ಚೆಫನ್ಯ 1:1-18

  • ಯೆಹೋವನ ತೀರ್ಪಿನ ದಿನ ಹತ್ರ ಇದೆ (1-18)

    • ಯೆಹೋವನ ದಿನ ಅತೀ ವೇಗವಾಗಿ ಬರ್ತಿದೆ (14)

    • ಬೆಳ್ಳಿಬಂಗಾರ ಕಾಪಾಡಲ್ಲ (18)

1  ಆಮೋನನ+ ಮಗ ಯೋಷೀಯ+ ಯೆಹೂದವನ್ನ ಆಳ್ತಿದ್ದಾಗ ಯೆಹೋ​ವನ ಸಂದೇಶ ಚೆಫನ್ಯನಿಗೆ* ಸಿಕ್ತು. ಚೆಫನ್ಯ ಕೂಷಿಯ ಮಗ. ಕೂಷಿ ಗೆದಲ್ಯನ ಮಗ. ಗೆದಲ್ಯ ಅಮರ್ಯನ ಮಗ. ಅಮರ್ಯ ಹಿಜ್ಕೀಯನ ಮಗ. ಚೆಫನ್ಯನಿಗೆ ಸಿಕ್ಕ ಸಂದೇಶ ಹೀಗಿತ್ತು:   “ನಾನು ಭೂಮಿ ಮೇಲಿರೋ ಎಲ್ಲವನ್ನೂ ಪೂರ್ತಿ ಅಳಿಸಿಹಾಕ್ತೀನಿ” ಅಂತ ಯೆಹೋವ ಕೂಗಿ ಹೇಳ್ತಿದ್ದಾನೆ.+   “ನಾನು ಮನುಷ್ಯರನ್ನ, ಪ್ರಾಣಿಗಳನ್ನ ಅಳಿಸಿಹಾಕ್ತೀನಿ. ಪಕ್ಷಿಗಳನ್ನ, ಮೀನುಗಳನ್ನ ನಾಶ ಮಾಡ್ತೀನಿ,+ಕೆಟ್ಟವ್ರ ಜೊತೆ ಪಾಪಕ್ಕೆ ನಡೆಸೋ ಬಲೆಗಳನ್ನೂ*+ ಅಳಿಸಿಹಾಕ್ತೀನಿ. ಮನುಷ್ಯರನ್ನೆಲ್ಲ ಭೂಮಿ ಮೇಲಿಂದ ಅಳಿಸಿಹಾಕ್ತೀನಿ” ಅಂತ ಯೆಹೋವ ಹೇಳ್ತಿದ್ದಾನೆ.   “ನಾನು ನನ್ನ ಕೈಯನ್ನ ಯೆಹೂದದ ವಿರುದ್ಧವಾಗಿ,ಯೆರೂಸಲೇಮಿನ ಎಲ್ಲ ಜನ್ರ ವಿರುದ್ಧವಾಗಿ ಎತ್ತುತ್ತೀನಿ. ಈ ಜಾಗದಲ್ಲಿ ಬಾಳನ ಸುಳಿವೇ ಸಿಗದ ಹಾಗೆ ಮಾಡ್ತೀನಿ.+ ಪುರೋಹಿತರ ಜೊತೆ ಸುಳ್ಳುದೇವರುಗಳ ಪೂಜಾರಿಗಳನ್ನೂ ನಾಶ ಮಾಡ್ತೀನಿ.+   ಮನೆಗಳ ಮಾಳಿಗೆ ಮೇಲೆ ಆಕಾಶದ ಸೈನ್ಯಕ್ಕೆ ನಮಸ್ಕಾರ ಮಾಡುವವ್ರನ್ನ,+ಒಂದುಕಡೆ ಯೆಹೋವನನ್ನ ಆರಾಧಿಸ್ತಾ ಆತನಿಗೆ ನಿಷ್ಠೆ ತೋರಿಸ್ತೀವಿ ಅಂತ ಮಾತುಕೊಟ್ಟು,+ಇನ್ನೊಂದು ಕಡೆ ಮಲ್ಕಾಮನಿಗೂ ನಿಷ್ಠೆ ತೋರಿಸ್ತೀವಿ ಅಂತ ಆಣೆ ಮಾಡುವವ್ರನ್ನ+ ಅಳಿಸಿಹಾಕ್ತೀನಿ.   ಯೆಹೋವನನ್ನ ಬಿಟ್ಟುಬಿಟ್ಟವ್ರನ್ನ,+ಯೆಹೋವನಿಗಾಗಿ ಹುಡುಕದವ್ರನ್ನ, ಆತನ ನಿರ್ದೇಶನಗಳನ್ನ ಕೇಳಿ ತಿಳ್ಕೊಳ್ಳದ ಜನ್ರನ್ನ ಅಳಿಸಿಹಾಕ್ತೀನಿ.”+   ವಿಶ್ವದ ರಾಜ ಯೆಹೋವನ ಮುಂದೆ ಮೌನವಾಗಿರಿ, ಯಾಕಂದ್ರೆ ಯೆಹೋವನ ದಿನ ಹತ್ರ ಇದೆ.+ ಯೆಹೋವ ಒಂದು ಬಲಿಯನ್ನ ಸಿದ್ಧಮಾಡಿದ್ದಾನೆ, ಯಾರನ್ನ ಕರೆದಿದ್ದಾನೋ ಅವ್ರನ್ನೆಲ್ಲ ಆತನು ಪವಿತ್ರ ಮಾಡಿದ್ದಾನೆ.   “ಯೆಹೋವನಾಗಿರೋ ನಾನು ಬಲಿ ಕೊಡೋ ದಿನದಲ್ಲಿ ಅಧಿಕಾರಿಗಳಿಂದ ಲೆಕ್ಕ ಕೇಳ್ತೀನಿ,ರಾಜನ ಮಕ್ಕಳಿಂದ,+ ವಿದೇಶಿ ಬಟ್ಟೆಗಳನ್ನ ಹಾಕೊಂಡಿರೋ ಎಲ್ರಿಂದ ಲೆಕ್ಕ ಕೇಳ್ತೀನಿ.   ಆ ದಿನ ಯಾರು ವೇದಿಕೆ* ಮೇಲೆ ಹತ್ತುತ್ತಾರೋ ಅವ್ರೆಲ್ಲರಿಂದ ಲೆಕ್ಕ ಕೇಳ್ತೀನಿ. ತಮ್ಮ ಯಜಮಾನನ ಮನೆಯನ್ನ ಹಿಂಸೆ, ಮೋಸದಿಂದ ತುಂಬಿಸಿ ಬಿಟ್ಟವನಿಂದ ಲೆಕ್ಕ ಕೇಳ್ತೀನಿ.” 10  ಯೆಹೋವ ಹೀಗೆ ಹೇಳಿದ್ದಾನೆ: “ಆ ದಿನ,ಮೀನುಬಾಗಿಲಿನ ಹತ್ರ ಕೂಗು ಕೇಳಿಸುತ್ತೆ,+ಪಟ್ಟಣದ ಎರಡ್ನೇ ಭಾಗದಿಂದ ಗೋಳಾಟ,+ಬೆಟ್ಟಗಳಿಂದ ಧಡಂ ಧಡಂ ಅನ್ನೋ ಶಬ್ದ ಕೇಳಿಸುತ್ತೆ. 11  ಮಕ್ತೇಶಿನ* ಜನ್ರೇ, ಗೋಳಾಡಿ. ಯಾಕಂದ್ರೆ, ವ್ಯಾಪಾರಿಗಳು ಬಿದ್ದುಹೋಗಿದ್ದಾರೆ.* ಬೆಳ್ಳಿಯನ್ನ ತೂಕಮಾಡಿ ಕೊಡುವವ್ರೆಲ್ಲ ನಾಶ ಆಗಿದ್ದಾರೆ. 12  ಆಗ ನಾನು ದೀಪಗಳನ್ನ ಹಿಡ್ಕೊಂಡು ಯೆರೂಸಲೇಮನ್ನ ಚೆನ್ನಾಗಿ ಹುಡುಕ್ತೀನಿ. ‘ಯೆಹೋವ ಒಳ್ಳೇದೂ ಮಾಡಲ್ಲ, ಕೆಟ್ಟದೂ ಮಾಡಲ್ಲ’ ಅಂತ ಮನಸ್ಸಲ್ಲೇ ಅಂದ್ಕೊಂಡು,ಯಾವುದ್ರ ಬಗ್ಗೆನೂ ಚಿಂತೆ ಮಾಡದ ಜನ್ರಿಂದ* ಲೆಕ್ಕ ಕೇಳ್ತೀನಿ.+ 13  ಅವ್ರ ಆಸ್ತಿ ಲೂಟಿ ಆಗುತ್ತೆ, ಅವ್ರ ಮನೆಗಳು ನಾಶವಾಗುತ್ತೆ.+ ಅವರು ಮನೆಗಳನ್ನ ಕಟ್ಕೊಳ್ತಾರೆ, ಆದ್ರೆ ಅದ್ರಲ್ಲಿ ವಾಸ ಮಾಡಲ್ಲ,ಅವರು ದ್ರಾಕ್ಷಿತೋಟಗಳನ್ನ ಮಾಡ್ಕೊಳ್ತಾರೆ, ಆದ್ರೆ ಅದ್ರ ದ್ರಾಕ್ಷಾಮದ್ಯ ಕುಡಿಯಲ್ಲ.+ 14  ಯೆಹೋವನ ಮಹಾ ದಿನ ಹತ್ರ ಇದೆ!+ ಅದು ತುಂಬ ಹತ್ರ ಇದೆ, ಬೇಗ ಬರ್ತಿದೆ!+ ಯೆಹೋವನ ದಿನದ ಶಬ್ದ ಭಯಂಕರವಾಗಿರುತ್ತೆ.+ ಆ ದಿನ ಒಬ್ಬ ವೀರ ಸೈನಿಕ ಗೋಳಾಡ್ತಾನೆ.+ 15  ಅದು ಉಗ್ರಕೋಪದ ದಿನ,+ಅದು ನೋವಿನ ದಿನ, ದುಃಖದ ದಿನ,+ಅದು ಬಿರುಗಾಳಿಯ ದಿನ, ನಾಶದ ದಿನ,ಅದು ಕತ್ತಲೆಯ ದಿನ, ಮೊಬ್ಬಿನ ದಿನ,+ಅದು ಕಾರ್ಮೋಡಗಳ ದಿನ, ಕಗ್ಗತ್ತಲ ದಿನ.+ 16  ಭದ್ರಕೋಟೆಗಳಿರೋ ಪಟ್ಟಣಗಳ ವಿರುದ್ಧ, ಮೂಲೆಯಲ್ಲಿರೋ ಎತ್ತರವಾದ ಗೋಪುರಗಳ ವಿರುದ್ಧ,+ಕೊಂಬಿನ ಶಬ್ದ ಮತ್ತು ಯುದ್ಧದ ಕೂಗು ಕೇಳಿಸೋ ದಿನ.+ 17  ನಾನು ಎಲ್ರ ಮೇಲೆ ನಾಶ ತರ್ತಿನಿ,ಅವರು ಕುರುಡರ ಹಾಗೆ ನಡಿತಾರೆ,+ಯಾಕಂದ್ರೆ ಅವರು ಯೆಹೋವನ ವಿರುದ್ಧ ಪಾಪ ಮಾಡಿದ್ದಾರೆ.+ ಅವ್ರ ರಕ್ತ ಧೂಳಿನ ಹಾಗೆಅವ್ರ ಮಾಂಸ* ಗೊಬ್ಬರದ ಹಾಗೆ ಬಿದ್ದಿರುತ್ತೆ.+ 18  ಯೆಹೋವನ ಉಗ್ರಕೋಪದ ದಿನ ಅವ್ರನ್ನ ಅವ್ರ ಬೆಳ್ಳಿಬಂಗಾರ ಕಾಪಾಡಲ್ಲ,+ಯಾಕಂದ್ರೆ ಆತನ ಕೋಪದ ಬೆಂಕಿ ಇಡೀ ಭೂಮಿಯನ್ನ ಸುಟ್ಟುಬಿಡುತ್ತೆ,+ಆತನು ಭೂಮಿ ಮೇಲಿರೋ ಜನ್ರ​ನ್ನೆಲ್ಲ ಪೂರ್ತಿ ನಾಶ ಮಾಡ್ತಾನೆ. ಆ ನಾಶ ​ಭಯಂಕರ ಆಗಿ​ರುತ್ತೆ.”+

ಪಾದಟಿಪ್ಪಣಿ

ಅರ್ಥ “ಯೆಹೋವ ಬಚ್ಚಿಟ್ಟಿದ್ದಾನೆ.”
ಇಲ್ಲಿ ಮೂರ್ತಿ ಆರಾಧನೆಗೆ ಸಂಬಂಧಪಟ್ಟ ವಸ್ತುಗಳ ಬಗ್ಗೆ ಹೇಳಲಾಗಿದೆ.
ಅಥವಾ “ಹೊಸ್ತಿಲು.” ಬಹುಶಃ ರಾಜನ ಸಿಂಹಾಸನದ ವೇದಿಕೆ ಆಗಿರಬಹುದು.
ಅಕ್ಷ. “ಮೂಕರಾಗಿದ್ದಾರೆ.”
ಇದು ಮೀನು ಬಾಗಿಲಿನ ಹತ್ರ ಇರೋ ಯೆರೂಸಲೇಮಿನ ಒಂದು ಭಾಗ ಆಗಿರಬಹುದು.
ಅಕ್ಷ. “ದ್ರಾಕ್ಷಾಮದ್ಯದ ತೊಟ್ಟಿಯ ತಳದಲ್ಲಿ ಮಡ್ಡಿ ತರ ಇರೋ ಜನ್ರಿಂದ.”
ಅಕ್ಷ. “ಕರುಳು.”