ಕೀರ್ತನೆ 96:1-13

  • “ಯೆಹೋವನಿಗೆ ಹೊಸ ಹಾಡನ್ನ ಹಾಡಿ”

    • ಯೆಹೋವ ಬೇರೆ ಎಲ್ರಿಗಿಂತ ಹೊಗಳಿಕೆಗೆ ಯೋಗ್ಯ (4)

    • ಬೇರೆ ದೇವರುಗಳಿಂದ ಪ್ರಯೋಜನ ಇಲ್ಲ (5)

    • ಪವಿತ್ರ ಬಟ್ಟೆಗಳನ್ನ ಹಾಕೊಂಡು ಆರಾಧಿಸಿ (9)

96  ಯೆಹೋವನಿಗೆ ಹೊಸ ಹಾಡನ್ನ ಹಾಡಿ!+ ಭೂಮಿಯಲ್ಲಿ ಇರೋ ಜನ್ರೇ ಯೆಹೋವನಿಗೆ ಗೀತೆಯನ್ನ ಹಾಡಿ!+   ಯೆಹೋವನಿಗೆ ಹಾಡಿ, ಆತನ ಹೆಸ್ರನ್ನ ಸ್ತುತಿಸಿ. ಆತನ ರಕ್ಷಣೆಯ ಕೆಲಸಗಳ ಬಗ್ಗೆ ಪ್ರತಿದಿನ ಸಿಹಿಸುದ್ದಿ ಸಾರಿ!+   ಜನಾಂಗಗಳ ಮಧ್ಯ ಆತನ ಗೌರವದ ಬಗ್ಗೆ,ಆತನ ಅದ್ಭುತಗಳ ಬಗ್ಗೆ ಘೋಷಿಸಿ.+   ಯೆಹೋವ ದೊಡ್ಡವನು, ಆತನು ಬೇರೆ ಎಲ್ರಿಗಿಂತ ಹೊಗಳಿಕೆಗೆ ಯೋಗ್ಯ. ಬೇರೆಲ್ಲ ದೇವರುಗಳಿಗಿಂತ ಆತನು ವಿಸ್ಮಯ.   ಜನಾಂಗಗಳ ದೇವರುಗಳಿಂದ ಯಾವ ಪ್ರಯೋಜನನೂ ಇಲ್ಲ,+ಆದ್ರೆ ಯೆಹೋವನೇ ಆಕಾಶ ಮಾಡಿದ.+   ಆತನ ಸಾನಿಧ್ಯದಲ್ಲಿ ಘನತೆ* ಮತ್ತು ವೈಭವ ಇದೆ,+ಆತನ ಆರಾಧನಾ ಸ್ಥಳದಲ್ಲಿ ಶಕ್ತಿ ಮತ್ತು ಸೌಂದರ್ಯ ಇದೆ.+   ಜನಾಂಗಗಳ ಜನ್ರೇ ಯೆಹೋವನಿಗೆ ಕೊಡಬೇಕಾಗಿ ಇರೋದನ್ನ ಕೊಡಿ,ಯೆಹೋವನ ಮಹಿಮೆ ಮತ್ತು ಬಲಕ್ಕಾಗಿ ಆತನಿಗೆ ಸಲ್ಲಿಸಬೇಕಾಗಿ ಇರೋದನ್ನ ಸಲ್ಲಿಸಿ.+   ಯೆಹೋವನ ಹೆಸ್ರಿಗೆ ಕೊಡಬೇಕಾದ ಗೌರವವನ್ನ ಕೊಡಿ,+ಉಡುಗೊರೆಗಳನ್ನ ತಗೊಂಡು ಆತನ ಅಂಗಳಕ್ಕೆ ಬನ್ನಿ.   ಪವಿತ್ರವಾದ ಬಟ್ಟೆಗಳನ್ನ ಹಾಕೊಂಡು ಯೆಹೋವನಿಗೆ ಬಗ್ಗಿ ನಮಸ್ಕಾರ ಮಾಡಿ. ಭೂನಿವಾಸಿಗಳೇ, ಆತನ ಮುಂದೆ ಗಡಗಡ ಅಂತ ನಡುಗಿ! 10  “ಯೆಹೋವ ರಾಜನಾಗಿದ್ದಾನೆ” ಅಂತ ಎಲ್ಲ ಜನ್ರಿಗೆ ಸಾರಿಹೇಳಿ.+ ಆತನು ಭೂಮಿಯನ್ನ* ಅಲುಗಾಡದ ಹಾಗೆ ಸ್ಥಾಪಿಸಿದ್ದಾನೆ. ಅದನ್ನ ಕದಲಿಸೋಕೆ* ಆಗಲ್ಲ. ಆತನು ಜನ್ರಿಗೆ ನ್ಯಾಯವಾಗಿ ತೀರ್ಪು ಮಾಡ್ತಾನೆ.+ 11  ಗಗನ ಹರ್ಷಿಸಲಿ, ಭೂಮಿ ಆನಂದಿಸಲಿ,ಸಮುದ್ರ ಮತ್ತು ಅದ್ರಲ್ಲಿರೋ ಎಲ್ಲವೂ ಜೈಕಾರ ಹಾಕಲಿ,+ 12  ಬಯಲುಗಳು ಮತ್ತು ಅದ್ರಲ್ಲಿರೋ ಎಲ್ಲವೂ ಖುಷಿಪಡಲಿ.+ ಅದ್ರ ಜೊತೆ ಕಾಡಲ್ಲಿರೋ ಎಲ್ಲ ಮರಗಳು ಸಂತೋಷದಿಂದ ಕೂಗಾಡಲಿ,+ 13  ಅವು ಯೆಹೋವನ ಮುಂದೆ ಸಂತೋಷದಿಂದ ಜೈಕಾರ ಹಾಕಲಿ, ಯಾಕಂದ್ರೆ ಆತನು ಬರ್ತಿದ್ದಾನೆ,*ಆತನು ಭೂಮಿಗೆ ನ್ಯಾಯತೀರಿಸೋಕೆ ಬರ್ತಿದ್ದಾನೆ. ಆತನು ನೀತಿಯಿಂದ ಇಡೀ ಭೂಮಿಗೆ ನ್ಯಾಯತೀರಿಸ್ತಾನೆ+ನಂಬಿಗಸ್ತಿಕೆಯಿಂದ ಎಲ್ಲ ಜನಾಂಗಗಳಿಗೆ ನ್ಯಾಯತೀರಿಸ್ತಾನೆ.+

ಪಾದಟಿಪ್ಪಣಿ

ಅಥವಾ “ಗೌರವ.”
ಅಥವಾ “ಫಲವತ್ತಾದ ನೆಲವನ್ನ.”
ಅಥವಾ “ಅಲ್ಲಾಡಿಸೋಕೆ, ಅದುರಿಸೋಕೆ.”
ಅಥವಾ “ಬಂದಿದ್ದಾನೆ.”