ಎಜ್ರ 10:1-44

  • ಬೇರೆ ದೇಶದ ಸ್ತ್ರೀಯರನ್ನ ವಾಪಸ್‌ ಕಳಿಸೋಕೆ ಒಪ್ಪಂದ (1-14)

  • ಬೇರೆ ದೇಶದವರಾಗಿದ್ದ ಹೆಂಡತಿಯರನ್ನ ಕಳಿಸ್ಕೊಟ್ರು (15-44)

10  ಎಜ್ರ ಸತ್ಯ ದೇವರ ಆಲಯದ ಮುಂದೆ ಅಡ್ಡಬಿದ್ದು ಅಳ್ತಾ ಪ್ರಾರ್ಥನೆ ಮಾಡ್ದ,+ ಜನ್ರು ಮಾಡಿದ ಪಾಪಗಳನ್ನ ಹೇಳ್ಕೊಂಡ. ಆಗ ಇಸ್ರಾಯೇಲಿನ ಗಂಡಸ್ರು, ಹೆಂಗಸ್ರು, ಮಕ್ಕಳು ಒಂದು ದೊಡ್ಡ ಸಮೂಹವಾಗಿ ಅವನ ಸುತ್ತ ಸೇರಿದ್ರು. ಅವ್ರು ಸಹ ಬಿಕ್ಕಿಬಿಕ್ಕಿ ಅಳ್ತಿದ್ರು.  ಆಗ ಏಲಾಮನ ಗಂಡು ಮಕ್ಕಳಲ್ಲಿ+ ಒಬ್ಬನಾದ ಯೆಹೀಯೇಲನ+ ಮಗ ಶೆಕನ್ಯ ಎಜ್ರನಿಗೆ “ನಾವು ಅಕ್ಕಪಕ್ಕದ ದೇಶದ ಹುಡುಗಿಯರನ್ನ ಮದುವೆ ಮಾಡ್ಕೊಂಡು* ನಮ್ಮ ದೇವ್ರಿಗೆ ನಂಬಿಕೆ ದ್ರೋಹ ಮಾಡಿದ್ದೀವಿ.+ ಆದ್ರೆ ಇಸ್ರಾಯೇಲ್ಯರಿಗೆ ಇನ್ನೂ ಒಂದು ನಿರೀಕ್ಷೆ ಇದೆ.  ನಮ್ಮ ದೇವರ ಜೊತೆ ಒಂದು ಒಪ್ಪಂದ* ಮಾಡ್ಕೊಳ್ಳೋಣ.+ ಅದೇನಂದ್ರೆ, ನಮ್ಮನಮ್ಮ ಹೆಂಡತಿಯರನ್ನ ಅವ್ರ ದೇಶಕ್ಕೆ ಕಳಿಸಿಬಿಡೋಣ. ಅವ್ರ ಜೊತೆ ಮಕ್ಕಳನ್ನೂ ದೂರ ಕಳಿಸಿಬಿಡೋಣ. ಹೀಗೆ ನಾವು ಯೆಹೋವನ ತೀರ್ಮಾನವನ್ನ ಒಪ್ಕೊಳ್ಳೋಣ. ದೇವರ ಆಜ್ಞೆಗಳನ್ನ ತುಂಬ ಗೌರವಿಸೋರು* ಕೊಡೋ ಸಲಹೆ ತರ ನಡ್ಕೊಳ್ಳೋಣ.+ ನಿಯಮ ಪುಸ್ತಕದಲ್ಲಿ ಇರೋ ಹಾಗೇ ಮಾಡೋಣ.  ಎಜ್ರ ಎದ್ದೇಳು, ಈ ವಿಷ್ಯ ಪರಿಹರಿಸೋದು ನಿನ್ನ ಜವಾಬ್ದಾರಿ. ನಿನ್ನ ಜೊತೆ ನಾವಿದ್ದೀವಿ. ಧೈರ್ಯವಾಗಿ ನಿನ್ನ ಕೆಲಸ ಮಾಡು” ಅಂದ.  ಆಗ ಎಜ್ರ ಎದ್ದು ಅವನು ಹೇಳಿದ ಹಾಗೇ ಪುರೋಹಿತರ ಪ್ರಧಾನರಿಂದ, ಲೇವಿಯರಿಂದ, ಎಲ್ಲ ಇಸ್ರಾಯೇಲ್ಯರಿಂದ ಆಣೆ ಮಾಡಿಸಿದ,+ ಅವ್ರು ಆಣೆ ಮಾಡಿದ್ರು.  ಎಜ್ರ ಸತ್ಯ ದೇವರ ಆಲಯದ ಮುಂದೆ ಇದ್ದ ಎಲ್ಯಾಷೀಬನ ಮಗ ಯೆಹೋಹಾನಾನನ ಕೋಣೆಗೆ* ಹೋದ. ಆದ್ರೆ ಅವನು ಊಟ ನೀರು ಏನೂ ತಗೊಳ್ಳಲಿಲ್ಲ. ಯಾಕಂದ್ರೆ ಕೈದಿಗಳಾಗಿದ್ದು ವಾಪಸ್‌ ಬಂದಿದ್ದ ಜನ್ರ ನಂಬಿಕೆ ದ್ರೋಹದಿಂದಾಗಿ ಅವನಿಗೆ ದುಃಖ ಆಗಿತ್ತು.+  ಕೈದಿಗಳಾಗಿದ್ದು ವಾಪಸ್‌ ಬಂದ ಎಲ್ಲ ಜನ ಯೆರೂಸಲೇಮಲ್ಲಿ ಸೇರಿಬರಬೇಕಂತ ಇಡೀ ಯೆಹೂದದಲ್ಲಿ, ಯೆರೂಸಲೇಮಲ್ಲಿ ಘೋಷಣೆ ಮಾಡಿಸಿದ್ರು.  ಅಷ್ಟೇ ಅಲ್ಲ, ಅಧಿಕಾರಿಗಳ ಮತ್ತು ಹಿರಿಯರ ಈ ತೀರ್ಮಾನವನ್ನ ಯಾವನಾದ್ರೂ ತಳ್ಳಿಹಾಕಿದ್ರೆ, ಮೂರು ದಿನದೊಳಗೆ ಬರದಿದ್ರೆ ಅವ್ರ ಎಲ್ಲ ವಸ್ತುಗಳು ಜಪ್ತಿ ಆಗುತ್ತೆ, ಕೈದಿಗಳಾಗಿದ್ದು ವಾಪಸ್‌ ಬಂದವ್ರ ಸಭೆಯಿಂದ ಅವನನ್ನ ಹೊರಗೆ ಹಾಕಲಾಗುತ್ತೆ ಅಂತಾನೂ ಘೋಷಣೆ ಮಾಡಿಸಿದ್ರು.+  ಇದನ್ನ ಕೇಳಿ ಯೆಹೂದ, ಬೆನ್ಯಾಮೀನನ ಎಲ್ಲ ಗಂಡಸ್ರು ಮೂರು ದಿನದೊಳಗೆ ಯೆರೂಸಲೇಮಲ್ಲಿ ಸೇರಿ ಬಂದ್ರು. ಅದು ಒಂಬತ್ತನೇ ತಿಂಗಳ 20ನೇ ದಿನ ಆಗಿತ್ತು. ಎಲ್ಲ ಜನ ಸತ್ಯ ದೇವರ ಆಲಯದ ಅಂಗಳದಲ್ಲಿ ಕೂತಿದ್ರು. ವಿಷ್ಯ ತುಂಬ ಗಂಭೀರ ಆಗಿದ್ರಿಂದ, ಜೊತೆಗೆ ಧಾರಾಕಾರ ಮಳೆ ಸುರಿತಿದ್ರಿಂದ ನಡುಗ್ತಿದ್ರು. 10  ಆಗ ಪುರೋಹಿತ ಎಜ್ರ ಎದ್ದು ನಿಂತು ಅವ್ರಿಗೆ “ನೀವು ಬೇರೆ ದೇಶದ ಹುಡುಗಿರನ್ನ ಮದುವೆ ಮಾಡ್ಕೊಂಡು ನಂಬಿಕೆ ದ್ರೋಹ ಮಾಡಿದ್ದೀರಿ.+ ಹಾಗೆ ಮಾಡಿ ಇಸ್ರಾಯೇಲ್ಯರ ಅಪರಾಧ ಜಾಸ್ತಿ ಮಾಡಿದ್ದೀರ. 11  ಹಾಗಾಗಿ ಈಗ ನಿಮ್ಮ ಪೂರ್ವಜರ ದೇವರಾದ ಯೆಹೋವನ ಮುಂದೆ ನಿಮ್ಮ ಪಾಪಗಳನ್ನ ಒಪ್ಕೊಳ್ಳಿ. ಆತನ ಇಷ್ಟದ ತರ ಮಾಡಿ. ಬೇರೆ ದೇಶದ ಜನ್ರಿಂದ, ನೀವು ಮದುವೆ ಮಾಡ್ಕೊಂಡಿರೋ ಬೇರೆ ದೇಶದ ಆ ಸ್ತ್ರೀಯರಿಂದ ದೂರ ಇರಿ”+ ಅಂದ. 12  ಅದಕ್ಕೆ ಜನ್ರೆಲ್ಲ ಗಟ್ಟಿಯಾಗಿ ಹೀಗೆ ಉತ್ರ ಕೊಟ್ರು “ನೀನು ಹೇಳಿದ ಹಾಗೆ ಮಾಡೋದೇ ನಮ್ಮ ಕರ್ತವ್ಯ. 13  ಆದ್ರೆ ನಾವು ತುಂಬ ಜನ್ರಿದ್ದೀವಿ. ಇದು ಮಳೆಗಾಲ. ಹಾಗಾಗಿ ಹೊರಗೆ ನಿಲ್ಲೋಕೆ ಆಗಲ್ಲ. ನಮ್ಮಲ್ಲಿ ಹೆಚ್ಚಿನ ಜನ ಆ ಅಪರಾಧ ಮಾಡಿರೋದ್ರಿಂದ ಈ ವಿಷ್ಯವನ್ನ ಒಂದೆರಡು ದಿನದಲ್ಲಿ ಬಗೆಹರಿಸೋಕೆ ಆಗಲ್ಲ. 14  ಇಡೀ ಸಭೆಯನ್ನ ನಮ್ಮ ಅಧಿಕಾರಿಗಳು ಪ್ರತಿನಿಧಿಸೋಕೆ ಬಿಟ್ಟುಕೊಡಿ.+ ಅಕ್ಕಪಕ್ಕದ ದೇಶದ ಸ್ತ್ರೀಯರನ್ನ ಮದುವೆ ಆದವ್ರು ತಮ್ಮತಮ್ಮ ಪಟ್ಟಣದ ಹಿರಿಯರ ಜೊತೆ, ನ್ಯಾಯಾಧೀಶರ ಜೊತೆ ಯಾವಾಗ ಬರಬೇಕು ಅಂತ ಹೇಳಿ. ನಮ್ಮ ದೇವರು ಈ ವಿಷ್ಯದಲ್ಲಿ ನಮ್ಮ ಮೇಲೆ ಮಾಡ್ಕೊಂಡಿರೋ ಕೋಪ ಹೀಗೆ ತಣ್ಣಗಾಗ್ಲಿ.” 15  ಹಾಗಿದ್ರೂ ಅಸಾಹೇಲನ ಮಗ ಯೋನಾತಾನ, ತಿಕ್ವನ ಮಗ ಯೆಹ್ಜೆಯ ಇದನ್ನ ವಿರೋಧಿಸಿದ್ರು. ಜೊತೆಗೆ ಲೇವಿಯರಾದ ಮೆಷುಲ್ಲಾಮ ಮತ್ತು ಶಬ್ಬೆತೈ+ ಅವ್ರಿಗೆ ಬೆಂಬಲ ಕೊಟ್ರು. 16  ಆದ್ರೆ ಕೈದಿಗಳಾಗಿದ್ದು ವಾಪಸ್‌ ಬಂದಿದ್ದ ಜನ ಆ ತೀರ್ಮಾನವನ್ನ ಒಪ್ಕೊಂಡ್ರು. ಪುರೋಹಿತ ಎಜ್ರ, ತಂದೆಯ ಮನೆತನಗಳ ಕುಟುಂಬದ ಮುಖ್ಯಸ್ಥರು ಅಂದ್ರೆ ಯಾರ ಹೆಸ್ರು ಬರೆದಿತ್ತೋ ಅವರು ಈ ವಿಷ್ಯದ ವಿಚಾರಣೆ ಮಾಡೋಕೆ 10ನೇ ತಿಂಗಳ ಮೊದಲ್ನೇ ದಿನ ಪ್ರತ್ಯೇಕವಾಗಿ ಸೇರಿಬಂದ್ರು. 17  ಬೇರೆ ದೇಶದ ಸ್ತ್ರೀಯರನ್ನ ಮದುವೆ ಮಾಡ್ಕೊಂಡಿದ್ದ ಎಲ್ಲ ಗಂಡಸ್ರ ವಿಚಾರಣೆಯನ್ನ ಮೊದಲ್ನೇ ತಿಂಗಳ ಮೊದಲ್ನೇ ದಿನದೊಳಗೆ ಮಾಡಿ ಮುಗಿಸಿದ್ರು. 18  ಆಗ ಅವ್ರಿಗೆ ಪುರೋಹಿತರ ಕೆಲವು ಗಂಡು ಮಕ್ಕಳು ಸಹ ಬೇರೆ ದೇಶದ ಸ್ತ್ರೀಯರನ್ನ ಮದುವೆ ಆಗಿದ್ದಾರೆ ಅಂತ ಗೊತ್ತಾಯ್ತು.+ ಇದ್ರಲ್ಲಿ ಯೆಹೋಚಾದಾಕನ ಮಗ ಯೇಷೂವನ+ ಗಂಡು ಮಕ್ಕಳು, ಅವನ ಸಹೋದರರು ಸೇರಿದ್ರು. ಅವ್ರ ಹೆಸ್ರುಗಳು ಏನಂದ್ರೆ ಮಾಸೇಯ, ಎಲೀಯೆಜರ, ಯಾರೀಬ್‌, ಗೆದಲ್ಯ. 19  ಅವರು ತಮ್ಮ ಹೆಂಡತಿಯರನ್ನ ಅವರ ದೇಶಕ್ಕೆ ಕಳಿಸಿಬಿಡ್ತೀವಂತ, ಪಾಪದ ಪ್ರಾಯಶ್ಚಿತ್ತವಾಗಿ ತಮ್ಮತಮ್ಮ ಹಿಂಡಿಂದ ಒಂದೊಂದು ಟಗರನ್ನ ಅರ್ಪಿಸ್ತೀವಂತ+ ಆಣೆ ಮಾಡಿದ್ರು. 20  ಪಾಪ ಮಾಡಿದವ್ರಲ್ಲಿ ಇವರು ಸಹ ಇದ್ರು: ಇಮ್ಮೇರನ ಗಂಡು ಮಕ್ಕಳಲ್ಲಿ+ ಹನಾನಿ ಜೆಬದ್ಯ, 21  ಹಾರಿಮನ ಗಂಡು ಮಕ್ಕಳಲ್ಲಿ+ ಮಾಸೇಯ, ಎಲೀಯ, ಶೆಮಾಯ, ಯೆಹೀಯೇಲ್‌, ಉಜ್ಜೀಯ. 22  ಪಷ್ಹೂರನ ಗಂಡು ಮಕ್ಕಳಲ್ಲಿ+ ಎಲ್ಯೋವೇನೈ, ಮಾಸೇಯ, ಇಷ್ಮಾಯೇಲ, ನೆತನೇಲ್‌, ಯೋಜಾಬಾದ, ಎಲ್ಲಾಸಾ. 23  ಲೇವಿಯರಲ್ಲಿ ಯೋಜಾಬಾದ, ಶಿಮ್ಮಿ, ಕೇಲಾಯ (ಅಂದ್ರೆ ಕೆಲೀಟ), ಪೆತಹ್ಯ, ಯೆಹೂದ, ಎಲೀಯೆಜರ್‌. 24  ಗಾಯಕರಲ್ಲಿ ಎಲ್ಯಾಷೀಬ್‌. ಬಾಗಿಲು ಕಾಯೋರಲ್ಲಿ ಶಲ್ಲೂಮ, ಟೆಲೆಮ್‌, ಊರಿ. 25  ಇಸ್ರಾಯೇಲ್ಯರಲ್ಲಿ ಯಾರಂದ್ರೆ ಪರೋಷನ ಗಂಡು ಮಕ್ಕಳಲ್ಲಿ+ ರಮ್ಯಾಹ, ಇಜ್ಜೀಯ, ಮಲ್ಕೀಯ, ಮಿಯ್ಯಾಮೀನ್‌, ಎಲ್ಲಾಜಾರ್‌, ಮಲ್ಕೀಯ, ಬೆನಾಯ. 26  ಏಲಾಮನ ಗಂಡು ಮಕ್ಕಳಲ್ಲಿ+ ಮತ್ತನ್ಯ, ಜೆಕರ್ಯ, ಯೆಹೀಯೇಲ್‌,+ ಅಬ್ದಿ, ಯೆರೇಮೋತ್‌, ಎಲೀಯ. 27  ಜತ್ತೂನ ಗಂಡು ಮಕ್ಕಳಲ್ಲಿ+ ಎಲ್ಯೋವೇನೈ, ಎಲ್ಯಾಷೀಬ್‌, ಮತ್ತನ್ಯ, ಯೆರೇಮೋತ್‌, ಜಾಬಾದ, ಅಜೀಜಾ. 28  ಬೇಬೈಯ ಗಂಡು ಮಕ್ಕಳಲ್ಲಿ+ ಯೆಹೋಹಾನಾನ್‌, ಹನನ್ಯ, ಜಬೈ, ಅತ್ಲೈ. 29  ಬಾನಿಯ ಗಂಡು ಮಕ್ಕಳಲ್ಲಿ ಮೆಷುಲ್ಲಾಮ, ಮಲ್ಲೂಕ್‌, ಅದಾಯ, ಯಾಶೂಬ್‌, ಶೆಯಾಲ್‌, ರಾಮೋತ್‌. 30  ಪಹತ್‌-ಮೋವಾಬನ ಗಂಡು ಮಕ್ಕಳಲ್ಲಿ+ ಅದ್ನ, ಕೆಲಾಲ್‌, ಬೆನಾಯ, ಮಾಸೇಯ, ಮತ್ತನ್ಯ, ಬೆಚಲೇಲ, ಬಿನ್ನೂಯ್‌, ಮನಸ್ಸೆ. 31  ಹಾರಿಮನ ಗಂಡು ಮಕ್ಕಳಲ್ಲಿ+ ಎಲೀಯೆಜರ, ಇಷ್ಷೀಯ, ಮಲ್ಕೀಯ,+ ಶೆಮಾಯ, ಸಿಮೆಯೋನ್‌, 32  ಬೆನ್ಯಾಮೀನ್‌, ಮಲ್ಲೂಕ್‌, ಶೆಮರ್ಯ. 33  ಹಾಷುಮನ ಗಂಡು ಮಕ್ಕಳಲ್ಲಿ+ ಮತ್ತೆನೈ, ಮತ್ತತ್ತ, ಜಾಬಾದ, ಎಲೀಫೆಲೆಟ್‌, ಯೆರೇಮೈ, ಮನಸ್ಸೆ, ಶಿಮ್ಮಿ. 34  ಬಾನಿಯ ಗಂಡು ಮಕ್ಕಳಲ್ಲಿ ಮಾದೈ, ಅಮ್ರಾಮ್‌, ಊವೇಲ್‌, 35  ಬೆನಾಯ, ಬೇದೆಯ, ಕೆಲೂಹು, 36  ವನ್ಯಾಹ, ಮೆರೇಮೋತ್‌, ಎಲ್ಯಾಷೀಬ್‌, 37  ಮತ್ತನ್ಯ, ಮತ್ತೆನೈ, ಯಾಸೈ. 38  ಬಿನ್ನೂಯನ ಗಂಡು ಮಕ್ಕಳಲ್ಲಿ ಶಿಮ್ಮಿ, 39  ಶೆಲೆಮ್ಯ, ನಾತಾನ, ಅದಾಯ, 40  ಮಕ್ನದೆಬೈ, ಶಾಷೈ, ಶಾರೈ, 41  ಅಜರೇಲ್‌, ಶೆಲೆಮ್ಯ, ಶೆಮರ್ಯ, 42  ಶಲ್ಲೂಮ, ಅಮರ್ಯ, ಯೋಸೇಫ. 43  ನೆಬೋನ ಗಂಡು ಮಕ್ಕಳಲ್ಲಿ ಯೆಗೀಯೇಲ್‌, ಮತ್ತಿತ್ಯ, ಜಾಬಾದ, ಜೆಬೀನ, ಯದೈ, ಯೋವೇಲ, ಬೆನಾಯ. 44  ಇವ್ರೆಲ್ಲ ಅನ್ಯದೇಶದ ಸ್ತ್ರೀಯರನ್ನ ಮದುವೆ ಮಾಡ್ಕೊಂಡಿದ್ರು+ ಮತ್ತು ತಮ್ಮತಮ್ಮ ಹೆಂಡತಿಯರನ್ನ ಅವ್ರ ಮಕ್ಕಳ ಜೊತೆ ಅವ್ರವ್ರ ದೇಶಕ್ಕೆ ಕಳಿಸಿಬಿಟ್ರು.+

ಪಾದಟಿಪ್ಪಣಿ

ಅಥವಾ “ನಮ್ಮ ಮನೆಯೊಳಗೆ ಕರ್ಕೊಂಡು.”
ಅಕ್ಷ. “ಭಯ ಪಡ್ತಿದ್ದವರು.”
ಅಥವಾ “ಊಟದ ಕೋಣೆಗೆ.”