ಕೀರ್ತನೆ 8:1-9

  • ದೇವರ ಮಹಿಮೆ ಮತ್ತು ಮನುಷ್ಯನ ಹಿರಿಮೆ

    • “ನಿನ್ನ ಹೆಸ್ರು ತುಂಬ ಶ್ರೇಷ್ಠ!” (1, 9)

    • ‘ಇವತ್ತು ಇದ್ದು ನಾಳೆ ಸಾಯೋ ಮನುಷ್ಯನಿಗೆ ಏನು ಬೆಲೆ?’ (4)

    • ಅವನಿಗೆ ವೈಭವದ ಕಿರೀಟ ಹಾಕಿದ್ರು (5)

ದಾವೀದನ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ: ಈ ಗೀತೆ ಗಿತ್ತೀತ್‌* ರಾಗದಲ್ಲಿದೆ. 8  ಯೆಹೋವನೇ, ನಮ್ಮ ಒಡೆಯನೇ, ಇಡೀ ಭೂಮಿಯಲ್ಲೇ ನಿನ್ನ ಹೆಸ್ರು ತುಂಬ ಶ್ರೇಷ್ಠ. ನಿನ್ನ ವೈಭವ ಆಕಾಶಕ್ಕಿಂತ ಎತ್ತರ!+   ಶತ್ರುಗಳ ಮತ್ತು ಸೇಡು ತೀರಿಸುವವರ ಬಾಯಿಗೆ ಬೀಗ ಹಾಕೋಕೆ,ನೀನು ಚಿಕ್ಕಮಕ್ಕಳ ಮತ್ತು ಕೂಸುಗಳ ಬಾಯಿಂದ+ ನಿನ್ನ ಶಕ್ತಿಯನ್ನ ತೋರಿಸಿದ್ದೀಯ.   ನೀನು ಸೃಷ್ಟಿಸಿರೋ* ಆಕಾಶವನ್ನ,ನೀನು ರಚಿಸಿರೋ ಚಂದ್ರ ಮತ್ತು ನಕ್ಷತ್ರಗಳನ್ನ ನೋಡಿ,+   ನಾನು ಹೀಗೆ ಯೋಚಿಸಿದೆ,‘ಇವತ್ತು ಇದ್ದು ನಾಳೆ ಸಾಯೋ ಮನುಷ್ಯನನ್ನ ನೀನು ಯಾಕೆ ನೆನಪಿಸ್ಕೊಳ್ತೀಯ? ಅವನಿಗೆ ಏನು ಯೋಗ್ಯತೆ ಇದೆ ಅಂತ ನೀನು ಕಾಳಜಿ ತೋರಿಸ್ತೀಯ?+   ನೀನು ಅವನನ್ನ ದೇವದೂತರಿಗಿಂತ* ಒಂಚೂರು ಕಮ್ಮಿಯಾಗಿ ಮಾಡಿದ್ದೀಯ ಅಷ್ಟೇ,ನೀನು ಅವನಿಗೆ ಗೌರವ ಮತ್ತು ವೈಭವವನ್ನ ಕಿರೀಟವಾಗಿ ಇಟ್ಟಿದ್ದೀಯ.   ನಿನ್ನ ಸೃಷ್ಟಿಯ ಮೇಲೆ ಅವನಿಗೆ ಅಧಿಕಾರ ಕೊಟ್ಟೆ,+ಎಲ್ಲವನ್ನ ಅವನ ಕಾಲಡಿಯಲ್ಲಿ ಇಟ್ಟೆ.   ಎಲ್ಲ ಆಡುಕುರಿಗಳ ಮೇಲೆ, ದನಎತ್ತುಗಳ ಮೇಲೆಕಾಡುಪ್ರಾಣಿಗಳ*+ ಮೇಲೆ,   ಆಕಾಶದ ಪಕ್ಷಿಗಳ ಮೇಲೆ ಮತ್ತು ಸಮುದ್ರದ ಮೀನುಗಳ ಮೇಲೆಅದರಲ್ಲಿ ಈಜುವ ಎಲ್ಲದರ ಮೇಲೆ ಅವನಿಗೆ ಅಧಿಕಾರ ಕೊಟ್ಟೆ.   ಯೆಹೋವನೇ, ನಮ್ಮ ಒಡೆಯನೇ, ಇಡೀ ಭೂಮಿಯಲ್ಲೇ ನಿನ್ನ ಹೆಸ್ರಿಗೆ ತುಂಬ ಗೌರವ ಇದೆ.

ಪಾದಟಿಪ್ಪಣಿ

ಅಕ್ಷ. “ನಿನ್ನ ಕೈಕೆಲಸ ಆಗಿರೋ.”
ಅಥವಾ “ದೇವರ ತರ ಇರೋರಿಗಿಂತ.”
ಅಕ್ಷ. “ಬಯಲಿನ ಮೃಗಗಳ.”