ಕೀರ್ತನೆ 61:1-8
-
ದೇವರು ಶತ್ರುಗಳಿಂದ ಕಾಪಾಡೋ ಬಲವಾದ ಕೋಟೆ
-
“ನಿನ್ನ ಡೇರೆಯಲ್ಲಿ ನಾನು ಅತಿಥಿಯಾಗಿ ಇರ್ತೀನಿ” (4)
-
ಗಾಯಕರ ನಿರ್ದೇಶಕನಿಗೆ ಸೂಚನೆ, ಇದನ್ನ ತಂತಿವಾದ್ಯಗಳ ಜೊತೆ ಹಾಡಬೇಕು. ದಾವೀದನ ಕೀರ್ತನೆ.
61 ದೇವರೇ, ಸಹಾಯಕ್ಕಾಗಿ ನಾನಿಡೋ ಮೊರೆನ ಕೇಳಿಸ್ಕೊ.
ನನ್ನ ಪ್ರಾರ್ಥನೆಗೆ ಗಮನಕೊಡು.+
2 ನನ್ನ ಹೃದಯ ನಿರಾಶೆಯಲ್ಲಿ ಮುಳುಗಿದ್ದಾಗ,ಭೂಮಿಯ ಕಟ್ಟಕಡೆಯಿಂದ ನಾನು ನಿನಗೆ ಮೊರೆ ಇಡ್ತೀನಿ.+
ನೀನು ನನ್ನನ್ನ ಒಂದು ಎತ್ತರವಾದ ಬಂಡೆ ಮೇಲೆ ಕರ್ಕೊಂಡು ಹೋಗು.+
3 ಯಾಕಂದ್ರೆ ನೀನು ನನ್ನ ಆಶ್ರಯ,ಶತ್ರುವಿಂದ ನನ್ನನ್ನ ಕಾಪಾಡೋ ದೊಡ್ಡ ಗೋಪುರ.+
4 ನಿನ್ನ ಡೇರೆಯಲ್ಲಿ ನಾನು ಯಾವಾಗ್ಲೂ ಅತಿಥಿಯಾಗಿ ಇರ್ತಿನಿ.+
ನಿನ್ನ ರೆಕ್ಕೆ ಕೆಳಗೆ ನಾನು ಆಶ್ರಯ ಪಡೀತೀನಿ.+ (ಸೆಲಾ)
5 ಯಾಕಂದ್ರೆ ದೇವರೇ, ನೀನು ನನ್ನ ಹರಕೆಗಳನ್ನ ಕೇಳಿಸ್ಕೊಂಡಿದ್ದೀಯ.
ನಿನ್ನ ಹೆಸ್ರಿಗೆ ಭಯಪಡೋರಿಗೆ ಸೇರಿದ ಆಸ್ತಿಯನ್ನ ನೀನು ನನಗೆ ಕೊಟ್ಟಿದ್ದೀಯ.+
6 ನೀನು ರಾಜನ ಆಯಸ್ಸನ್ನ ಜಾಸ್ತಿ ಮಾಡ್ತೀಯ,+ಅವನು ತಲತಲಾಂತರಕ್ಕೂ ಜೀವಿಸ್ತಾನೆ.
7 ಅವನು ನಿನ್ನ ಮುಂದೆ ಯಾವಾಗ್ಲೂ ಸಿಂಹಾಸನದ ಮೇಲೆ ಕೂತ್ಕೊಳ್ತಾನೆ,*+ದೇವರೇ, ನಿನ್ನ ಶಾಶ್ವತ ಪ್ರೀತಿ ಮತ್ತು ನಂಬಿಗಸ್ತಿಕೆ ಅವನನ್ನ ಕಾದುಕಾಪಾಡಲಿ.+
8 ಆಗ ನಾನು ನಿನ್ನ ಹೆಸ್ರನ್ನ ನಿತ್ಯನಿರಂತರಕ್ಕೂ ಹೊಗಳ್ತೀನಿ,*+ಪ್ರತಿದಿನ ನನ್ನ ಹರಕೆಯನ್ನ ತೀರಿಸ್ತೀನಿ.+