ಕೀರ್ತನೆ 87:1-7
-
ಚೀಯೋನ್ ಸತ್ಯ ದೇವರ ಪಟ್ಟಣ
-
ಚೀಯೋನಲ್ಲಿ ಹುಟ್ಟಿರೋರು (4-6)
-
ಕೋರಹನ ಮಕ್ಕಳ+ ಮಧುರ ಗೀತೆ.
87 ದೇವರ ಪಟ್ಟಣದ ಅಸ್ತಿವಾರ ಪವಿತ್ರ ಬೆಟ್ಟಗಳಲ್ಲಿ ಇದೆ.+
2 ಯಾಕೋಬನ ಎಲ್ಲ ಡೇರೆಗಳಿಗಿಂತಚೀಯೋನಿನ ಬಾಗಿಲುಗಳನ್ನ ಯೆಹೋವ ಪ್ರೀತಿಸ್ತಾನೆ.+
3 ಸತ್ಯ ದೇವರ ಪಟ್ಟಣವೇ, ನಿನ್ನ ಬಗ್ಗೆ ಒಳ್ಳೇ ವಿಷ್ಯಗಳನ್ನ ಹೇಳ್ತಿದ್ದಾರೆ.+ (ಸೆಲಾ)
4 ರಾಹಾಬ*+ ಮತ್ತು ಬಾಬೆಲನ್ನ ನನ್ನ ಬಗ್ಗೆ ಗೊತ್ತಿರೋರು* ಅಂದ್ಕೊಳ್ತೀನಿ,ನೋಡಿ! ಫಿಲಿಷ್ಟಿಯ ಮತ್ತು ತೂರ್ ಕೂಷಿನ ಜೊತೆ ಇವೆ.
ನಾನು ಇವ್ರಲ್ಲಿ ಎಲ್ರ ಬಗ್ಗೆ “ಇವರು ಚೀಯೋನಿನಲ್ಲಿ ಹುಟ್ಟಿದರು” ಅಂತ ಹೇಳ್ತೀನಿ.
5 ಚೀಯೋನಿನ ಬಗ್ಗೆ ನಾನು“ಪ್ರತಿಯೊಬ್ರೂ ಇಲ್ಲೇ ಹುಟ್ಟಿದ್ರು” ಅಂತ ಹೇಳ್ತೀನಿ.
ಸರ್ವೋನ್ನತ ಅವಳನ್ನ ದೃಢವಾಗಿ ಸ್ಥಾಪಿಸ್ತಾನೆ.
6 ಜನ್ರ ಹೆಸ್ರನ್ನ ದಾಖಲಿಸುವಾಗ ಯೆಹೋವ,“ಇವನು ಅಲ್ಲೇ ಹುಟ್ಟಿದ” ಅಂತ ಹೇಳ್ತಾನೆ. (ಸೆಲಾ)
7 ಹಾಡು ಹೇಳೋರು+ ಮತ್ತು ಕುಣಿಯೋರು,+“ನನ್ನ ಬುಗ್ಗೆಗಳೆಲ್ಲ ನಿನ್ನಲ್ಲೇ ಇವೆ”* ಅಂತ ಹೇಳ್ತಾರೆ.+
ಪಾದಟಿಪ್ಪಣಿ
^ ಬಹುಶಃ ಇದು ಈಜಿಪ್ಟನ್ನ ಸೂಚಿಸುತ್ತೆ.
^ ಅಥವಾ “ನನ್ನನ್ನ ಒಪ್ಪಿಕೊಳ್ಳೋರು.”
^ ಅಥವಾ “ಎಲ್ಲ ವಿಷ್ಯಗಳ ಮೂಲ ನೀನೇ.”