ಜ್ಞಾನೋಕ್ತಿ 16:1-33
16 ಮನುಷ್ಯ ಮಾತಾಡೋ ಮುಂಚೆ ತನ್ನ ಹೃದಯದ ಯೋಚ್ನೆಗಳನ್ನ ಸಿದ್ಧಮಾಡ್ತಾನೆ,ಆದ್ರೆ ಅವನು ಕೊಡೋ ಉತ್ತರ* ಯೆಹೋವನಿಂದ ಬರುತ್ತೆ.+
2 ಮನುಷ್ಯನಿಗೆ ತನ್ನೆಲ್ಲ ದಾರಿಗಳು ಸರಿಯಾಗೇ* ಇದೆ ಅಂತ ಅನಿಸುತ್ತೆ,+ಆದ್ರೆ ಯೆಹೋವ ಉದ್ದೇಶಗಳನ್ನ* ಪರೀಕ್ಷಿಸ್ತಾನೆ.+
3 ನಿನ್ನ ಕೆಲಸಗಳನ್ನೆಲ್ಲ ಯೆಹೋವನಿಗೆ ಒಪ್ಪಿಸು,*+ಆಗ ನಿನ್ನ ಯೋಜನೆಗಳಿಗೆ ಯಶಸ್ಸು ಸಿಗುತ್ತೆ.
4 ಯೆಹೋವ ತನ್ನ ಮಾತನ್ನ ಪೂರೈಸೋಕೆ ಪ್ರತಿಯೊಂದನ್ನ ಮಾಡಿದ್ದಾನೆ,ಕೆಟ್ಟವನನ್ನ ಕೂಡ ಕಷ್ಟದ ದಿನದಲ್ಲಿ ಶಿಕ್ಷೆ ಅನುಭವಿಸೋಕೆ ಇಟ್ಟಿದ್ದಾನೆ.+
5 ಹೃದಯದಲ್ಲಿ ಅಹಂಕಾರ ಇರುವವ್ರನ್ನ ಕಂಡ್ರೆ ಯೆಹೋವನಿಗೆ ಇಷ್ಟ ಆಗಲ್ಲ.+
ಅವ್ರಿಗೆ ಖಂಡಿತ ಶಿಕ್ಷೆ ಕೊಡ್ತಾನೆ ಅಂತ ನಂಬಿಕೆ ಇರಲಿ.
6 ಶಾಶ್ವತ ಪ್ರೀತಿಯಿಂದಾಗಿ, ನಂಬಿಗಸ್ತಿಕೆಯಿಂದಾಗಿ ತಪ್ಪಿಗೆ ಕ್ಷಮೆ ಸಿಗುತ್ತೆ,+ಯೆಹೋವನಿಗೆ ಭಯಪಡುವವನು ಕೆಟ್ಟದು ಮಾಡಲ್ಲ.+
7 ಯೆಹೋವ ಒಬ್ಬನ ನಡತೆಯನ್ನ ಮೆಚ್ಚಿದ್ರೆ,ಅವನ ಶತ್ರುಗಳನ್ನ ಸಹ ಮಿತ್ರರಾಗಿ ಮಾಡ್ತಾನೆ.*+
8 ಅನ್ಯಾಯ ಮಾಡಿ ಶ್ರೀಮಂತರಾಗೋದಕ್ಕಿಂತ,+ನೀತಿಯಿಂದ ನಡೆದು ಬಡವ್ರಾಗಿ ಇರೋದೇ ಒಳ್ಳೇದು.+
9 ಮನುಷ್ಯ ತನ್ನ ಹೃದಯದಲ್ಲೇ ಯೋಜನೆ ಮಾಡಬಹುದು,ಆದ್ರೆ ಯೆಹೋವ ಅವನ ಕಾಲಿಗೆ ದಾರಿ ತೋರಿಸ್ತಾನೆ.+
10 ರಾಜನ ತುಟಿಗಳ ಮೇಲೆ ದೇವರ ತೀರ್ಮಾನ ಇರ್ಬೇಕು,+ಅವನು ಯಾವುದೇ ಕಾರಣಕ್ಕೂ ನ್ಯಾಯ ಮೀರಿ ನಡಿಬಾರದು.+
11 ಪ್ರಾಮಾಣಿಕವಾದ ತಕ್ಕಡಿ ಯೆಹೋವನದ್ದೇ,ಚೀಲದೊಳಗೆ ಇಟ್ಟಿರೋ ತೂಕದ ಕಲ್ಲುಗಳನ್ನೆಲ್ಲ ಆತನೇ ಮಾಡಿದ್ದು.+
12 ಕೆಟ್ಟ ಕೆಲಸಗಳಂದ್ರೆ ರಾಜರಿಗೆ ಇಷ್ಟ ಇಲ್ಲ,+ಯಾಕಂದ್ರೆ ನೀತಿ ಇದ್ರೇನೇ ಸಿಂಹಾಸನಕ್ಕೆ ಬಲ.+
13 ರಾಜರಿಗೆ ನೀತಿ ಮಾತುಗಳೆಂದ್ರೆ ಇಷ್ಟ,ಸತ್ಯ ಹೇಳೋರನ್ನ ಕಂಡ್ರೆ ಅವ್ರಿಗೆ ಇಷ್ಟ.+
14 ರಾಜನ ಕೋಪ ಸಾವಿನ ದೂತನ ತರ ಇರುತ್ತೆ,+ಆದ್ರೆ ರಾಜನ ಕೋಪವನ್ನ ವಿವೇಕಿ ಶಾಂತ ಮಾಡ್ತಾನೆ.+
15 ರಾಜ ದಯೆ ತೋರಿಸಿದ್ರೆ ಜೀವನ ಸಂತೋಷವಾಗಿ ಇರುತ್ತೆ,ಅವನ ಅನುಗ್ರಹ ವಸಂತಕಾಲದ ಮಳೆಯ ಮೋಡದ ಹಾಗೆ ಇರುತ್ತೆ.+
16 ಚಿನ್ನಕ್ಕಿಂತ ವಿವೇಕ ಪಡಿಯೋದು ಉತ್ತಮ,+ಬೆಳ್ಳಿಗಿಂತ ವಿವೇಚನೆ ಸಂಪಾದಿಸೋದು ಒಳ್ಳೇದು.+
17 ನೀತಿವಂತನ ದಾರಿ ಕೆಟ್ಟ ವಿಷ್ಯಗಳಿಂದ ದೂರ ಇರುತ್ತೆ.
ಸರಿಯಾದ ದಾರಿಯಲ್ಲಿ ನಡಿಯುವವನು ತನ್ನ ಪ್ರಾಣ ಕಾಪಾಡ್ಕೊಳ್ತಾನೆ.+
18 ಸೊಕ್ಕಿಂದ ಸರ್ವನಾಶ,ದರ್ಪದಿಂದ ದುರ್ಗತಿ.+
19 ಸೊಕ್ಕು ಇರುವವ್ರ ಜೊತೆ ಸೂರೆಯನ್ನ ಹಂಚ್ಕೊಳ್ಳೋದಕ್ಕಿಂತ,ದೀನರ ಜೊತೆ ಸೌಮ್ಯಸ್ವಭಾವದಿಂದ ಇರೋದೇ ಒಳ್ಳೇದು.+
20 ಒಂದು ವಿಷ್ಯದ ಬಗ್ಗೆ ಸೂಕ್ಷ್ಮ ವಿವೇಚನೆ* ಇರುವವನು ಯಶಸ್ಸು ಪಡಿತಾನೆ,ಯೆಹೋವನ ಮೇಲೆ ನಂಬಿಕೆ ಇಡುವವನು ಸಂತೋಷವಾಗಿ ಇರ್ತಾನೆ.
21 ವಿವೇಕ ಇರೋ ವ್ಯಕ್ತಿಗೆ ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯ ಇದೆ+ ಅಂತ ಜನ ಹೇಳ್ತಾರೆ,ಪ್ರೀತಿಯಿಂದ ಮಾತಾಡೋ ವ್ಯಕ್ತಿ ಮನಸ್ಸು ಗೆಲ್ತಾನೆ.+
22 ತಿಳುವಳಿಕೆ* ಇರುವವ್ರಿಗೆ ತಿಳುವಳಿಕೆನೇ ಜೀವದ ಬುಗ್ಗೆ,ಮೂರ್ಖರು ತಮ್ಮ ಮೂರ್ಖತನದಿಂದಾನೇ ಶಿಕ್ಷೆ ಅನುಭವಿಸ್ತಾರೆ.
23 ವಿವೇಕಿಯ ಹೃದಯ ಅವನ ಬಾಯಿಗೆ ತಿಳುವಳಿಕೆಯನ್ನ,*+ಅವನ ಮಾತಿಗೆ ಮನವೊಲಿಸೋ ಶಕ್ತಿಯನ್ನ ಕೊಡುತ್ತೆ.
24 ಸವಿ ಮಾತುಗಳು ಜೇನಿನ ಹಾಗೆ ಚೆನ್ನಾಗಿರುತ್ತೆ,ಅವು ಮನಸ್ಸಿಗೆ ಮಧುರ, ಮೂಳೆಗೆ ಔಷಧಿ.+
25 ಮನುಷ್ಯನಿಗೆ ಸರಿ ಅನಿಸೋ ಒಂದು ದಾರಿ ಇದೆ,ಅದು ಸಾವಲ್ಲಿ ಕೊನೆ ಆಗುತ್ತೆ.+
26 ದುಡಿಯುವವನಿಗೆ ಹೊಟ್ಟೆನೇ ದುಡಿಯೋಕೆ ಹೇಳುತ್ತೆ,ಅವನ ಹಸಿವು ಅವನನ್ನ ಒತ್ತಾಯಿಸುತ್ತೆ.+
27 ಕೆಲಸಕ್ಕೆ ಬಾರದ ವ್ಯಕ್ತಿ ಕೆಟ್ಟದ್ದನ್ನ ಅಗೆದು ತೆಗಿತಾನೆ,+ಅವನ ಮಾತು ಸುಡೋ ಬೆಂಕಿ.+
28 ಜಗಳ ತಂದಿಡುವವನು* ಒಡಕು ತರ್ತಾನೆ,+ಚಾಡಿ ಹೇಳುವವನು ಪ್ರಾಣ ಸ್ನೇಹಿತರನ್ನ ದೂರ ಮಾಡ್ತಾನೆ.+
29 ಕ್ರೂರಿ ಪಕ್ಕದ ಮನೆಯವನನ್ನ ಮರುಳು ಮಾಡಿ,ತಪ್ಪು ದಾರಿಗೆ ನಡಿಸ್ತಾನೆ.
30 ಕೆಟ್ಟ ಯೋಜನೆ ಮಾಡ್ತಾ ಕಣ್ಣು ಹೊಡಿತಾನೆ,ನಗೋ ತರ ನಟಿಸ್ತಾ ಕೆಟ್ಟದು ಮಾಡ್ತಾನೆ.
31 ಸರಿಯಾದ ದಾರಿಯಲ್ಲಿ ನಡಿಯುವವರಿಗೆ,+ತಲೆಯ ನರೆಗೂದಲೇ ಸುಂದರ* ಕಿರೀಟ.+
32 ತಟ್ಟನೇ ಕೋಪ ಮಾಡ್ಕೊಳ್ಳದೆ ಇರುವವನು+ ಶೂರ ಸೈನಿಕನಿಗಿಂತ ಶಕ್ತಿಶಾಲಿ,ಕೋಪಕ್ಕೆ ಕಡಿವಾಣ ಹಾಕುವವನು ಪಟ್ಟಣವನ್ನ ವಶ ಮಾಡ್ಕೊಳ್ಳೋ ವ್ಯಕ್ತಿಗಿಂತ ಬಲಶಾಲಿ.+
33 ಜನ್ರು ಯೆಹೋವನಿಗೆ ಪ್ರಶ್ನೆ ಕೇಳ್ತಾರೆ,*+ ಆತನು ಅವ್ರಿಗೆ ಉತ್ತರ ಕೊಡ್ತಾನೆ.+
ಪಾದಟಿಪ್ಪಣಿ
^ ಅಥವಾ “ಸರಿಯಾದ ಉತ್ತರ.” ಅಕ್ಷ. “ನಾಲಿಗೆಯ ಉತ್ತರ.”
^ ಅಕ್ಷ. “ಶುದ್ಧವಾಗೇ.”
^ ಅಕ್ಷ. “ಅಂತರಂಗ.”
^ ಅಕ್ಷ. “ನಿನ್ನ ಕೆಲಸಗಳನ್ನ ಯೆಹೋವನಿಗೆ ಉರುಳಿಸು.”
^ ಅಕ್ಷ. “ಶತ್ರುಗಳು ಸಹ ಅವನ ಜೊತೆ ಶಾಂತಿಯಿಂದ ಇರೋ ಹಾಗೆ ಮಾಡ್ತಾನೆ.”
^ ಅಕ್ಷ. “ಒಳನೋಟ.”
^ ಅಕ್ಷ. “ಒಳನೋಟ.”
^ ಅಕ್ಷ. “ಒಳನೋಟ.”
^ ಅಥವಾ “ಪಿತೂರಿ ಹೂಡುವವನು.”
^ ಅಥವಾ “ಗೌರವದ.”