ಕೀರ್ತನೆ 29:1-11
ದಾವೀದನ ಮಧುರ ಗೀತೆ
29 ಶೂರವೀರರ ಮಕ್ಕಳೇ, ಯೆಹೋವನನ್ನ ಹೊಗಳಿ,ಯೆಹೋವನ ಮಹಿಮೆಗಾಗಿ, ಬಲಕ್ಕಾಗಿ ಆತನಿಗೆ ಸಲ್ಲಿಸಬೇಕಾಗಿ ಇರೋದನ್ನ ಸಲ್ಲಿಸಿ.+
2 ಯೆಹೋವನ ಹೆಸ್ರಿಗೆ ಕೊಡಬೇಕಾದ ಗೌರವವನ್ನ ಕೊಡಿ.
ಪವಿತ್ರ ಬಟ್ಟೆಗಳನ್ನ ಹಾಕೊಂಡು* ಯೆಹೋವನಿಗೆ ಬಗ್ಗಿ ನಮಸ್ಕರಿಸಿ.*
3 ಮೋಡಗಳ ಮೇಲಿಂದ ಯೆಹೋವನ ಧ್ವನಿ ಕೇಳಿಸ್ತಿದೆ,ಮಹಿಮಾಭರಿತ ದೇವರು ಗುಡುಗ್ತಿದ್ದಾನೆ.+
ಯೆಹೋವ ದಟ್ಟವಾದ ಮೋಡಗಳ ಮೇಲಿದ್ದಾನೆ.+
4 ಯೆಹೋವನ ಧ್ವನಿಯಲ್ಲಿ ಗತ್ತಿದೆ,+ಯೆಹೋವನ ಸ್ವರ ಅದ್ಭುತವಾಗಿದೆ.
5 ಯೆಹೋವನ ಧ್ವನಿ ದೇವದಾರು ಮರಗಳನ್ನ ಸೀಳಿಹಾಕುತ್ತೆ,ಯೆಹೋವ ಲೆಬನೋನಿನ ದೇವದಾರುಗಳನ್ನ ತುಂಡುತುಂಡು ಮಾಡ್ತಾನೆ.+
6 ಆತನು ಲೆಬನೋನನ್ನ* ಜಿಗಿಯೋ ಕರುವಿನ ತರಸಿರ್ಯೋನನ್ನ+ ಜಿಗಿಯೋ ಎಳೇ ಕಾಡುಹೋರಿ ತರ ಮಾಡ್ತಾನೆ.
7 ಯೆಹೋವನ ಧ್ವನಿಯ ಜೊತೆ ಅಗ್ನಿ ಜ್ವಾಲೆ ಬರುತ್ತೆ.+
8 ಯೆಹೋವನ ಧ್ವನಿ ಕಾಡನ್ನ ಕಂಪಿಸುತ್ತೆ,+ಯೆಹೋವ ಕಾದೇಶ್+ ಕಾಡನ್ನ ನಡುಗಿಸ್ತಾನೆ.
9 ಯೆಹೋವನ ಧ್ವನಿಗೆ ಜಿಂಕೆ ನಡುಗಿ ಮರಿ ಹಾಕುತ್ತೆ,ಕಾಡಿಗೆ ಕಾಡೇ ಬರಿದಾಗಿ ಹೋಗುತ್ತೆ.+
ಆತನ ಆಲಯದಲ್ಲಿ ಎಲ್ರೂ “ದೇವರಿಗೆ ಮಹಿಮೆ!” ಅಂತ ಹೇಳ್ತಾರೆ.
10 ಯೆಹೋವ ನೀರಿನ ಪ್ರವಾಹದ* ಮೇಲೆ ಕೂತಿದ್ದಾನೆ,+ಯೆಹೋವ ಶಾಶ್ವತಕ್ಕೂ ರಾಜನಾಗಿ ಸಿಂಹಾಸನದಲ್ಲಿ ಕೂತಿದ್ದಾನೆ.+
11 ಯೆಹೋವ ತನ್ನ ಜನ್ರಿಗೆ ಬಲ ಕೊಡ್ತಾನೆ.+
ಯೆಹೋವ ತನ್ನ ಜನ್ರಿಗೆ ಶಾಂತಿ-ಸಮಾಧಾನ ಕೊಟ್ಟು ಆಶೀರ್ವದಿಸ್ತಾನೆ.+
ಪಾದಟಿಪ್ಪಣಿ
^ ಬಹುಶಃ, “ಆತನ ಪವಿತ್ರ ವೈಭವಕ್ಕಾಗಿ.”
^ ಅಥವಾ “ಆರಾಧಿಸಿ.”
^ ಇದು ಲೆಬನೋನಿನ ಬೆಟ್ಟಗಳು ಆಗಿರಬೇಕು.
^ ಅಥವಾ “ಆಕಾಶದ ಮಹಾಸಮುದ್ರದ.”