ಕೀರ್ತನೆ 25:1-22

  • ಮಾರ್ಗದರ್ಶನ ಮತ್ತು ಕ್ಷಮೆಗಾಗಿ ಪ್ರಾರ್ಥನೆ

    • “ನಿನ್ನ ದಾರಿಗಳನ್ನ ನನಗೆ ಹೇಳಿಕೊಡು” (4)

    • ‘ಯೆಹೋವನ ಜೊತೆ ಆಪ್ತ ಸ್ನೇಹ’ (14)

    • “ನನ್ನ ಪಾಪಗಳನ್ನೆಲ್ಲ ಕ್ಷಮಿಸು” (18)

ದಾವೀದನ ಕೀರ್ತನೆ. א [ಆಲೆಫ್‌] 25  ಯೆಹೋವನೇ, ನಾನು ನಿನ್ನ ಕಡೆ ತಿರುಗಿಕೊಳ್ತೀನಿ. ב [ಬೆತ್‌]   ನನ್ನ ದೇವರೇ, ನಾನು ನಿನ್ನಲ್ಲಿ ಭರವಸೆ ಇಟ್ಟಿದ್ದೀನಿ,+ನಾನು ಅವಮಾನ ಪಡೋ ಹಾಗೆ ಮಾಡಬೇಡ.+ ನನ್ನ ಕಷ್ಟಗಳನ್ನ ನೋಡಿ ನನ್ನ ಶತ್ರುಗಳು ಖುಷಿಪಡೋಕೆ ಬಿಡಬೇಡ.+ ג [ಗಿಮೆಲ್‌]   ನಿನ್ನಲ್ಲಿ ನಿರೀಕ್ಷೆ ಇಡೋರಿಗೆ ಯಾವತ್ತೂ ಅವಮಾನ ಆಗಲ್ಲ,+ಆದ್ರೆ ಕಾರಣ ಇಲ್ಲದೆ ನಿನಗೆ ಮೋಸ ಮಾಡೋರಿಗೆ ಅವಮಾನ ಕಟ್ಟಿಟ್ಟ ಬುತ್ತಿ.*+ ד [ಡಾಲತ್‌]   ಯೆಹೋವನೇ, ನಿನ್ನ ದಾರಿಗಳನ್ನ ನನಗೆ ಹೇಳಿಕೊಡು,+ನಿನ್ನ ದಾರಿಗಳನ್ನ ನನಗೆ ಕಲಿಸು.+ ה [ಹೆ]   ನಿನ್ನ ಸತ್ಯದ ದಾರಿಯಲ್ಲಿ ನನ್ನನ್ನ ನಡೆಸು, ಅದನ್ನ ನನಗೆ ಕಲಿಸು.+ ಯಾಕಂದ್ರೆ ನೀನೇ ನನ್ನ ರಕ್ಷಣೆಯ ದೇವರು. ו [ವಾವ್‌] ದಿನವಿಡೀ ನಾನು ನಿನ್ನಲ್ಲೇ ನಿರೀಕ್ಷೆ ಇಟ್ಟಿದ್ದೀನಿ. ז [ಜಯಿನ್‌]   ಯೆಹೋವನೇ, ನೀನು ಯಾವಾಗ್ಲೂ* ತೋರಿಸ್ತಾ ಬಂದಿರೋ+ ನಿನ್ನ ಕರುಣೆಯನ್ನ, ನಿನ್ನ ಶಾಶ್ವತ ಪ್ರೀತಿಯನ್ನ ನೆನಪಿಸ್ಕೊ.+ ח [ಹೆತ್‌]   ಯೆಹೋವನೇ, ನೀನು ಒಳ್ಳೆಯವನಾಗಿರೋದ್ರಿಂದ,+ಶಾಶ್ವತ ಪ್ರೀತಿ ತೋರಿಸೋದ್ರಿಂದ ನನ್ನನ್ನ ನೆನಪಿಸ್ಕೊ,+ನಾನು ಮಾಡಿದ ಪಾಪಗಳನ್ನ, ನನ್ನ ಅಪರಾಧಗಳನ್ನ ನೆನಪಿಸ್ಕೊಬೇಡ. ט [ಟೆತ್‌]   ಯೆಹೋವ ಒಳ್ಳೆಯವನು, ನೀತಿವಂತ.+ ಹಾಗಾಗಿ ಆತನು ಪಾಪಿಗಳಿಗೆ ಬದುಕೋ ದಾರಿಯನ್ನ ಹೇಳಿಕೊಡ್ತಾನೆ.+ י [ಯೋದ್‌]   ಯಾವುದು ಸರಿ* ಅಂತ ಆತನು ದೀನರಿಗೆ ತೋರಿಸಿಕೊಡ್ತಾನೆ,+ಆತನು ಅವರಿಗೆ ತನ್ನ ದಾರಿಯನ್ನ ಬೋಧಿಸ್ತಾನೆ.+ כ [ಕಾಫ್‌] 10  ದೇವರು ಹೇಳಿದ್ದನ್ನ+ ಜನರು ಮಾಡೋವಾಗ, ಆತನ ಒಪ್ಪಂದವನ್ನ+ ಪಾಲಿಸೋವಾಗ,ಯೆಹೋವ ತನ್ನ ಶಾಶ್ವತ ಪ್ರೀತಿಯನ್ನ ಅವರಿಗೆ ತೋರಿಸ್ತಾನೆ ಮತ್ತು ನಂಬಿಗಸ್ತನಾಗಿ ಇರ್ತಾನೆ. ל [ಲಾಮೆದ್‌] 11  ಯೆಹೋವನೇ, ನನ್ನ ತಪ್ಪು ಎಷ್ಟೇ ದೊಡ್ಡದಾಗಿದ್ರೂ,ನಿನ್ನ ಹೆಸರಿಗೋಸ್ಕರ ಅದನ್ನ ಕ್ಷಮಿಸಿಬಿಡು.+ מ [ಮೆಮ್‌] 12  ಯಾವ ಮನುಷ್ಯ ಯೆಹೋವನಿಗೆ ಭಯಪಡ್ತಾನೋ,+ಅಂಥವನಿಗೆ ದೇವರು ಯಾವ ದಾರಿಯನ್ನ ಆರಿಸಿಕೊಳ್ಳಬೇಕು ಅಂತ ಕಲಿಸ್ತಾನೆ.+ נ [ನೂನ್‌] 13  ಆ ಮನುಷ್ಯ ಒಳ್ಳೇತನವನ್ನ ಅನುಭವಿಸಿ ನೋಡ್ತಾನೆ,+ಅವನ ವಂಶಸ್ಥರು ಭೂಮಿಯನ್ನ ಆಸ್ತಿಯಾಗಿ ಪಡಕೊಳ್ತಾರೆ.+ ס [ಸಾಮೆಕ್‌] 14  ಯೆಹೋವನಲ್ಲಿ ಭಯಭಕ್ತಿ ಇರೋರಿಗೆ ಮಾತ್ರ ಆತನ ಆಪ್ತ ಸ್ನೇಹ ಸಿಗುತ್ತೆ,+ಅಂಥವರಿಗೆ ಆತನು ತನ್ನ ಒಪ್ಪಂದದ ಬಗ್ಗೆ ಕಲಿಸ್ತಾನೆ.+ ע [ಅಯಿನ್‌] 15  ನನ್ನ ಕಣ್ಣು ಯಾವಾಗಲೂ ಯೆಹೋವನ ಕಡೆಗಿರುತ್ತೆ,+ಯಾಕಂದ್ರೆ ಆತನು ನನ್ನ ಕಾಲನ್ನ ಬಲೆಯಿಂದ ಬಿಡಿಸ್ತಾನೆ.+ פ [ಪೇ] 16  ನಿನ್ನ ಮುಖವನ್ನ ನನ್ನ ಕಡೆಗೆ ತಿರುಗಿಸಿ ಸ್ವಲ್ಪ ಕೃಪೆ ತೋರಿಸು,ಯಾಕಂದ್ರೆ ನಾನು ಏಕಾಂಗಿ ಆಗಿದ್ದೀನಿ, ಯಾವ ಸಹಾಯನೂ ನನಗಿಲ್ಲ. צ [ಸಾದೆ] 17  ನನ್ನ ಮನಸ್ಸಲ್ಲಿ ಚಿಂತೆ ಜಾಸ್ತಿ ಆಗ್ತಾನೇ ಇದೆ,+ನನ್ನ ಸಂಕಟಗಳಿಂದ ನನ್ನನ್ನ ಬಿಡಿಸು. ר [ರೆಶ್‌] 18  ನನ್ನ ಕಷ್ಟ, ನನಗಿರೋ ತೊಂದರೆನ ನೋಡು,+ನನ್ನ ಪಾಪಗಳನ್ನೆಲ್ಲ ಕ್ಷಮಿಸು.+ 19  ನನಗೆ ಎಷ್ಟೊಂದು ಶತ್ರುಗಳಿದ್ದಾರೆ ಅಂತ ನೋಡು,ಅವರು ನನ್ನನ್ನ ಎಷ್ಟು ಕ್ರೂರವಾಗಿ ದ್ವೇಷಿಸ್ತಾರೆ ಅಂತ ನೋಡು. ש [ಶಿನ್‌] 20  ನನ್ನ ಪ್ರಾಣನ ಕಾದುಕಾಪಾಡು.+ ನಾನು ನಿನ್ನಲ್ಲಿ ಆಶ್ರಯ ಪಡ್ಕೊಂಡಿರೋದ್ರಿಂದ ನನಗೆ ಅವಮಾನ ಆಗದ ಹಾಗೆ ನೋಡ್ಕೊ. ת [ಟಾವ್‌] 21  ನನ್ನ ನಿಯತ್ತು, ನನ್ನ ಪ್ರಾಮಾಣಿಕತೆ ನನ್ನನ್ನ ಕಾಪಾಡಲಿ.+ ಯಾಕಂದ್ರೆ ನನ್ನ ನಿರೀಕ್ಷೆ ನಿನ್ನಲ್ಲೇ.+ 22  ದೇವರೇ, ಇಸ್ರಾಯೇಲನನ್ನು ಅವನ ಎಲ್ಲ ಕಷ್ಟಗಳಿಂದ ಕಾಪಾಡು.

ಪಾದಟಿಪ್ಪಣಿ

ಅಕ್ಷ. “ಅವರಿಗಾಗಿ ಅವಮಾನ ಕಾದು ಕೂತಿರುತ್ತೆ.”
ಅಥವಾ “ಪುರಾತನ ಕಾಲದಿಂದಲೂ.”
ಅಕ್ಷ. “ತೀರ್ಪು.”