ಕೀರ್ತನೆ 88:1-18
ಕೋರಹನ ಮಕ್ಕಳ+ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ, ಮಹಾಲತ್* ಶೈಲಿಯಲ್ಲಿ ಒಂದಾದ ಮೇಲೆ ಒಂದು ಹಾಡಬೇಕು. ಜೆರಹ್ಯನಾದ ಹೇಮಾನನ+ ಮಸ್ಕಿಲ್.*
88 ಯೆಹೋವನೇ, ನನ್ನನ್ನ ರಕ್ಷಿಸೋ ದೇವರೇ,+ಬೆಳಗ್ಗೆ ನಾನು ನಿನಗೆ ಮೊರೆಯಿಡ್ತೀನಿ,ರಾತ್ರಿ ನಾನು ನಿನ್ನ ಸನ್ನಿಧಿಗೆ ಬರ್ತಿನಿ.+
2 ನನ್ನ ಪ್ರಾರ್ಥನೆ ನಿನಗೆ ಮುಟ್ಟಲಿ,+ಸಹಾಯಕ್ಕಾಗಿ ನಾನಿಡೋ ಮೊರೆ ಕೇಳಿಸ್ಕೋ.*+
3 ಯಾಕಂದ್ರೆ ನಾನು ಕಷ್ಟಗಳಲ್ಲಿ ಮುಳುಗಿ ಹೋಗಿದ್ದೀನಿ,+ನನ್ನ ಜೀವ ಸಮಾಧಿಯ* ಅಂಚಿನಲ್ಲಿದೆ.+
4 ಸಮಾಧಿಗೆ* ಸೇರೋ ಜನ್ರ ಜೊತೆ ಈಗಾಗಲೇ ನನ್ನನ್ನ ಎಣಿಸ್ತಾ ಇದ್ದಾರೆ,+ನನಗೆ ಸಹಾಯ ಮಾಡೋಕೆ ಯಾರೂ ಇಲ್ಲ,*+
5 ಸತ್ತವರ ಮಧ್ಯ ನಾನು ಇದ್ದೀನಿಸಮಾಧಿಯಲ್ಲಿ ಬಿದ್ದಿರೋ ಶವದ ತರ,ನೀನು ಇನ್ಯಾವತ್ತೂ ನೆನಪಿಸ್ಕೊಳ್ಳದ ವ್ಯಕ್ತಿ ತರ,ನಿನ್ನ ಕಾಳಜಿ ಸಿಗದಿರೋ ಮನುಷ್ಯನ ತರ ನಾನಿದ್ದೀನಿ.
6 ನೀನು ನನ್ನನ್ನ ಆಳವಾದ ಗುಂಡಿ ಒಳಗೆ ಹಾಕಿದೆ,ಕತ್ತಲು ತುಂಬಿದ ಜಾಗದಲ್ಲಿ, ಆಳವಾಗಿರೋ ಜಾಗದಲ್ಲಿ ಬಿಟ್ಟೆ.
7 ನಿನ್ನ ಕ್ರೋಧ ನನ್ನ ಮೇಲೆ ಭಾರವಾಗಿದೆ,+ಅಪ್ಪಳಿಸೋ ನಿನ್ನ ಅಲೆಗಳಿಂದ ನೀನು ನನ್ನನ್ನ ಮುಳುಗಿಸಿ ಬಿಟ್ಟಿದ್ದೀಯ. (ಸೆಲಾ)
8 ನೀನು ನನ್ನ ಪರಿಚಿತರನ್ನ ನನ್ನಿಂದ ದೂರ ಮಾಡಿದೆ,+ಅವ್ರ ದೃಷ್ಟಿಯಲ್ಲಿ ನನ್ನನ್ನ ಒಂದು ಅಸಹ್ಯ ವಸ್ತುವಾಗಿ ಮಾಡಿದೆ.
ನಾನು ಸಿಕ್ಕಿಹಾಕಿಕೊಂಡಿದ್ದೀನಿ, ತಪ್ಪಿಸ್ಕೊಳ್ಳೋಕೆ ಆಗ್ತಿಲ್ಲ.
9 ನನ್ನ ಕಷ್ಟದಿಂದಾಗಿ ನನ್ನ ಕಣ್ಣು ಸೋತುಹೋಗಿದೆ.+
ಯೆಹೋವನೇ, ಇಡೀ ದಿನ ನಾನು ನಿನಗೆ ಮೊರೆ ಇಡ್ತೀನಿ,+ನಿನ್ನ ಕಡೆ ನನ್ನ ಕೈಗಳನ್ನ ಚಾಚ್ತೀನಿ.
10 ಸತ್ತವರಿಗಾಗಿ ನೀನು ಅದ್ಭುತಗಳನ್ನ ಮಾಡ್ತೀಯಾ?
ಸತ್ತಿರೋರೂ ಎದ್ದು ನಿನ್ನನ್ನ ಹೊಗಳ್ತಾರಾ?+ (ಸೆಲಾ)
11 ಸಮಾಧಿಯಲ್ಲಿ ನಿನ್ನ ಶಾಶ್ವತ ಪ್ರೀತಿ ಬಗ್ಗೆ ಸಾರಕ್ಕಾಗುತ್ತಾ?
ನಾಶನದ ಸ್ಥಳದಲ್ಲಿ* ನಿನ್ನ ನಂಬಿಗಸ್ತಿಕೆಯ ಬಗ್ಗೆ ಹೇಳಕ್ಕಾಗುತ್ತಾ?
12 ಕತ್ತಲು ತುಂಬಿರೋ ಜಾಗದಲ್ಲಿ ನಿನ್ನ ಅದ್ಭುತಗಳ ಬಗ್ಗೆ ಗೊತ್ತಾಗುತ್ತಾ?
ಗೊತ್ತಿಲ್ಲದ ಜಾಗದಲ್ಲಿ ನಿನ್ನ ನೀತಿಯ ಬಗ್ಗೆ ಗೊತ್ತಾಗುತ್ತಾ?+
13 ಆದ್ರೆ ಯೆಹೋವನೇ, ನಾನು ಸಹಾಯಕ್ಕಾಗಿ ನಿನಗೆ ಪ್ರಾರ್ಥಿಸ್ತಾನೇ ಇರ್ತಿನಿ,+ದಿನಾ ಬೆಳಿಗ್ಗೆ ನನ್ನ ಪ್ರಾರ್ಥನೆಗಳು ನಿನ್ನ ಸನ್ನಿಧಿಯನ್ನ ಮುಟ್ಟುತ್ತೆ.+
14 ಯೆಹೋವನೇ, ಯಾಕೆ ನೀನು ನನ್ನನ್ನ ತಳ್ಳಿಬಿಟ್ಟಿದ್ದೀಯಾ?+
ಯಾಕೆ ನೀನು ನಿನ್ನ ಮುಖನ ನನ್ನ ಕಡೆಯಿಂದ ತಿರುಗಿಸ್ಕೊಂಡಿದ್ದೀಯಾ?+
15 ನಾನು ಚಿಕ್ಕವನಾಗಿ ಇದ್ದಾಗಿಂದ,ಕಷ್ಟಗಳನ್ನ ಅನುಭವಿಸ್ತಾನೇ ಇದ್ದೀನಿ, ಸಾವಿಗೆ ಹತ್ತಿರವಾಗೇ ಇದ್ದೀನಿ,+ನೀನು ಅನುಮತಿಸಿರೋ ಭಯಂಕರ ವಿಪತ್ತುಗಳನ್ನ ಸಹಿಸಿ ಸಹಿಸಿ ಮರಗಟ್ಟಿ ಹೋಗಿದ್ದೀನಿ.
16 ನಿನ್ನ ಕೋಪಾಗ್ನಿ ನನ್ನನ್ನ ಸದೆಬಡಿದಿದೆ,+ನಿನ್ನ ಭಯ ನನ್ನನ್ನ ತಿಂದುಹಾಕ್ತಿದೆ.
17 ನಿನ್ನ ಭಯ ಇಡೀ ದಿನ ನನ್ನನ್ನ ಸಮುದ್ರದ ಅಲೆಗಳ ತರ ಸುತ್ಕೊಂಡಿದೆ,ಎಲ್ಲ ಕಡೆಯಿಂದ* ಅದು ನನ್ನ ಮೇಲೆ ಆಕ್ರಮಣ ಮಾಡುತ್ತೆ.
18 ನೀನು ನನ್ನ ಸ್ನೇಹಿತರನ್ನ, ನನ್ನ ಜೊತೆಗಾರರನ್ನ ನನ್ನಿಂದ ದೂರ ಮಾಡಿದ್ದೀಯ,+ಹಾಗಾಗಿ ಕತ್ತಲೇ ನನ್ನ ಸಂಗಾತಿಯಾಗಿದೆ.
ಪಾದಟಿಪ್ಪಣಿ
^ ಅಥವಾ “ಬಗ್ಗಿ ನಾನು ಹೇಳೋದನ್ನ ಕೇಳಿಸ್ಕೊ.”
^ ಅಥವಾ “ಗುಂಡಿಗೆ.”
^ ಅಥವಾ “ಶಕ್ತಿ ಇಲ್ಲದವನ ತರ ಆಗಿದ್ದೀನಿ.”
^ ಬಹುಶಃ, “ಒಂದೇ ಸಮನೇ.”