಮಾಡೋಕೆ ಕಳ್ಳ ತಕ್ಕಡಿ ಉಪಯೋಗಿಸಬಹುದು’+ ಅಂತ ಹೇಳುವವ್ರೇ ಕೇಳಿ,   ‘ಬೆಳ್ಳಿಯನ್ನ ಕೊಟ್ಟು ಗತಿ ಇಲ್ಲದವನನ್ನ ಖರೀದಿಸೋಣ,ಒಂದು ಜೋಡಿ ಚಪ್ಪಲಿ ಕೊಟ್ಟು ಬಡವನನ್ನ ಕೊಂಡ್ಕೊಳ್ಳೋಣ,+ಬಿಸಾಡಬೇಕಾದ ಧಾನ್ಯವನ್ನ ಜನ್ರಿಗೆ ಮಾರಿಬಿಡೋಣ’ ಅಂತ ಹೇಳುವವ್ರೇ, ಕೇಳಿ.   ಯಾಕೋಬನ ಮಹಿಮೆಯಾಗಿರೋ ಯೆಹೋವ+ ತನ್ನ ಮೇಲೆ ಆಣೆಯಿಟ್ಟು ಹೇಳೋದು ಏನಂದ್ರೆ‘ನಾನು ಅವ್ರ ಕೆಟ್ಟ ಕೆಲಸಗಳನ್ನ ಯಾವತ್ತೂ ಮರೆಯಲ್ಲ.+   ಇದ್ರಿಂದ ಅವ್ರ ದೇಶ* ನಡುಗುತ್ತೆ,ಅಲ್ಲಿನ ಪ್ರತಿಯೊಬ್ಬ ನಿವಾಸಿ ಶೋಕಿಸ್ತಾನೆ.+ ಇಡೀ ದೇಶ ನೈಲ್‌ ನದಿ ತರ ಉಕ್ಕೇರುತ್ತೆ,ಈಜಿಪ್ಟಿನ ನೈಲ್‌ ನದಿ ಪ್ರವಾಹ ಬಂದಾಗ ಹೊಯ್ದಾಡೋ ತರ ಆ ದೇಶ ಹೊಯ್ದಾಡುತ್ತೆ.’+   ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ‘ಆ ದಿನದಲ್ಲಿ ಮಟಮಟ ಮಧ್ಯಾಹ್ನದಲ್ಲೇ ಸೂರ್ಯ ಮುಳುಗೋ ತರ ನಾನು ಮಾಡ್ತೀನಿ,ಪ್ರಕಾಶಮಾನವಾದ ದಿನದಂದು ದೇಶದಲ್ಲಿ ಕತ್ತಲಾಗೋ ತರ ಮಾಡ್ತೀನಿ.+ 10  ನಿಮ್ಮ ಹಬ್ಬಗಳನ್ನೆಲ್ಲ ಶೋಕ ದಿನಗಳನ್ನಾಗಿ ಮಾಡ್ತೀನಿ,+ನಿಮ್ಮ ಗೀತೆಗಳನ್ನೆಲ್ಲ ಶೋಕಗೀತೆಗಳನ್ನಾಗಿ ಮಾಡ್ತೀನಿ. ನಾನು ಎಲ್ಲರ ಸೊಂಟಕ್ಕೆ ಗೋಣಿ ಸುತ್ತುತ್ತೀನಿ, ಎಲ್ಲರ ತಲೆ ಬೋಳಿಸ್ತೀನಿ,ಇರೋ ಒಬ್ಬನೇ ಮಗ ಸತ್ತಾಗ ಆಗೋ ದುಃಖದಂಥ ದುಃಖವನ್ನ ನಿಮಗೆ ತರ್ತಿನಿ,ಆ ದಿನದ ಕೊನೇಲಿ ನೀವು ಕಡುವೇದನೆ ಅನುಭವಿಸ್ತೀರ.’ 11  ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ‘ನೋಡಿ! ನಾನು ದೇಶದಲ್ಲಿ ಬರಗಾಲ ತರೋ ದಿನಗಳು ಬರ್ತಿವೆ,ಅದು ಆಹಾರದ ಬರ ಅಲ್ಲ, ನೀರಿನ ಬರ ಅಲ್ಲ,ಯೆಹೋವನ ಮಾತುಗಳ ಬರನೇ.+ 12  ಅವರು ಸಮುದ್ರದಿಂದ ಸಮುದ್ರಕ್ಕೆ,ಉತ್ತರದಿಂದ ಪೂರ್ವಕ್ಕೆ ಬಳಲಿ ತೂರಾಡ್ತಾ ಹೋಗ್ತಾರೆ. ಯೆಹೋವನ ಮಾತುಗಳಿಗಾಗಿ ಹುಡುಕ್ತಾ ಅಲಿತಾರೆ, ಆದ್ರೆ ಅದು ಅವ್ರಿಗೆ ಸಿಗಲ್ಲ. 13  ಆ ದಿನದಲ್ಲಿ ಸುಂದರ ಕನ್ಯೆಯರು, ಯುವಕರುಬಾಯಾರಿಕೆಯಿಂದ ಮೂರ್ಛೆ ಹೋಗ್ತಾರೆ. 14  ಸಮಾರ್ಯದ ಸುಳ್ಳು ದೇವರುಗಳ* ಮೇಲೆ ಆಣೆ ಇಡ್ತಾ+“ದಾನೇ, ನಿನ್ನ ದೇವರ ಜೀವದಾಣೆ,”+ “ಬೇರ್ಷೆಬದ+ ಮಾರ್ಗದ* ಮೇಲೆ ಆಣೆ” ಅಂತಹೇಳುವವ್ರೆಲ್ಲ ಬಿದ್ದುಹೋಗ್ತಾರೆ, ಮತ್ತೆ ಅವರು ಯಾವತ್ತೂ ಎದ್ದೇಳಲ್ಲ.’”+

ಪಾದಟಿಪ್ಪಣಿ

ಮುಖ್ಯವಾಗಿ ಅಂಜೂರ ಹಣ್ಣುಗಳು ಮತ್ತು ಖರ್ಜೂರಗಳು ಕೂಡ ಆಗಿರಬಹುದು.
ಅಥವಾ “ಭೂಮಿ.”
ಅಕ್ಷ. “ಪಾಪದ.” ಅಂದ್ರೆ ಪಾಪಕ್ಕೆ ಕಾರಣವಾದ ಮೂರ್ತಿಗಳ.
ಬಹುಶಃ ಇದು ಅಲ್ಲಿ ಸುಳ್ಳು ಆರಾಧನೆ ಮಾಡೋಕೆ ಹೋಗೋ ದಾರಿಯನ್ನ ಸೂಚಿಸುತ್ತೆ.