ಕೀರ್ತನೆ 50:1-23
ಆಸಾಫನ+ ಮಧುರ ಗೀತೆ.
50 ಎಲ್ಲ ದೇವರುಗಳಿಗಿಂತ ಮಹಾ ದೇವರಾದ* ಯೆಹೋವ*+ ಹೇಳಿದ್ದಾನೆ,ಆತನು ಪೂರ್ವದಿಂದ ಪಶ್ಚಿಮದ ತನಕ ಇರೋಜನ್ರನ್ನೆಲ್ಲ ಒಟ್ಟುಸೇರಿಸ್ತಾನೆ.
2 ಸರಿಸಾಟಿಯಿಲ್ಲದ* ಸೌಂದರ್ಯ ಇರೋ ಚೀಯೋನಿಂದ+ ದೇವರು ಪ್ರಕಾಶಿಸ್ತಾನೆ.
3 ನಮ್ಮ ದೇವರು ಖಂಡಿತ ಬರ್ತಾನೆ, ಆತನು ಸುಮ್ಮನೆ ಇರಲ್ಲ.+
ಆತನ ಮುಂದೆ ಸುಡೋ ಬೆಂಕಿಯಿದೆ,+ಆತನ ಸುತ್ತ ಭಯಂಕರ ಬಿರುಗಾಳಿ ಬೀಸ್ತಿದೆ.+
4 ತನ್ನ ಜನ್ರನ್ನ ತೀರ್ಪು ಮಾಡೋವಾಗ+ಅದಕ್ಕೆ ಸಾಕ್ಷಿಯಾಗಿ ಆಕಾಶ ಮತ್ತು ಭೂಮಿಯನ್ನ ಬರೋಕೆ ಹೇಳ್ತಾನೆ.+
5 “ನಿಷ್ಠಾವಂತರನ್ನ ಅಂದ್ರೆ ಬಲಿ ಕೊಟ್ಟು ನನ್ನ ಜೊತೆ ಒಪ್ಪಂದಮಾಡ್ಕೊಳ್ಳೋ+ ಜನ್ರನ್ನ ನನ್ನ ಹತ್ರ ಕರ್ಕೊಂಡು ಬನ್ನಿ.”
6 ಆಕಾಶ ದೇವರ ನೀತಿಯನ್ನ ಜೋರಾಗಿ ಹೇಳುತ್ತೆ,ಯಾಕಂದ್ರೆ ದೇವರೇ ನ್ಯಾಯಾಧೀಶ ಆಗಿದ್ದಾನೆ.+ (ಸೆಲಾ)
7 “ನನ್ನ ಜನ್ರೇ, ನಾನು ಹೇಳ್ತೀನಿ ಕೇಳಿ,ಇಸ್ರಾಯೇಲೇ, ನಾನು ನಿನ್ನ ವಿರುದ್ಧ ಸಾಕ್ಷಿ ಹೇಳ್ತೀನಿ.+
ನಾನು ದೇವರು, ನಿನ್ನ ದೇವರು.+
8 ನೀನು ಕೊಟ್ಟ ಬಲಿಯಿಂದಾಗಲಿನೀನು ನನ್ನ ಮುಂದೆ ತಪ್ಪದೇ ಅರ್ಪಿಸೋ ಸರ್ವಾಂಗಹೋಮ ಬಲಿಗಳಿಂದಾಗಲಿ ನಾನು ನಿನ್ನನ್ನ ಖಂಡಿಸಲ್ಲ.+
9 ನನಗೆ ನಿನ್ನ ಮನೆಯಿಂದ ಹೋರಿಯಾಗಲಿ,ನಿನ್ನ ದೊಡ್ಡಿಗಳಿಂದ ಆಡುಗಳಾಗಲಿ* ಬೇಕಾಗಿಲ್ಲ.+
10 ಯಾಕಂದ್ರೆ ಕಾಡಲ್ಲಿರೋ ಎಲ್ಲ ಪ್ರಾಣಿಗಳು ನಂದೇ,+ಸಾವಿರಾರು ಬೆಟ್ಟಗಳ ಮೇಲಿರೋ ಮೃಗಗಳೂ ನಂದೇ.
11 ಬೆಟ್ಟದಲ್ಲಿರೋ ಎಲ್ಲ ಪಕ್ಷಿಗಳ ಬಗ್ಗೆ ನಂಗೊತ್ತು,+ಬೈಲಲ್ಲಿರೋ ಅಷ್ಟೂ ಪ್ರಾಣಿಗಳೂ ನಂದೇ.
12 ನನಗೆ ಹಸಿವಾದ್ರೆ, ನಾನು ನಿನಗೆ ಹೇಳಲ್ಲ,ಯಾಕಂದ್ರೆ ಭೂಮಿ* ಮತ್ತು ಅದ್ರಲ್ಲಿರೋ ಎಲ್ಲ ನಂದೇ.+
13 ನಾನು ಹೋರಿಗಳ ಮಾಂಸವನ್ನ ತಿಂತೀನಾ?
ಆಡುಗಳ ರಕ್ತನ ಕುಡಿತೀನಾ?+
14 ದೇವರಿಗೆ ಧನ್ಯವಾದ ಹೊಗಳಿಕೆಯನ್ನ ನಿನ್ನ ಬಲಿಯಾಗಿ ಕೊಡು,+ಸರ್ವೋನ್ನತನಿಗೆ ನಿನ್ನ ಹರಕೆಯನ್ನ ತೀರಿಸು.+
15 ಕಷ್ಟಕಾಲದಲ್ಲಿ ನನ್ನನ್ನ ಕೂಗು.+
ನಾನು ನಿನ್ನನ್ನ ಕಾಪಾಡ್ತೀನಿ, ನೀನು ನನಗೆ ಗೌರವ ಕೊಡ್ತೀಯ.”+
16 ಆದ್ರೆ ದೇವರು ಕೆಟ್ಟವನಿಗೆ ಹೀಗೆ ಹೇಳ್ತಾನೆ“ನನ್ನ ನಿಯಮಗಳ ಬಗ್ಗೆ ಹೇಳೋಕೆಅಥವಾ ನನ್ನ ಒಪ್ಪಂದದ+ ಬಗ್ಗೆ ಮಾತಾಡೋಕೆ ನಿನಗೇನು ಹಕ್ಕಿದೆ?+
17 ಯಾಕಂದ್ರೆ ನೀನು ಶಿಸ್ತನ್ನ* ದ್ವೇಷಿಸ್ತೀಯ,ನನ್ನ ಮಾತುಗಳನ್ನ ಗಾಳಿಗೆ ತೂರುತ್ತಾನೇ ಇದ್ದೀಯ.+
18 ಒಬ್ಬ ಕಳ್ಳನನ್ನ ನೋಡಿದ್ರೆ ಅವನನ್ನ ಮೆಚ್ಚುತ್ತೀಯ,*+ವ್ಯಭಿಚಾರಿಗಳ ಜೊತೆ ಸ್ನೇಹ ಬೆಳೆಸ್ತೀಯ.
19 ಕೆಟ್ಟದ್ದನ್ನ ಹಬ್ಬಿಸೋಕೆ ನಿನ್ನ ಬಾಯನ್ನ ಬಳಸ್ತೀಯ,ವಂಚನೆ ನಿನ್ನ ನಾಲಿಗೆಗೆ ಅಂಟ್ಕೊಂಡಿದೆ.+
20 ನೀನು ಕೂತು ನಿನ್ನ ಸ್ವಂತ ಸಹೋದರನ ವಿರುದ್ಧ ಮಾತಾಡ್ತೀಯ,+ನಿನ್ನ ಒಡಹುಟ್ಟಿದವನ ತಪ್ಪುಗಳನ್ನ ಬಯಲು ಮಾಡ್ತೀಯ.*
21 ನೀನು ಇದನ್ನೆಲ್ಲಾ ಮಾಡ್ತಿದ್ದಾಗ ನಾನು ಸುಮ್ನೆ ಇದ್ದೆ,ಹಾಗಾಗಿ ನಾನೂ ನಿನ್ನ ತರಾನೇ ಅಂತ ನೀನು ಅಂದ್ಕೊಂಡೆ.
ಆದ್ರೆ ಈಗ ನಾನು ನಿನ್ನನ್ನ ಖಂಡಿಸ್ತೀನಿ,ನಿನ್ನ ವಿರುದ್ಧ ಮೊಕದ್ದಮೆ ಹಾಕ್ತೀನಿ.+
22 ದೇವರನ್ನ ಮರೆತಿರೋರೇ, ದಯವಿಟ್ಟು ಈ ವಿಷ್ಯವನ್ನ ಗಮನದಲ್ಲಿ ಇಟ್ಕೊಳ್ಳಿ,+ಇಲ್ಲ ಅಂದ್ರೆ ನಾನು ನಿಮ್ಮನ್ನ ತುಂಡುತುಂಡು ಮಾಡಿಬಿಡ್ತೀನಿ, ಆಗ ನಿಮ್ಮನ್ನ ಕಾಪಾಡೋಕೆ ಯಾರೂ ಇರಲ್ಲ.
23 ಧನ್ಯವಾದ ಹೊಗಳಿಕೆಯನ್ನ ತನ್ನ ಬಲಿಯಾಗಿ ಕೊಡೋನು ನನ್ನನ್ನ ಗೌರವಿಸ್ತಾನೆ,+ದೃಢ ತೀರ್ಮಾನದಿಂದ ಸರಿಯಾದ ದಾರಿಯಲ್ಲಿ ನಡಿಯೋನು,ದೇವರಿಂದ ಬರೋ ರಕ್ಷಣೆಯನ್ನ ನೋಡೋ ತರ ನಾನು ಮಾಡ್ತೀನಿ.+
ಪಾದಟಿಪ್ಪಣಿ
^ ಅಕ್ಷ. “ದೇವರುಗಳ ದೇವರಾಗಿರೋ.”
^ ಅಥವಾ “ಬಲಿಷ್ಠನಾಗಿರೋ, ದೇವರು, ಯೆಹೋವ.”
^ ಅಥವಾ “ಪರಿಪೂರ್ಣ.”
^ ಅಕ್ಷ. “ಗಂಡು ಆಡುಗಳಾಗಲಿ.”
^ ಅಕ್ಷ. “ಫಲವತ್ತಾದ ನೆಲ.”
^ ಅಥವಾ “ನಿರ್ದೇಶನವನ್ನ.”
^ ಬಹುಶಃ, “ಅವನ ಜೊತೆ ಸೇರಿಕೊಳ್ತೀಯ.”
^ ಅಥವಾ “ಹೆಸರು ಕೆಡಿಸ್ತೀಯ.”