ಜ್ಞಾನೋಕ್ತಿ 28:1-28

  • ನಿಯಮ ಪಾಲಿಸೋಕೆ ಒಪ್ಪದವನ ಪ್ರಾರ್ಥನೆ ಕೇಳಲ್ಲ (9)

  • ಅಪರಾಧಗಳನ್ನ ಒಪ್ಕೊಳ್ಳುವವನಿಗೆ ಕರುಣೆ ಸಿಗುತ್ತೆ (13)

  • ಶ್ರೀಮಂತ ಆಗೋಕೆ ಆತುರ ಪಡುವವನು ತಪ್ಪು ಮಾಡದೇ ಇರೋಕೆ ಆಗಲ್ಲ (20)

  • ಅತಿಯಾಗಿ ಹೊಗಳುವವನಿಗಿಂತ ತಿದ್ದುವವನೇ ಮೇಲು (23)

  • ಉದಾರಿಗೆ ಕೊರತೆ ಆಗಲ್ಲ (27)

28  ಯಾರೂ ಓಡಿಸ್ಕೊಂಡು ಹೋಗದಿದ್ರೂ ಕೆಟ್ಟವನು ಓಡಿ ಹೋಗ್ತಾನೆ,ಆದ್ರೆ ನೀತಿವಂತ ಸಿಂಹದ ಹಾಗೆ ಧೈರ್ಯವಾಗಿ ಇರ್ತಾನೆ.+   ಪ್ರಜೆಗಳು ನಿಯಮ ಮೀರಿದ್ರೆ* ಅಧಿಕಾರಿಗಳು ಬದಲಾಗ್ತಾ ಇರ್ತಾರೆ,+ಆದ್ರೆ ವಿವೇಚನಾ ಶಕ್ತಿ, ಜ್ಞಾನ ಇರೋ ವ್ಯಕ್ತಿ ಸಹಾಯ ಮಾಡಿದ್ರೆ ಅಧಿಕಾರಿ ಜಾಸ್ತಿ ಸಮಯ ಆಳ್ತಾನೆ.+   ದೀನನಿಗೆ ಮೋಸ ಮಾಡೋ ಬಡವ+ಬೆಳೆಯನ್ನೆಲ್ಲ ಕೊಚ್ಕೊಂಡು ಹೋಗೋ ಮಳೆ ತರ.   ನಿಯಮ* ಮೀರುವವನು ಕೆಟ್ಟವ್ರನ್ನ ಹೊಗಳಿ ಅಟ್ಟಕ್ಕೇರಿಸ್ತಾನೆ,ಆದ್ರೆ ನಿಯಮ ಪಾಲಿಸುವವನಿಗೆ ಅವ್ರನ್ನ ಕಂಡ್ರೆ ಕೋಪ ಬರುತ್ತೆ.+   ಕೆಟ್ಟವನಿಗೆ ನ್ಯಾಯ ಅರ್ಥ ಆಗಲ್ಲ,ಯೆಹೋವನನ್ನ ಹುಡುಕುವವ್ರಿಗೆ ಎಲ್ಲ ಅರ್ಥ ಆಗುತ್ತೆ.+   ಕೆಟ್ಟ ದಾರಿಯಲ್ಲಿ ನಡಿಯೋ ಶ್ರೀಮಂತನಿಗಿಂತಸರಿ ದಾರಿಯಲ್ಲಿ ನಡಿಯೋ ಬಡವನೇ ಮೇಲು.+   ಅರ್ಥ ಮಾಡ್ಕೊಳ್ಳೋ ಸಾಮರ್ಥ್ಯ ಇರೋ ಮಗ ನಿಯಮ* ಪಾಲಿಸ್ತಾನೆ,ಆದ್ರೆ ಹೊಟ್ಟೆಬಾಕರ ಸಹವಾಸ ಮಾಡುವವನು ಅಪ್ಪನಿಗೆ ಅವಮಾನ ಮಾಡ್ತಾನೆ.+   ಬಡ್ಡಿಯಿಂದ,+ ಅನ್ಯಾಯದಿಂದ ತನ್ನ ಸಂಪತ್ತು ಹೆಚ್ಚಿಸ್ಕೊಳ್ತಾನೆಆದ್ರೆ ಅದನ್ನ ಬಡವ್ರಿಗೆ ದಯೆ ತೋರಿಸುವವನಿಗಾಗಿ ಕೂಡಿಡ್ತಾನೆ.+   ನಿಯಮ* ಪಾಲಿಸೋಕೆ ಒಪ್ಪದವನಪ್ರಾರ್ಥನೆಯನ್ನ ಕೇಳಲ್ಲ.+ 10  ಪ್ರಾಮಾಣಿಕನನ್ನ ಕೆಟ್ಟ ದಾರಿಗೆ ಎಳಿಯುವವನು ತಾನು ತೋಡಿದ ಗುಂಡಿಗೆ ತಾನೇ ಬೀಳ್ತಾನೆ,+ಆದ್ರೆ ತಪ್ಪು ಮಾಡದವನು ಒಳ್ಳೇ ಪ್ರತಿಫಲ ಪಡ್ಕೊಳ್ತಾನೆ.+ 11  ಶ್ರೀಮಂತ ತಾನೇ ದೊಡ್ಡ ವಿವೇಕಿ ಅಂದ್ಕೊಳ್ತಾನೆ,+ಆದ್ರೆ ವಿವೇಚನಾ ಶಕ್ತಿ ಇರೋ ಬಡವ ಶ್ರೀಮಂತನ ಬಂಡವಾಳ ಏನಂತ ಕಂಡುಹಿಡಿತಾನೆ.+ 12  ನೀತಿವಂತರಿಗೆ ಜಯ ಸಿಕ್ಕಿದಾಗ ಜನ ಕುಣಿದು ಕುಪ್ಪಳಿಸ್ತಾರೆ. ಆದ್ರೆ ಕೆಟ್ಟವರು ಅಧಿಕಾರಕ್ಕೆ ಬಂದಾಗ ಅಡಗಿಕೊಳ್ತಾರೆ.+ 13  ತನ್ನ ಅಪರಾಧಗಳನ್ನ ಮುಚ್ಚಿಡುವವನಿಗೆ ಒಳ್ಳೇದಾಗಲ್ಲ,+ಅದನ್ನ ಒಪ್ಕೊಂಡು ಮತ್ತೆ ಮಾಡದೆ ಇರುವವನಿಗೆ ಕರುಣೆ ಸಿಗುತ್ತೆ.+ 14  ತನ್ನ ಕೆಲಸಗಳ ಬಗ್ಗೆ ಎಚ್ಚರವಾಗಿ ಇರುವವನು* ಯಾವಾಗ್ಲೂ ಸಂತೋಷವಾಗಿ ಇರ್ತಾನೆ,ಆದ್ರೆ ತನ್ನ ಹೃದಯ ಕಲ್ಲು ಮಾಡ್ಕೊಳ್ಳುವವನು ಕಷ್ಟಕ್ಕೆ ಸಿಕ್ಕಿಹಾಕೊಳ್ತಾನೆ.+ 15  ಅಮಾಯಕರ ಮೇಲೆ ಆಳೋ ಕೆಟ್ಟವನು,ಗರ್ಜಿಸೋ ಸಿಂಹದ ಹಾಗೆ, ಮೈಮೇಲೆ ಎರಗೋ ಕರಡಿ ಹಾಗೆ.+ 16  ವಿವೇಚನಾ ಶಕ್ತಿ ಇಲ್ಲದ ನಾಯಕ ತನ್ನ ಅಧಿಕಾರವನ್ನ ದುರುಪಯೋಗ ಮಾಡ್ತಾನೆ,+ಆದ್ರೆ ಅಪ್ರಾಮಾಣಿಕ ಲಾಭವನ್ನ ದ್ವೇಷಿಸುವವನು ಆಯಸ್ಸು ಹೆಚ್ಚಿಸ್ಕೊಳ್ತಾನೆ.+ 17  ಬೇರೆಯವ್ರ ಜೀವ ತೆಗೆದು ಅದರ ರಕ್ತಾಪರಾಧ ಹೊತ್ಕೊಂಡಿರೋನು ಸ್ಮಶಾನ* ಸೇರೋ ತನಕ ಓಡ್ತಾ ಇರ್ತಾನೆ.+ ಅವನನ್ನ ಯಾರೂ ತಡಿಬೇಡಿ. 18  ತಪ್ಪಿಲ್ಲದೆ ನಡಿಯುವವನು ರಕ್ಷಣೆ ಪಡಿತಾನೆ,+ಆದ್ರೆ ಅಂಕುಡೊಂಕು ದಾರೀಲಿ ನಡಿಯುವವನು ಅಚಾನಕ್ಕಾಗಿ ಬೀಳ್ತಾನೆ.+ 19  ತನ್ನ ಹೊಲದಲ್ಲಿ ಉಳುಮೆ ಮಾಡುವವನಿಗೆ ಸಾಕಷ್ಟು ಊಟ ಸಿಗುತ್ತೆ,ಆದ್ರೆ ಕೆಲಸಕ್ಕೆ ಬಾರದ ವಿಷ್ಯಗಳ ಹಿಂದೆ ಹೋಗುವವನು ಕಡುಬಡತನಕ್ಕೆ ಬಲಿ ಆಗ್ತಾನೆ.+ 20  ನಂಬಿಗಸ್ತ ವ್ಯಕ್ತಿಗೆ ತುಂಬ ಆಶೀರ್ವಾದ ಸಿಗುತ್ತೆ,+ಆದ್ರೆ ಶ್ರೀಮಂತ ಆಗೋಕೆ ಆತುರ ಪಡುವವನು ತಪ್ಪು ಮಾಡದೇ ಇರೋಕೆ ಆಗಲ್ಲ.+ 21  ಭೇದಭಾವ ಮಾಡೋದು ಒಳ್ಳೇದಲ್ಲ,+ಆದ್ರೆ ಮನುಷ್ಯ ಒಂದು ತುಂಡು ರೊಟ್ಟಿಗಾಗಿ ತಪ್ಪು ಮಾಡಿಬಿಡಬಹುದು. 22  ಹೊಟ್ಟೆಕಿಚ್ಚುಪಡೋ ಮನುಷ್ಯ ಹಣ ಆಸ್ತಿಗಾಗಿ ಆಸೆಪಡ್ತಾನೆ. ಆದ್ರೆ ತನಗೆ ಬಡತನ ಬರುತ್ತೆ ಅಂತ ಅವನಿಗೆ ಗೊತ್ತಿರಲ್ಲ. 23  ಒಬ್ಬ ವ್ಯಕ್ತಿಯನ್ನ ಅತಿಯಾಗಿ ಹೊಗಳುವವನಿಗಿಂತ,ತಿದ್ದುವವನಿಗೆ+ ಮುಂದೆ ಹೆಚ್ಚು ಮೆಚ್ಚುಗೆ ಸಿಗುತ್ತೆ.+ 24  ತನ್ನ ಅಪ್ಪಅಮ್ಮನನ್ನ ದೋಚಿ “ಇದ್ರಲ್ಲೇನೂ ತಪ್ಪಿಲ್ಲ” ಅನ್ನೋನು+ನಾಶ ತರೋ ವ್ಯಕ್ತಿಯ ಜೊತೆಗಾರ.+ 25  ದುರಾಸೆ ಇರುವವನು ಒಡಕು ತರ್ತಾನೆ,ಆದ್ರೆ ಯೆಹೋವನನ್ನ ಆತ್ಕೊಳ್ಳುವವನು ಏಳಿಗೆ ಆಗ್ತಾನೆ.+ 26  ತನ್ನ ಸ್ವಂತ ಹೃದಯವನ್ನ ನಂಬುವವನು ಮೂರ್ಖ,+ವಿವೇಕದಿಂದ ನಡಿಯುವವನು ಕಷ್ಟದಿಂದ ತಪ್ಪಿಸ್ಕೊಳ್ತಾನೆ.+ 27  ಬಡವರಿಗೆ ದಾನ ಮಾಡುವವನಿಗೆ ಏನೂ ಕೊರತೆ ಆಗಲ್ಲ,+ಆದ್ರೆ ಅವ್ರ ಅಗತ್ಯ ನೋಡಿನೂ ನೋಡದ ಹಾಗೆ ಇರುವವನಿಗೆ ತುಂಬ ಶಾಪ ಬರುತ್ತೆ. 28  ಕೆಟ್ಟವರು ಅಧಿಕಾರಕ್ಕೆ ಬಂದಾಗ ಮನುಷ್ಯರು ಅಡಗಿಕೊಳ್ತಾರೆ,ಆದ್ರೆ ಕೆಟ್ಟವ್ರ ಅಂತ್ಯ ಆದಾಗ ನೀತಿವಂತರು ಜಾಸ್ತಿ ಆಗ್ತಾರೆ.+

ಪಾದಟಿಪ್ಪಣಿ

ಅಥವಾ “ತಿರುಗಿಬಿದ್ರೆ.”
ಅಥವಾ “ದೇವರ ನಿಯಮ.”
ಅಥವಾ “ದೇವರ ನಿಯಮ.”
ಅಥವಾ “ದೇವರ ನಿಯಮ.”
ಅಥವಾ “ದೇವರಿಗೆ ಭಯಪಡುವವನು.”
ಅಥವಾ “ಗುಂಡಿ.”