ಕೀರ್ತನೆ 81:1-16
ಗಾಯಕರ ನಿರ್ದೇಶಕನಿಗೆ ಸೂಚನೆ, ಗಿತ್ತೀತ್* ರಾಗದಲ್ಲಿ ಹಾಡಬೇಕು. ಆಸಾಫನ+ ಕೀರ್ತನೆ.
81 ನಮ್ಮ ಬಲವಾಗಿರೋ ದೇವರಿಗೆ+ ಸಂತೋಷದಿಂದ ಜೈಕಾರ ಹಾಕಿ.
ಯಾಕೋಬನ ದೇವರಿಗೆ ವಿಜಯಗೀತೆ ಹಾಡಿ.
2 ಸಂಗೀತ ನುಡಿಸಿ, ದಮ್ಮಡಿ ಬಡೀರಿ,ತಂತಿವಾದ್ಯಗಳ ಜೊತೆ ಇಂಪಾದ ವಾದ್ಯಗಳನ್ನ ನುಡಿಸಿ.
3 ಅಮಾವಾಸ್ಯೆ ದಿನ,+ಹುಣ್ಣಿಮೆ ದಿನ ನಮ್ಮ ಹಬ್ಬಕ್ಕಾಗಿ ಕೊಂಬು ಊದಿ.+
4 ಯಾಕಂದ್ರೆ ಇದು ಇಸ್ರಾಯೇಲ್ಯರಿಗೆ ಒಂದು ಆಜ್ಞೆ ಆಗಿದೆ,ಯಾಕೋಬನ ದೇವರು ಕೊಟ್ಟಿರೋ ನಿಯಮವಾಗಿದೆ.+
5 ದೇವರು ಈಜಿಪ್ಟಿನ ವಿರುದ್ಧ ಹೋದಾಗ,+ಇದನ್ನ ಯೋಸೇಫನಿಗೆ ಮತ್ತೆ ಮತ್ತೆ ನೆನಪಿಸಿದ.+
ನಾನು ಒಂದು ಧ್ವನಿ* ಕೇಳಿಸ್ಕೊಂಡೆ. ಆದ್ರೆ ಅದ್ರ ಗುರುತು ಹಿಡಿಲಿಲ್ಲ.
6 “ನಾನು ಅವನ ಹೆಗಲಿಂದ ಭಾರ ಕೆಳಗಿಳಿಸಿದೆ,+ಅವನು ಈಗ ಬುಟ್ಟಿ ಎತ್ತೋ ಅವಶ್ಯಕತೆ ಇಲ್ಲ.
7 ನೀನು ಕಷ್ಟದಲ್ಲಿದ್ದಾಗ ನನ್ನನ್ನ ಕರೆದೆ, ನಾನು ನಿನ್ನನ್ನ ಕಾಪಾಡಿದೆ,+ಗುಡುಗೋ ಮೋಡದಿಂದ* ನಾನು ನಿನಗೆ ಉತ್ರ ಕೊಟ್ಟೆ.+
ಮೆರೀಬಾದ* ನೀರಿನ ಹತ್ರ ನಾನು ನಿನ್ನನ್ನ ಪರೀಕ್ಷಿಸಿದೆ.+ (ಸೆಲಾ)
8 ನನ್ನ ಪ್ರಜೆಗಳೇ ಕೇಳಿ, ನಾನು ನಿಮ್ಮ ವಿರುದ್ಧ ಸಾಕ್ಷಿ ಹೇಳ್ತೀನಿ.
ಇಸ್ರಾಯೇಲೇ, ನೀವು ನನ್ನ ಮಾತನ್ನ ಕೇಳಬೇಕಿತ್ತು.+
9 ನಿಮ್ಮ ಹತ್ರ ಬೇರೆ ಯಾವ ದೇವರೂ ಇರಬಾರದು,ನೀವು ಅದಕ್ಕೆ ಬಗ್ಗಿ ನಮಸ್ಕಾರ ಮಾಡಬಾರದು.+
10 ನಾನು ಯೆಹೋವ, ನಿಮ್ಮ ದೇವರು,ಈಜಿಪ್ಟಿಂದ ನಿಮ್ಮನ್ನ ಹೊರಗೆ ತಂದವನು ನಾನೇ.+
ನಿಮ್ಮ ಬಾಯನ್ನ ಅಗಲವಾಗಿ ತೆಗಿರಿ, ನಾನು ಅದನ್ನ ತುಂಬಿಸ್ತೀನಿ.+
11 ಆದ್ರೆ ನನ್ನ ಜನ್ರು ನನ್ನ ಧ್ವನಿಯನ್ನ ಕೇಳಿಸ್ಕೊಳ್ಳಲಿಲ್ಲ,ಇಸ್ರಾಯೇಲ್ಯರು ನನಗೆ ಅಧೀನರಾಗಲಿಲ್ಲ.+
12 ಹಾಗಾಗಿ ನಾನು ಅವ್ರಿಗೆ ತಮ್ಮ ಹಠಮಾರಿ ಹೃದಯಗಳ ಪ್ರಕಾರ ನಡ್ಕೊಳ್ಳೋಕೆ ಬಿಟ್ಟುಬಿಟ್ಟೆ,ಅವ್ರಿಗೆ ಸರಿ ಅನಿಸಿದ್ದನ್ನ ಅವರು ಮಾಡಿದ್ರು.*+
13 ಅಯ್ಯೋ, ನನ್ನ ಜನ್ರು ನನ್ನ ಮಾತನ್ನ ಕೇಳಿದ್ರೆ,+ಇಸ್ರಾಯೇಲ್ಯರು ನನ್ನ ದಾರಿಗಳಲ್ಲಿ ನಡೆದಿದ್ರೆ,+
14 ನಾನು ಅವ್ರ ಶತ್ರುಗಳನ್ನ ತಕ್ಷಣ ವಶ ಮಾಡ್ಕೊಳ್ತಿದ್ದೆ,ನಾನು ನನ್ನ ಕೈಯನ್ನ ಅವ್ರ ಎದುರಾಳಿಗಳ ವಿರುದ್ಧ ತಿರುಗಿಸಿಬಿಡ್ತಿದ್ದೆ.+
15 ಯೆಹೋವನನ್ನ ದ್ವೇಷಿಸೋರು ಆತನ ಮುಂದೆ ಮುದುರಿಕೊಂಡು ನಿಂತ್ಕೊತಾರೆ,ಅವರು ಶಾಶ್ವತವಾಗಿ ಶಿಕ್ಷೆ ಅನುಭವಿಸ್ತಾರೆ.
16 ಆದ್ರೆ ಆತನು ನಿನಗೆ* ಶ್ರೇಷ್ಠ* ಗೋದಿಯನ್ನ ಊಟಕ್ಕೆ ಕೊಡ್ತಾನೆ,+ಬಂಡೆ ಒಳಗಿನ ಜೇನುತುಪ್ಪ ಕೊಟ್ಟು ನಿನ್ನನ್ನ ತೃಪ್ತಿಪಡಿಸ್ತಾನೆ.”+
ಪಾದಟಿಪ್ಪಣಿ
^ ಅಥವಾ “ಭಾಷೆ.”
^ ಅಕ್ಷ. “ರಹಸ್ಯ ಜಾಗದಿಂದ.”
^ ಅರ್ಥ “ಜಗಳ.”
^ ಅಕ್ಷ. “ಅವರ ಆಲೋಚನೆಯಂತೆ ನಡೆದ್ರು.”
^ ಅಕ್ಷ. “ಆತನ.” ಅಂದ್ರೆ, ದೇವರ ಜನರಿಗೆ.
^ ಅಕ್ಷ. “ಕೊಬ್ಬಿದ.”