ಕೀರ್ತನೆ 44:1-26
ಗಾಯಕರ ನಿರ್ದೇಶಕನಿಗೆ ಸೂಚನೆ, ಕೋರಹನ+ ಮಕ್ಕಳ ರಚನೆ. ಮಸ್ಕಿಲ್.*
44 ದೇವರೇ, ನಮ್ಮ ಕಿವಿಯಾರೆ ನಾವು ನಿನ್ನ ಬಗ್ಗೆ ಕೇಳಿಸ್ಕೊಂಡಿದ್ದೀವಿ,ನೀನು ಮಾಡಿದ ಕೆಲಸಗಳ ಬಗ್ಗೆ ನಮ್ಮ ಪೂರ್ವಜರಿಂದ ಕೇಳಿಸ್ಕೊಂಡಿದ್ದೀವಿ,+ಆ ಕೆಲಸಗಳನ್ನ ನೀನು ಅವರ ಕಾಲದಲ್ಲೇ ಮಾಡಿದ್ದೆ,ಹೌದು ತುಂಬ ಹಿಂದೆನೇ ಮಾಡಿದ್ದೆ.
2 ನಿನ್ನ ಕೈಯಾರೆ ನೀನು ಜನಾಂಗಗಳನ್ನ ಓಡಿಸಿಬಿಟ್ಟೆ,+ಅವರ ದೇಶದಲ್ಲಿ ನಮ್ಮ ಪೂರ್ವಜರನ್ನ ಇರೋ ಹಾಗೆ ಮಾಡಿದೆ.+
ನೀನು ಬೇರೆ ಜನಾಂಗಗಳನ್ನ ಜಜ್ಜಿ, ಅವ್ರನ್ನ ಚದರಿಸಿಬಿಟ್ಟೆ.+
3 ನಮ್ಮ ಪೂರ್ವಜರು ಆ ದೇಶದ ಸೊತ್ತನ್ನ ವಶಮಾಡ್ಕೊಂಡಿದ್ದು ಅವ್ರ ಕತ್ತಿಯಿಂದಲ್ಲ,+ಅವರು ಗೆದ್ದಿದ್ದು ಅವ್ರ ತೋಳಿನ ಬಲದಿಂದಲ್ಲ.+
ಅವರು ಗೆದ್ದಿದ್ದು ನಿನ್ನ ಬಲಗೈಯಿಂದ, ನಿನ್ನ ಶಕ್ತಿಯಿಂದ,+ನಿನ್ನ ಮುಖದ ಕಾಂತಿಯಿಂದ.
ನಿನಗೆ ಅವ್ರ ಮೇಲೆ ಪ್ರೀತಿ ಇರೋದ್ರಿಂದ ಹೀಗಾಯ್ತು.+
4 ದೇವರೇ ನೀನೇ ನನ್ನ ರಾಜ,+ಯಾಕೋಬನಿಗೆ ಮಹಾ ಜಯ ಸಿಗಲಿ ಅಂತ ಆಜ್ಞೆ ಕೊಡು.
5 ನಾವು ನಮ್ಮ ಶತ್ರುಗಳನ್ನ ನಿನ್ನ ಶಕ್ತಿಯಿಂದ ಓಡಿಸಿಬಿಡ್ತೀವಿ,+ನಮ್ಮ ವಿರುದ್ಧ ಏಳೋರನ್ನ ನಿನ್ನ ಹೆಸ್ರಿಂದ ತುಳಿದುಹಾಕ್ತೀವಿ.+
6 ಯಾಕಂದ್ರೆ ನಾನು ನನ್ನ ಬಿಲ್ಲಿನ ಮೇಲೆ ಭರವಸೆ ಇಡಲ್ಲ,ನನ್ನ ಕತ್ತಿಗೆ ನನ್ನನ್ನ ಕಾಪಾಡೋಕೆ ಆಗಲ್ಲ.+
7 ನಮ್ಮನ್ನ ನಮ್ಮ ಶತ್ರುಗಳಿಂದ ರಕ್ಷಿಸಿದವನು ನೀನೇ,+ನಮ್ಮನ್ನ ದ್ವೇಷಿಸೋರ ಸೊಕ್ಕು ಮುರಿದವನು ನೀನೇ.
8 ಇಡೀ ದಿನ ನಾವು ದೇವರನ್ನ ಹಾಡಿ ಹೊಗಳ್ತೀವಿ,ಸದಾಕಾಲಕ್ಕೂ ನಿನ್ನ ಹೆಸ್ರನ್ನ ಸ್ತುತಿಸ್ತೀವಿ. (ಸೆಲಾ)
9 ಆದ್ರೆ ಈಗ ನೀನು ನಮ್ಮನ್ನ ಬಿಟ್ಟುಬಿಟ್ಟಿದ್ದೀಯ, ನಮಗೆ ಅವಮಾನ ಆಗೋ ತರ ಮಾಡಿದ್ದೀಯ,ನಮ್ಮ ಸೈನ್ಯದ ಜೊತೆ ನೀನು ಬರ್ತಾ ಇಲ್ಲ.
10 ಶತ್ರುಗೆ ಹೆದರಿ ನಾವು ಓಡಿಹೋಗೋ ತರ ಆಗಿದೆ,+ನಮ್ಮನ್ನ ದ್ವೇಷಿಸೋರು ಅವ್ರಿಗೆ ಏನು ಬೇಕೋ ಅದೆಲ್ಲ ನಮ್ಮಿಂದ ತಗೊಂಡು ಹೋಗ್ತಿದ್ದಾರೆ.
11 ನೀನು ನಮ್ಮನ್ನ ಶತ್ರುಗಳ ಕೈಗೆ ಒಪ್ಪಿಸಿದ್ದೀಯ,ಕುರಿಗಳನ್ನ ನುಂಗೋ ತರ ಅವರು ನಮ್ಮನ್ನ ನುಂಗಿಬಿಡ್ತಾರೆ,ನೀನು ನಮ್ಮನ್ನ ಜನ್ರ ಮಧ್ಯ ಚದುರಿಸಿದ್ದೀಯ.+
12 ನೀನು ನಿನ್ನ ಜನ್ರನ್ನ ಕಮ್ಮಿ ಬೆಲೆಗೆ ಮಾರಿಬಿಡ್ತೀಯ,+ಅವ್ರನ್ನ ಮಾರಿ* ನೀನು ಯಾವ ಲಾಭನೂ ಮಾಡ್ಕೊಳ್ಳಲ್ಲ.
13 ನಮ್ಮ ನೆರೆಯವರ ಮಧ್ಯೆ ನೀನು ನಮ್ಮ ಹೆಸ್ರು ಹಾಳು ಮಾಡಿದ್ದೀಯ,ನಮ್ಮ ಸುತ್ತ ಇರೋರು ನಮ್ಮನ್ನ ಅಣಕಿಸಿ ಗೇಲಿಮಾಡೋಕೆ ಬಿಟ್ಟಿದ್ದೀಯ.
14 ಜನ್ರು ನಮ್ಮ ಬಗ್ಗೆ ವ್ಯಂಗ್ಯವಾಗಿ ಗಾದೆ ಬರಿಯೋ ತರ ಮಾಡಿದ್ದೀಯ,+ಅವರು ನಮ್ಮನ್ನ ನೋಡಿ ತಲೆ ಆಡಿಸ್ತಾರೆ.
15 ಇಡೀ ದಿನ ನನಗೆ ಅವಮಾನ ಅನ್ಸುತ್ತೆ,ಇದ್ರಿಂದ ನನ್ನ ಮುಖನ ಯಾರಿಗೂ ತೋರಿಸಕ್ಕಾಗ್ತಿಲ್ಲ.
16 ಯಾಕಂದ್ರೆ ಶತ್ರುಗಳು ನನಗೆ ಸೇಡು ತೀರಿಸ್ತಿದ್ದಾರೆ,ನನ್ನನ್ನ ಕೆಣಕಿ, ನನಗೆ ಮುಖಭಂಗ ಮಾಡ್ತಿದ್ದಾರೆ.
17 ಇಷ್ಟೆಲ್ಲ ಆದ್ರೂ ನಾವು ನಿನ್ನನ್ನ ಮರೀಲಿಲ್ಲ,ನಿನ್ನ ಒಪ್ಪಂದವನ್ನ ಮುರೀಲಿಲ್ಲ.+
18 ನಮ್ಮ ಹೃದಯ ದಾರಿ ತಪ್ಪಲಿಲ್ಲ.
ನಮ್ಮ ಹೆಜ್ಜೆಗಳು ನಿನ್ನ ದಾರಿಯನ್ನ ಬಿಟ್ಟು ಅಡ್ಡದಾರಿ ಹಿಡೀಲಿಲ್ಲ.
19 ಆದ್ರೆ ನೀನು ನಮ್ಮನ್ನ ಗುಳ್ಳೆನರಿ ವಾಸಿಸೋ ಜಾಗದಲ್ಲಿ ಜಜ್ಜಿಬಿಟ್ಟೆ,ಕತ್ತಲಲ್ಲಿ ನಮ್ಮನ್ನ ಮುಚ್ಚಿಬಿಟ್ಟೆ.
20 ನಾವು ನಮ್ಮ ದೇವರ ಹೆಸ್ರನ್ನ ಮರೆತ್ರೆ,ನಾವು ಬೇರೆ ದೇವರಿಗೆ ಪ್ರಾರ್ಥಿಸೋಕೆ ನಮ್ಮ ಕೈ ಚಾಚಿದ್ರೆ,
21 ಅದನ್ನ ದೇವರು ಕಂಡುಹಿಡಿಯಲ್ವಾ?
ಆತನಿಗೆ ಹೃದಯದ ಎಲ್ಲ ರಹಸ್ಯಗಳೂ ಗೊತ್ತು!+
22 ನಾವು ನಿನ್ನವರಾಗಿ ಇರೋದ್ರಿಂದ ಜನ ನಮ್ಮನ್ನ ಇಡೀ ದಿನ ಸಾವಿಗೆ ನೂಕ್ತಿದ್ದಾರೆ,ಬಲಿ ಕೊಡೋ ಕುರಿಗಳ ತರ ನಮ್ಮನ್ನ ನೋಡ್ತಾರೆ.+
23 ಯೆಹೋವನೇ ಎದ್ದೇಳು, ಯಾಕೆ ಮಲಗಿದ್ದೀಯ?+
ದಯವಿಟ್ಟು ಸದಾಕಾಲಕ್ಕೂ ನಮ್ಮನ್ನ ತಳ್ಳಿಹಾಕ್ತಾನೇ ಇರಬೇಡ.+
24 ನೀನು ನಿನ್ನ ಮುಖ ತೋರಿಸದೆ ಯಾಕೆ ಮರೆಯಾಗಿದ್ದೀಯಾ?
ಯಾಕೆ ನೀನು ನಮ್ಮ ಕಷ್ಟಗಳನ್ನ, ನಮಗೆ ಆಗ್ತಾ ಇರೋ ಹಿಂಸೆಗಳನ್ನ ಮರೆತಿದ್ದೀಯ?
25 ನಮ್ಮನ್ನ ನೆಲಕ್ಕೆ ಹಾಕಿ ತುಳಿದಿದ್ದಾರೆ,ಹೌದು, ನಾವು ಪೂರ್ತಿ ನೆಲದ ಮೇಲೆ ಬಿದ್ದುಹೋಗಿದ್ದೀವಿ.+
26 ನಮ್ಮ ಸಹಾಯಕನಾಗಿ ಬಾ!+
ನಿನ್ನ ಶಾಶ್ವತ ಪ್ರೀತಿಯ+ ಕಾರಣ ನಮ್ಮನ್ನ ಕಾಪಾಡು.*