ಎಜ್ರ 9:1-15

  • ಇಸ್ರಾಯೇಲ್ಯರು ಬೇರೆ ದೇಶದವರನ್ನ ಮದುವೆ ಮಾಡ್ಕೊಳ್ತಾರೆ (1-4)

  • ಎಜ್ರ ತಪ್ಪು ಒಪ್ಕೊಂಡು ಮಾಡಿದ ಪ್ರಾರ್ಥನೆ (5-15)

9  ಈ ಎಲ್ಲ ವಿಷ್ಯಗಳು ನಡೆದ ತಕ್ಷಣ ಅಧಿಕಾರಿಗಳು ನನ್ನ ಹತ್ರ ಬಂದು “ಇಸ್ರಾಯೇಲಿನ ಜನ, ಪುರೋಹಿತರು ಮತ್ತು ಲೇವಿಯರು ಅಕ್ಕಪಕ್ಕದ ದೇಶದ ಜನ್ರ ಅಂದ್ರೆ ಕಾನಾನ್ಯರ, ಹಿತ್ತಿಯರ, ಪೆರಿಜೀಯರ, ಯೆಬೂಸಿಯರ, ಅಮ್ಮೋನಿಯರ, ಮೋವಾಬ್ಯರ, ಈಜಿಪ್ಟಿನವರ+ ಮತ್ತು ಅಮೋರಿಯರ+ ಸಹವಾಸ ಬಿಟ್ಟುಬಿಡದೆ ಅವ್ರ ಅಸಹ್ಯಕರ ಪದ್ಧತಿಗಳನ್ನ ಮಾಡ್ತಿದ್ದಾರೆ.+  ಅವರು ಆ ದೇಶಗಳ ಹೆಣ್ಣು ಮಕ್ಕಳನ್ನ ಮದುವೆ ಆಗಿದ್ದಾರೆ. ಅಷ್ಟೇ ಅಲ್ಲ ತಮ್ಮ ಗಂಡು ಮಕ್ಕಳಿಗೂ ಅಲ್ಲಿಂದ ಹೆಣ್ಣು ತಂದಿದ್ದಾರೆ.+ ಪವಿತ್ರ ಸಂತತಿಯಾಗಿರೋ+ ಅವರು ಆ ದೇಶದ ಜನ್ರ ಜೊತೆ ಬೆರೆತು ಹೋಗಿದ್ದಾರೆ.+ ಈ ನಂಬಿಕೆ ದ್ರೋಹದ ಕೆಲಸದಲ್ಲಿ ಅಧಿಕಾರಿಗಳು, ಉಪಾಧಿಪತಿಗಳೇ ಮೊದಲ್ನೇ ಸಾಲಲ್ಲಿದ್ದಾರೆ” ಅಂದ್ರು.  ಈ ವಿಷ್ಯ ಕೇಳಿದ ತಕ್ಷಣ ನನ್ನ ಬಟ್ಟೆಗಳನ್ನ ಹರ್ಕೊಂಡೆ. ತಲೆ ಮತ್ತು ಗಡ್ಡದ ಕೂದಲನ್ನ ಕಿತ್ಕೊಂಡು ಬೇಜಾರಾಗಿ ಕೂತೆ.  ಆಗ ಇಸ್ರಾಯೇಲ್‌ ದೇವರ ಮಾತುಗಳನ್ನ ಗೌರವಿಸ್ತಿದ್ದ* ಜನ ನನ್ನ ಅಕ್ಕಪಕ್ಕದಲ್ಲಿ ಬಂದು ನಿಂತ್ಕೊಂಡ್ರು. ಸೆರೆಯಿಂದ ಬಂದವ್ರು ಮಾಡಿದ ಪಾಪದ ಬಗ್ಗೆ ತಿಳಿದು ಅವ್ರಿಗೂ ತುಂಬ ನೋವಾಗಿತ್ತು. ಸಂಜೆಯ ಧಾನ್ಯ ಅರ್ಪಣೆ ಕೊಡೋ ತನಕ ನಾನು ಬೇಜಾರಾಗೇ ಕೂತಿದ್ದೆ.+  ಸಂಜೆಯ ಧಾನ್ಯ ಅರ್ಪಣೆ ಸಲ್ಲಿಸೋ ಸಮಯ ಬಂತು.+ ದುಃಖದಿಂದ ಕೂತಿದ್ದ ನಾನು ಹರಿದ ಬಟ್ಟೆಯಲ್ಲೇ ಅಲ್ಲಿಂದ ಎದ್ದೆ. ಮಂಡಿಯೂರಿ ನನ್ನ ದೇವರಾದ ಯೆಹೋವನ ಕಡೆ ಕೈಚಾಚಿ,  ಹೀಗೆ ಪ್ರಾರ್ಥನೆ ಮಾಡ್ದೆ: “ನನ್ನ ದೇವರೇ, ನನಗೆ ನಾಚಿಕೆ ಆಗ್ತಿದೆ. ನಿನಗೆ ಮುಖ ತೋರಿಸೋಕೂ ಬೇಜಾರಾಗ್ತಿದೆ. ನನ್ನ ದೇವರೇ ನಮ್ಮ ಪಾಪಗಳು ತುಂಬ ಜಾಸ್ತಿ ಆಗಿವೆ. ನಮ್ಮ ಅಪರಾಧಗಳು ಹೆಚ್ತಾಹೆಚ್ತಾ ಆಕಾಶ ಮುಟ್ತಿದೆ.+  ನಮ್ಮ ಪೂರ್ವಜರ ಕಾಲದಿಂದ ಇವತ್ತಿನ ತನಕ ತುಂಬ ತಪ್ಪು ಮಾಡಿದ್ದೀವಿ.+ ನಾವು ತಪ್ಪು ಮಾಡಿದಿಕ್ಕೆ ನಮ್ಮನ್ನ ನಮ್ಮ ರಾಜರನ್ನ ಪುರೋಹಿತರನ್ನ ಬೇರೆ ದೇಶಗಳ ರಾಜರ ಕೈಗೆ ಕೊಟ್ಟುಬಿಟ್ಟೆ. ಅವ್ರು ನಮ್ಮ ಜನ್ರನ್ನ ಕತ್ತಿಯಿಂದ ಕೊಂದ್ರು,+ ಕೈದಿಗಳಾಗಿ ಕರ್ಕೊಂಡು ಹೋದ್ರು,+ ದೋಚಿದ್ರು,+ ಅವಮಾನ ಮಾಡಿದ್ರು. ಇವತ್ತೂ ನಮ್ಮ ಪರಿಸ್ಥಿತಿ ಹಾಗೇ ಇದೆ.+  ಆದ್ರೆ ನಮ್ಮ ದೇವರಾದ ಯೆಹೋವನೇ, ಸ್ವಲ್ಪ ಸಮಯದಿಂದ ನೀನು ನಮಗೆ ದಯೆ ತೋರಿಸ್ತಾ ಇದ್ದೀಯ. ನಾವು ಸರ್ವನಾಶ ಆಗದ ಹಾಗೆ ನೋಡ್ಕೊಂಡೆ. ಇಲ್ಲಿಗೆ ವಾಪಸ್‌ ಕರ್ಕೊಂಡು ಬಂದು ನಿನ್ನ ಪವಿತ್ರ ಸ್ಥಳದಲ್ಲಿ ನಮಗೊಂದು ಸುರಕ್ಷಿತ ಸ್ಥಾನ ಕೊಟ್ಟಿದ್ದೀಯ.+ ನಮ್ಮ ಕಣ್ಣುಗಳು ಹೊಳೆಯೋ ತರ ಮಾಡಿದ್ದೀಯ. ಗುಲಾಮಗಿರಿಯಿಂದ ಸ್ವಲ್ಪ ಚೇತರಿಸಿಕೊಳ್ಳೋ ತರ ಮಾಡಿದ್ದೀಯ.  ನಾವು ಗುಲಾಮರೇ ಆಗಿದ್ರೂ+ ನಮ್ಮ ದೇವರಾದ ನೀನು ನಮ್ಮನ್ನ ಗುಲಾಮಗಿರಿಯಲ್ಲೇ ಬಿಟ್ಟುಬಿಡಲಿಲ್ಲ. ನಿನ್ನ ಶಾಶ್ವತ ಪ್ರೀತಿ ತೋರಿಸಿ ಪರ್ಶಿಯದ ರಾಜರು ನಮಗೆ ದಯೆ ತೋರಿಸೋ ತರ ಮಾಡ್ದೆ.+ ಹಾಳುಬಿದ್ದಿದ್ದ ನಮ್ಮ ದೇವರ ಆಲಯನ ಮತ್ತೆ ಕಟ್ಟೋಕೆ ಸಹಾಯ ಮಾಡ್ದೆ.+ ಯೆಹೂದ ಮತ್ತು ಯೆರೂಸಲೇಮಲ್ಲಿ ನಮ್ಮನ್ನ ಕಾಪಾಡೋಕೆ ನಾಲ್ಕು ಕಡೆಗಳಲ್ಲೂ ರಕ್ಷಣೆಯ ಗೋಡೆಗಳನ್ನ ಎಬ್ಬಿಸಿದೆ. 10  ದೇವರೇ, ಏನು ಹೇಳೋದು? ಇಷ್ಟೆಲ್ಲ ಆದ್ಮೇಲೂ ನಾವು ನಿನ್ನ ಆಜ್ಞೆಗಳನ್ನ ಸರಿಯಾಗಿ ಪಾಲಿಸ್ತಿಲ್ಲ. 11  ನಿನ್ನ ಆಜ್ಞೆಗಳನ್ನ ನಿನ್ನ ಸೇವಕರಾದ ಪ್ರವಾದಿಗಳ ಮೂಲಕ ಕೊಟ್ಟು ಹೀಗೆ ಹೇಳಿದ್ದೆ: ‘ನೀವು ಸ್ವಾಧೀನ ಮಾಡ್ಕೊಳ್ಳೋಕೆ ಹೋಗ್ತಿರೋ ದೇಶ ಅಶುದ್ಧ. ಯಾಕಂದ್ರೆ ಅಲ್ಲಿನ ಜನ ಅಶುದ್ಧರಾಗಿದ್ದಾರೆ, ಅಸಹ್ಯ ಪದ್ಧತಿಗಳನ್ನ ಆಚರಿಸ್ತಾರೆ. ಅವ್ರು ಆ ದೇಶವನ್ನ ಒಂದು ಮೂಲೆಯಿಂದ ಇನ್ನೊಂದು ಮೂಲೆ ತನಕ ತಮ್ಮ ಅಶುದ್ಧತೆಯಿಂದ ತುಂಬಿಸಿಬಿಟ್ಟಿದ್ದಾರೆ.+ 12  ಹಾಗಾಗಿ ನಿಮ್ಮ ಹೆಣ್ಣು ಮಕ್ಕಳನ್ನ ಅವ್ರ ಗಂಡು ಮಕ್ಕಳಿಗೆ ಮದುವೆ ಮಾಡಿಸಬೇಡಿ. ಅವ್ರ ಹೆಣ್ಣು ಮಕ್ಕಳನ್ನ ನಿಮ್ಮ ಗಂಡು ಮಕ್ಕಳಿಗೆ ತರಬೇಡಿ.+ ಅವ್ರ ಶಾಂತಿಗಾಗಿ, ಸುಖಕ್ಕಾಗಿ ನೀವು ಏನೂ ಮಾಡಬಾರದು.+ ಆಗ ನೀವು ಬಲಿಷ್ಠರಾಗ್ತೀರ. ದೇಶದಲ್ಲಿರೋ ಒಳ್ಳೇ ಬೆಳೆ ತಿಂದು ನಿಮ್ಮ ಗಂಡು ಮಕ್ಕಳಿಗೆ ಆ ದೇಶವನ್ನ ಶಾಶ್ವತ ಆಸ್ತಿಯಾಗಿ ಕೊಡೋಕೆ ಆಗುತ್ತೆ.’ 13  ನಾವು ಕೆಟ್ಟ ಕೆಲಸಗಳನ್ನ, ದೊಡ್ಡದೊಡ್ಡ ಪಾಪಗಳನ್ನ ಮಾಡಿದ್ರಿಂದಾನೇ ನಮಗೆ ಇಷ್ಟೆಲ್ಲ ಕೆಟ್ಟದಾಗಿದ್ದು. ಆದ್ರೂ ನೀನು ನಮ್ಮ ತಪ್ಪುಗಳಿಗೆ ಕಡಿಮೆ ಶಿಕ್ಷೆನೇ ಕೊಟ್ಟಿದ್ದೀಯ,+ ನಮ್ಮನ್ನ ಬಿಡಿಸಿದ್ದೀಯ.+ 14  ಹೀಗಿರುವಾಗ ಅಸಹ್ಯವಾದ ಆಚಾರಗಳನ್ನ ಮಾಡೋ ಈ ಜನ್ರ ಜೊತೆ ಮದುವೆ ಸಂಬಂಧ ಬೆಳೆಸಿ ನಿನ್ನ ಆಜ್ಞೆಗಳನ್ನ ಮತ್ತೆ ಮುರಿಬೇಕಾ?+ ಹಾಗೆ ಮಾಡಿದ್ರೆ ನಿನಗೆ ನಮ್ಮ ಮೇಲೆ ಕೋಪ ಬಂದು ನಮ್ಮಲ್ಲಿ ಯಾರೂ ಉಳಿಯದಿರೋ ತರ ಅಥವಾ ನಮ್ಮಲ್ಲಿ ಯಾರಿಗೂ ತಪ್ಪಿಸ್ಕೊಳ್ಳೋಕೆ ಆಗದಿರೋ ತರ ಪೂರ್ತಿ ನಾಶ ಮಾಡಲ್ವಾ? 15  ಇಸ್ರಾಯೇಲ್‌ ದೇವರಾದ ಯೆಹೋವನೇ, ನೀನು ನೀತಿವಂತ.+ ಅದಕ್ಕೇ ನಮ್ಮಲ್ಲಿ ಕೆಲವ್ರು ಇನ್ನೂ ಬದುಕಿದ್ದಾರೆ. ನಾವು ಎಷ್ಟು ಅಪರಾಧ ಮಾಡಿದ್ದೀವಿ ಅಂದ್ರೆ ನಿನ್ನ ಮುಂದೆ ನಿಲ್ಲೋಷ್ಟು ಯೋಗ್ಯತೆ ನಮಗಿಲ್ಲ.+ ಹಾಗಿದ್ರೂ ನಿನ್ನ ಮುಂದೆ ನಿಂತಿದ್ದೀವಿ.”

ಪಾದಟಿಪ್ಪಣಿ

ಅಕ್ಷ. “ಭಯಪಡ್ತಿದ್ದ.”