ಎಜ್ರ 3:1-13

  • ಯಜ್ಞವೇದಿಯನ್ನ ಮತ್ತೆ ಕಟ್ಟಿ ಬಲಿಗಳನ್ನ ಅರ್ಪಿಸಲಾಯ್ತು (1-6)

  • ಆಲಯವನ್ನ ಮತ್ತೆ ಕಟ್ಟೋ ಕೆಲಸ ಶುರುವಾಯ್ತು (7-9)

  • ಆಲಯದ ಬುನಾದಿಯನ್ನ ಹಾಕಲಾಯ್ತು (10-13)

3  ತಮ್ಮತಮ್ಮ ಪಟ್ಟಣಗಳಲ್ಲಿ ವಾಸಿಸಿದ್ದ ಇಸ್ರಾಯೇಲ್ಯರೆಲ್ಲ* ಏಳನೇ ತಿಂಗಳ+ ಆರಂಭದಲ್ಲಿ ಒಂದೇ ಮನಸ್ಸಿಂದ ಯೆರೂಸಲೇಮಲ್ಲಿ ಸೇರಿಬಂದ್ರು.  ಸತ್ಯ ದೇವರ ಸೇವಕನಾದ ಮೋಶೆಯ ನಿಯಮ ಪುಸ್ತಕದಲ್ಲಿ ಬರೆದಿದ್ದ ಹಾಗೇ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸೋಕೆ ಯೆಹೋಚಾದಾಕನ ಮಗ ಯೆಷೂವ,+ ಅವನ ಜೊತೆ ಇದ್ದ ಪುರೋಹಿತರು, ಶೆಯಲ್ತಿಯೇಲನ+ ಮಗ ಜೆರುಬ್ಬಾಬೆಲ್‌,+ ಅವನ ಸಹೋದರರು ಇಸ್ರಾಯೇಲ್‌ ದೇವರ ಯಜ್ಞವೇದಿಯನ್ನ ಕಟ್ಟಿದ್ರು.+  ಸುತ್ತಮುತ್ತ ಇರೋ ದೇಶಗಳ ಜನ್ರ ಭಯ ಇದ್ರೂ+ ಯಜ್ಞವೇದಿಯನ್ನ ಈ ಮುಂಚೆ ಎಲ್ಲಿತ್ತೋ ಅಲ್ಲೇ ಕಟ್ಟಿದ್ರು. ಅದ್ರ ಮೇಲೆ ಯೆಹೋವನಿಗಾಗಿ ಸರ್ವಾಂಗಹೋಮ ಬಲಿಗಳನ್ನ ಬೆಳಿಗ್ಗೆ ಮತ್ತು ಸಂಜೆ+ ಅರ್ಪಿಸೋಕೆ ಶುರು ಮಾಡಿದ್ರು.  ನಿಯಮ ಪುಸ್ತಕದಲ್ಲಿ ಬರೆದಿರೋ ಹಾಗೇ ಚಪ್ಪರಗಳ* ಹಬ್ಬ ಆಚರಿಸಿದ್ರು.+ ನಿಯಮದ ಪ್ರಕಾರ ದಿನಕ್ಕೆ ಎಷ್ಟು ಸರ್ವಾಂಗಹೋಮ ಬಲಿಗಳನ್ನ ಅರ್ಪಿಸಬೇಕಾಗಿತ್ತೋ ಅಷ್ಟು ಬಲಿಗಳನ್ನ ಪ್ರತಿದಿನ ಅರ್ಪಿಸ್ತಾ ಇದ್ರು.+  ಆಮೇಲೆ ಪ್ರತಿದಿನ ಅರ್ಪಿಸಬೇಕಾಗಿದ್ದ ಸರ್ವಾಂಗಹೋಮ ಬಲಿಯನ್ನ,+ ಅಮಾವಾಸ್ಯೆಯ ದಿನಗಳಲ್ಲಿ+ ಕೊಡ್ತಿದ್ದ ಅರ್ಪಣೆಗಳನ್ನ, ಯೆಹೋವನ ಎಲ್ಲ ಪವಿತ್ರ ಹಬ್ಬಗಳ ಸಮಯದಲ್ಲಿ+ ಅರ್ಪಿಸ್ತಿದ್ದ ಬಲಿಗಳನ್ನ, ಜನ ಯೆಹೋವನಿಗಾಗಿ ಸ್ವಇಷ್ಟದ ಅರ್ಪಣೆಗಳನ್ನ+ ಕೂಡ ಸಲ್ಲಿಸಿದ್ರು.  ಏಳನೇ ತಿಂಗಳಿನ ಮೊದಲ್ನೇ ದಿನದಿಂದ+ ಯೆಹೋವನಿಗೆ ಸರ್ವಾಂಗಹೋಮ ಬಲಿಗಳನ್ನ ಅರ್ಪಿಸೋಕೆ ಶುರು ಮಾಡಿದ್ರು. ಆದ್ರೆ ಯೆಹೋವನ ಆಲಯದ ಅಡಿಪಾಯವನ್ನ ಇನ್ನೂ ಹಾಕಿರಲಿಲ್ಲ.  ಅವರು ಕಲ್ಲು ಒಡೆಯೋರಿಗೆ,+ ಕರಕುಶಲಗಾರರಿಗೆ+ ಹಣ ಕೊಟ್ರು. ಪರ್ಶಿಯ ರಾಜ ಕೋರೆಷ ಹೇಳಿದ ಹಾಗೇ+ ಸೀದೋನ್ಯರು, ತೂರ್ಯರು ಲೆಬನೋನಿಂದ ಯೊಪ್ಪಕ್ಕೆ+ ಸಮುದ್ರ ಮಾರ್ಗವಾಗಿ ದೇವದಾರು ಮರಗಳನ್ನ ತಂದ್ಕೊಟ್ರು. ಇದಕ್ಕೆ ಇಸ್ರಾಯೇಲ್ಯರು ಅವ್ರಿಗೆ ಆಹಾರ, ನೀರು, ಎಣ್ಣೆ ಕೊಟ್ರು.  ಅವರು ಯೆರೂಸಲೇಮಿಗೆ ಬಂದ ಎರಡನೇ ವರ್ಷದ ಎರಡನೇ ತಿಂಗಳಲ್ಲಿ ಶೆಯಲ್ತಿಯೇಲನ ಮಗ ಜೆರುಬ್ಬಾಬೆಲ್‌, ಯೆಹೋಚಾದಾಕನ ಮಗ ಯೆಷೂವ, ಅವ್ರ ಉಳಿದ ಸಹೋದರರು, ಪುರೋಹಿತರು, ಲೇವಿಯರು, ಜೊತೆಗೆ ಜೈಲಿಂದ ಯೆರೂಸಲೇಮಿಗೆ ವಾಪಸ್‌ ಬಂದ ಬೇರೆ ಎಲ್ಲ ಜನ+ ಆಲಯದ ಕೆಲಸ ಶುರು ಮಾಡಿದ್ರು. ಯೆಹೋವನ ಆಲಯ ಕಟ್ಟೋ ಕೆಲಸದ ಮೇಲ್ವಿಚಾರಣೆ ಮಾಡೋಕೆ 20 ವರ್ಷ, ಅದಕ್ಕಿಂತ ಜಾಸ್ತಿ ವಯಸ್ಸಿನ ಲೇವಿಯರನ್ನ ಮೇಲ್ವಿಚಾರಕರಾಗಿ ನೇಮಿಸಿದ್ರು.  ಹಾಗಾಗಿ ಯೆಷೂವ, ಅವನ ಗಂಡು ಮಕ್ಕಳು, ಅವನ ಸಹೋದರರು, ಕದ್ಮೀಯೇಲ, ಅವನ ಗಂಡು ಮಕ್ಕಳು, ಯೆಹೂದನ ಗಂಡು ಮಕ್ಕಳು, ಇವ್ರೆಲ್ಲ ಸೇರಿ ಸತ್ಯ ದೇವರ ಆಲಯ ಕಟ್ತಿದ್ದವ್ರ ಮೇಲ್ವಿಚಾರಣೆ ಮಾಡ್ತಿದ್ರು. ಇವ್ರ ಜೊತೆ ಲೇವಿಯರಾಗಿದ್ದ ಹೇನಾದಾದನ+ ವಂಶಸ್ಥರು, ಅವ್ರ ಗಂಡು ಮಕ್ಕಳು, ಅವ್ರ ಸಂಬಂಧಿಕರು ಇದ್ರು. 10  ಕಟ್ಟೋರು ಯೆಹೋವನ ಆಲಯದ ತಳಪಾಯ ಹಾಕಿದಾಗ,+ ಆಲಯದ ಬಟ್ಟೆಗಳನ್ನ ಹಾಕಿದ್ದ ಪುರೋಹಿತರು ತುತ್ತೂರಿಗಳನ್ನ ಹಿಡ್ಕೊಂಡು,+ ಲೇವಿಯರಾಗಿದ್ದ ಆಸಾಫನ ಗಂಡು ಮಕ್ಕಳು ಝಲ್ಲರಿಗಳನ್ನ ಹಿಡ್ಕೊಂಡು ಇಸ್ರಾಯೇಲಿನ ರಾಜ ದಾವೀದ ಕೊಟ್ಟಿದ್ದ ನಿರ್ದೇಶನದ ಹಾಗೇ+ ಯೆಹೋವನನ್ನ ಹೊಗಳೋಕೆ ಎದ್ದು ನಿಂತ್ರು. 11  ಅವರು ಯೆಹೋವನನ್ನ ಹೊಗಳ್ತಾ “ದೇವರು ಒಳ್ಳೆಯವನು. ಇಸ್ರಾಯೇಲ್ಯರ ಕಡೆ ಆತನಿಗಿರೋ ಪ್ರೀತಿ ಶಾಶ್ವತವಾಗಿ ಇರುತ್ತೆ”+ ಅಂತ ಹಾಡ್ತಾ+ ಆತನಿಗೆ ಧನ್ಯವಾದ ಸಲ್ಲಿಸಿದ್ರು. ಆಮೇಲೆ ಯೆಹೋವನ ಆಲಯದ ಅಡಿಪಾಯ ಹಾಕಿದ್ದನ್ನ ನೋಡಿ ಜನ್ರೆಲ್ಲ ಸಂತೋಷದಿಂದ ಗಟ್ಟಿಯಾಗಿ ಯೆಹೋವನನ್ನ ಹೊಗಳಿದ್ರು. 12  ಈ ಮುಂಚೆ ಇದ್ದ ಆಲಯವನ್ನ ಕಣ್ಣಾರೆ ನೋಡಿದ್ದ ವಯಸ್ಸಾದ ಜನ್ರು+ ಅಂದ್ರೆ, ಪುರೋಹಿತರು, ಲೇವಿಯರು, ಕುಲದ ಮುಖ್ಯಸ್ಥರು ಆಲಯಕ್ಕೆ ಮತ್ತೆ ಅಡಿಪಾಯ ಹಾಕೋದನ್ನ ನೋಡಿ ಗಟ್ಟಿಯಾಗಿ ಅತ್ರು. ಅದೇ ಸಮಯದಲ್ಲಿ ತುಂಬ ಜನ ಸಂತೋಷದಿಂದ ಜೈಕಾರ ಹಾಕಿದ್ರು.+ 13  ಅವ್ರ ಸದ್ದುಗದ್ದಲ ತುಂಬ ದೂರದ ತನಕ ಕೇಳಿಸ್ತಿತ್ತು. ಎಷ್ಟಂದ್ರೆ ಜನ್ರಿಗೆ ಅದು ಸಂಭ್ರಮದ ಶಬ್ದನಾ ಗೋಳಾಟದ ಶಬ್ದನಾ ಅಂತ ಕಂಡು ಹಿಡಿಯೋಕೆ ಆಗಲಿಲ್ಲ.

ಪಾದಟಿಪ್ಪಣಿ

ಅಕ್ಷ. “ಇಸ್ರಾಯೇಲನ ಗಂಡು ಮಕ್ಕಳು.”
ಅಥವಾ “ತಾತ್ಕಾಲಿಕ ವಸತಿಗಳ.”