ಕೀರ್ತನೆ 64:1-10
-
ರಹಸ್ಯ ಆಕ್ರಮಣಗಳಿಂದ ಪಾರಾಗೋದು
-
“ದೇವರು ಅವರ ಮೇಲೆ ಬಾಣ ಬಿಡ್ತಾನೆ” (7)
-
ಗಾಯಕರ ನಿರ್ದೇಶಕನಿಗೆ ಸೂಚನೆ, ದಾವೀದನ ಮಧುರ ಗೀತೆ.
64 ದೇವರೇ, ನಾನು ಆತಂಕದಲ್ಲಿದ್ದೀನಿ, ದಯವಿಟ್ಟು ನನ್ನ ಮಾತನ್ನ ಕೇಳಿಸ್ಕೊ,+ಶತ್ರುಗಳ ಘೋರ ಆಕ್ರಮಣಗಳಿಂದ ನನ್ನ ಜೀವವನ್ನ ರಕ್ಷಿಸು.
2 ದುಷ್ಟನ ರಹಸ್ಯ ಸಂಚುಗಳಿಂದ ನನ್ನನ್ನ ಕಾಪಾಡು,+ತಪ್ಪು ಮಾಡೋರ ಗುಂಪಿಂದ ನನ್ನನ್ನ ರಕ್ಷಿಸು.
3 ಕತ್ತಿ ತರ ಅವರು ತಮ್ಮ ನಾಲಿಗೆನ ಚೂಪು ಮಾಡ್ತಾರೆ,ಚುಚ್ಚೋ ಮಾತುಗಳನ್ನ ಬಾಣಗಳ ತರ ಗುರಿ ಇಡ್ತಾರೆ,
4 ರಹಸ್ಯ ಜಾಗದಿಂದ ನಿರ್ದೋಷಿ ಮೇಲೆ ಆಕ್ರಮಣ ಮಾಡೋಕೆ ಹೀಗೆ ಮಾಡ್ತಾರೆ.
ಯಾವ ಭಯನೂ ಇಲ್ಲದೇ ತಕ್ಷಣ ಅವನ ಮೇಲೆ ಬಾಣ ಬಿಡ್ತಾರೆ.
5 ಅವ್ರಿಗೆ ಅವ್ರ ಕೆಟ್ಟ ಉದ್ದೇಶಗಳು ನಿಜ ಆದ್ರೆ ಸಾಕು,ಅವ್ರ ಬಲೆಗಳನ್ನ ಹೇಗೆ ಬಚ್ಚಿಡಬೇಕು ಅಂತ ಅವರು ತಮ್ಮಲ್ಲೇ ಮಾತಾಡ್ಕೊಳ್ತಾರೆ.
“ಈ ಬಲೆಗಳನ್ನ ಯಾರು ನೋಡ್ತಾರೆ?” ಅಂತ ಅವರು ಹೇಳ್ತಾರೆ.+
6 ತಪ್ಪು ಮಾಡೋಕೆ ಹೊಸಹೊಸ ದಾರಿ ಹುಡುಕ್ತಾರೆ,ಯಾರಿಗೂ ಗೊತ್ತಾಗದ ಹಾಗೆ ಬುದ್ಧಿವಂತಿಕೆಯಿಂದ ಉಪಾಯ ಮಾಡ್ತಾರೆ,+ಅವ್ರ ಹೃದಯದ ಆಳ ತಿಳ್ಕೊಳ್ಳೋಕೆ ಆಗಲ್ಲ.
7 ಆದ್ರೆ ದೇವರು ಅವ್ರ ಮೇಲೆ ಬಾಣಗಳನ್ನ ಬಿಡ್ತಾನೆ,+ತಕ್ಷಣ ಅವ್ರಿಗೆ ಗಾಯ ಆಗುತ್ತೆ.
8 ಅವರು ಬಿದ್ದುಹೋಗೋಕೆ ಅವ್ರ ಬಾಯೇ ಕಾರಣ ಆಗುತ್ತೆ,+ಅವ್ರನ್ನ ನೋಡೋರೆಲ್ಲ ತಲೆ ಆಡಿಸ್ತಾರೆ.
9 ಆಮೇಲೆ ಎಲ್ರೂ ಭಯಪಟ್ಟು,ದೇವರು ಮಾಡಿದ್ದನ್ನ ನೋಡಿ ಅದನ್ನ ಎಲ್ರಿಗೂ ಹೇಳ್ತಾರೆ,ಅವರು ಆತನ ಕೆಲಸಗಳ ಬಗ್ಗೆ ತಿಳ್ಕೊಂಡಿರ್ತಾರೆ.*+
10 ನೀತಿವಂತ ಯೆಹೋವನಲ್ಲಿ ಉಲ್ಲಾಸಪಡ್ತಾನೆ, ಆತನಲ್ಲಿ ಆಶ್ರಯ ಪಡ್ಕೊಳ್ತಾನೆ,+ಪ್ರಾಮಾಣಿಕರೆಲ್ಲ ತಮ್ಮ ಹೃದಯದಲ್ಲಿ ಖುಷಿಪಡ್ತಾರೆ.*