ಆಮೋಸ 9:1-15

  • ದೇವರ ತೀರ್ಪಿಂದ ತಪ್ಪಿಸ್ಕೊಳ್ಳೋದು ಅಸಾಧ್ಯ (1-10)

  • ದಾವೀದನ ಡೇರೆಯನ್ನ ಎತ್ತಿ ನಿಲ್ಲಿಸಲಾಗುತ್ತೆ (11-15)

9  ಯೆಹೋವ ಯಜ್ಞವೇದಿಯ ಮೇಲೆ ಇರೋದನ್ನ ನಾನು ನೋಡಿದೆ.+ ಆತನು ಹೀಗಂದನು: “ಕಂಬದ ತಲೆಭಾಗಕ್ಕೆ ಜೋರಾಗಿ ಹೊಡಿ. ಆಗ ಅದ್ರ ಹೊಸ್ತಿಲುಗಳು ಅಲ್ಲಾಡುತ್ತೆ. ಅವ್ರ* ತಲೆ ಕಡಿದುಹಾಕು. ಉಳಿದವ್ರನ್ನ ನಾನು ಕತ್ತಿಯಿಂದ ಸಾಯಿಸ್ತೀನಿ. ಯಾರಿಗೂ ಓಡಿಹೋಗೋಕೆ ಆಗಲ್ಲ. ತಪ್ಪಿಸ್ಕೊಳ್ಳೋಕೆ ಪ್ರಯತ್ನಿಸಿದ್ರೂ ಅವ್ರಿಂದ ಅದು ಆಗಲ್ಲ.+   ಅವರು ನೆಲವನ್ನ* ಆಳವಾಗಿ ತೋಡಿ ಅದ್ರಲ್ಲಿ ಅಡಗಿಕೊಂಡ್ರೆನಾನು ಕೈಚಾಚಿ ಅವ್ರನ್ನ ಅಲ್ಲಿಂದ ಹಿಡಿದು ತರ್ತಿನಿ. ಅವರು ಆಕಾಶಕ್ಕೆ ಏರಿ ಹೋದ್ರೆನಾನು ಅವ್ರನ್ನ ಅಲ್ಲಿಂದನೂ ಕೆಳಗೆ ಎಳೆದು ತರ್ತಿನಿ.   ಅವರು ಕರ್ಮೆಲ್‌ ಬೆಟ್ಟದ ಮೇಲೆ ಅಡಗಿಕೊಂಡ್ರೆನಾನು ಅವ್ರನ್ನ ಹುಡುಕಿ ಅಲ್ಲಿಂದನೂ ಹಿಡಿದು ತರ್ತಿನಿ.+ ನನ್ನ ಕಣ್ಣಿಗೆ ಮರೆಯಾಗಬೇಕಂತ ಸಮುದ್ರದ ತಳದಲ್ಲಿ ಬಚ್ಚಿಟ್ಕೊಂಡ್ರೆಅಲ್ಲಿ ಅವ್ರನ್ನ ಕಚ್ಚೋಕೆ ಹಾವಿಗೆ ಆಜ್ಞೆ ಕೊಡ್ತೀನಿ.   ಅವ್ರನ್ನ ಶತ್ರುಗಳು ಕೈದಿಯಾಗಿ ಹಿಡ್ಕೊಂಡು ಹೋದ್ರೆನಾನು ಕತ್ತಿಗೆ ಆಜ್ಞೆ ಕೊಡ್ತೀನಿ, ಅದು ಅವ್ರನ್ನ ಅಲ್ಲಿ ಸಾಯಿಸುತ್ತೆ,+ಅವ್ರಿಗೆ ಆಶೀರ್ವಾದ ತರೋಕೆ ಅಲ್ಲ, ಕಷ್ಟ ತರೋಕೆ ಅವ್ರ ಕಡೆ ದೃಷ್ಟಿ ಹರಿಸ್ತೀನಿ.+   ದೇಶವನ್ನ* ಮುಟ್ಟುವಾತನು ವಿಶ್ವದ ರಾಜನೂ ಸೈನ್ಯಗಳ ದೇವರೂ ಆದ ಯೆಹೋವನೇ,ಹಾಗಾಗಿ ದೇಶ ಕರಗಿ ಹೋಗುತ್ತೆ,+ ಅದ್ರ ಎಲ್ಲ ನಿವಾಸಿಗಳು ಶೋಕಿಸ್ತಾರೆ,+ಇಡೀ ದೇಶ ನೈಲ್‌ ನದಿ ತರ ಉಕ್ಕೇರುತ್ತೆ,ಈಜಿಪ್ಟಿನ ನೈಲ್‌ ನದಿ ತರ ಇಳಿದುಹೋಗುತ್ತೆ.+   ‘ಆಕಾಶದ ತನಕ ಮೆಟ್ಟಿಲುಗಳನ್ನ ಕಟ್ಟಿದಾತನು,ಭೂಮಿ ಮೇಲೆ ಗುಮ್ಮಟ ಚಾವಣಿಯನ್ನ ಸ್ಥಾಪಿಸಿದಾತನು,ಸಮುದ್ರದ ನೀರಿಗೆ ಭೂಮಿ ಮೇಲೆ ಸುರಿಯೋಕೆ ಆಜ್ಞೆ ಕೊಡುವಾತನು+ ಯೆಹೋವನೇ,—ಇದೇ ಆತನ ಹೆಸ್ರು.’+   ಯೆಹೋವ ಹೇಳೋದು ಏನಂದ್ರೆ ‘ಇಸ್ರಾಯೇಲ್ಯರೇ, ನೀವು ನನಗೆ ಕೂಷ್ಯರ ತರ ಇದ್ದೀರಲ್ವಾ? ನಾನು ಇಸ್ರಾಯೇಲ್ಯರನ್ನ ಈಜಿಪ್ಟ್‌ ದೇಶದಿಂದ ಕರ್ಕೊಂಡು ಬಂದೆ ಅಲ್ವಾ?+ ಫಿಲಿಷ್ಟಿಯರನ್ನ ಕ್ರೇತದಿಂದ,+ ಸಿರಿಯದವ್ರನ್ನ ಕೀರ್‌ನಿಂದ ಕರ್ಕೊಂಡು ಬಂದೆ ಅಲ್ವಾ?’+   ಯೆಹೋವ ಹೇಳೋದು ಏನಂದ್ರೆ ‘ನೋಡಿ! ವಿಶ್ವದ ರಾಜ ಯೆಹೋವ ಪಾಪಿಷ್ಠ ರಾಜ್ಯದ ಮೇಲೆ ಕಣ್ಣಿಟ್ಟಿದ್ದಾನೆ,ನಾನು ಭೂಮಿ ಮೇಲಿಂದ ಆ ರಾಜ್ಯವನ್ನ ಅಳಿಸಿಬಿಡ್ತೀನಿ.+ ಆದ್ರೆ ಯಾಕೋಬನ ವಂಶದವ್ರನ್ನ ನಾನು ಪೂರ್ತಿಯಾಗಿ ನಾಶಮಾಡಲ್ಲ.’+   ‘ನೋಡಿ! ನಾನು ಆಜ್ಞೆ ಕೊಡ್ತಿದ್ದೀನಿ,ಜರಡಿಯನ್ನ ಅಲ್ಲಾಡಿಸೋ ತರ ನಾನು ಇಸ್ರಾಯೇಲ್ಯರನ್ನ ಎಲ್ಲ ಜನಾಂಗಗಳ ಮಧ್ಯ ಅಲ್ಲಾಡಿಸ್ತೀನಿ,+ಒಂದೇ ಒಂದು ಕಲ್ಲು ಕೂಡ ಕೆಳಗೆ ಬೀಳಲ್ಲ. 10  “ಕಷ್ಟ ನಮ್ಮನ್ನ ತಟ್ಟಲ್ಲ, ಅದು ನಮ್ಮ ಹತ್ರಕ್ಕೂ ಸುಳಿಯಲ್ಲ” ಅಂತ ನನ್ನ ಜನ್ರಲ್ಲಿ ಯಾರು ಹೇಳ್ತಿದ್ದಾರೋಆ ಎಲ್ಲ ಪಾಪಿಗಳು ಕತ್ತಿಯಿಂದ ಸಾಯ್ತಾರೆ.’ 11  ‘ಬಿದ್ದುಹೋಗಿರೋ ದಾವೀದನ ಡೇರೆಯನ್ನ*+ ಆ ದಿನದಲ್ಲಿ ನಾನು ಎತ್ತಿ ನಿಲ್ಲಿಸ್ತೀನಿ,ಅದ್ರ* ಬಿರುಕುಗಳನ್ನ ಮುಚ್ತೀನಿ,ಹಾಳಾಗಿರೋ ಭಾಗಗಳನ್ನ ಸರಿ ಮಾಡ್ತೀನಿ,ತುಂಬ ಕಾಲದ ಹಿಂದೆ ಇದ್ದ ಹಾಗೇ ನಾನು ಅದನ್ನ ಮತ್ತೆ ಕಟ್ತೀನಿ.+ 12  ಇದ್ರಿಂದ ಅವರು ಎದೋಮಲ್ಲಿ ಉಳಿದಿದ್ದನ್ನ+ಮತ್ತು ನನ್ನ ಹೆಸ್ರನ್ನ ಕರಿಯೋ ಎಲ್ಲ ಜನಾಂಗಗಳನ್ನ ವಶ ಮಾಡ್ಕೊಳ್ತಾರೆ’ಅಂತ ಯೆಹೋವ ಹೇಳ್ತಾನೆ. ಇದನ್ನೆಲ್ಲ ಆತನೇ ಮಾಡ್ತಿದ್ದಾನೆ. 13  ಯೆಹೋವ ಹೇಳೋದು ಏನಂದ್ರೆ‘ನೋಡಿ! ಮುಂದೆ ಎಷ್ಟು ಒಳ್ಳೇ ದಿನಗಳು ಬರುತ್ತೆ ಅಂದ್ರೆ,ಉಳೋ ಕಾಲ ಬಂದ್ರೂ ಹಿಂದಿನ ಬೆಳೆಯ ಕೊಯ್ಲು ಇನ್ನೂ ಮುಗಿದಿರಲ್ಲ,ಬಿತ್ತನೆ ಕಾಲ ಬಂದ್ರೂ ದ್ರಾಕ್ಷಿಗಳನ್ನ ತೊಟ್ಟಿಯಲ್ಲಿ ತುಳಿಯೋ ಕೆಲಸ ಮುಗಿದಿರಲ್ಲ,+ಪರ್ವತಗಳಿಂದ ಸಿಹಿ ದ್ರಾಕ್ಷಾಮದ್ಯ ತೊಟ್ಟಿಕ್ಕುತ್ತೆ,+ಅದು ಎಲ್ಲ ಬೆಟ್ಟಗಳಲ್ಲೂ ಹರಿದು ಬರುತ್ತೆ.+ 14  ನನ್ನ ಜನ್ರಾದ ಇಸ್ರಾಯೇಲ್ಯರನ್ನ ಸೆರೆಯಿಂದ ಬಿಡಿಸಿ ಹಿಂದೆ ಕರ್ಕೊಂಡು ಬರ್ತಿನಿ,+ಆಗ ಅವರು ಹಾಳುಬಿದ್ದ ಪಟ್ಟಣಗಳನ್ನ ಮತ್ತೆ ಕಟ್ಟಿ ಅವುಗಳಲ್ಲಿ ವಾಸಿಸ್ತಾರೆ,+ದ್ರಾಕ್ಷಿತೋಟಗಳನ್ನ ನೆಟ್ಟು ಅವುಗಳ ದ್ರಾಕ್ಷಾಮದ್ಯ ಕುಡಿತಾರೆ,+ತೋಟಗಳನ್ನ ಮಾಡ್ಕೊಂಡು ಅದ್ರ ಫಲ ತಿಂತಾರೆ.’+ 15  ‘ನಾನು ಅವ್ರನ್ನ ಅವ್ರ ದೇಶದಲ್ಲಿ ನೆಡ್ತೀನಿ,ನಾನು ಅವ್ರಿಗೆ ಕೊಟ್ಟಿರೋ ದೇಶದಿಂದ ಅವ್ರನ್ನ ಯಾರೂ ಯಾವತ್ತೂ ಕಿತ್ತುಹಾಕಲ್ಲ.’+ ಇದು ನಿಮ್ಮ ದೇವರಾದ ಯೆಹೋವನ ಮಾತು.”

ಪಾದಟಿಪ್ಪಣಿ

ಬಹುಶಃ, “ಕಂಬಗಳ.”
ಅಕ್ಷ. “ಸಮಾಧಿ.” ಪದವಿವರಣೆ ನೋಡಿ.
ಅಥವಾ “ಭೂಮಿಯನ್ನ.”
ಅಥವಾ “ಚಪ್ಪರವನ್ನ; ಗುಡಿಸಲನ್ನ.”
ಅಥವಾ “ಅವುಗಳ.”