ಕೀರ್ತನೆ 65:1-13

  • ಭೂಮಿ ಕಡೆಗೆ ದೇವರ ಕಾಳಜಿ

    • “ಪ್ರಾರ್ಥನೆ ಕೇಳುವವನು” (2)

    • ‘ನೀನು ಯಾರನ್ನ ಆರಿಸಿಕೊಳ್ತೀಯೋ ಅವನು ಧನ್ಯನು’ (4)

    • ದೇವರ ಅಪಾರ ಒಳ್ಳೇತನ (11)

ಗಾಯಕರ ನಿರ್ದೇಶಕನಿಗೆ ಸೂಚನೆ, ದಾವೀದನ ಮಧುರ ಗೀತೆ. 65  ದೇವರೇ, ಚೀಯೋನಲ್ಲಿ ನಿನಗಾಗಿ ಹೊಗಳಿಕೆ ಕಾಯ್ತಿದೆ,+ನಾವು ನಮ್ಮ ಹರಕೆಗಳನ್ನ ನಿನಗೆ ಸಲ್ಲಿಸ್ತೀವಿ.+   ಪ್ರಾರ್ಥನೆ ಕೇಳುವವನೇ, ಎಲ್ಲ ರೀತಿಯ ಜನ್ರು* ನಿನ್ನ ಹತ್ರ ಬರ್ತಾರೆ.+   ನನ್ನ ತಪ್ಪುಗಳು ನನ್ನನ್ನ ಮುಳುಗಿಸಿಬಿಟ್ಟಿವೆ,+ಆದ್ರೆ ನೀನು ನಮ್ಮ ದೋಷಗಳನ್ನ ಪರಿಹರಿಸಿಬಿಡ್ತೀಯ.+   ನಿನ್ನ ಅಂಗಳದಲ್ಲಿ ವಾಸಿಸೋಕೆನೀನು ಯಾರನ್ನ ಆರಿಸಿಕೊಳ್ತೀಯೋನೀನು ಯಾರನ್ನ ಕರೀತೀಯೋ ಅವನು ಭಾಗ್ಯವಂತ.+ ನಿನ್ನ ಆಲಯದಲ್ಲಿರೋ, ನಿನ್ನ ಪವಿತ್ರ ಮಂದಿರದಲ್ಲಿರೋ*+ ಒಳ್ಳೇತನದಿಂದ ನಾವು ತೃಪ್ತರಾಗ್ತೀವಿ.+   ನಮ್ಮ ರಕ್ಷಕನಾಗಿರೋ ದೇವರೇ,ಆಶ್ಚರ್ಯ ಹುಟ್ಟಿಸೋ ನಿನ್ನ ನೀತಿಯ ಕೆಲಸಗಳಿಂದ ನೀನು ನಮಗೆ ಉತ್ರ ಕೊಡ್ತೀಯ,+ಭೂಮಿಯ ಮೂಲೆಮೂಲೆಯಲ್ಲಿ ಇರೋರಿಗೂ ನೀನೇ ಭರವಸೆ,+ಸಮುದ್ರದಾಚೆ ದೂರದೂರದಲ್ಲಿ ಇರೋರಿಗೂ ನೀನೇ ಭರವಸೆ.   ನೀನು ನಿನ್ನ ಶಕ್ತಿಯಿಂದ ಬೆಟ್ಟಗಳನ್ನ ದೃಢವಾಗಿ ಸ್ಥಾಪಿಸಿದ್ದೀಯ,ನೀನು ಬಲವನ್ನ ಬಟ್ಟೆ ತರ ಹಾಕ್ಕೊಂಡಿದ್ದೀಯ.+   ನೀನು ಅಲ್ಲೋಲಕಲ್ಲೋಲ ಆಗಿರೋ ಸಮುದ್ರವನ್ನ,ಅದ್ರ ಅಲೆಗಳ ಅಬ್ಬರವನ್ನ, ಜನಾಂಗಗಳ ಗದ್ದಲವನ್ನ+ ನಿಶ್ಶಬ್ದ ಮಾಡ್ತೀಯ.+   ದೂರದಲ್ಲಿ ಇರೋರು ನಿನ್ನ ಕೆಲಸಗಳನ್ನ* ನೋಡಿದಾಗ ಅವ್ರಿಗೆ ಮಾತೇ ಬರಲ್ಲ,+ಪೂರ್ವದಿಂದ ಪಶ್ಚಿಮದ ತನಕ ಇರೋ ಜನ್ರೆಲ್ಲ ಸಂತೋಷದಿಂದ ಜೈಕಾರ ಹಾಕೋ ಹಾಗೆ ನೀನು ಮಾಡ್ತೀಯ.   ನೀನು ಭೂಮಿಯ ಆರೈಕೆ ಮಾಡ್ತೀಯ,ಅದು ಸಮೃದ್ಧವಾಗಿ ಬೆಳೆ ಕೊಡೋ ಹಾಗೆ ಮಾಡ್ತೀಯ,+ನದಿಯಲ್ಲಿ ನೀರು ತುಂಬಿ ತುಳುಕೋ ಹಾಗೆ ಮಾಡ್ತೀಯ,ನೀನು ಜನ್ರಿಗೆ ಆಹಾರ ಕೊಡ್ತೀಯ,+ಅದಕ್ಕೇ ಭೂಮಿನ ಸಿದ್ಧಮಾಡಿದ್ದೀಯ. 10  ನೀನು ಅದ್ರ ನೇಗಿಲಸಾಲನ್ನ ತೋಯಿಸ್ತೀಯ, ಅದ್ರ ಮಣ್ಣಿನ ಗಡ್ಡೆಗಳನ್ನ* ಸಮಮಾಡ್ತೀಯ,ನೀನು ಮಳೆ ಹನಿಗಳಿಂದ ಮಣ್ಣನ್ನ ಮೃದುಮಾಡಿ, ಅದ್ರ ಬೆಳೆಯನ್ನ ಆಶೀರ್ವಾದ ಮಾಡ್ತೀಯ.+ 11  ನೀನು ಇಡೀ ವರ್ಷಕ್ಕೆ ನಿನ್ನ ಒಳ್ಳೇತನದ ಕಿರೀಟ ತೊಡಿಸ್ತೀಯ, ನೀನು ನಡೆಯೋ ದಾರಿ ಒಳ್ಳೇತನದಿಂದ ತುಂಬಿ ತುಳುಕುತ್ತೆ.+ 12  ಕಾಡಿನ ಹುಲ್ಲುಗಾವಲು ಹಸಿರು ಹುಲ್ಲಿಂದ ತುಂಬಿದೆ,+ಬೆಟ್ಟಗುಡ್ಡಗಳನ್ನ ಸಂತೋಷ ಮುಚ್ಚಿದೆ.+ 13  ಹುಲ್ಲುಗಾವಲು ಕುರಿಗಳಿಂದ ತುಂಬಿಹೋಗಿದೆ,ಒಳ್ಳೇ ತೆನೆ ಕಣಿವೆಯಲ್ಲೆಲ್ಲ ರತ್ನದ ಕಂಬಳಿ ತರ ಹಾಸಿಕೊಂಡಿದೆ.+ ಅವು ಜೈಕಾರ ಹಾಕ್ತಾ ಹಾಡ್ತವೆ.+

ಪಾದಟಿಪ್ಪಣಿ

ಅಥವಾ “ಮನುಷ್ಯರು.”
ಅಥವಾ “ಆರಾಧನಾ ಸ್ಥಳದಲ್ಲಿರೋ.”
ಅಕ್ಷ. “ನೀನು ಕೊಡೋ ಸೂಚನೆಗಳನ್ನ.”
ಅಥವಾ “ಹೆಂಟೆಗಳನ್ನ.”