ಜೆಕರ್ಯ 7:1-14

  • ಕಪಟತನದಿಂದ ಮಾಡೋ ಉಪವಾಸವನ್ನ ಯೆಹೋವ ಖಂಡಿಸ್ತಾನೆ (1-14)

    • ‘ನೀವು ನಿಜವಾಗ್ಲೂ ನನಗಾಗೇ ಉಪವಾಸ ಮಾಡಿದ್ರಾ?’ (5)

    • ‘ಒಬ್ರಿಗೊಬ್ರು ನ್ಯಾಯದಿಂದ, ಶಾಶ್ವತ ಪ್ರೀತಿ​ ಯಿಂದ, ಕರುಣೆಯಿಂದ ನಡ್ಕೊಳ್ಳಿ’ (9)

7  ರಾಜ ದಾರ್ಯಾವೆಷನ ಆಳ್ವಿಕೆಯ ನಾಲ್ಕನೇ ವರ್ಷದ ಒಂಬತ್ತನೇ ತಿಂಗಳಿನ ಅಂದ್ರೆ ಕಿಸ್ಲೇವ್‌* ತಿಂಗಳಿನ ನಾಲ್ಕನೇ ದಿನ ಜೆಕರ್ಯನಿಗೆ+ ಯೆಹೋವನ ಸಂದೇಶ ಸಿಕ್ತು.  ಯೆಹೋವನ ದಯೆಗಾಗಿ ಬೇಡ್ಕೊಳ್ಳೋಕೆ ಬೆತೆಲಿನ ಜನ ಸರೆಚೆರನನ್ನ, ರೆಗೆಮ್‌-ಮೆಲೆಕನನ್ನ ಮತ್ತು ಅವನ ಗಂಡಸ್ರನ್ನ ಕಳಿಸಿದ್ರು.  ಅವರು ಸೈನ್ಯಗಳ ದೇವರಾದ ಯೆಹೋವನ ಆಲಯದ ಪುರೋಹಿತರಿಗೆ ಮತ್ತು ಪ್ರವಾದಿಗಳಿಗೆ “ಎಷ್ಟೋ ವರ್ಷಗಳಿಂದ ಮಾಡ್ತಾ ಬಂದ ಹಾಗೆ ಈ ವರ್ಷನೂ ಐದನೇ ತಿಂಗಳಲ್ಲಿ+ ಉಪವಾಸ ಮಾಡಿ ಅಳಬೇಕಾ?” ಅಂತ ಕೇಳಿದ್ರು.  ಸೈನ್ಯಗಳ ದೇವರಾದ ಯೆಹೋವನ ಸಂದೇಶ ಇನ್ನೊಂದು ಸಲ ನನಗೆ ಸಿಕ್ತು. ಅದು ಹೀಗಿತ್ತು:  “ದೇಶದ ಎಲ್ಲ ಜನ್ರಿಗೆ, ಪುರೋಹಿತರಿಗೆ ಹೀಗೆ ಕೇಳು: ‘ನೀವು ಐದನೇ ತಿಂಗಳಲ್ಲಿ ಮತ್ತು ಏಳನೇ ತಿಂಗಳಲ್ಲಿ+ 70 ವರ್ಷ+ ತನಕ ಉಪವಾಸ ಮಾಡ್ತಾ ಗೋಳಾಡಿದ್ದೀರ. ಅದನ್ನ ನೀವು ನಿಜವಾಗ್ಲೂ ನನಗಾಗೇ ಮಾಡಿದ್ರಾ?  ತಿಂದಾಗ ಕುಡಿದಾಗ ನೀವು ನಿಮಗಾಗೇ ತಿಂದು ಕುಡಿದ್ರಲ್ವಾ?  ಯೆರೂಸಲೇಮ್‌ ಮತ್ತು ಅದ್ರ ಸುತ್ತಮುತ್ತ ಪಟ್ಟಣಗಳಲ್ಲಿ ಇದ್ದ ಜನ ನೆಮ್ಮದಿಯಿಂದ ಇದ್ದಾಗ, ನೆಗೆಬ್‌ ಮತ್ತು ಷೆಫೆಲಾದಲ್ಲಿ ಜನ ತುಂಬ್ಕೊಂಡಿದ್ದಾಗ ಯೆಹೋವ ಆ ಕಾಲದ ಪ್ರವಾದಿಗಳ ಮೂಲಕ ಹೇಳಿದ ಮಾತುಗಳಿಗೆ ನೀವು ವಿಧೇಯತೆ ತೋರಿಸಬೇಕಿತ್ತಲ್ವಾ?’”+  ಮತ್ತೊಮ್ಮೆ ಯೆಹೋವನ ಸಂದೇಶ ಜೆಕರ್ಯನಿಗೆ ಸಿಕ್ತು. ಅದೇನಂದ್ರೆ:  “ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ತೀರ್ಪು ಕೊಡುವಾಗ ನ್ಯಾಯದ ಪಕ್ಷದಲ್ಲಿ ನಿಂತ್ಕೊಳ್ಳಿ.+ ಒಬ್ರಿಗೊಬ್ರು ಶಾಶ್ವತ ಪ್ರೀತಿ,+ ಕರುಣೆ ತೋರಿಸಿ. 10  ವಿಧವೆಯರಿಗೆ, ಅನಾಥರಿಗೆ,*+ ವಿದೇಶಿಯರಿಗೆ+ ಅಥವಾ ಬಡವ್ರಿಗೆ+ ಮೋಸ ಮಾಡಬೇಡಿ. ಬೇರೆಯವ್ರಿಗೆ ಕೆಟ್ಟದು ಮಾಡೋ ಯೋಚ್ನೆ ನಿಮ್ಮ ಮನಸ್ಸಲ್ಲೂ* ಬರದಿರಲಿ.’+ 11  ಆದ್ರೆ ಅವರು ಯಾವತ್ತೂ ಆ ಮಾತುಗಳನ್ನ ಕಿವಿಗೆ ಹಾಕೊಳ್ಳಲಿಲ್ಲ.+ ಅವರು ಮೊಂಡರಾದ್ರು.+ ಆ ಮಾತುಗಳನ್ನ ಕೇಳಬಾರದು ಅಂತ ತಮ್ಮ ಕಿವಿಗಳನ್ನ ಮುಚ್ಕೊಂಡ್ರು.+ 12  ತಮ್ಮ ಹೃದಯವನ್ನ ವಜ್ರದ ತರ ಕಠಿಣ* ಮಾಡ್ಕೊಂಡ್ರು.+ ಸೈನ್ಯಗಳ ದೇವರಾದ ಯೆಹೋವ ತನ್ನ ಪವಿತ್ರಶಕ್ತಿ ಮೂಲಕ ಆಗಿನ ಪ್ರವಾದಿಗಳಿಂದ ಹೇಳಿಸಿದ ಮಾತುಗಳಿಗೆ ಮತ್ತು ಕೊಟ್ಟ ನಿಯಮಗಳನ್ನ* ಪಾಲಿಸಲಿಲ್ಲ.+ ಹಾಗಾಗಿ ಸೈನ್ಯಗಳ ದೇವರಾದ ಯೆಹೋವನಿಗೆ ಅವ್ರ ಮೇಲೆ ಕೋಪ ಬಂತು.”+ 13  “ಸೈನ್ಯಗಳ ದೇವರಾದ ಯೆಹೋವ ಹೀಗೆ ಹೇಳ್ತಿದ್ದಾನೆ: ‘ನಾನು* ಕರೆದಾಗ ಅವರು ಹೇಗೆ ಕೇಳಿಸ್ಕೊಳ್ಳಲಿಲ್ವೋ+ ಹಾಗೇ ಅವರು ಕರೆಯೋವಾಗ್ಲೂ ನಾನು ಕೇಳಿಸ್ಕೊಳ್ಳಲ್ಲ.+ 14  ಬಿರುಗಾಳಿ ಬೀಸೋ ತರ ಮಾಡಿ ನಾನು ಅವ್ರನ್ನ ಗೊತ್ತುಗುರಿ ಇಲ್ಲದ ದೇಶಗಳಿಗೆ ಚದರಿಸಿಬಿಡ್ತೀನಿ.+ ಅವರು ಹೋದ್ಮೇಲೆ ಅವ್ರ ದೇಶ ಹಾಳು ಬೀಳುತ್ತೆ. ಯಾರೂ ಅದನ್ನ ಹಾದು ಹೋಗಲ್ಲ, ಯಾರೂ ಅಲ್ಲಿಗೆ ವಾಪಸ್‌ ಬರೋದೂ ಇಲ್ಲ.+ ಯಾಕಂದ್ರೆ ಅವರು ಸುಂದರವಾದ ಆ ದೇಶವನ್ನ ಭಯಹುಟ್ಟಿಸೋ ಸ್ಥಳವಾಗಿ ಬದಲಾಯಿಸಿದ್ದಾರೆ.’”

ಪಾದಟಿಪ್ಪಣಿ

ಅಕ್ಷ. “ಹೃದಯದಲ್ಲಿ.”
ಅಥವಾ “ತಂದೆಯಿಲ್ಲದ ಮಕ್ಕಳಿಗೆ.”
ಬಹುಶಃ, “ಗಟ್ಟಿಯಾದ ಕಲ್ಲು.”
ಅಥವಾ “ನಿರ್ದೇಶನಗಳನ್ನ.”
ಅಕ್ಷ. “ಆತನು.”