ಕೀರ್ತನೆ 11:1-7

  • ಯೆಹೋವನನ್ನ ಆಶ್ರಯಿಸೋದು

    • “ಯೆಹೋವ ತನ್ನ ಪವಿತ್ರ ಆಲಯದಲ್ಲಿ ಇದ್ದಾನೆ” (4)

    • ಹಿಂಸೆಯನ್ನ ಪ್ರೀತಿಸೋರನ್ನ ದೇವರು ದ್ವೇಷಿಸ್ತಾನೆ (5)

ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಕೀರ್ತನೆ. 11  ನಾನು ಯೆಹೋವನನ್ನೇ ಆಶ್ರಯಿಸಿದ್ದೀನಿ.+ ಹಾಗಿರುವಾಗ ನೀವು ನನಗೆ ಯಾಕೆ ಹೀಗೆ ಹೇಳ್ತೀರ: “ಹಕ್ಕಿ ತರ ನಿನ್ನ ಬೆಟ್ಟಕ್ಕೆ ಓಡಿಹೋಗು!   ಕತ್ತಲೆಯಲ್ಲಿ ಬಚ್ಚಿಟ್ಕೊಂಡು ಪ್ರಾಮಾಣಿಕ ಹೃದಯದ ಜನ್ರ ಮೇಲೆ ಬಾಣ ಬಿಡೋಕೆ,ಕೆಟ್ಟವರು ಹೇಗೆ ಬಿಲ್ಲನ್ನ ಬಗ್ಗಿಸಿದ್ದಾರೆ ನೋಡು,ಹೇಗೆ ತಮ್ಮ ಬಾಣಗಳನ್ನ ಗುರಿಯಿಟ್ಟಿದ್ದಾರೆ ನೋಡು.   ಅಸ್ತಿವಾರನೇ* ಅಲ್ಲಾಡಿದಾಗ,ನೀತಿವಂತನಿಗೆ ಏನು ಮಾಡೋಕೆ ಆಗುತ್ತೆ?”   ಯೆಹೋವ ತನ್ನ ಪವಿತ್ರ ಆಲಯದಲ್ಲಿ ಇದ್ದಾನೆ.+ ಯೆಹೋವನ ಸಿಂಹಾಸನ ಸ್ವರ್ಗದಲ್ಲಿದೆ.+ ಆತನ ಕಣ್ಣು ಮನುಷ್ಯರನ್ನ ನೋಡುತ್ತೆ. ಗಮನಿಸ್ತಾ* ಅವ್ರನ್ನ ಪರೀಕ್ಷಿಸುತ್ತೆ.+   ಯೆಹೋವ ಒಳ್ಳೆಯವನನ್ನೂ ಕೆಟ್ಟವನನ್ನೂ ಪರೀಕ್ಷಿಸ್ತಾನೆ,+ಹಿಂಸೆಯನ್ನ ಪ್ರೀತಿಸೋ ಜನ್ರನ್ನ ದ್ವೇಷಿಸ್ತಾನೆ.+   ಕೆಟ್ಟವನ ಮೇಲೆ ಪಾಶಗಳ* ಮಳೆಯನ್ನೇ ಸುರಿಸ್ತಾನೆ,ಅವ್ರಿಗೆ ಬೆಂಕಿ, ಗಂಧಕ+ ಮತ್ತು ಬಿಸಿಗಾಳಿಯಿಂದ ಶಿಕ್ಷೆ ಕೊಡ್ತಾನೆ.   ಯೆಹೋವ ನೀತಿವಂತನು.+ ಹಾಗಾಗಿ ಆತನು ಒಳ್ಳೇದನ್ನೇ ಪ್ರೀತಿಸ್ತಾನೆ.+ ಪ್ರಾಮಾಣಿಕ ಹೃದಯದ ಜನ್ರು ಆತನ ಮುಖವನ್ನ ನೋಡ್ತಾರೆ.*+

ಪಾದಟಿಪ್ಪಣಿ

ಅಥವಾ “ನ್ಯಾಯದ ಅಸ್ತಿವಾರನೇ.”
ಅಥವಾ “ಪ್ರಕಾಶಿಸ್ತಾ.”
ಬಹುಶಃ, “ಉರಿಯೋ ಕೆಂಡಗಳ.”
ಅಥವಾ “ಆತನ ಮೆಚ್ಚುಗೆಯನ್ನ ಅನುಭವಿಸ್ತಾರೆ.”