ಕೀರ್ತನೆ 52:1-9
ಗಾಯಕರ ನಿರ್ದೇಶಕನಿಗೆ ಸೂಚನೆ, ಮಸ್ಕಿಲ್.* ದಾವೀದ ಅಹೀಮೆಲೆಕನ+ ಮನೆಗೆ ಬಂದಿದ್ದಾನಂತ ಎದೋಮ್ಯನಾದ ದೋಯೇಗ ಸೌಲನಿಗೆ ಹೇಳಿದ. ಆಗ ದಾವೀದ ಈ ಕೀರ್ತನೆ ರಚಿಸಿದ.
52 ದುಷ್ಟನೇ, ನೀನು ನಿನ್ನ ಕೆಟ್ಟ ಕೆಲಸಗಳ ಬಗ್ಗೆ ಯಾಕೆ ಕೊಚ್ಕೊಳ್ತೀಯ?+
ದೇವರ ಶಾಶ್ವತ ಪ್ರೀತಿ ಇಡೀ ದಿನ ಇರುತ್ತೆ ಅಂತ ನಿಂಗೆ ಗೊತ್ತಿಲ್ವಾ?+
2 ನಿನ್ನ ನಾಲಿಗೆ ಕ್ಷೌರ ಕತ್ತಿ ತರ ಚೂಪಾಗಿ ಇದೆ,+ಅದು ಕೇಡು ಮಾಡೋಕೆ ಸಂಚು ಮಾಡುತ್ತೆ, ಮೋಸದ ಮಾತುಗಳನ್ನ ಆಡುತ್ತೆ.+
3 ನೀನು ಒಳ್ಳೇದಕ್ಕಿಂತ ಕೆಟ್ಟದ್ದನ್ನೇ ಜಾಸ್ತಿ ಪ್ರೀತಿಸ್ತೀಯ,ಸತ್ಯಕ್ಕಿಂತ ಸುಳ್ಳನ್ನೇ ಜಾಸ್ತಿ ಹೇಳ್ತೀಯ. (ಸೆಲಾ)
4 ಮೋಸದ ನಾಲಿಗೆಯೇ!
ಹಾನಿ ಮಾಡೋ ಮಾತೇ ನಿನಗೆ ತುಂಬ ಇಷ್ಟ.
5 ಹಾಗಾಗಿ ದೇವರು ನಿನ್ನನ್ನ ಯಾವತ್ತೂ ಮೇಲೆ ಏಳದ ಹಾಗೆ ಕೆಳಗೆ ಬೀಳಿಸ್ತಾನೆ,+ಆತನು ನಿನ್ನನ್ನ ಸರಕ್ಕಂತ ಎಳೆದು ನಿನ್ನ ಡೇರೆಯಿಂದ ನಿನ್ನನ್ನ ಕಿತ್ತು ಎಸೀತಾನೆ,+ಈ ಲೋಕದಿಂದ* ಆತನು ನಿನ್ನನ್ನ ಬೇರು ಸಮೇತ ಕಿತ್ತುಹಾಕ್ತಾನೆ.+ (ಸೆಲಾ)
6 ನೀತಿವಂತರು ಇದನ್ನ ನೋಡಿ ಆಶ್ಚರ್ಯಪಡ್ತಾರೆ,+ಅವರು ಅವನನ್ನ ನೋಡಿ ನಗ್ತಾರೆ.+
7 “ಈ ಮನುಷ್ಯನನ್ನ ನೋಡಿ, ಇವನು ದೇವ್ರನ್ನ ತನ್ನ ಆಶ್ರಯವಾಗಿ* ಮಾಡ್ಕೊಳ್ಳಿಲ್ಲ,+ತನ್ನ ಸಿರಿಸಂಪತ್ತನ್ನೇ ನಂಬ್ಕೊಂಡಿದ್ದ,+ಕೆಟ್ಟ ಯೋಜನೆಗಳನ್ನೇ* ಆಸರೆಯಾಗಿ ಮಾಡ್ಕೊಂಡಿದ್ದ.”
8 ಆದ್ರೆ ನಾನು ದೇವರ ಆಲಯದಲ್ಲಿ ಚೆನ್ನಾಗಿ ಬೆಳೆದಿರೋ ಆಲಿವ್ ಮರದ ತರ ಇರ್ತಿನಿ,ನಾನು ದೇವರ ಶಾಶ್ವತ ಪ್ರೀತಿಯಲ್ಲಿ ಭರವಸೆ ಇಟ್ಟಿದ್ದೀನಿ,+ ಯಾವಾಗ್ಲೂ ಹಾಗೇ ಇಟ್ಟಿರ್ತಿನಿ.
9 ನೀನು ಹೆಜ್ಜೆ ತಗೊಂಡಿದ್ರಿಂದ ನಾನು ನಿನ್ನನ್ನ ಶಾಶ್ವತವಾಗಿ ಹೊಗಳ್ತೀನಿ,+ನಿನ್ನ ನಿಷ್ಠಾವಂತ ಜನ್ರ ಮುಂದೆ,ನಿನ್ನ ಹೆಸ್ರಲ್ಲಿ ನಾನು ನಿರೀಕ್ಷೆ ಇಡ್ತೀನಿ.+ ಯಾಕಂದ್ರೆ ಅದೇ ಒಳ್ಳೇದು.