ಕೀರ್ತನೆ 86:1-17
ದಾವೀದನ ಪ್ರಾರ್ಥನೆ.
86 ಯೆಹೋವನೇ, ನನ್ನ ಪ್ರಾರ್ಥನೆಯನ್ನ ಕೇಳಿ* ನನಗೆ ಉತ್ರ ಕೊಡು.
ಯಾಕಂದ್ರೆ ನಾನು ಕಷ್ಟದಲ್ಲಿದ್ದೀನಿ, ನಾನು ಬಡವ.+
2 ನಾನು ನಿಷ್ಠಾವಂತನಾಗಿ ಇರೋದ್ರಿಂದ ನನ್ನ ಪ್ರಾಣವನ್ನ ಕಾದು ಕಾಪಾಡು.+
ನಿನ್ನಲ್ಲಿ ಭರವಸೆ ಇಟ್ಟಿರೋ ನಿನ್ನ ಸೇವಕನನ್ನ ರಕ್ಷಿಸು,ಯಾಕಂದ್ರೆ ನೀನೇ ನನ್ನ ದೇವರು.+
3 ಯೆಹೋವನೇ, ನನಗೆ ದಯೆ ತೋರಿಸು,+ಇಡೀ ದಿನ ನಾನು ನಿನ್ನ ಕರೀತಾ ಇರ್ತಿನಿ.+
4 ನಿನ್ನ ಸೇವಕ ಖುಷಿಪಡೋ ಹಾಗೆ ಮಾಡು,ಯಾಕಂದ್ರೆ ಯೆಹೋವನೇ, ನಾನು ನಿನ್ನ ಕಡೆ ತಿರುಗಿಕೊಳ್ತೀನಿ.
5 ಯೆಹೋವನೇ, ನೀನು ಒಳ್ಳೆಯವನು,+ ಕ್ಷಮಿಸೋಕೆ ಯಾವಾಗ್ಲೂ ಸಿದ್ಧನಾಗಿ ಇರ್ತಿಯ,+ನಿನಗೆ ಮೊರೆಯಿಡೋ ಪ್ರತಿಯೊಬ್ರಿಗೂ ಶಾಶ್ವತ ಪ್ರೀತಿಯನ್ನ ಅಪಾರವಾಗಿ ತೋರಿಸ್ತೀಯ.+
6 ಯೆಹೋವನೇ, ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊ,ಸಹಾಯಕ್ಕಾಗಿ ನಾನಿಡೋ ಮೊರೆಗೆ ಗಮನಕೊಡು.+
7 ನನಗೆ ಕಷ್ಟ ಬಂದಾಗ ನಾನು ನಿನ್ನನ್ನ ಕೂಗ್ತೀನಿ,+ಯಾಕಂದ್ರೆ ನೀನು ನನಗೆ ಉತ್ರ ಕೊಡ್ತೀಯ.+
8 ಯೆಹೋವನೇ, ದೇವರುಗಳಲ್ಲಿ ನಿನ್ನಂಥ ದೇವರು ಬೇರೆ ಯಾರೂ ಇಲ್ಲ,+ನಿನ್ನ ಕೆಲಸಗಳಿಗೆ ಸರಿಸಾಟಿ ಇಲ್ಲ.+
9 ಯೆಹೋವನೇ, ನೀನು ಸೃಷ್ಟಿಸಿದ ಎಲ್ಲ ಜನಾಂಗಗಳುನಿನ್ನ ಮುಂದೆ ಬಂದು ನಿನಗೆ ಬಗ್ಗಿ ನಮಸ್ಕಾರ ಮಾಡ್ತವೆ,+ಅವು ನಿನ್ನ ಹೆಸ್ರಿಗೆ ಗೌರವ ತರುತ್ತವೆ.+
10 ಯಾಕಂದ್ರೆ ನೀನು ಮಹೋನ್ನತನು, ಅದ್ಭುತಗಳನ್ನ ಮಾಡ್ತೀಯ,+ನೀನೇ ದೇವರು, ನೀನೊಬ್ಬನೇ ದೇವರು.+
11 ಯೆಹೋವನೇ, ನಿನ್ನ ದಾರಿಯನ್ನ ನನಗೆ ಕಲಿಸು.+
ನಾನು ನಿನ್ನ ಸತ್ಯದ ದಾರಿಯಲ್ಲಿ ನಡೀತೀನಿ.+
ನನಗೆ ಒಂದೇ ಮನಸ್ಸನ್ನ* ಕೊಡು, ಆಗ ನಿನ್ನ ಹೆಸ್ರಿಗೆ ಭಯಪಡ್ತೀನಿ.+
12 ನನ್ನ ದೇವರಾದ ಯೆಹೋವನೇ, ಪೂರ್ಣ ಹೃದಯದಿಂದ ನಾನು ನಿನ್ನನ್ನ ಹೊಗಳ್ತೀನಿ,+ಶಾಶ್ವತವಾಗಿ ನಿನ್ನ ಹೆಸ್ರಿಗೆ ಗೌರವ ಕೊಡ್ತೀನಿ.
13 ಯಾಕಂದ್ರೆ ನನ್ನ ಕಡೆಗಿರೋ ನಿನ್ನ ಶಾಶ್ವತ ಪ್ರೀತಿ ತುಂಬ ದೊಡ್ಡದು,ನೀನು ನನ್ನ ಪ್ರಾಣನ ಸಮಾಧಿಯ* ಆಳದಿಂದ ಬಿಡಿಸಿದೆ.+
14 ದೇವರೇ, ಗರ್ವಿಷ್ಠರು ನನ್ನ ವಿರುದ್ಧ ಎದ್ದಿದ್ದಾರೆ,+ಕ್ರೂರಿಗಳ ಗುಂಪು ನನ್ನ ಪ್ರಾಣದ ಹಿಂದೆ ಬಿದ್ದಿದೆ,ನೀನಂದ್ರೆ ಅವ್ರಿಗೆ ಕಿಂಚಿತ್ತೂ ಬೆಲೆ ಇಲ್ಲ.*+
15 ಆದ್ರೆ ಯೆಹೋವನೇ, ನೀನು ಕರುಣೆ ಇರೋ ದೇವರು, ಕನಿಕರ ಇರೋ* ದೇವರು,ಥಟ್ಟಂತ ಕೋಪಿಸಿಕೊಳ್ಳಲ್ಲ, ಶಾಶ್ವತ ಪ್ರೀತಿಯನ್ನ ಧಾರಾಳವಾಗಿ ತೋರಿಸ್ತೀಯ, ನಂಬಿಗಸ್ತನು.*+
16 ನನ್ನ ಕಡೆ ತಿರುಗಿ ನನಗೆ ದಯೆ ತೋರಿಸು.+
ನಿನ್ನ ಸೇವಕನಿಗೆ ನಿನ್ನ ಶಕ್ತಿಯನ್ನು ಕೊಡು,+ನಿನ್ನ ದಾಸಿಯ ಮಗನನ್ನ ರಕ್ಷಿಸು.
17 ನಿನ್ನ ಒಳ್ಳೇತನದ ಒಂದು ಗುರುತನ್ನ* ನನಗೆ ತೋರಿಸು,ನನ್ನನ್ನ ದ್ವೇಷಿಸೋರು ಅದನ್ನ ನೋಡಿ ಅವಮಾನಪಡಲಿ.
ಯಾಕಂದ್ರೆ ಯೆಹೋವನೇ, ನನಗೆ ಸಹಾಯ ಮಾಡೋನೂ ನನ್ನನ್ನ ಸಂತೈಸೋನೂ ನೀನೇ.
ಪಾದಟಿಪ್ಪಣಿ
^ ಅಥವಾ “ಬಗ್ಗಿ ನಾನು ಹೇಳೋದನ್ನ ಕೇಳಿ.”
^ ಅಥವಾ “ಚಂಚಲವಲ್ಲದ ಹೃದಯವನ್ನ.”
^ ಅಥವಾ “ನಿನ್ನನ್ನ ಅವರು ತಮ್ಮ ಮುಂದೆ ಇಟ್ಕೊಳ್ಳಲಿಲ್ಲ.”
^ ಅಥವಾ “ದಯಾಳು.”
^ ಅಥವಾ “ಸತ್ಯವಂತನು.”
^ ಅಥವಾ “ಪುರಾವೆ.”