ಕೀರ್ತನೆ 99:1-9
99 ಯೆಹೋವ ರಾಜ ಆಗಿದ್ದಾನೆ.+ ದೇಶಗಳು ನಡುಗಲಿ.
ಆತನು ಕೆರೂಬಿಗಳ ಮೇಲೆ* ಕೂತಿದ್ದಾನೆ.+ ಭೂಮಿ ಕಂಪಿಸಲಿ.
2 ಚೀಯೋನಲ್ಲಿ ಯೆಹೋವ ದೊಡ್ಡವನು,ಆತನು ಉನ್ನತನು, ಎಲ್ಲ ಜನಾಂಗಗಳು ಆತನ ಕೈಕೆಳಗಿವೆ.+
3 ಅವರು ನಿನ್ನ ಮಹಾ ಹೆಸ್ರನ್ನ ಸ್ತುತಿಸಲಿ,+ಯಾಕಂದ್ರೆ ಅದು ವಿಸ್ಮಯವಾಗಿದೆ, ಪವಿತ್ರವಾಗಿದೆ.
4 ಆತನು ನ್ಯಾಯವನ್ನ ಪ್ರೀತಿಸೋ ಶಕ್ತಿಶಾಲಿ ರಾಜ.+
ಯಾವುದು ಸರಿನೋ ಅದನ್ನ ನೀನು ದೃಢವಾಗಿ ಸ್ಥಾಪಿಸಿದ್ದೀಯ.
ಯಾಕೋಬಿನಲ್ಲಿ ನೀನು ನ್ಯಾಯ, ನೀತಿಯನ್ನ ಸ್ಥಾಪಿಸಿದ್ದೀಯ.+
5 ನಮ್ಮ ದೇವರಾದ ಯೆಹೋವನನ್ನ ಉನ್ನತಕ್ಕೆ ಏರಿಸಿ,+ಆತನ ಪಾದಪೀಠದ ಮುಂದೆ ಬಗ್ಗಿ ನಮಸ್ಕರಿಸಿ,*+ಆತನು ಪವಿತ್ರನು.+
6 ಆತನ ಪುರೋಹಿತರಲ್ಲಿ ಮೋಶೆ ಮತ್ತು ಆರೋನ ಇದ್ರು,+ಆತನ ಹೆಸ್ರನ್ನ ಕರಿಯೋರಲ್ಲಿ ಸಮುವೇಲ ಇದ್ದ.+
ಅವರು ಯೆಹೋವನಿಗೆ ಮೊರೆ ಇಡ್ತಿದ್ರು,ಆತನು ಅವ್ರಿಗೆ ಉತ್ತರ ಕೊಡ್ತಿದ್ದ.+
7 ಆತನು ಮೋಡಗಳಿಂದ ಅವ್ರ ಜೊತೆ ಮಾತಾಡ್ತಿದ್ದ.+
ಆತನು ಅವ್ರಿಗೆ ಕೊಟ್ಟ ಎಚ್ಚರಿಕೆಯನ್ನ ಮತ್ತು ಆಜ್ಞೆಯನ್ನ ಅವರು ಪಾಲಿಸಿದ್ರು.+
8 ನಮ್ಮ ದೇವರಾದ ಯೆಹೋವನೇ, ನೀನು ಅವ್ರಿಗೆ ಉತ್ತರ ಕೊಟ್ಟೆ.+
ನೀನು ಅವ್ರ ತಪ್ಪುಗಳನ್ನ ಕ್ಷಮಿಸಿದೆ,+ಆದ್ರೆ ಅವ್ರ ಪಾಪಗಳಿಗಾಗಿ ಶಿಕ್ಷೆ ಕೊಟ್ಟೆ.*+
9 ನಮ್ಮ ದೇವರಾದ ಯೆಹೋವನನ್ನ ಉನ್ನತಕ್ಕೆ ಏರಿಸಿ+ಆತನ ಪವಿತ್ರ ಪರ್ವತದ ಮುಂದೆ ಬಗ್ಗಿ ನಮಸ್ಕರಿಸಿ,*+ಯಾಕಂದ್ರೆ ನಮ್ಮ ದೇವರಾದ ಯೆಹೋವ ಪವಿತ್ರನು.+
ಪಾದಟಿಪ್ಪಣಿ
^ ಬಹುಶಃ, “ಮಧ್ಯದಲ್ಲಿ.”
^ ಅಥವಾ “ಆರಾಧಿಸಿ.”
^ ಅಕ್ಷ. “ಅವರಿಗೆ ಸೇಡು ತೀರಿಸಿದೆ.”
^ ಅಥವಾ “ಆರಾಧಿಸಿ.”