ಕೀರ್ತನೆ 147:1-20
147 ಯಾಹುವನ್ನ ಸ್ತುತಿಸಿ!*
ನಮ್ಮ ದೇವರನ್ನ ಹಾಡಿ ಹೊಗಳೋದು* ಒಳ್ಳೇದು,ಆತನನ್ನ ಸ್ತುತಿಸೋದು ಎಷ್ಟು ಮನೋಹರ! ಎಷ್ಟು ಉತ್ತಮ!+
2 ಯೆಹೋವ ಯೆರೂಸಲೇಮನ್ನ ಕಟ್ತಾನೆ,+ಚೆದರಿಹೋಗಿರೋ ಇಸ್ರಾಯೇಲ್ಯರನ್ನ ಒಟ್ಟುಸೇರಿಸ್ತಾನೆ.+
3 ಹೃದಯ ಒಡೆದು ಹೋಗಿರೋರನ್ನ ವಾಸಿಮಾಡ್ತಾನೆ,ಅವರ ಗಾಯಗಳಿಗೆ ಪಟ್ಟಿ ಕಟ್ತಾನೆ.
4 ಆತನು ನಕ್ಷತ್ರಗಳನ್ನ ಎಣಿಸ್ತಾನೆ,ಅವುಗಳಲ್ಲಿ ಒಂದೊಂದನ್ನೂ ಹೆಸರಿಡಿದು ಕರೀತಾನೆ.+
5 ನಮ್ಮ ಒಡೆಯ ಮಹೋನ್ನತ, ಆತನು ಮಹಾ ಶಕ್ತಿಶಾಲಿ,+ಆತನಿಗಿರೋ ಜ್ಞಾನಕ್ಕೆ ಮಿತಿನೇ ಇಲ್ಲ.+
6 ಯೆಹೋವ ದೀನ ಜನ್ರನ್ನ ಮೇಲೆ ಎತ್ತುತ್ತಾನೆ,+ಆದ್ರೆ ಕೆಟ್ಟವರನ್ನ ನೆಲಕ್ಕೆ ತಳ್ತಾನೆ.
7 ಯೆಹೋವನಿಗೆ ಧನ್ಯವಾದ ಹೇಳಿ,ತಂತಿವಾದ್ಯವನ್ನ ನುಡಿಸ್ತಾ ನಮ್ಮ ದೇವರನ್ನ ಹಾಡಿ ಹೊಗಳಿ.
8 ಆತನು ಆಕಾಶವನ್ನ ಮೋಡಗಳಿಂದ ಮುಚ್ತಾನೆ,ಭೂಮಿಗೆ ಮಳೆ ಕೊಡ್ತಾನೆ,+ಬೆಟ್ಟಗಳ ಮೇಲೆ ಹುಲ್ಲು ಮೊಳಕೆ ಒಡೆಯೋ ಹಾಗೆ ಮಾಡ್ತಾನೆ.+
9 ಆತನು ಪ್ರಾಣಿಗಳಿಗೆ ಊಟ ಕೊಡ್ತಾನೆ,+ಆಹಾರಕ್ಕಾಗಿ ಕೂಗೋ ಕಾಗೆ ಮರಿಗಳಿಗೂ ಊಟ ಕೊಡ್ತಾನೆ.+
10 ಕುದುರೆ ಶಕ್ತಿಯಲ್ಲಿ ಆತನು ಖುಷಿಪಡಲ್ಲ,+ಮನುಷ್ಯರ ಬಲವಾದ ಕಾಲುಗಳು ಆತನ ದೃಷ್ಟಿಯಲ್ಲಿ ಏನೇನೂ ಅಲ್ಲ.+
11 ಯೆಹೋವ ತನಗೆ ಭಯಪಡೋರಲ್ಲಿ,+ತನ್ನ ಶಾಶ್ವತ ಪ್ರೀತಿಗಾಗಿ ಕಾಯೋರನ್ನ ಇಷ್ಟಪಡ್ತಾನೆ.+
12 ಯೆರೂಸಲೇಮೇ, ಯೆಹೋವನನ್ನ ಗೌರವಿಸು,ಚೀಯೋನೇ, ನಿನ್ನ ದೇವರನ್ನ ಹೊಗಳು.
13 ಆತನು ನಿನ್ನ ಪಟ್ಟಣದ ಬಾಗಿಲಿನ ಪಟ್ಟಿಗಳನ್ನ ಭದ್ರ ಮಾಡ್ತಾನೆ,ಆತನು ನಿನ್ನ ಮಕ್ಕಳಿಗೆ ಆಶೀರ್ವಾದ ಮಾಡ್ತಾನೆ.
14 ಆತನು ನಿನ್ನ ಪ್ರದೇಶಕ್ಕೆ ಶಾಂತಿ ತರ್ತಾನೆ,+ಆತನು ನಿನ್ನನ್ನ ಒಳ್ಳೇ* ಗೋದಿಯಿಂದ ತೃಪ್ತಿಪಡಿಸ್ತಾನೆ.+
15 ಆತನು ತನ್ನ ಆಜ್ಞೆಯನ್ನ ಭೂಮಿಗೆ ಕಳಿಸ್ತಾನೆ,ಆತನ ಮಾತು ಸಂದೇಶವಾಹಕನ ತರ ಚುರುಕಾಗಿ ಓಡುತ್ತೆ.
16 ಆತನು ಭೂಮಿಯನ್ನ ಬಿಳಿ ಮಂಜಿನಿಂದ ಹೊದಿಸ್ತಾನೆ,+ಬೂದಿ ಹಾಗೆ ಹಿಮದ ಗಡ್ಡೆಯನ್ನ ಉದುರಿಸ್ತಾನೆ.+
17 ರೊಟ್ಟಿಯ ತುಂಡುಗಳ ಹಾಗೆ ಆತನು ಆಲಿಕಲ್ಲುಗಳನ್ನ ಎಸೀತಾನೆ.+
ಆತನು ಹುಟ್ಟಿಸೋ ಚಳಿನ ಯಾರು ತಡ್ಕೊಳ್ಳೋಕೆ ಆಗುತ್ತೆ?+
18 ಆತನು ಆಜ್ಞೆ ಕೊಟ್ಟಾಗ ಹಿಮ ಕರಗುತ್ತೆ.
ಆತನು ಗಾಳಿ ಬೀಸೋ ತರ ಮಾಡ್ತಾನೆ,+ ನೀರು ಹರಿಯೋ ತರ ಮಾಡ್ತಾನೆ.
19 ಆತನು ತನ್ನ ಮಾತನ್ನ ಯಾಕೋಬನಿಗೆ ಹೇಳ್ತಾನೆ,ತನ್ನ ನಿಯಮಗಳನ್ನ ಮತ್ತು ತೀರ್ಪುಗಳನ್ನ ಇಸ್ರಾಯೇಲಿಗೆ ಕೂಗಿ ಹೇಳ್ತಾನೆ.+
20 ಈ ತರ ಆತನು ಬೇರೆ ಯಾವ ಜನಾಂಗದ ಜೊತೆನೂ ನಡ್ಕೊಂಡಿಲ್ಲ,+ಅವ್ರಲ್ಲಿ ಯಾರಿಗೂ ಆತನ ತೀರ್ಪುಗಳ ಬಗ್ಗೆ ಗೊತ್ತಿಲ್ಲ.
ಯಾಹುವನ್ನ ಸ್ತುತಿಸಿ!*+
ಪಾದಟಿಪ್ಪಣಿ
^ ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.
^ ಅಥವಾ “ಸಂಗೀತ ರಚಿಸೋದು.”
^ ಅಕ್ಷ. “ಕೊಬ್ಬಿದ.”
^ ಅಥವಾ “ಹಲ್ಲೆಲೂಯಾ.” “ಯಾಹು” ಯೆಹೋವ ಹೆಸರಿನ ಸಂಕ್ಷಿಪ್ತ ರೂಪ.