ಎಜ್ರ 8:1-36

  • ಎಜ್ರನ ಜೊತೆ ವಾಪಸ್‌ ಹೋದವ್ರ ಪಟ್ಟಿ (1-14)

  • ಪ್ರಯಾಣಕ್ಕಾಗಿ ತಯಾರಿ (15-30)

  • ಬಾಬೆಲಿಂದ ಹೊರಟು ಯೆರೂಸಲೇಮಿಗೆ ಬಂದು ತಲುಪಿದ್ದು (31-36)

8  ರಾಜ ಅರ್ತಷಸ್ತ+ ಆಳ್ತಿದ್ದ ಸಮಯದಲ್ಲಿ ಬಾಬೆಲಿಂದ ನನ್ನ ಜೊತೆ ಬಂದ ಕುಲಗಳ ಮುಖ್ಯಸ್ಥರು, ಅವ್ರ ವಂಶಾವಳಿ ಪಟ್ಟಿಯಲ್ಲಿ ಇರೋರು ಯಾರಂದ್ರೆ:  ಫೀನೆಹಾಸನ+ ಗಂಡು ಮಕ್ಕಳಲ್ಲಿ ಗೇರ್ಷೋಮ್‌, ಈತಾಮಾರನ+ ಗಂಡು ಮಕ್ಕಳಲ್ಲಿ ದಾನಿಯೇಲ, ದಾವೀದನ ಗಂಡು ಮಕ್ಕಳಲ್ಲಿ ಹಟ್ಟೂಷ್‌,  ಶೆಕನ್ಯನ, ಪರೋಷನ ವಂಶದಲ್ಲಿ ಜೆಕರ್ಯ ಮತ್ತು ವಂಶಾವಳಿ ಪಟ್ಟಿಯಲ್ಲಿ ದಾಖಲಾಗಿದ್ದ 150 ಗಂಡಸ್ರು ಅವನ ಜೊತೆ ಇದ್ರು.  ಪಹತ್‌-ಮೋವಾಬನ ಗಂಡು ಮಕ್ಕಳಲ್ಲಿ+ ಜೆರಹ್ಯನ ಮಗ ಎಲೈಹೋಯೇನೈ, ಅವನ ಜೊತೆ 200 ಗಂಡಸ್ರು,  ಜತ್ತೂನ ಗಂಡು ಮಕ್ಕಳಲ್ಲಿ+ ಯಹಜೀಯೇಲನ ಮಗ ಶೆಕನ್ಯ, ಅವನ ಜೊತೆ 300 ಗಂಡಸ್ರು,  ಆದೀನನ ಗಂಡು ಮಕ್ಕಳಲ್ಲಿ+ ಯೋನಾತಾನನ ಮಗ ಎಬೆದ, ಅವನ ಜೊತೆ 50 ಗಂಡಸ್ರು,  ಏಲಾಮನ ಗಂಡು ಮಕ್ಕಳಲ್ಲಿ+ ಅತಲ್ಯನ ಮಗ ಯೆಶಾಯ, ಅವನ ಜೊತೆ 70 ಗಂಡಸ್ರು,  ಶೆಫಟ್ಯನ ಗಂಡು ಮಕ್ಕಳಲ್ಲಿ+ ಮೀಕಾಯೇಲನ ಮಗ ಜೆಬದ್ಯ, ಅವನ ಜೊತೆ 80 ಗಂಡಸ್ರು,  ಯೋವಾಬನ ಗಂಡು ಮಕ್ಕಳಲ್ಲಿ ಯೆಹೀಯೇಲನ ಮಗ ಓಬದ್ಯ ಮತ್ತು ಅವನ ಜೊತೆ 218 ಗಂಡಸ್ರು, 10  ಬಾನಿಯ ಗಂಡು ಮಕ್ಕಳಲ್ಲಿ ಯೋಸಿಫ್ಯನ ಮಗ ಶೆಲೋಮೀತ್‌ ಮತ್ತು ಅವನ ಜೊತೆ 160 ಗಂಡಸ್ರು, 11  ಬೇಬೈಯ ಗಂಡು ಮಕ್ಕಳಲ್ಲಿ+ ಬೇಬೈಯ ಮಗ ಜೆಕರ್ಯ ಮತ್ತು ಅವನ ಜೊತೆ 28 ಗಂಡಸ್ರು, 12  ಅಜ್ಗಾದನ ಗಂಡು ಮಕ್ಕಳಲ್ಲಿ+ ಹಕ್ಕಾಟಾನನ ಮಗ ಯೋಹಾನಾನ್‌ ಮತ್ತು ಅವನ ಜೊತೆ 110 ಗಂಡಸ್ರು, 13  ಅದೋನೀಕಾಮನ ಗಂಡು ಮಕ್ಕಳಲ್ಲಿ+ ಕೊನೆಯವರಾಗಿದ್ದ ಎಲೀಫೆಲೆಟ್‌, ಯೆಗೀಯೇಲ್‌, ಶೆಮಾಯ, ಅವ್ರ ಜೊತೆ 60 ಗಂಡಸ್ರು, 14  ಬಿಗ್ವೈಯ ಗಂಡು ಮಕ್ಕಳಲ್ಲಿ+ ಊತೈ, ಜಬ್ಬೂದ ಮತ್ತು ಅವ್ರ ಜೊತೆ 70 ಗಂಡಸ್ರು. 15  ನಾನು ಆ ಜನ್ರನ್ನ ಅಹವಾ ಅನ್ನೋ ಜಾಗದ ಕಡೆ ಹರಿದು ಬರೋ ನದಿ+ ಹತ್ರ ಒಟ್ಟುಸೇರಿಸಿದೆ. ನಾವು ಅಲ್ಲಿ ಮೂರು ದಿನ ಡೇರೆ ಹಾಕಿದ್ವಿ. ಆಮೇಲೆ ಜನ್ರನ್ನ ಪುರೋಹಿತರನ್ನ ಪರಿಶೀಲಿಸಿದಾಗ ಅವ್ರಲ್ಲಿ ಒಬ್ಬನೇ ಒಬ್ಬ ಲೇವಿನೂ ಸಿಗಲಿಲ್ಲ. 16  ಆಗ ನಾನು, ಮುಂದಾಳತ್ವ ವಹಿಸ್ತಿದ್ದ ಎಲೀಯೆಜರ, ಅರೀಯೇಲ, ಶೆಮಾಯ, ಎಲ್ನಾಥಾನ, ಯಾರೀಬ್‌, ಎಲ್ನಾಥಾನ, ನಾತಾನ, ಜೆಕರ್ಯ, ಮೆಷುಲ್ಲಾಮನನ್ನ ಮತ್ತು ಉಪದೇಶಕರಾಗಿದ್ದ ಯೋಯಾರೀಬ್‌, ಎಲ್ನಾಥಾನನನ್ನ ಕರಿಸ್ದೆ. 17  ಆಮೇಲೆ ಅವ್ರಿಗೆ ಕಾಸಿಫ್ಯ ಅನ್ನೋ ಜಾಗದಲ್ಲಿ ನಾಯಕನಾಗಿದ್ದ ಇದ್ದೋವನ ಹತ್ರ ಹೋಗೋಕೆ ಅಪ್ಪಣೆ ಕೊಟ್ಟೆ. ಅವ್ನಿಗೂ ದೇವಾಲಯದ ಸೇವಕರಾಗಿದ್ದ* ಅವನ ಸಹೋದರರಿಗೂ ನಮ್ಮ ದೇವರ ಆಲಯಕ್ಕಾಗಿ ಸೇವಕರನ್ನ ಕರ್ಕೊಂಡು ಬನ್ನಿ ಅನ್ನೋ ಸಂದೇಶ ಕೊಡಿ ಅಂತ ಅವ್ರಿಗೆ ಆಜ್ಞೆ ಕೊಟ್ಟೆ. 18  ನಮ್ಮ ದೇವರು ನಮ್ಮ ಜೊತೆ ಇದ್ದಿದ್ರಿಂದ ಶೇರೇಬ್ಯ+ ಅನ್ನೋ ಒಬ್ಬ ವಿವೇಚನೆ ಇರೋ ವ್ಯಕ್ತಿನ ನಮ್ಮ ಹತ್ರ ಕರ್ಕೊಂಡು ಬಂದ್ರು. ಅವನು ಮಹ್ಲಿಯ ಗಂಡು ಮಕ್ಕಳಲ್ಲಿ ಒಬ್ಬನಾಗಿದ್ದ. ಇಸ್ರಾಯೇಲನ ಮಗ ಲೇವಿಯ ಮೊಮ್ಮಗನೇ ಈ ಮಹ್ಲಿ.+ ಶೇರೇಬ್ಯನ ಜೊತೆ ಅವನ ಗಂಡು ಮಕ್ಕಳು, ಅವನ ಸಹೋದರರು ಹೀಗೆ 18 ಜನ ಇದ್ರು. 19  ಹಷಬ್ಯ, ಅವನ ಜೊತೆ ಮೆರಾರೀಯರಿಂದ+ ಯೆಶಾಯ, ಅವನ ಸಹೋದರರು, ಅವ್ರ ಗಂಡು ಮಕ್ಕಳು ಹೀಗೆ 20 ಗಂಡಸ್ರು ಇದ್ರು. 20  ಅವ್ರ ಜೊತೆ ದೇವಾಲಯದ ಸೇವಕರಿಂದ* ಕೂಡ 220 ಜನ್ರನ್ನ ಕರ್ಕೊಂಡು ಬಂದ್ರು. ದಾವೀದ ಮತ್ತು ಅಧಿಕಾರಿಗಳು ಇವ್ರನ್ನ ಆರಿಸ್ಕೊಂಡು ಲೇವಿಯರ ಸಹಾಯಕ್ಕಾಗಿ ನೇಮಿಸಿದ್ದರು. 21  ಆಮೇಲೆ ನಾನು ಅಹವಾ ನದಿ ಹತ್ರ ಎಲ್ರಿಗೂ ಉಪವಾಸ ಮಾಡಿ ಅಂತ ಹೇಳ್ದೆ. ನಮ್ಮ ದೇವರ ಮುಂದೆ ನಮ್ಮನ್ನೇ ತಗ್ಗಿಸ್ಕೊಳ್ಳೋಕೆ, ನಮ್ಮ ಪ್ರಯಾಣವನ್ನ ಆತನು ಮಾರ್ಗದರ್ಶಿಸೋಕೆ, ನಮ್ಮನ್ನ, ನಮ್ಮ ಮಕ್ಕಳನ್ನ, ನಮ್ಮ ವಸ್ತುಗಳನ್ನೆಲ್ಲ ಆತನು ಕಾಪಾಡೋಕೆ ಹೀಗೆ ಮಾಡ್ದೆ. 22  ಹೋಗೋ ದಾರೀಲಿ ನಮ್ಮನ್ನ ಶತ್ರುಗಳಿಂದ ಕಾಪಾಡೋಕೆ ಸೈನಿಕರನ್ನ, ಕುದುರೆ ಸವಾರರನ್ನ ಕೊಡು ಅಂತ ರಾಜನ ಹತ್ರ ಕೇಳೋಕೆ ನನಗೆ ನಾಚಿಕೆ ಆಯ್ತು. ಯಾಕಂದ್ರೆ ನಾವು ರಾಜನಿಗೆ “ನಮ್ಮ ದೇವರು ಆತನನ್ನ ಹುಡುಕೋರ ಜೊತೆ ಇರ್ತಾನೆ.+ ಆದ್ರೆ ಆತನನ್ನ ದೂರ ಮಾಡೋರ ಮೇಲೆ ತನ್ನ ಶಕ್ತಿಯನ್ನ ಕೋಪವನ್ನ ತೋರಿಸ್ತಾನೆ”+ ಅಂತ ಹೇಳಿದ್ವಿ. 23  ಹಾಗಾಗಿ ಉಪವಾಸ ಮಾಡಿ ಈ ವಿಷ್ಯದ ಬಗ್ಗೆ ನಮ್ಮ ದೇವರ ಹತ್ರ ಬೇಡ್ಕೊಂಡ್ವಿ. ದೇವರು ನಮ್ಮ ಪ್ರಾರ್ಥನೆ ಕೇಳಿದನು.+ 24  ನಾನು ಪುರೋಹಿತರಲ್ಲಿ ಪ್ರಧಾನರಾಗಿದ್ದ 12 ಜನ್ರನ್ನ ಅಂದ್ರೆ ಶೇರೇಬ್ಯನನ್ನ, ಹಷಬ್ಯನನ್ನ,+ ಅವ್ರ ಜೊತೆ 10 ಸಹೋದರರನ್ನ ಆರಿಸ್ಕೊಂಡೆ. 25  ನಾನು ಅವ್ರಿಗೆ ಬೆಳ್ಳಿ ಚಿನ್ನದ ಪಾತ್ರೆಗಳನ್ನ ತೂಕಮಾಡಿ ಕೊಟ್ಟೆ. ಅವುಗಳನ್ನ ನಮ್ಮ ದೇವರ ಆಲಯಕ್ಕಾಗಿ ರಾಜ, ಅವನ ಸಲಹೆಗಾರರು, ಅಧಿಕಾರಿಗಳು, ಅಲ್ಲಿದ್ದ ಇಸ್ರಾಯೇಲ್ಯರೆಲ್ಲ ಕಾಣಿಕೆಯಾಗಿ ಕೊಟ್ಟಿದ್ರು.+ 26  ಹೀಗೆ ನಾನು, 650 ತಲಾಂತು* ಬೆಳ್ಳಿ 2 ತಲಾಂತಿನಷ್ಟು ಬೆಲೆಬಾಳೋ 100 ಬೆಳ್ಳಿ ಪಾತ್ರೆಗಳನ್ನ, 100 ತಲಾಂತು ಚಿನ್ನವನ್ನ ತೂಕಮಾಡಿ ಕೊಟ್ಟೆ. 27  ಜೊತೆಗೆ ಒಂದು ಸಾವಿರ ಡೇರಿಕ್‌* ಬೆಲೆಬಾಳೋ ಚಿನ್ನದ 20 ಚಿಕ್ಕ ಬಟ್ಟಲುಗಳನ್ನ, ಕೆಂಪಗೆ ಹೊಳಿತಿದ್ದ ಚಿನ್ನದಷ್ಟೆ ಅಮೂಲ್ಯವಾಗಿದ್ದ ಶುದ್ಧ ತಾಮ್ರದ 2 ಪಾತ್ರೆಗಳನ್ನ ಕೊಟ್ಟೆ. 28  ನಾನು ಅವ್ರಿಗೆ “ನೀವು ಯೆಹೋವನಿಗೆ ಪವಿತ್ರ ಜನ್ರು.+ ಈ ಪಾತ್ರೆಗಳು ಕೂಡ ಪವಿತ್ರ. ಈ ಬೆಳ್ಳಿಬಂಗಾರ ನಿಮ್ಮ ಪೂರ್ವಜರ ದೇವರಾದ ಯೆಹೋವನಿಗೆ ಕೊಟ್ಟಿರೋ ಸ್ವಇಷ್ಟದ ಕಾಣಿಕೆಗಳು. 29  ಹಾಗಾಗಿ ಯೆರೂಸಲೇಮಿಗೆ ತಲುಪೋ ತನಕ ಇವುಗಳನ್ನ ಜೋಪಾನ ಮಾಡಿ. ಅಲ್ಲಿನ ಯೆಹೋವನ ಆಲಯದ ಕೊಠಡಿಗಳಲ್ಲಿ* ಪುರೋಹಿತರ, ಲೇವಿಯರ ಪ್ರಧಾನರ ಮುಂದೆ, ಇಸ್ರಾಯೇಲ್‌ ಕುಲಗಳ ಅಧಿಕಾರಿಗಳ ಮುಂದೆ ತೂಕಮಾಡೋ ತನಕ ಇವುಗಳನ್ನ ಜೋಪಾನವಾಗಿ ನೋಡ್ಕೊಳ್ಳಿ”+ ಅಂದೆ. 30  ಆಗ ಪುರೋಹಿತರು, ಲೇವಿಯರು ಯೆರೂಸಲೇಮಲ್ಲಿರೋ ನಮ್ಮ ದೇವರ ಆಲಯದಲ್ಲಿ ಇಡೋಕೆ ತೂಕಮಾಡಿ ತಮಗೆ ಕೊಟ್ಟ ಆ ಬೆಳ್ಳಿಬಂಗಾರವನ್ನ, ಪಾತ್ರೆಗಳನ್ನ ತಗೊಂಡ್ರು. 31  ಕೊನೆಗೆ ನಾವು ಮೊದಲ್ನೇ ತಿಂಗಳ+ 12ನೇ ದಿನ ಅಹವಾ ನದಿ+ ಹತ್ರದಿಂದ ಯೆರೂಸಲೇಮಿಗೆ ಹೊರಟ್ವಿ. ನಮ್ಮ ದೇವರು ನಮ್ಮ ಜೊತೆ ಇದ್ದಿದ್ರಿಂದ ನಮ್ಮನ್ನ ಶತ್ರುಗಳ ಕೈಯಿಂದ ಬಿಡಿಸಿದನು. ದಾರಿಯಲ್ಲಿ ನಮಗಾಗಿ ಹೊಂಚುಹಾಕಿ ಕೂತಿದ್ದವ್ರಿಂದ ನಮ್ಮನ್ನ ಕಾಪಾಡಿದನು. 32  ಹೀಗೆ ನಾವು ಯೆರೂಸಲೇಮಿಗೆ ಬಂದು ತಲುಪಿ,+ ಮೂರು ದಿನ ಅಲ್ಲಿ ಉಳ್ಕೊಂಡ್ವಿ. 33  ನಾಲ್ಕನೇ ದಿನ ನಮ್ಮ ದೇವರ ಆಲಯದಲ್ಲಿ ಆ ಬೆಳ್ಳಿಬಂಗಾರವನ್ನ, ಪಾತ್ರೆಗಳನ್ನ ತೂಕ ಮಾಡಿದ್ವಿ.+ ಪುರೋಹಿತ ಊರೀಯಾನ ಮಗ ಮೆರೇಮೋತನಿಗೆ+ ಅದನ್ನ ಒಪ್ಪಿಸಿದ್ವಿ. ಅವನ ಜೊತೆ ಫೀನೆಹಾಸನ ಮಗ ಎಲ್ಲಾಜಾರ್‌, ಲೇವಿಯರಲ್ಲಿ ಯೆಷೂವನ ಮಗ ಯೋಜಾಬಾದ+ ಮತ್ತು ಬಿನ್ನೂಯನ+ ಮಗ ನೋವದ್ಯ ಇದ್ರು. 34  ಹೀಗೆ ಎಲ್ಲ ವಸ್ತುಗಳನ್ನ ಲೆಕ್ಕ ಮಾಡಿ, ಅವುಗಳನ್ನ ತೂಕಮಾಡಿ ಬರೆದಿಟ್ರು. 35  ಕೈದಿಗಳಾಗಿದ್ದು ವಾಪಸ್‌ ಬಂದವ್ರು ಇಸ್ರಾಯೇಲ್‌ ದೇವ್ರಿಗೆ ಎಲ್ಲ ಇಸ್ರಾಯೇಲ್ಯರ ಪರವಾಗಿ 12 ಹೋರಿ,+ 96 ಟಗರು,+ 77 ಗಂಡು ಕುರಿಮರಿ, 12 ಗಂಡು ಆಡುಗಳನ್ನ+ ಪಾಪಪರಿಹಾರಕ ಬಲಿಯಾಗಿ ಕೊಟ್ರು. ಇವೆಲ್ಲ ಯೆಹೋವನಿಗೆ ಕೊಟ್ಟ ಸರ್ವಾಂಗಹೋಮ ಬಲಿ ಆಗಿತ್ತು.+ 36  ಆಮೇಲೆ ನಾವು ರಾಜನ ನಿಯಮಗಳನ್ನ+ ನದಿಯ+ ಈಕಡೆ* ಇರೋ ರಾಜನ ದೇಶಾಧಿಪತಿಗಳಿಗೆ,* ರಾಜ್ಯಪಾಲರಿಗೆ ಕೊಟ್ವಿ. ಅವ್ರು ಜನ್ರಿಗೆ ಸಹಾಯ ಮಾಡಿದ್ರು, ಸತ್ಯ ದೇವರ ಆಲಯಕ್ಕೆ ಬೇಕಾದ ಕಾಣಿಕೆಗಳನ್ನ ಕೊಟ್ಟು ಬೆಂಬಲಿಸಿದ್ರು.+

ಪಾದಟಿಪ್ಪಣಿ

ಅಥವಾ “ನೆತಿನಿಮ್‌.” ಅಕ್ಷ. “ಕೊಡಲಾಗಿರೋ ಜನ.”
ಅಥವಾ “ನೆತಿನಿಮ್‌.” ಅಕ್ಷ. “ಕೊಡಲಾಗಿರೋ ಜನ.”
ಒಂದು ತಲಾಂತು=34.2 ಕೆಜಿ. ಪರಿಶಿಷ್ಟ ಬಿ14 ನೋಡಿ.
ಡೇರಿಕ್‌ ಪರ್ಶಿಯದ ಒಂದು ಚಿನ್ನದ ನಾಣ್ಯವಾಗಿತ್ತು. ಪರಿಶಿಷ್ಟ ಬಿ14 ನೋಡಿ.
ಅಥವಾ “ಊಟದ ಕೋಣೆಗಳಲ್ಲಿ.”
ಅಥವಾ “ಯೂಫ್ರೆಟಿಸ್‌ ನದಿಯ ಪಶ್ಚಿಮಕ್ಕೆ.”
“ಸಾಮ್ರಾಜ್ಯದ ಸಂರಕ್ಷರು” ಅನ್ನೋ ಅರ್ಥವಿರೋ ಬಿರುದು. ಪರ್ಶಿಯ ಸಾಮ್ರಾಜ್ಯದ ಪ್ರಾಂತ್ಯಗಳ ರಾಜ್ಯಪಾಲರ ಬಗ್ಗೆ ಇಲ್ಲಿ ಹೇಳ್ತಿದೆ.