ಜ್ಞಾನೋಕ್ತಿ 10:1-32

  • ವಿವೇಕಿ ತನ್ನ ತಂದೆ ಮನಸ್ಸನ್ನ ಸಂತೋಷ ಪಡಿಸ್ತಾನೆ (1)

  • ಶ್ರಮಪಡೋ ಕೈಗಳಿಗೆ ಶ್ರೀಮಂತಿಕೆ (4)

  • ಲಂಗು ಲಗಾಮಿಲ್ಲದೆ ಮಾತಾಡಿದ್ರೆ ಪಾಪ ತಪ್ಪಿದ್ದಲ್ಲ (19)

  • ಯೆಹೋವನ ಆಶೀರ್ವಾದ ಒಬ್ಬನನ್ನ ಶ್ರೀಮಂತ ಮಾಡುತ್ತೆ (22)

  • ಯೆಹೋವನ ಮೇಲೆ ಭಯ ಇದ್ರೆ ಜಾಸ್ತಿ ವರ್ಷ ಬದುಕ್ತಾರೆ (27)

10  ಸೊಲೊಮೋನನ ನಾಣ್ಣುಡಿಗಳು.+ ವಿವೇಕಿ ತನ್ನ ಅಪ್ಪನ ಮನಸ್ಸನ್ನ ಸಂತೋಷ ಪಡಿಸ್ತಾನೆ,+ಆದ್ರೆ ಮೂರ್ಖ ತನ್ನ ಅಮ್ಮ ಕೊರಗೋ ತರ ಮಾಡ್ತಾನೆ.   ಕೆಟ್ಟ ಕೆಲಸದಿಂದ ಹಣ ಮಾಡಿದ್ರೆ ಏನು ಉಪಯೋಗ ಇಲ್ಲ,ಆದ್ರೆ ಪ್ರಾಮಾಣಿಕತೆ ಒಬ್ಬನನ್ನ ಸಾವಿಂದ ಕಾಪಾಡುತ್ತೆ.+   ಒಳ್ಳೆಯವರು* ಊಟ ಇಲ್ಲದೆ ಸಾಯೋ ಹಾಗೆ ಯೆಹೋವ ಬಿಡಲ್ಲ,+ಆದ್ರೆ ಕೆಟ್ಟವರ ಆಸೆಗಳ ಮೇಲೆ ಆತನು ನೀರು ಸುರಿತಾನೆ.   ದುಡಿಯದ ಕೈಗಳಿಗೆ ಬಡತನ,+ಶ್ರಮಪಡೋ ಕೈಗಳಿಗೆ ಸಿರಿತನ.+   ಬುದ್ಧಿವಂತ ಮಗ ಸುಗ್ಗಿ ಕಾಲದಲ್ಲಿ ಫಸಲು ಕೂಡಿಸ್ತಾನೆ,ಕೊಯ್ಲಿನ ಕಾಲದಲ್ಲಿ ಗಾಢ ನಿದ್ದೆ ಮಾಡೋ ಮಗ ಅವಮಾನ ಕೊಯ್ತಾನೆ.+   ನೀತಿವಂತನ ತಲೆ ಮೇಲೆ ಆಶೀರ್ವಾದ ಇರುತ್ತೆ,+ಕೆಟ್ಟವನ ಮಾತುಗಳಲ್ಲಿ ಹಿಂಸೆ ಅಡಗಿರುತ್ತೆ.   ನೀತಿವಂತನನ್ನ ನೆನಪಿಸ್ಕೊಂಡು* ಅವನಿಗೆ ಆಶೀರ್ವಾದ ಕೊಡ್ತಾರೆ,+ಕೆಟ್ಟವನ ಹೆಸ್ರು ಕೊಳೆತು ನಾರುತ್ತೆ.+   ವಿವೇಕಿ ಬುದ್ಧಿ ಮಾತನ್ನ* ಕೇಳ್ತಾನೆ,+ಬುದ್ಧಿಯಿಲ್ಲದೆ ಮಾತಾಡುವವನು ನಾಶ ಆಗ್ತಾನೆ.+   ಸರಿ ದಾರಿಯಲ್ಲಿ ನಡಿಯುವವನು ಸುರಕ್ಷಿತನಾಗಿ ಇರ್ತಾನೆ,+ಅಡ್ಡ ದಾರಿಯಲ್ಲಿ ನಡಿಯುವವನು ಸಿಕ್ಕಿಹಾಕೊಳ್ತಾನೆ.+ 10  ಮೋಸದಿಂದ ಕಣ್ಣು ಹೊಡಿಯುವವನಿಗೆ ಕಷ್ಟ ಖಂಡಿತ,+ಮೂರ್ಖತನದಿಂದ ಮಾತಾಡುವವನಿಗೆ ನಾಶ ಖಂಡಿತ.+ 11  ನೀತಿವಂತನ ಬಾಯಲ್ಲಿ ಜೀವದ ಬುಗ್ಗೆ ಇದೆ,+ಕೆಟ್ಟವನ ಬಾಯಲ್ಲಿ ಹಿಂಸೆ ಅಡಗಿದೆ.+ 12  ದ್ವೇಷ ಜಗಳ ಎಬ್ಬಿಸುತ್ತೆ,ಪ್ರೀತಿ ಎಲ್ಲ ತಪ್ಪುಗಳನ್ನ ಮುಚ್ಚುತ್ತೆ.+ 13  ವಿವೇಚನೆ ಇರೋ ವ್ಯಕ್ತಿಯ ತುಟಿಗಳಲ್ಲಿ ವಿವೇಕ ಇರುತ್ತೆ,+ಬುದ್ಧಿ ಇಲ್ಲದವನ* ಬೆನ್ನಿಗೆ ಬೆತ್ತದ ಏಟು ಬೀಳುತ್ತೆ.+ 14  ವಿವೇಕಿಗಳು ಜ್ಞಾನವನ್ನ ನಿಧಿ ತರ ಕೂಡಿಸಿ ಇಟ್ಕೊಳ್ತಾರೆ,+ಮೂರ್ಖನ ಬಾಯಿ ನಾಶವನ್ನ ಕೈಬೀಸಿ ಕರೆಯುತ್ತೆ.+ 15  ಶ್ರೀಮಂತನಿಗೆ ಅವನ ಆಸ್ತಿನೇ* ಭದ್ರ ಕೋಟೆ. ಬಡವನಿಗೆ ಅವನ ಬಡತನದಿಂದಾನೇ ನಾಶನ.+ 16  ನೀತಿವಂತನ ಕೆಲಸಗಳು ಜೀವಕ್ಕೆ ನಡಿಸುತ್ತೆ,ಕೆಟ್ಟವನ ಕೆಲಸಗಳು ಪಾಪಕ್ಕೆ ನಡಿಸುತ್ತೆ.+ 17  ಶಿಸ್ತನ್ನ ಸ್ವೀಕರಿಸುವವನು ಬೇರೆಯವ್ರಿಗೂ ಜೀವದ ದಾರಿ ತೋರಿಸ್ತಾನೆ,ತಿದ್ದಿದಾಗ ಕೇಳದೆ ಇರುವವನು ಜನ್ರನ್ನ ತಪ್ಪುದಾರಿಗೆ ಎಳಿತಾನೆ. 18  ದ್ವೇಷವನ್ನ ತನ್ನಲ್ಲೇ ಬಚ್ಚಿಟ್ಕೊಳ್ಳೋನು ಸುಳ್ಳು ಹೇಳ್ತಾನೆ,+ಇನ್ನೊಬ್ರ ಹೆಸ್ರನ್ನ ಹಾಳು ಮಾಡೋಕೆ ಗಾಳಿಸುದ್ದಿ ಹಬ್ಬಿಸುವವನು ಮೂರ್ಖ. 19  ಲಂಗು ಲಗಾಮಿಲ್ಲದೆ ಮಾತಾಡುವವ್ರಿಗೆ ಪಾಪ ತಪ್ಪಿದ್ದಲ್ಲ,+ಮಾತಿನ ಮೇಲೆ ಹತೋಟಿ ಇಟ್ಕೊಳ್ಳುವವರು ವಿವೇಚನೆಯಿಂದ ನಡ್ಕೊಳ್ತಾರೆ.+ 20  ನೀತಿವಂತನ ಮಾತುಗಳು ಶ್ರೇಷ್ಠ ಬೆಳ್ಳಿ,+ಕೆಟ್ಟವನ ಯೋಚ್ನೆ* ಹುಲ್ಲುಕಡ್ಡಿಗೆ ಸಮ. 21  ನೀತಿವಂತನ ಮಾತು ಅನೇಕರನ್ನ ನೋಡ್ಕೊಳ್ಳುತ್ತೆ,*+ಬುದ್ಧಿ ಕಮ್ಮಿ ಇರೋದ್ರಿಂದ ಮೂರ್ಖ ಸಾಯ್ತಾನೆ.+ 22  ಯೆಹೋವನ ಆಶೀರ್ವಾದ ಒಬ್ಬನನ್ನ ಶ್ರೀಮಂತ ಮಾಡುತ್ತೆ,+ಅದ್ರ ಜೊತೆ ಯಾವುದೇ ರೀತಿಯ ನೋವನ್ನ* ದೇವರು ಸೇರಿಸಲ್ಲ. 23  ನಾಚಿಕೆಗೆಟ್ಟ ಕೆಲಸ ಮಾಡೋದಂದ್ರೆ ಮೂರ್ಖನಿಗೆ ಒಂಥರಾ ಖುಷಿ,ಆದ್ರೆ ವಿವೇಚನೆ ಇರುವವನು ವಿವೇಕಕ್ಕಾಗಿ ಹುಡುಕ್ತಾನೆ.+ 24  ಕೆಟ್ಟವನು ಯಾವುದಕ್ಕೆ ಭಯಪಡ್ತಾನೋ ಅದೇ ಅವನ ಮೇಲೆ ಬರುತ್ತೆ,ಆದ್ರೆ ನೀತಿವಂತನ ಆಸೆ ಈಡೇರುತ್ತೆ.+ 25  ಸುಂಟರಗಾಳಿ ಬೀಸಿದಾಗ ಕೆಟ್ಟವನು ಹಾರಿಹೋಗ್ತಾನೆ,+ಆದ್ರೆ ನೀತಿವಂತ ಅಡಿಪಾಯದ ತರ ಗಟ್ಟಿಯಾಗಿ ಇರ್ತಾನೆ.+ 26  ಹಲ್ಲಿಗೆ ಹುಳಿ, ಕಣ್ಣಿಗೆ ಹೊಗೆ ಹೇಗೋಯಜಮಾನನಿಗೆ ಸೋಮಾರಿ ಹಾಗೇ. 27  ಯೆಹೋವನ ಮೇಲೆ ಭಯ ಇದ್ರೆ ಹೆಚ್ಚು ವರ್ಷ ಇರ್ತಾರೆ,+ಕೆಟ್ಟವನ ಆಯಸ್ಸು ಕಮ್ಮಿ ಆಗುತ್ತೆ.+ 28  ನೀತಿವಂತನ ಆಸೆ ಖುಷಿ ತರುತ್ತೆ,+ಕೆಟ್ಟವನ ಆಸೆ ಮಣ್ಣುಪಾಲಾಗುತ್ತೆ.+ 29  ಯೆಹೋವನ ಮಾರ್ಗ ತಪ್ಪು ಮಾಡದವ್ರಿಗೆ ಭದ್ರಕೋಟೆ,+ಆದ್ರೆ ತಪ್ಪು ಮಾಡುವವ್ರಿಗೆ ನಾಶನ.+ 30  ನೀತಿವಂತ ಯಾವತ್ತೂ ಬಿದ್ದು ಹೋಗಲ್ಲ,+ಕೆಟ್ಟವನು ಮುಂದೆ ಯಾವತ್ತೂ ಭೂಮಿ ಮೇಲೆ ಇರಲ್ಲ.+ 31  ನೀತಿವಂತನ ಬಾಯಿಂದ ವಿವೇಕದ ಮಾತುಗಳು ಬರುತ್ತೆ,ಹಠಮಾರಿಯ ಬಾಯಿ ಶಾಶ್ವತವಾಗಿ ಮುಚ್ಚುತ್ತೆ. 32  ನೀತಿವಂತನ ತುಟಿಗಳಿಗೆ ಒಳ್ಳೇ ಮಾತು ಹೇಳೋಕೆ ಗೊತ್ತು,ಕೆಟ್ಟವನ ಬಾಯಿಂದ ಬರೋದೆಲ್ಲ ಕೆಟ್ಟ ಮಾತು.

ಪಾದಟಿಪ್ಪಣಿ

ಅಥವಾ “ನೀತಿವಂತರು.”
ಅಥವಾ “ನೀತಿವಂತನಿಗೆ ಇರೋ ಒಳ್ಳೇ ಹೆಸ್ರಿಂದಾಗಿ.”
ಅಕ್ಷ. “ಆಜ್ಞೆಗಳನ್ನ.”
ಅಕ್ಷ. “ಹೃದಯ ಇಲ್ಲದವನ.”
ಅಥವಾ “ಅಮೂಲ್ಯ ವಸ್ತುನೇ.”
ಅಕ್ಷ. “ಹೃದಯ.”
ಅಥವಾ “ಮಾರ್ಗದರ್ಶಿಸುತ್ತೆ.”
ಅಥವಾ “ದುಃಖವನ್ನ, ಕಷ್ಟವನ್ನ.”