ಚೆಫನ್ಯ 3:1-20

  • ದಂಗೆಯೆದ್ದ ಭ್ರಷ್ಟ ಪಟ್ಟಣವಾದ ಯೆರೂಸಲೇಮ್‌ (1-7)

  • ತೀರ್ಪು ಮತ್ತು ಪುನಸ್ಥಾಪನೆ (8-20)

    • ಶುದ್ಧ ಭಾಷೆ (9)

    • ದೀನ ಮತ್ತು ವಿನಮ್ರ ಜನ್ರ ರಕ್ಷಣೆ (12)

    • ಚೀಯೋನನ್ನ ನೋಡಿ ಯೆಹೋವನಿಗೆ ಖುಷಿ (17)

3  ದಂಗೆಕೋರತನ, ಭ್ರಷ್ಟತೆ ಮತ್ತು ದಬ್ಬಾಳಿಕೆಯಿಂದ ತುಂಬಿರೋ ಪಟ್ಟಣದ ಗತಿಯನ್ನ ಏನು ಹೇಳೋದು!+   ಅದು ಯಾರ ಮಾತನ್ನೂ ಕೇಳಲಿಲ್ಲ,+ ತಿದ್ದಿದಾಗ ಸರಿಮಾಡ್ಕೊಳಲಿಲ್ಲ.+ ಅದು ಯೆಹೋವನಲ್ಲಿ ಭರವಸೆ ಇಡಲಿಲ್ಲ.+ ತನ್ನ ದೇವರ ಹತ್ರ ಬರಲಿಲ್ಲ.+   ಅದ್ರ ಅಧಿಕಾರಿಗಳು ಗರ್ಜಿಸೋ ಸಿಂಹಗಳು.+ ಅದ್ರ ನ್ಯಾಯಾಧೀಶರು ರಾತ್ರಿ ಭೇಟೆಯಾಡೋ ತೋಳಗಳು,ಬೆಳಿಗಾಗೋ ಹೊತ್ತಿಗೆ ಒಂದು ಮೂಳೆನೂ ಅವು ಉಳಿಸಲ್ಲ.   ಅದ್ರ ಪ್ರವಾದಿಗಳು ಗರ್ವಿಷ್ಠರು, ಮೋಸಗಾರರು.+ ಅದ್ರ ಪುರೋಹಿತರು ಪವಿತ್ರವಾಗಿ ಇರೋದನ್ನ ಅಪವಿತ್ರ ಮಾಡ್ತಾರೆ,+ನಿಯಮ ಮುರೀತಾರೆ.+   ಅದ್ರ ಮಧ್ಯ ಇರೋ ಯೆಹೋವ ನೀತಿವಂತ,+ ಆತನು ಯಾವ ತಪ್ಪನ್ನೂ ಮಾಡಲ್ಲ. ಬೆಳಕಾಗೋದು ಎಷ್ಟು ನಿಜಾನೋ,ದಿನಾ ಬೆಳಿಗ್ಗೆ ಆತನು ತನ್ನ ತೀರ್ಪುಗಳನ್ನ ಹೇಳೋದೂ ಅಷ್ಟೇ ನಿಜ.+ ಆದ್ರೆ ಅನೀತಿವಂತರಿಗೆ ನಾಚಿಕೆ ಅಂದ್ರೆ ಏನಂತ ಗೊತ್ತೇ ಇಲ್ಲ.+   “ನಾನು ಜನಾಂಗಗಳನ್ನ ನಾಶಮಾಡಿದೆ, ಮೂಲೆಯಲ್ಲಿರೋ ಅವ್ರ ಗೋಪುರಗಳಲ್ಲಿ ಜನ್ರೇ ಇಲ್ಲದ ಹಾಗೆ ಮಾಡಿದೆ. ಅವ್ರ ಬೀದಿಗಳಲ್ಲಿ ಯಾರೂ ನಡಿ​ಯದ ಹಾಗೆ ಅವನ್ನ ಹಾಳುಮಾಡಿದೆ. ಅವ್ರ ಪಟ್ಟಣಗಳು ಹಾಳುಬಿದ್ದಿವೆ, ಅಲ್ಲಿ ಯಾರೂ ಇಲ್ಲ.+   ಆ ಪಟ್ಟಣ ನಾಶ ಆಗಬಾರದು ಅಂತ+ ಅದಕ್ಕೆ,‘ನೀನು ನನಗೆ ಭಯಪಡು, ನಾನು ತಿದ್ದಿದಾಗ* ಸರಿಮಾಡ್ಕೊ’ ಅಂತ ಹೇಳಿದ್ದೆ.+ ಅದೆಲ್ಲದಕ್ಕೂ ಲೆಕ್ಕ ಕೇಳ್ತೀನಿ.* ಆದ್ರೆ ಅವರು ಕೆಟ್ಟ ಕೆಲಸಗಳನ್ನ ಮಾಡೋಕೆ ಇನ್ನೂ ಆತುರಪಡ್ತಿದ್ದಾರೆ.+   ಯೆಹೋವ ಹೀಗೆ ಹೇಳ್ತಾನೆ: ‘ಲೂಟಿ ಮಾಡಿದ ವಸ್ತುಗಳನ್ನ ತಗೊಳ್ಳೋಕೆ,ನಾನು ಬರೋ ತನಕ* ನೀವು ನನಗಾಗಿ ಕಾಯ್ತಾ ಇರಿ.*+ ಯಾಕಂದ್ರೆ ದೇಶಗಳನ್ನ, ಸಾಮ್ರಾಜ್ಯಗಳನ್ನ ಒಟ್ಟುಸೇರಿಸೋದು ನನ್ನ ತೀರ್ಪು. ನನ್ನ ಉಗ್ರ ಕೋಪವನ್ನ, ಕ್ರೋಧವನ್ನ ಅವುಗಳ ಮೇಲೆ ಸುರಿಸೋಕೆ ನಾನು ತೀರ್ಪು ಕೊಡ್ತೀನಿ.+ ನನ್ನ ಕೋಪ ಬೆಂಕಿ ತರ ಇದೆ. ಅದು ಇಡೀ ಭೂಮಿ ಸುಟ್ಟುಬಿಡುತ್ತೆ.+   ಆಗ ನಾನು, ದೇಶಗಳ ಜನ್ರೆಲ್ಲ ಯೆಹೋವ ಅನ್ನೋ ನನ್ನ ಹೆಸ್ರನ್ನ ಹೊಗಳೋಕೆ ಆಗೋ ಹಾಗೆ,ಹೆಗಲಿಗೆ ಹೆಗಲು ಕೊಟ್ಟು ಅವರು ನನ್ನ ಸೇವೆ ಮಾಡೋ ತರ,*ಅವ್ರಿಗೆಲ್ಲ ಒಂದು ಶುದ್ಧ ಭಾಷೆ ಕಲಿಸ್ತೀನಿ.’+ 10  ನನ್ನನ್ನ ಬೇಡ್ಕೊಳ್ಳೋ ಅಂದ್ರೆ ಚೆಲ್ಲಾ​ಪಿಲ್ಲಿ ಆಗಿರೋ ನನ್ನ ಜನ್ರು,ಇಥಿಯೋಪ್ಯದ ನದಿ ಪ್ರದೇಶಗಳಿಂದ ನನಗಾಗಿ ಉಡುಗೊರೆ ತಗೊಂಡು ಬರ್ತಾರೆ.+ 11  ನೀನು ನನ್ನ ವಿರುದ್ಧ ದಂಗೆ ಎದ್ದು ಮಾಡಿದ ಕೆಟ್ಟ ಕೆಲಸಗಳಿಂದಾಗಿ,ಆ ದಿನ ನೀನು ನಾಚಿಕೆಪಡೋ ಅಗತ್ಯ ಇಲ್ಲ.+ ಯಾಕಂದ್ರೆ ಜಂಬದಿಂದ ಕೊಚ್ಕೊಳ್ಳೋರನ್ನ ನಿನ್ನ ಮಧ್ಯದಿಂದ ತೆಗೆದುಹಾಕ್ತೀನಿ. ಆಗ ನೀನು ನನ್ನ ಪವಿತ್ರ ಬೆಟ್ಟದಲ್ಲಿ ಜಂಬ ತೋರಿಸಲ್ಲ.+ 12  ದೀನರು ಮತ್ತು ಜಂಬ ಇಲ್ಲದವರು ನಿನ್ನ ಮಧ್ಯದಲ್ಲಿ ಇರೋ ತರ ಮಾಡ್ತೀನಿ.+ ಅವರು ಯೆಹೋವ ಅನ್ನೋ ನನ್ನ ಹೆಸ್ರಲ್ಲಿ ಆಶ್ರಯ ಪಡೀತಾರೆ. 13  ಇಸ್ರಾಯೇಲ್ಯರಲ್ಲಿ ಉಳಿದವರು+ ಯಾವ ಕೆಟ್ಟ ಕೆಲಸಗಳನ್ನೂ ಮಾಡಲ್ಲ.+ ಅವರು ಸುಳ್ಳು ಹೇಳಲ್ಲ, ಅವ್ರ ಬಾಯಲ್ಲಿ ಮೋಸದ ನಾಲಿಗೆ ಸಿಗಲ್ಲ. ಅವರು ತಿಂದು ಅರಾಮಾಗಿ ಇರ್ತಾರೆ, ಯಾರೂ ಅವ್ರನ್ನ ಹೆದರಿಸಲ್ಲ.”+ 14  ಚೀಯೋನಿನ ಮಗಳೇ, ಸಂತೋಷದಿಂದ ಜೈಕಾರ ಹಾಕು! ಇಸ್ರಾಯೇಲೇ, ವಿಜಯಗೀತೆ ಹಾಡಿ ಕೂಗಾಡು!+ ಯೆರೂಸಲೇಮಿನ ಮಗಳೇ, ಪೂರ್ಣ ಹೃದಯದಿಂದ ಆನಂದಿಸು, ಖುಷಿಪಡು!+ 15  ಯೆಹೋವ ನಿನಗೆ ಕೊಟ್ಟ ಶಿಕ್ಷೆಯನ್ನ ವಾಪಸ್‌ ತಗೊಂಡಿದ್ದಾನೆ.+ ಆತನು ನಿನ್ನ ಶತ್ರುವನ್ನ ದೂರ ತಳ್ಳಿದ್ದಾನೆ.+ ಇಸ್ರಾಯೇಲಿನ ರಾಜ ಯೆಹೋವ ನಿನ್ನ ಮಧ್ಯ ಇದ್ದಾನೆ.+ ಹಾಗಾಗಿ ವಿಪತ್ತಿನ ಭಯ ಇನ್ಮುಂದೆ ನಿನಗಿರಲ್ಲ.+ 16  ಆ ದಿನ ಯೆರೂಸಲೇಮಿಗೆ ಈ ಸಂದೇಶ ಸಿಗುತ್ತೆ: “ಚೀಯೋನೇ ಭಯಪಡಬೇಡ,+ನಿನ್ನ ಕೈಗಳಿಗೆ ಶಕ್ತಿ ಇಲ್ಲದ ಹಾಗೆ* ಮಾಡ್ಕೊಬೇಡ. 17  ನಿನ್ನ ದೇವರಾದ ಯೆಹೋವ ನಿನ್ನ ಮಧ್ಯ ಇದ್ದಾನೆ.+ ಬಲಿಷ್ಠ ವೀರ ಸೈನಿಕರ ತರ ಆತನು ನಿನ್ನನ್ನ ಕಾಪಾಡ್ತಾನೆ. ನಿನ್ನನ್ನ ನೋಡಿ ತುಂಬ ಖುಷಿಪಡ್ತಾನೆ.+ ನಿನ್ನ ಮೇಲಿನ ಪ್ರೀತಿಯಲ್ಲಿ ಮುಳುಗಿ ಮೌನವಾಗಿ ಇರ್ತಾನೆ.* ಆತನು ನಿನ್ನನ್ನ ನೋಡಿ ಖುಷಿ​ಯಿಂದ ಆನಂದದಿಂದ ಕೂಗ್ತಾನೆ. 18  ನಿನ್ನ ಹಬ್ಬಗಳಿಗೆ ಬರೋಕೆ ಆಗದೆ ಬೇಜಾರಾಗಿ ಇರುವ​ವ್ರನ್ನ ನಾನು ಒಟ್ಟುಸೇರಿಸ್ತೀನಿ,+ಜೈಲಲ್ಲಿ ಅವಮಾನ ಆಗ್ತಿದ್ರಿಂದ ಅವ್ರಿಗೆ ಬರಕ್ಕಾಗಲಿಲ್ಲ.+ 19  ನೋಡು! ಆ ದಿನ ನಾನು ನಿನ್ನ ಮೇಲೆ ದಬ್ಬಾಳಿಕೆ ಮಾಡ್ತಿದ್ದವ್ರ ವಿರುದ್ಧ ಕ್ರಮ ತಗೊಳ್ತೀನಿ.+ ಕುಂಟುವವನನ್ನ ರಕ್ಷಿಸ್ತೀನಿ,+ಚೆಲ್ಲಾಪಿಲ್ಲಿಯಾಗಿ ಹೋಗಿರುವವ್ರನ್ನ ಒಟ್ಟುಸೇರಿಸ್ತೀನಿ.+ ಅವ್ರಿಗೆ ಅವಮಾನ ಆದ ದೇಶಗಳಲ್ಲೇ,ಅವ್ರಿಗೆ ಹೊಗಳಿಕೆ ಸಿಗೋ ಹಾಗೆ ಮಾಡ್ತೀನಿ, ಅವರು ಪ್ರಸಿದ್ಧರಾಗೋ ಹಾಗೆ ಮಾಡ್ತೀನಿ. 20  ಆ ಸಮಯದಲ್ಲಿ ನಾನು ನಿಮ್ಮನ್ನ ಸ್ವದೇಶಕ್ಕೆ ಕರ್ಕೊಂಡು ಬರ್ತಿನಿ,ನಾನು ನಿಮ್ಮನ್ನ ಒಟ್ಟುಸೇರಿಸ್ತೀನಿ. ನಿಮ್ಮ ಕಣ್ಮುಂದೆನೇ ನಿಮ್ಮ ಜನ್ರನ್ನ ಜೈಲಿಂದ ವಾಪಸ್‌ ಕರ್ಕೊಂಡು ಬರೋವಾಗ,ಭೂಮಿಯಲ್ಲಿರೋ ಎಲ್ಲ ಜನ್ರ ಮಧ್ಯ ನಿಮಗೆ ಹೊಗಳಿಕೆ ಸಿಗೋ ತರ,+ ನೀವು ಪ್ರಸಿದ್ಧರಾಗೋ ತರ ಮಾಡ್ತೀನಿ” ಅಂತ ಯೆಹೋವ ಹೇಳ್ತಿದ್ದಾನೆ.+

ಪಾದಟಿಪ್ಪಣಿ

ಅಥವಾ “ಶಿಸ್ತು ಕೊಟ್ಟಾಗ.”
ಅಥವಾ “ನಾನು ಅದನ್ನ ಶಿಕ್ಷಿಸ್ತೀನಿ.”
ಬಹುಶಃ, “ನಾನು ಸಾಕ್ಷಿ ಹಾಗೆ ಬರೋ ತನಕ.”
ಅಥವಾ “ತಾಳ್ಮೆಯಿಂದ ಕಾಯ್ತಾ ಇರಿ.”
ಅಥವಾ “ಒಟ್ಟಾಗಿ ಆತನನ್ನ ಆರಾಧಿಸೋ ತರ.”
ಅಕ್ಷ. “ಜೋಲು ಬೀಳೋ ತರ.”
ಅಥವಾ “ಸಂತೃಪ್ತಿಯಿಂದ ಇರ್ತಾನೆ.”