ಜ್ಞಾನೋಕ್ತಿ 2:1-22
2 ನನ್ನ ಮಗನೇ, ನನ್ನ ಮಾತನ್ನ ಕೇಳು,ನನ್ನ ಆಜ್ಞೆಗಳನ್ನ ಆಸ್ತಿ ತರ ಅಮೂಲ್ಯವಾಗಿ ನೋಡು,*+
2 ವಿವೇಕದ ಮಾತುಗಳನ್ನ ಕೇಳಿಸ್ಕೊ,+ಸರಿ ಯಾವುದು ತಪ್ಪು ಯಾವುದು ಅಂತ ಗೊತ್ತಾಗಬೇಕಂದ್ರೆ* ನಿನ್ನ ಮನಸ್ಸು ಕೊಡು,+
3 ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯಕ್ಕಾಗಿ ಬೇಡ್ಕೊ,+ವಿವೇಚನಾ ಶಕ್ತಿಗಾಗಿ ಕೇಳ್ಕೋ,+
4 ಅವುಗಳನ್ನ ಬೆಳ್ಳಿ ತರ ಹುಡುಕು,+ನೆಲದಲ್ಲಿ ಬಚ್ಚಿಟ್ಟಿರೋ ನಿಧಿ ತರ ಹುಡುಕು,+
5 ಆಗ ನಿನಗೆ ಯೆಹೋವನ ಭಯ ಅಂದ್ರೇನು ಅಂತ ಅರ್ಥ ಆಗುತ್ತೆ,+ದೇವರ ಬಗ್ಗೆ ಹೆಚ್ಚು ಕಲಿತೀಯ.+
6 ಯಾಕಂದ್ರೆ ಯೆಹೋವನೇ ವಿವೇಕ ಕೊಡ್ತಾನೆ,+ಜ್ಞಾನ, ತಿಳುವಳಿಕೆಯ ಮಾತುಗಳು ಆತನ ಬಾಯಿಂದಾನೇ ಬರುತ್ತೆ.
7 ಆತನು ತನ್ನ ಭಂಡಾರದಿಂದ ಪ್ರಾಮಾಣಿಕರಿಗೆ ವಿವೇಕ* ಕೊಡ್ತಾನೆ,ತಪ್ಪು ಮಾಡದವ್ರಿಗೆ ಗುರಾಣಿಯಾಗಿ ಇರ್ತಾನೆ.+
8 ನ್ಯಾಯದ ದಾರಿಯಲ್ಲಿ ನಡಿಯುವವ್ರಿಗೆ ಕಾವಲಾಗಿ ಇರ್ತಾನೆ,ತನ್ನ ನಿಷ್ಠಾವಂತರ ದಾರಿಯನ್ನ ಕಾದುಕಾಪಾಡ್ತಾನೆ.+
9 ಆಗ ನಿನಗೆ ನ್ಯಾಯ-ನೀತಿಯಿಂದ, ಭೇದಭಾವ ಮಾಡದೆ ಇರೋದು ಅಂದ್ರೇನು ಅಂತ ಅರ್ಥ ಆಗುತ್ತೆ,ಯಾವುದು ಒಳ್ಳೇ ದಾರಿ ಅಂತ ಗೊತ್ತಾಗುತ್ತೆ.+
10 ವಿವೇಕ ನಿನ್ನ ಹೃದಯದ ಒಳಗೆ ಹೋದಾಗ,+ಜ್ಞಾನದಿಂದ ನಿನ್ನ ಪ್ರಾಣಕ್ಕೆ ಖುಷಿಯಾದಾಗ,+
11 ಬುದ್ಧಿ ನಿನಗೆ ಕಾವಲಾಗಿರುತ್ತೆ,+ವಿವೇಚನಾ ಶಕ್ತಿ ನಿನ್ನನ್ನ ಕಾದುಕಾಪಾಡುತ್ತೆ.
12 ನೀನು ಕೆಟ್ಟ ದಾರಿಗೆ ಹೋಗದ ಹಾಗೆ ಅವು ಕಾಪಾಡುತ್ತೆ,ಬಾಯಿಗೆ ಬಂದದ್ದನ್ನ ಮಾತಾಡದ ಹಾಗೆ ನಿನ್ನನ್ನ ಕಾಪಾಡುತ್ತೆ.+
13 ಸರಿ ದಾರಿ ಬಿಟ್ಟು ಕೆಟ್ಟ ದಾರಿಯಲ್ಲಿರೋ ಜನ್ರಿಂದ,+ನಿನ್ನನ್ನ ರಕ್ಷಿಸುತ್ತೆ.
14 ಕೆಟ್ಟ ಕೆಲಸ ಮಾಡಿ ಖುಷಿ ಪಡೋ,ಅಸಭ್ಯವಾಗಿ ಮಾತಾಡೋ ಜನ್ರಿಂದ ನಿನ್ನನ್ನ ಕಾಪಾಡುತ್ತೆ.
15 ಕೆಟ್ಟವರು ಅಡ್ಡ ದಾರಿಯಲ್ಲಿ ನಡಿತಾರೆ,ಬೇರೆಯವ್ರಿಗೆ ಮೋಸ ಮಾಡ್ತಾನೇ ಇರ್ತಾರೆ.
16 ವಿವೇಕ ನಿನ್ನನ್ನ ನಡತೆಗೆಟ್ಟ* ಹೆಂಗಸಿಂದ ಕಾಪಾಡುತ್ತೆ,ನಾಚಿಕೆಗೆಟ್ಟ* ಹೆಂಗಸಿನ ಮೋಡಿಯ ಮಾತಿಗೆ ಮರಳಾಗದ ಹಾಗೆ ತಪ್ಪಿಸುತ್ತೆ.+
17 ಅವಳು ತನ್ನ ಯೌವನದ ಆಪ್ತ ಗೆಳೆಯನನ್ನ* ಬಿಟ್ಟುಬಿಟ್ಟಿದ್ದಾಳೆ.+
ತನ್ನ ದೇವರ ಜೊತೆ ಮಾಡ್ಕೊಂಡ ಒಪ್ಪಂದವನ್ನ ಮರೆತುಬಿಟ್ಟಿದ್ದಾಳೆ.
18 ನೀನು ಅವಳ ಮನೆಗೆ ಹೋದ್ರೆ ಮರಣದ ಬಾಯಿಗೆ ಹೋಗ್ತಿಯ.
ಅವಳ ಮನೆಯ ದಾರಿಗಳು ಸಮಾಧಿಗೆ ನಡಿಸುತ್ತೆ.+
19 ಅವಳ ಜೊತೆ ಸಂಬಂಧ ಇಟ್ಕೊಳ್ಳೋ* ಗಂಡಸ್ರು ವಾಪಸ್ ಬರಲ್ಲ,ಜೀವದ ದಾರಿಯಲ್ಲಿ ಅವ್ರಿಗೆ ಮತ್ತೆ ನಡಿಯೋಕೆ ಆಗಲ್ಲ.+
20 ಹಾಗಾಗಿ ಒಳ್ಳೇ ಜನ್ರು ನಡಿಯೋ ದಾರಿಯಲ್ಲಿ ನಡಿ.
ನೀತಿವಂತರು ಹೋಗೋ ದಾರಿಯನ್ನ ಬಿಟ್ಟುಬರಬೇಡ.+
21 ಯಾಕಂದ್ರೆ ಒಳ್ಳೆಯವರು* ಮಾತ್ರ ಭೂಮಿಯಲ್ಲಿ ಇರ್ತಾರೆ,ತಪ್ಪು ಮಾಡದವರು* ಉಳಿತಾರೆ.+
22 ಆದ್ರೆ ಕೆಟ್ಟವರು ಭೂಮಿ ಮೇಲಿಂದ ನಾಶ ಆಗ್ತಾರೆ,+ಮೋಸಗಾರರನ್ನ ದೇವರು ಕಿತ್ತು ಎಸಿತಾನೆ.+
ಪಾದಟಿಪ್ಪಣಿ
^ ಅಥವಾ “ನಿಧಿ ಹಾಗೆ ಕಾಪಾಡ್ಕೋ.”
^ ಅಥವಾ “ವಿವೇಚನಾ ಶಕ್ತಿ ಸಿಗಬೇಕಂದ್ರೆ.”
^ ಅಥವಾ “ಪ್ರಯೋಜನ ತರೋ ವಿವೇಕ.”
^ ಅಕ್ಷ. “ಅಪರಿಚಿತ.” ಇಲ್ಲಿ ನೈತಿಕವಾಗಿ ದೇವರಿಂದ ದೂರ ಹೋಗಿರೋ ಹೆಂಗಸನ್ನ ಸೂಚಿಸುತ್ತಿರಬೇಕು.
^ ಅಕ್ಷ. “ವಿದೇಶಿ.” ಇಲ್ಲಿ ನೈತಿಕವಾಗಿ ದೇವರಿಂದ ದೂರ ಹೋಗಿರೋ ಹೆಂಗಸನ್ನ ಸೂಚಿಸುತ್ತಿರಬೇಕು.
^ ಅಥವಾ “ಗಂಡನನ್ನ.”
^ ಅಕ್ಷ. “ಅವಳ ಹತ್ರ ಹೋಗೋ.”
^ ಅಥವಾ “ಪ್ರಾಮಾಣಿಕರು.”
^ ಅಥವಾ “ನಿರ್ದೋಷಿಗಳು.”