ಕೀರ್ತನೆ 113:1-9
113 ಯಾಹುವನ್ನ ಸ್ತುತಿಸಿ!*
ಯೆಹೋವನ ಸೇವಕರೇ, ಹಾಡಿಹೊಗಳಿ,ಯೆಹೋವನ ಹೆಸ್ರನ್ನ ಕೊಂಡಾಡಿ.
2 ಇವತ್ತಿಂದ ಶಾಶ್ವತವಾಗಿಯೆಹೋವನ ಹೆಸ್ರಿಗೆ ಹೊಗಳಿಕೆ ಸಿಗಲಿ.+
3 ಸೂರ್ಯ ಹುಟ್ಟಿ ಮುಳುಗೋ ತನಕಯೆಹೋವನ ಹೆಸ್ರಿಗೆ ಸ್ತುತಿ ಆಗಲಿ.+
4 ಎಲ್ಲ ಜನಾಂಗಗಳಿಗಿಂತ ಯೆಹೋವ ಉನ್ನತನು,+ಆತನ ಮಹಿಮೆ ಆಕಾಶಕ್ಕಿಂತ ಉನ್ನತ.+
5 ಉನ್ನತ ಸ್ಥಾನದಲ್ಲಿ ಇರೋ*ನಮ್ಮ ದೇವರಾದ ಯೆಹೋವನ ತರ ಯಾರಿದ್ದಾರೆ?+
6 ಆಕಾಶ ಭೂಮಿಯನ್ನ ನೋಡೋಕೆ ಆತನು ಕೆಳಗೆ ಬಗ್ತಾನೆ,+
7 ದೀನನನ್ನ ಧೂಳಿಂದ ಎಬ್ಬಿಸ್ತಾನೆ.
ಬಡವನನ್ನ ಬೂದಿಯಿಂದ* ಮೇಲೆ ಎತ್ತುತ್ತಾನೆ.+
8 ಅವನನ್ನ ಪ್ರಧಾನರ ಜೊತೆ,ತನ್ನ ಜನ್ರ ಪ್ರಮುಖರ ಜೊತೆ ಕೂರಿಸೋಕೆ ಹೀಗೆ ಮಾಡ್ತಾನೆ.
9 ಆತನು ಬಂಜೆಗೆ ತಾಯಿ ಆಗೋ ಸೌಭಾಗ್ಯ ಕೊಟ್ಟು,ಅವಳು ಖುಷಿಯಾಗಿ ಮನೆಯಲ್ಲಿ ಮಕ್ಕಳ ಜೊತೆ ಇರೋ ಹಾಗೆ ಮಾಡ್ತಾನೆ.+
ಯಾಹುವನ್ನ ಸ್ತುತಿಸಿ!*
ಪಾದಟಿಪ್ಪಣಿ
^ ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.
^ ಅಥವಾ “ಸಿಂಹಾಸನದಲ್ಲಿ ಕೂತಿರೋ.”
^ ಬಹುಶಃ, “ತಿಪ್ಪೆಯಿಂದ.”
^ ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.