ಕೀರ್ತನೆ 95:1-11

  • ಸತ್ಯ ಆರಾಧನೆಗೂ ವಿಧೇಯತೆಗೂ ಇರೋ ಸಂಬಂಧ

    • “ಇವತ್ತು ನೀವು ಆತನ ಮಾತನ್ನ ಕೇಳಿದ್ರೆ” (7)

    • “ನಿಮ್ಮ ಹೃದಯವನ್ನ ನೀವು ಕಲ್ಲು ತರ ಮಾಡ್ಕೊಬೇಡಿ” (8)

    • “ಇವರು ನನ್ನ ವಿಶ್ರಾಂತಿಯಲ್ಲಿ ಸೇರಲ್ಲ” (11)

95  ಬನ್ನಿ, ಯೆಹೋವನಿಗೆ ಜೈಕಾರ ಹಾಕೋಣ! ರಕ್ಷಣೆಯ ಬಂಡೆ ಆಗಿರೋ ಆತನು ಗೆದ್ದಿದ್ದಕ್ಕೆ ಖುಷಿಪಡೋಣ.+   ಆತನ ಸನ್ನಿಧಿಗೆ* ಬಂದು ಆತನಿಗೆ ಧನ್ಯವಾದ ಹೇಳೋಣ,+ಆತನಿಗಾಗಿ ಹಾಡಿ ಜೈಕಾರ ಹಾಕೋಣ.   ಯಾಕಂದ್ರೆ ಯೆಹೋವ ಮಹಾನ್‌ ದೇವರು,ಬೇರೆಲ್ಲ ದೇವರುಗಳಿಂತ ದೊಡ್ಡ ರಾಜ.+   ಭೂಮಿಯ ಆಳಗಳು ಆತನ ಕೈಯಲ್ಲಿವೆ,ಪರ್ವತ ಶಿಖರಗಳು ಆತನಿಗೆ ಸೇರಿವೆ.+   ಆತನು ಮಾಡಿದ ಸಮುದ್ರ ಆತನದ್ದೇ,+ಆತನ ಕೈಗಳು ಒಣ ನೆಲವನ್ನ ಮಾಡಿವೆ.+   ಬನ್ನಿ, ನಮ್ಮನ್ನ ಸೃಷ್ಟಿಸಿದ ಯೆಹೋವನ ಮುಂದೆ ಮೊಣಕಾಲೂರಿ,ಬಗ್ಗಿ ನಮಸ್ಕರಿಸಿ, ಆತನನ್ನ ಆರಾಧಿಸೋಣ.+   ಯಾಕಂದ್ರೆ ಆತನು ನಮ್ಮ ದೇವರು,ಆತನು ಪರಿಪಾಲಿಸೋ ಜನ್ರು ನಾವು,ಆತನು ಕಾಳಜಿವಹಿಸೋ* ಕುರಿಗಳು ನಾವು.+ ಇವತ್ತು ನೀವು ಆತನ ಮಾತನ್ನ ಕೇಳಿದ್ರೆ,+   ನಿಮ್ಮ ಪೂರ್ವಜರು ಮೆರೀಬಾದಲ್ಲಿ* ಮಾಡಿದ ಹಾಗೆ,+ಕಾಡಲ್ಲಿ ಮಸ್ಸಾ* ದಿನದಂದು ಮಾಡಿದ ಹಾಗೆ,ನಿಮ್ಮ ಹೃದಯವನ್ನ ನೀವು ಕಲ್ಲು ತರ ಮಾಡ್ಕೊಬೇಡಿ,+   ನಿಮ್ಮ ಪೂರ್ವಜರು ನನ್ನನ್ನ ಪರೀಕ್ಷಿಸಿದ್ರು,+ಅವರು ನನ್ನ ಕೆಲಸಗಳನ್ನ ಕಣ್ಣಾರೆ ನೋಡಿದ್ರೂ ನನಗೆ ಸವಾಲು ಹಾಕಿದ್ರು.+ 10  ಆ ಪೀಳಿಗೆಯಿಂದ 40 ವರ್ಷ ನಾನು ರೋಸಿ ಹೋಗಿ,“ಈ ಜನ್ರು ಯಾವಾಗ್ಲೂ ಅಡ್ಡದಾರಿ ಹಿಡಿಯೋ ಹೃದಯ ಇರೋರು,ಇವರು ನನ್ನ ದಾರಿಗಳನ್ನ ತಿಳಿದಿಲ್ಲ” ಅಂತ ಹೇಳಿದೆ. 11  ಹಾಗಾಗಿ ನಾನು ಕೋಪದಿಂದ,“ಇವರು ನನ್ನ ವಿಶ್ರಾಂತಿಯಲ್ಲಿ ಸೇರಲ್ಲ”+ ಅಂತ ಆಣೆ ಮಾಡಿದೆ.

ಪಾದಟಿಪ್ಪಣಿ

ಅಕ್ಷ. “ಮುಖದ ಮುಂದೆ.”
ಅಕ್ಷ. “ಆತನ ಕೈಯಲ್ಲಿರೋ.”
ಅರ್ಥ “ಜಗಳ ಮಾಡೋದು.”
ಅರ್ಥ “ಪರೀಕ್ಷಿಸೋದು.”