ಕೀರ್ತನೆ 140:1-13
ಗಾಯಕರ ನಿರ್ದೇಶಕನಿಗೆ ಸೂಚನೆ. ದಾವೀದನ ಮಧುರ ಗೀತೆ.
140 ಯೆಹೋವನೇ, ಕೆಟ್ಟವರಿಂದ ನನ್ನನ್ನ ರಕ್ಷಿಸು,ಹಿಂಸೆ ಕೊಡೋರಿಂದ ನನ್ನನ್ನ ಕಾಪಾಡು.+
2 ಯಾರು ತಮ್ಮ ಹೃದಯದಲ್ಲಿ ಪಿತೂರಿ ನಡಿಸ್ತಾರೋ,+ಯಾರು ಇಡೀ ದಿನ ಜಗಳ ಎಬ್ಬಿಸ್ತಾರೋ ಅವ್ರಿಂದ ನನ್ನನ್ನ ರಕ್ಷಿಸು.
3 ಅವರು ನಾಲಿಗೆಯನ್ನ ಹಾವಿನ ನಾಲಿಗೆ ತರ ಚೂಪು ಮಾಡ್ಕೊಂಡಿದ್ದಾರೆ,+ಅವ್ರ ತುಟಿಯಲ್ಲಿ ಹಾವಿನ ವಿಷ ಇದೆ.+ (ಸೆಲಾ)
4 ಯೆಹೋವನೇ, ಕೆಟ್ಟವರ ಕೈಯಿಂದ ನನ್ನನ್ನ ಕಾಪಾಡು,+ಹಿಂಸೆ ಕೊಡೋರಿಂದ ನನ್ನನ್ನ ರಕ್ಷಿಸು,ಅವರು ನನ್ನನ್ನ ಎಡವಿ ಬೀಳಿಸೋಕೆ ಹೊಂಚು ಹಾಕ್ತಿದ್ದಾರೆ.
5 ಅಹಂಕಾರಿಗಳು ನನಗಾಗಿ ರಹಸ್ಯವಾಗಿ ಬಲೆ ಇಟ್ಟಿದ್ದಾರೆ,ದಾರಿ ಪಕ್ಕ ಹಗ್ಗದಿಂದ ಮಾಡಿದ ಬಲೆ ಬೀಸಿದ್ದಾರೆ.+
ಅವರು ನನಗಾಗಿ ಉರುಲು ಇಟ್ಟಿದ್ದಾರೆ.+ (ಸೆಲಾ)
6 “ಯೆಹೋವ, ನೀನೇ ನನ್ನ ದೇವರು.
ಸಹಾಯಕ್ಕಾಗಿ ನಾನಿಡೋ ಮೊರೆ ಕೇಳಿಸ್ಕೊ”+ ಅಂತ ನಾನು ಯೆಹೋವನಿಗೆ ಹೇಳ್ತೀನಿ.
7 ವಿಶ್ವದ ರಾಜ ಯೆಹೋವ, ನನ್ನ ಬಲಿಷ್ಠ ರಕ್ಷಕನೇ,ಯುದ್ಧದ ದಿನ ನೀನು ನನ್ನನ್ನ* ರಕ್ಷಿಸು.+
8 ಯೆಹೋವನೇ, ಕೆಟ್ಟವರ ಬಯಕೆಗಳನ್ನ ನೆರವೇರಿಸಬೇಡ.
ಅವರ ಯೋಜನೆಗೆ ಯಶಸ್ಸು ಕೊಡಬೇಡ, ಕೊಟ್ರೆ ಅವರು ತಮ್ಮನ್ನೇ ಹೆಚ್ಚಿಸ್ಕೊಳ್ತಾರೆ.+ (ಸೆಲಾ)
9 ನನ್ನನ್ನ ಸುತ್ಕೊಂಡಿರೋ ಜನ್ರು ನನ್ನ ಬಗ್ಗೆ ಏನು ಹೇಳ್ತಾರೋಅದು ಅವ್ರ ತಲೆ ಮೇಲೆನೇ ಬರಲಿ.+
10 ಅವ್ರ ಮೇಲೆ ಕೆಂಡಗಳ ಸುರಿಮಳೆ ಆಗಲಿ.+
ಅವ್ರನ್ನ ಬೆಂಕಿಗೆ ಎಸಿ,ಮತ್ತೆ ಎದ್ದುಬರೋಕೆ ಆಗದ ಹಾಗೆ ಆಳವಾದ ಗುಂಡಿಗೆ* ಬಿಸಾಕು.+
11 ಬೇರೆಯವರ ಬಗ್ಗೆ ಇಲ್ಲಸಲ್ಲದ್ದನ್ನ ಹೇಳೋರಿಗೆ ಭೂಮಿ ಮೇಲೆ* ಜಾಗ ಇಲ್ಲದ ಹಾಗಾಗಲಿ,+ಹಿಂಸೆ ಕೊಡೋರನ್ನ ಕೇಡು ಅಟ್ಟಿಸ್ಕೊಂಡು ಹೋಗಿ ನಾಶಮಾಡಲಿ.
12 ಯೆಹೋವ ದೀನರ ಪರ ವಾದಿಸ್ತಾನೆ ಅಂತ,ಬಡವರಿಗೆ ನ್ಯಾಯ ಸಿಗೋ ತರ ನೋಡ್ಕೊಳ್ತಾನೆ ಅಂತ ನಂಗೊತ್ತು.+
13 ನಿಜವಾಗ್ಲೂ ನೀತಿವಂತರು ನಿನ್ನ ಹೆಸ್ರನ್ನ ಕೊಂಡಾಡ್ತಾರೆ,ಪ್ರಾಮಾಣಿಕರು ನಿನ್ನ ಸನ್ನಿಧಿಯಲ್ಲೇ ಇರ್ತಾರೆ.+