ಜ್ಞಾನೋಕ್ತಿ 11:1-31

  • ವಿನಮ್ರರ ಹತ್ರ ವಿವೇಕ ಇರುತ್ತೆ (2)

  • ಧರ್ಮಭ್ರಷ್ಟ ಬೇರೆಯವ್ರನ್ನ ಹಾಳು ಮಾಡ್ತಾನೆ (9)

  • “ತುಂಬ ಸಲಹೆಗಾರರು ಇದ್ರೆ ಯಶಸ್ಸು ಖಂಡಿತ” (14)

  • ಉದಾರವಾಗಿ ಕೊಡುವವನಿಗೆ ಏಳಿಗೆ (25)

  • ಹಣ-ಆಸ್ತಿ ಮೇಲೆ ನಂಬಿಕೆ ಇಟ್ಕೊಂಡವನು ಬಿದ್ದುಹೋಗ್ತಾನೆ (28)

11  ಮೋಸದ ತಕ್ಕಡಿ ಕಂಡ್ರೆ ಯೆಹೋವನಿಗೆ ಅಸಹ್ಯ,ಸರಿಯಾದ ತೂಕದ ಕಲ್ಲು ನೋಡಿದ್ರೆ ಸಂತೋಷ.+   ಅಹಂಕಾರ ಬಂದ್ರೆ ಅದ್ರ ಹಿಂದೆ ಅವಮಾನನೂ ಬರುತ್ತೆ.+ ಆದ್ರೆ ವಿನಮ್ರರ ಹತ್ರ ವಿವೇಕ ಇರುತ್ತೆ.+   ತಪ್ಪು ಮಾಡದವರಿಗೆ ಪ್ರಾಮಾಣಿಕತೆ ಮಾರ್ಗದರ್ಶನ ಕೊಡುತ್ತೆ,+ಮೋಸಗಾರರ ಕಪಟ ಅವ್ರನ್ನ ನಾಶ ಮಾಡಿಬಿಡುತ್ತೆ.+   ದೇವರ ಕೋಪದ ದಿನದಲ್ಲಿ ಆಸ್ತಿ-ಐಶ್ವರ್ಯಕ್ಕೆ ಮೂರು ಕಾಸಿನ ಬೆಲೆ ಇರಲ್ಲ,+ಆದ್ರೆ ನೀತಿ ಒಬ್ಬ ಮನುಷ್ಯನನ್ನ ಸಾವಿಂದ ಕಾಪಾಡುತ್ತೆ.+   ತಪ್ಪು ಮಾಡದವನು ನೀತಿಯಿಂದ ನಡ್ಕೊಂಡ್ರೆ ಅವನ ದಾರಿ ನೆಟ್ಟಗೆ ಇರುತ್ತೆ,ಆದ್ರೆ ಕೆಟ್ಟವನು ಮಾಡೋ ಕೆಟ್ಟ ಕೆಲಸಗಳು ಅವನನ್ನೇ ಬೀಳಿಸುತ್ತೆ.+   ನೀತಿವಂತರನ್ನ ಅವ್ರ ನೀತಿ ಕಾಪಾಡುತ್ತೆ,+ಮೋಸಗಾರರು ಅವ್ರ ಆಸೆಗಳ ಬಲೆಗೆ ಅವ್ರೇ ಬೀಳ್ತಾರೆ.+   ಕೆಟ್ಟವನು ತೀರಿ ಹೋಗುವಾಗ ಅವನ ಆಸೆಗಳೆಲ್ಲ ನುಚ್ಚುನೂರಾಗುತ್ತೆ,ಸ್ವಂತ ಶಕ್ತಿ ಮೇಲೆ ಅವನಿಟ್ಟ ನಂಬಿಕೆ ಮಣ್ಣುಪಾಲಾಗುತ್ತೆ.+   ನೀತಿವಂತ ಕಷ್ಟದಿಂದ ತಪ್ಪಿಸ್ಕೊಳ್ತಾನೆ,ಅವನ ಬದ್ಲು ಕೆಟ್ಟವನು ಸಿಕ್ಕಿಹಾಕೊಳ್ತಾನೆ.+   ಧರ್ಮಭ್ರಷ್ಟ ತನ್ನ ಮಾತಿಂದ ಇನ್ನೊಬ್ಬನನ್ನ* ಹಾಳು ಮಾಡ್ತಾನೆ,ನೀತಿವಂತ ತನ್ನ ಜ್ಞಾನದಿಂದ ತಪ್ಪಿಸ್ಕೊಳ್ತಾನೆ.+ 10  ನೀತಿವಂತರಲ್ಲಿರೋ ಒಳ್ಳೆತನದಿಂದ ಇಡೀ ಪಟ್ಟಣಕ್ಕೆ ಖುಷಿ ಆಗುತ್ತೆ,ಕೆಟ್ಟವರು ನಾಶ ಆದಾಗ ಜನ ಕುಣಿದು ಕುಪ್ಪಳಿಸ್ತಾರೆ.+ 11  ನೀತಿವಂತನಿಗೆ ಆಶೀರ್ವಾದ ಸಿಕ್ಕಿದಾಗ ಪಟ್ಟಣಕ್ಕೆ ಒಳ್ಳೇ ಹೆಸ್ರು ಬರುತ್ತೆ,+ಕೆಟ್ಟವನ ಮಾತುಗಳು ಪಟ್ಟಣವನ್ನ ನಾಶ ಮಾಡುತ್ತೆ.+ 12  ಬುದ್ಧಿ ಇಲ್ಲದವನು ಪಕ್ಕದ ಮನೆಯವನನ್ನ ಕೀಳಾಗಿ ನೋಡ್ತಾನೆ,ಬುದ್ಧಿ ಇರುವವನು ಮೌನವಾಗಿ ಇರ್ತಾನೆ.+ 13  ಚಾಡಿ ಹೇಳಿ ಹೆಸ್ರು ಹಾಳು ಮಾಡುವವನು ಗುಟ್ಟನ್ನ ರಟ್ಟು ಮಾಡ್ತಾನೆ,+ನಂಬಿಗಸ್ತ ವ್ಯಕ್ತಿ ಗುಟ್ಟನ್ನ ಗುಟ್ಟಾಗೇ ಇಡ್ತಾನೆ. 14  ನಿಪುಣನಿಂದ* ಮಾರ್ಗದರ್ಶನ ಸಿಗದಿದ್ರೆ ಜನ ಸೋಲು ಅನುಭವಿಸ್ತಾರೆ,ಆದ್ರೆ ತುಂಬ ಸಲಹೆಗಾರರು* ಇದ್ರೆ ಯಶಸ್ಸು* ಖಂಡಿತ.+ 15  ಅಪರಿಚಿತನ ಸಾಲಕ್ಕೆ ಜಾಮೀನು ಕೊಟ್ರೆ ಕಷ್ಟ ಪಡ್ತಾ ಇರಬೇಕಾಗುತ್ತೆ,+ಕೈಕುಲುಕಿ ಮಾತು ಕೊಡೋಕೆ ಆತುರಪಡದವನು ಕಷ್ಟದಿಂದ ತಪ್ಪಿಸ್ಕೊಳ್ತಾನೆ. 16  ದಯೆ ಇರೋ ಸ್ತ್ರೀಗೆ ಗೌರವ ಸಿಗುತ್ತೆ,+ಕನಿಕರ ಇಲ್ಲದ ಗಂಡಸು ಸಂಪತ್ತನ್ನ ಲೂಟಿ ಮಾಡ್ತಾನೆ. 17  ದಯೆ* ತೋರಿಸುವವನು ತನಗೇ ಒಳ್ಳೇದು ಮಾಡ್ಕೊಳ್ತಾನೆ,+ಕ್ರೂರಿ ತನ್ನ ಮೇಲೆನೇ ತೊಂದ್ರೆ* ತಂದ್ಕೊಳ್ತಾನೆ.+ 18  ಕೆಟ್ಟವನು ಮೋಸದಿಂದ ಸಂಪಾದನೆ ಮಾಡ್ತಾನೆ,+ನೀತಿಯನ್ನ ಬಿತ್ತುವವನು ಒಳ್ಳೇ ಫಲ ಕೊಯ್ತಾನೆ.+ 19  ನೀತಿಯ ಪಕ್ಷದಲ್ಲೇ ನಿಲ್ಲುವವನಿಗೆ ಜೀವ,+ಕೆಟ್ಟ ವಿಷ್ಯಗಳ ಹಿಂದೆ ಹೋಗುವವನಿಗೆ ಸಾವು. 20  ಹೃದಯದಲ್ಲಿ ಕಪಟ ಇರುವವ್ರನ್ನ ನೋಡಿದ್ರೆ ಯೆಹೋವನಿಗೆ ಅಸಹ್ಯ,+ತಪ್ಪು ಮಾಡದೆ ನಡಿಯುವವರನ್ನ ನೋಡಿದ್ರೆ ಆತನಿಗೆ ಸಂತೋಷ.+ 21  ಈ ಮಾತಿನ ಮೇಲೆ ನಂಬಿಕೆ ಇಡಿ: ಕೆಟ್ಟವರಿಗೆ ಶಿಕ್ಷೆ ಆಗೇ ಆಗುತ್ತೆ,+ಆದ್ರೆ ನೀತಿವಂತರ ಮಕ್ಕಳಿಗೆ ಶಿಕ್ಷೆ ಆಗಲ್ಲ. 22  ವಿವೇಕವನ್ನ ತಳ್ಳಿಹಾಕೋ ಸುಂದರಿಹಂದಿ ಮೂಗಿಗೆ ಹಾಕಿರೋ ಮೂಗುತಿ. 23  ನೀತಿವಂತರ ಆಸೆ ಒಳ್ಳೇದಕ್ಕೆ ನಡಿಸುತ್ತೆ,+ಆದ್ರೆ ಕೆಟ್ಟವ್ರ ಆಸೆ ಕೋಪಕ್ಕೆ ದಾರಿ ಮಾಡುತ್ತೆ. 24  ಧಾರಾಳವಾಗಿ ಕೊಡುವವನಿಗೆ* ಧಾರಾಳವಾಗಿ ಸಿಗುತ್ತೆ,+ಕೊಡಬೇಕಾಗಿರೋದನ್ನ ಕೊಡದ ಜಿಪುಣ ಬಡವನಾಗ್ತಾನೆ.+ 25  ಉದಾರವಾಗಿ ಕೊಡುವವನು ಏಳಿಗೆ ಆಗ್ತಾನೆ,+ಚೈತನ್ಯ ಕೊಡುವವನಿಗೆ ಚೈತನ್ಯ ಸಿಗುತ್ತೆ.+ 26  ಜನ್ರಿಗೆ ಧಾನ್ಯ ಮಾರೋಕೆ ಒಪ್ಪದವನಿಗೆ ಶಾಪ ಸಿಗುತ್ತೆ. ಆದ್ರೆ ಅದನ್ನ ಮಾರುವವನಿಗೆ ಆಶೀರ್ವಾದ ಸಿಗುತ್ತೆ. 27  ಒಳ್ಳೇದನ್ನ ಮಾಡೋಕೆ ಶ್ರದ್ಧೆಯಿಂದ ಪ್ರಯತ್ನಿಸುವವನಿಗೆ ದಯೆ ಸಿಗುತ್ತೆ.+ ಕೆಟ್ಟದು ಮಾಡೋಕೆ ತುದಿಗಾಲಲ್ಲಿ ನಿಲ್ಲುವವನಿಗೆ ಕೆಟ್ಟದೇ ಆಗುತ್ತೆ.+ 28  ತನ್ನ ಹಣ-ಆಸ್ತಿ ಮೇಲೆ ನಂಬಿಕೆ ಇಟ್ಕೊಂಡವನು ಬಿದ್ದುಹೋಗ್ತಾನೆ,+ನೀತಿವಂತ ಎಲೆಗಳ ತರ ಹಸಿರಾಗಿ ಇರ್ತಾನೆ.+ 29  ತನ್ನ ಕುಟುಂಬದ ಮೇಲೆ ತೊಂದ್ರೆ ತಂದು ಹಾಕುವವನು ಏನೂ ಸಂಪಾದಿಸಲ್ಲ,*+ಮೂರ್ಖ ವಿವೇಕಿಗೆ ಗುಲಾಮ ಆಗ್ತಾನೆ. 30  ನೀತಿವಂತನ ಕೆಲಸಗಳು ಜೀವ ಕೊಡೋ ಮರ,+ಬೇರೆಯವ್ರ ಮನಸ್ಸು ಗೆಲ್ಲುವವನು* ವಿವೇಕಿ.+ 31  ಭೂಮಿ ಮೇಲೆ ನೀತಿವಂತನಿಗೇ ಆಶೀರ್ವಾದ ಸಿಗುತ್ತೆ ಅಂದ್ಮೇಲೆ,ಕೆಟ್ಟವನಿಗೆ ಪಾಪಿಗೆ ಅವನವನ ಕೆಲಸಕ್ಕೆ ತಕ್ಕ ಫಲ ಸಿಗಲ್ವಾ?+

ಪಾದಟಿಪ್ಪಣಿ

ಅಕ್ಷ. “ನೆರೆಯವನನ್ನ.”
ಅಥವಾ “ವಿವೇಕದಿಂದ ಕೂಡಿರೋ.”
ಅಥವಾ “ಮಾರ್ಗದರ್ಶಕರು.”
ಅಥವಾ “ರಕ್ಷಣೆ.”
ಅಥವಾ “ಅವಮಾನ.”
ಅಥವಾ “ಶಾಶ್ವತ ಪ್ರೀತಿ.”
ಅಕ್ಷ. “ಚದುರಿಸುವವನು.”
ಅಕ್ಷ. “ಗಾಳಿಯನ್ನ ಸಂಪಾದಿಸ್ತಾನೆ.”
ಇಲ್ಲಿ ಜೀವದ ದಾರಿಯಲ್ಲಿ ನಡಿಯೋಕೆ ಬೇರೆಯವ್ರಿಗೆ ಸಹಾಯ ಮಾಡುವವನನ್ನ ಸೂಚಿಸುತ್ತಿರಬಹುದು.