ಕೀರ್ತನೆ 104:1-35

  • ಅದ್ಭುತ ಸೃಷ್ಟಿಗಾಗಿ ದೇವರಿಗೆ ಧನ್ಯವಾದ

    • ಭೂಮಿ ಶಾಶ್ವತವಾಗಿ ಇರುತ್ತೆ (5)

    • ಮನುಷ್ಯನಿಗೆ ದ್ರಾಕ್ಷಾಮದ್ಯ ಮತ್ತು ರೊಟ್ಟಿ (15)

    • “ನಿನ್ನ ಕೆಲಸಗಳಿಗೆ ಲೆಕ್ಕಾನೇ ಇಲ್ಲ!” (24)

    • ‘ಉಸಿರನ್ನ ತೆಗೆದ್ರೆ ಅವು ಸಾಯ್ತವೆ’ (29)

104  ನನ್ನ ಮನ ಯೆಹೋವನನ್ನ ಕೊಂಡಾಡಲಿ.+ ನನ್ನ ದೇವರಾದ ಯೆಹೋವನೇ ನೀನು ಮಹೋನ್ನತನು.+ ನೀನು ಘನತೆ,* ವೈಭವವನ್ನ ಹಾಕೊಂಡಿದ್ದೀಯ.+   ನೀನು ಬೆಳಕನ್ನ+ ಬಟ್ಟೆ ತರ ಸುತ್ಕೊಂಡಿದ್ದೀಯ,ಆಕಾಶವನ್ನ ಡೇರೆಯ ಬಟ್ಟೆ ತರ ಹರಡಿದ್ದೀಯ.+   ಆತನು ಮೇಲಿನ ನೀರಲ್ಲಿ ತನ್ನ ಮನೆಯ ಮೇಲಿನ ಕೋಣೆಗಳ ತೊಲೆಗಳನ್ನ ಹಾಕ್ತಾನೆ,+ಮೋಡಗಳನ್ನ ತನ್ನ ರಥವಾಗಿ ಮಾಡ್ಕೊಳ್ತಾನೆ,+ಗಾಳಿಯ ರೆಕ್ಕೆಗಳ ಮೇಲೆ ಸವಾರಿ ಮಾಡ್ತಾನೆ.+   ಆತನು ತನ್ನ ದೂತರನ್ನ ಶಕ್ತಿಶಾಲಿಗಳಾಗಿ ಮಾಡ್ತಾನೆ,ತನ್ನ ಸೇವಕರನ್ನ ಸರ್ವನಾಶ ಮಾಡೋ ಬೆಂಕಿ ತರ ಮಾಡ್ತಾನೆ.+   ಆತನು ಭೂಮಿಯನ್ನ ಅದ್ರ ಅಸ್ತಿವಾರದ ಮೇಲೆ ಸ್ಥಿರಮಾಡಿದ್ದಾನೆ,+ಅದು ತನ್ನ ಜಾಗ ಬಿಟ್ಟು ಯಾವತ್ತೂ ಕದಲಲ್ಲ. ಶಾಶ್ವತವಾಗಿ ಇದ್ದಲ್ಲೇ ಇರುತ್ತೆ.+   ಬಟ್ಟೆಯಿಂದ ಮುಚ್ಚೋ ಹಾಗೆ ಆಳವಾದ ನೀರಿಂದ ನೀನು ಭೂಮಿಯನ್ನ ಮುಚ್ಚಿದ್ದೀಯ.+ ನೀರು ಬೆಟ್ಟಗಳ ಮೇಲೆ ನಿಂತಿದೆ.   ನಿನ್ನ ಗದರಿಕೆ ಕೇಳಿ ಅವು ಪರಾರಿ ಆಗ್ತವೆ,+ನಿನ್ನ ಗುಡುಗಿನ ಶಬ್ದಕ್ಕೆ ಹೆದರಿ ಅವು ಓಡಿಹೋಗ್ತವೆ.   ನೀನು ಹೇಳಿದ ಜಾಗಕ್ಕೆ ಅವು ಹೋದ್ವು,ಬೆಟ್ಟಗಳು ಮೇಲೆ ಏರಿದ್ವು,+ ಕಣಿವೆಗಳು ಕೆಳಗೆ ಇಳಿದ್ವು.   ಇನ್ಯಾವತ್ತೂ ನೀರು ಭೂಮಿನ ಮುಚ್ಚದ ಹಾಗೆ,ದಾಟಬಾರದ ಒಂದು ಮೇರೆಯನ್ನ ಅದಕ್ಕೆ ಇಟ್ಟಿದ್ದೀಯ.+ 10  ಆತನು ಕಣಿವೆಗಳಿಗೆ ಬುಗ್ಗೆಗಳನ್ನ ಕಳಿಸ್ತಾನೆ,ಬೆಟ್ಟಗಳ ಮಧ್ಯದಿಂದ ಅವು ಹರಿದು ಬರುತ್ತವೆ. 11  ಎಲ್ಲ ಕಾಡುಪ್ರಾಣಿಗಳಿಗೆ ಅವು ನೀರು ಕೊಡುತ್ತವೆ,ಕಾಡುಕತ್ತೆಗಳು ತಮ್ಮ ದಾಹ ನೀಗಿಸ್ಕೊಳ್ತವೆ. 12  ನೀರಿನ ಪಕ್ಕದಲ್ಲಿರೋ ಮರದಲ್ಲಿ ಪಕ್ಷಿಗಳು ಗೂಡು ಕಟ್ಕೊಳ್ತವೆ,ದೊಡ್ಡ ಮರಗಳ ಕೊಂಬೆಗಳ ಮಧ್ಯ ಅವು ಹಾಡು ಹಾಡ್ತವೆ. 13  ಆತನು ತನ್ನ ಮೇಲಿನ ಕೋಣೆಗಳಿಂದ ಬೆಟ್ಟಗಳಿಗೆ ನೀರು ಹಾಕ್ತಾನೆ.+ ನಿನ್ನ ಶ್ರಮದ ಪ್ರತಿಫಲದಿಂದ ಭೂಮಿಗೆ ತೃಪ್ತಿಯಾಗಿದೆ.+ 14  ಆತನು ಪ್ರಾಣಿಗಳಿಗಾಗಿ ಹುಲ್ಲನ್ನ,ಮನುಷ್ಯರಿಗಾಗಿ ಗಿಡಮರಗಳನ್ನ ಹುಟ್ಟಿಸ್ತಾನೆ.+ ಹೀಗೆ ಆತನು ನೆಲದಿಂದ ಆಹಾರ ಬೆಳೆಯೋ ತರ ಮಾಡ್ತಿದ್ದಾನೆ. 15  ಮನುಷ್ಯರ ಹೃದಯಗಳನ್ನ ಸಂತೋಷಪಡಿಸೋ ದ್ರಾಕ್ಷಾಮದ್ಯ,+ಅವ್ರ ಮುಖಗಳಿಗೆ ಕಾಂತಿ ಕೊಡೋ ಎಣ್ಣೆ,ಮಾಮೂಲಿ ಮನುಷ್ಯನ ಹೃದಯವನ್ನ ಬಲಪಡಿಸೋ ರೊಟ್ಟಿ ಸಿಗೋ ತರ ಮಾಡ್ತಿದ್ದಾನೆ.+ 16  ಯೆಹೋವನ ಮರಗಳಿಗೆ,ಆತನು ನೆಟ್ಟಿರೋ ಲೆಬನೋನಿನ ದೇವದಾರು ಮರಗಳಿಗೆ ಸಮೃದ್ಧವಾಗಿ ನೀರು ಸಿಗ್ತಿದೆ. 17  ಅವುಗಳ ಮೇಲೆ ಪಕ್ಷಿಗಳು ಗೂಡು ಕಟ್ಕೊಳ್ತವೆ. ಜುನಿಪರ್‌ ಮರಗಳಲ್ಲಿ ಕೊಕ್ಕರೆಗಳು+ ಮನೆ ಮಾಡ್ಕೊಂಡಿವೆ. 18  ಎತ್ತರವಾದ ಬೆಟ್ಟಗಳಲ್ಲಿ ಬೆಟ್ಟದ ಮೇಕೆಗಳು ವಾಸಿಸ್ತವೆ,+ಕಡಿದಾದ ಬಂಡೆಗಳಲ್ಲಿ ಬೆಟ್ಟದ ಮೊಲಗಳು ಮನೆ ಮಾಡ್ಕೊಂಡಿವೆ.+ 19  ಹೊತ್ತುಗಳನ್ನ ಸೂಚಿಸೋಕೆ ಆತನು ಚಂದ್ರನನ್ನ ಮಾಡಿದ,ತಾನು ಯಾವಾಗ ಮುಳುಗಬೇಕು ಅಂತ ಸೂರ್ಯನಿಗೆ ಚೆನ್ನಾಗಿ ಗೊತ್ತು.+ 20  ನೀನು ಕತ್ತಲನ್ನ ತಂದಾಗ ರಾತ್ರಿಯಾಗುತ್ತೆ,+ಆಗ ಕಾಡುಪ್ರಾಣಿಗಳೆಲ್ಲ ಆಕಡೆ ಈಕಡೆ ಓಡಾಡ್ತವೆ. 21  ಎಳೇ ಸಿಂಹಗಳು ಬೇಟೆಗಾಗಿ ಗರ್ಜಿಸ್ತವೆ,+ದೇವರು ಕೊಡೋ ಆಹಾರಕ್ಕಾಗಿ ಹುಡುಕ್ತವೆ.+ 22  ಸೂರ್ಯ ಉದಯಿಸಿದಾಗ,ಅವು ತಿರುಗಿ ತಮ್ಮ ಗುಹೆಗಳಿಗೆ ಹೋಗಿ ಮಲಗಿಕೊಳ್ತವೆ. 23  ಮನುಷ್ಯರು ಕೆಲಸಕ್ಕೆ ಹೋಗ್ತಾರೆ,ಸಂಜೆ ತನಕ ಕಷ್ಟಪಟ್ಟು ದುಡಿತಾರೆ. 24  ಯೆಹೋವನೇ, ನಿನ್ನ ಕೆಲಸಗಳಿಗೆ ಲೆಕ್ಕಾನೇ ಇಲ್ಲ!+ ಅವನ್ನೆಲ್ಲ ನೀನು ನಿನ್ನ ವಿವೇಕದಿಂದ ಮಾಡಿದ್ದೀಯ.+ ಭೂಮಿ ನೀನು ಸೃಷ್ಟಿಸಿರೋ ವಿಷ್ಯಗಳಿಂದ ತುಂಬಿಹೋಗಿದೆ. 25  ಸಮುದ್ರ ವಿಶಾಲವಾಗಿದೆ, ದೂರದೂರದ ತನಕ ಹರಡ್ಕೊಂಡಿದೆ,ಲೆಕ್ಕ ಇಲ್ಲದಷ್ಟು ಚಿಕ್ಕದೊಡ್ಡ ಜೀವಿಗಳು ಅದ್ರಲ್ಲಿ ತುಂಬಿಕೊಂಡಿವೆ.+ 26  ಅದ್ರಲ್ಲಿ ಹಡಗುಗಳು ಹೋಗ್ತವೆ,ನೀನು ಮಾಡಿರೋ ಲಿವ್ಯಾತಾನ್‌*+ ಅದ್ರಲ್ಲಿ ಆಟ ಆಡುತ್ತೆ. 27  ನೀನು ಸಮ್ಯಕ್ಕೆ ಸರಿಯಾಗಿ ಊಟ ಕೊಡ್ತೀಯ+ ಅಂತಅವು ನಿನಗಾಗಿ ಕಾಯ್ತವೆ. 28  ನೀನು ಕೊಡೋದನ್ನ ಅವು ತಿಂತವೆ.+ ನೀನು ನಿನ್ನ ಕೈತೆಗೆದು ಕೊಡುವಾಗ ಅವು ಒಳ್ಳೇ ವಸ್ತುಗಳಿಂದ ಸಂತೃಪ್ತಿ ಪಡಿತವೆ.+ 29  ನೀನು ನಿನ್ನ ಮುಖವನ್ನ ಮರೆಮಾಡ್ಕೊಂಡಾಗ ಅವು ಚಡಪಡಿಸ್ತವೆ. ನೀನು ಅವುಗಳ ಉಸಿರನ್ನ ತೆಗೆದ್ರೆ ಅವು ಸಾಯ್ತವೆ, ಮತ್ತೆ ಮಣ್ಣಿಗೆ ಹೋಗಿ ಸೇರಿಕೊಳ್ತವೆ.+ 30  ನೀನು ನಿನ್ನ ಪವಿತ್ರಶಕ್ತಿಯನ್ನ ಕಳಿಸಿದ್ರೆ ಅವು ಸೃಷ್ಟಿಯಾಗ್ತವೆ,+ನೀನು ಭೂಮಿಗೆ ಹೊಸತನ ಕೊಡ್ತೀಯ. 31  ಯೆಹೋವನ ಮಹಿಮೆ ಶಾಶ್ವತವಾಗಿ ಇರುತ್ತೆ,ಯೆಹೋವ ತನ್ನ ಕೆಲಸಗಳನ್ನ ನೋಡಿ ಖುಷಿಪಡ್ತಾನೆ.+ 32  ಆತನು ಭೂಮಿ ಕಡೆ ನೋಡಿದ್ರೆ ಅದು ನಡುಗುತ್ತೆ,ಆತನು ಬೆಟ್ಟಗಳನ್ನ ಮುಟ್ಟಿದ್ರೆ ಅವು ಹೊಗೆಯನ್ನ ಕಕ್ಕುತ್ತೆ.+ 33  ನಾನು ನನ್ನ ಜೀವನಪರ್ಯಂತ ಯೆಹೋವನಿಗೆ ಹಾಡು ಹಾಡ್ತೀನಿ,+ನಾನು ಸಾಯೋ ತನಕ ನನ್ನ ದೇವರಿಗೆ ಕೃತಜ್ಞತೆಯ ಗೀತೆಗಳನ್ನ ಹಾಡ್ತೀನಿ.*+ 34  ನನ್ನ ಆಲೋಚನೆಗಳು ಆತನಿಗೆ ಇಷ್ಟ ಆಗಲಿ,*ನಾನು ಯೆಹೋವನಲ್ಲಿ ಖುಷಿಪಡ್ತೀನಿ. 35  ಪಾಪಿಗಳು ಭೂಮಿಯ ಮೇಲಿಂದ ಅಳಿದು ಹೋಗ್ತಾರೆ,ದುಷ್ಟರು ಇನ್ಮುಂದೆ ಇರಲ್ಲ.+ ನನ್ನ ಮನ ಯೆಹೋವನನ್ನ ಕೊಂಡಾಡಲಿ! ಯಾಹುವನ್ನ ಸ್ತುತಿಸಿ!*

ಪಾದಟಿಪ್ಪಣಿ

ಅಥವಾ “ಗೌರವ.”
ಅಥವಾ “ಸಂಗೀತ ರಚಿಸ್ತೀನಿ.”
ಬಹುಶಃ, “ನನ್ನ ಧ್ಯಾನ ಆತನು ಮೆಚ್ಚೋ ತರ ಇರಲಿ.”
ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.