ಕೀರ್ತನೆ 60:1-12
ಗಾಯಕರ ನಿರ್ದೇಶಕನಿಗೆ ಸೂಚನೆ: “ನೆನಪು ಹುಟ್ಟಿಸೋ ಲಿಲಿ” ಅನ್ನೋ ರಾಗದಲ್ಲಿ ಹಾಡಬೇಕು. ಮಿಕ್ತಾಮ್.* ದಾವೀದನ ಕೀರ್ತನೆ. ಕಲಿಸೋಕೆ ಅಂತಾನೇ ಇರೋ ಹಾಡು. ದಾವೀದ ಅರಾಮ್-ನಹಾರಾಯಿಮ್ ಮತ್ತು ಅರಾಮ್-ಸೋಬ ಅನ್ನೋರ ವಿರುದ್ಧ ಯುದ್ಧಮಾಡಿದಾಗ ಯೋವಾಬ ವಾಪಸ್ ಹೋದ. ಆಮೇಲೆ ಉಪ್ಪಿನ ಕಣಿವೆಯಲ್ಲಿ 12,000 ಎದೋಮ್ಯರನ್ನ ಕೊಂದ.+ ಆಗ ಇದನ್ನ ರಚಿಸಿದ.
60 ದೇವರೇ, ನೀನು ನಮ್ಮನ್ನ ತಳ್ಳಿಬಿಟ್ಟಿದ್ದೀಯ, ನಮ್ಮನ್ನ ಚೆದರಿಸಿಬಿಟ್ಟಿದ್ದೀಯ.+
ನೀನು ನಮ್ಮ ಜೊತೆ ಕೋಪಮಾಡ್ಕೊಂಡಿದ್ದೆ, ಆದ್ರೆ ಈಗ ಮತ್ತೆ ನಮ್ಮನ್ನ ಸ್ವೀಕರಿಸು!
2 ನೀನು ಭೂಮಿ ನಡುಗೋ ತರ ಮಾಡಿದೆ, ಅದನ್ನ ಸೀಳಿಬಿಟ್ಟೆ.
ಅದ್ರ ಒಡಕನ್ನ ಸರಿಮಾಡು. ಯಾಕಂದ್ರೆ ಅದು ಇನ್ನೇನು ಬಿದ್ದುಹೋಗುತ್ತೆ.
3 ನಿನ್ನ ಜನ್ರು ಕಷ್ಟ ಅನುಭವಿಸೋ ತರ ಮಾಡಿದೆ.
ನಾವು ದ್ರಾಕ್ಷಾಮದ್ಯ ಕುಡಿದು ತೂರಾಡೋ ತರ ಮಾಡಿದೆ.+
4 ನಿನ್ನ ಭಯ ಇರೋರು ಬಾಣಗಳಿಂದ ತಪ್ಪಿಸ್ಕೊಂಡು,ಓಡಿ ಹೋಗೋಕೆ ಅವ್ರಿಗೆ ಒಂದು ಸನ್ನೆ ಕೊಡು.* (ಸೆಲಾ)
5 ನಿನ್ನ ಬಲಗೈಯಿಂದ ನಮ್ಮನ್ನ ಕಾಪಾಡು, ನಮಗೆ ಉತ್ತರ ಕೊಡು,ಆಗ ನಿನ್ನ ಪ್ರೀತಿಪಾತ್ರರು ಉಳಿತಾರೆ.+
6 ದೇವರು ಪವಿತ್ರನಾಗಿ ಇರೋದ್ರಿಂದ* ಮಾತಾಡಿದ್ದಾನೆ:
“ನಾನು ಖುಷಿಪಡ್ತೀನಿ, ಶೆಕೆಮನ್ನ ಆಸ್ತಿಯಾಗಿ ಕೊಡ್ತೀನಿ,+ಸುಕ್ಕೋತಿನ ಕಣಿವೆಯನ್ನ ಅಳೆದು ಕೊಡ್ತೀನಿ.+
7 ಗಿಲ್ಯಾದ್ ನಂದು, ಮನಸ್ಸೆಯೂ ನಂದೇ,+ಎಫ್ರಾಯೀಮ್ ನನ್ನ ತಲೆಯ ಶಿರಸ್ತ್ರಾಣ,ಯೆಹೂದ ನನ್ನ ರಾಜದಂಡ.+
8 ಮೋವಾಬ್ ನನ್ನ ಕೈಕಾಲನ್ನ ತೊಳೆಯೋ ಪಾತ್ರೆ.+
ಎದೋಮಿನ ಮೇಲೆ ನಾನು ನನ್ನ ಚಪ್ಪಲಿ ಎಸೀತೀನಿ.+
ಫಿಲಿಷ್ಟಿಯ ವಿರುದ್ಧ ಗೆದ್ದು ಖುಷಿಪಡ್ತೀನಿ.”+
9 ಮುತ್ತಿಗೆ ಹಾಕಿರೋ* ಪಟ್ಟಣಕ್ಕೆ ನನ್ನನ್ನ ಯಾರು ಕರ್ಕೊಂಡು ಹೋಗ್ತಾರೆ?
ಎದೋಮಿನ ತನಕ ಯಾರು ನನ್ನನ್ನ ನಡಿಸ್ತಾರೆ?+
10 ದೇವರೇ, ನಿಜವಾಗ್ಲೂ ನಮ್ಮನ್ನ ಅಲ್ಲಿಗೆ ಕರ್ಕೊಂಡು ಹೋಗೋನು ನೀನೇ!
ಆದ್ರೆ ನೋಡು, ನೀನು ನಮ್ಮನ್ನ ತಳ್ಳಿಬಿಟ್ಟಿದ್ದೀಯ,ನಮ್ಮ ದೇವರಾಗಿರೋ ನೀನು ಈಗ ನಮ್ಮ ಸೈನ್ಯದ ಜೊತೆ ಬರಲ್ಲ.+
11 ಕಷ್ಟಕಾಲದಲ್ಲಿ ನಮಗೆ ಸಹಾಯಮಾಡು,ಯಾಕಂದ್ರೆ ರಕ್ಷಣೆಗಾಗಿ ಮನುಷ್ಯರನ್ನ ನಂಬೋದು ವ್ಯರ್ಥ.+
12 ದೇವರಿಂದ ನಾವು ಬಲ ಪಡ್ಕೊತೀವಿ,+ಆತನು ನಮ್ಮ ಶತ್ರುಗಳನ್ನ ತುಳಿದುಹಾಕ್ತಾನೆ.+