ಜ್ಞಾನೋಕ್ತಿ 3:1-35
3 ನನ್ನ ಮಗನೇ, ನಾನು ಕಲಿಸೋದನ್ನ* ಮರಿಬೇಡ,ನನ್ನ ಆಜ್ಞೆಗಳನ್ನ ಮನಸಾರೆ ಪಾಲಿಸು.
2 ಆಗ ನೀನು ಜಾಸ್ತಿ ವರ್ಷ ಬದುಕ್ತೀಯ,ನೆಮ್ಮದಿಯಾಗಿ ಇರ್ತಿಯ.+
3 ಶಾಶ್ವತ ಪ್ರೀತಿ, ಸತ್ಯವನ್ನ ಬಿಟ್ಟುಬಿಡಬೇಡ.+
ಅವುಗಳನ್ನ ನಿನ್ನ ಕೊರಳಿಗೆ ಸುಂದರ ಸರದ ಹಾಗೆ ಕಟ್ಕೊ,ನಿನ್ನ ಹೃದಯದ ಹಲಗೆ ಮೇಲೆ ಬರ್ಕೊ.+
4 ಆಗ ದೇವರಿಗೆ, ಮನುಷ್ಯರಿಗೆ ಖುಷಿ ಆಗುತ್ತೆ,ನಿನಗೆ ನಿಜವಾಗ್ಲೂ ತುಂಬ ತಿಳುವಳಿಕೆ* ಇದೆ ಅಂತ ಅವರು ಒಪ್ಕೊಳ್ತಾರೆ.+
5 ಪೂರ್ಣ ಹೃದಯದಿಂದ ಯೆಹೋವನ ಮೇಲೆ ನಂಬಿಕೆ ಇಡು,+ನಿನ್ನ ಸ್ವಂತ ಬುದ್ಧಿ ಮೇಲೆ ಆತ್ಕೊಳ್ಳಬೇಡ.+
6 ಅದನ್ನ ಮನಸ್ಸಲ್ಲಿ ಇಟ್ಕೊಂಡು ಎಲ್ಲ ಕೆಲಸ ಮಾಡು,+ಆಗ ದೇವರು ನಿನಗೆ ಸರಿ ದಾರಿ ತೋರಿಸ್ತಾನೆ.+
7 ನೀನೇ ತುಂಬ ಬುದ್ಧಿವಂತ ಅಂದ್ಕೊಳ್ಳಬೇಡ.+
ಯೆಹೋವನಿಗೆ ಭಯಪಡು, ಕೆಟ್ಟದು ಮಾಡಬೇಡ.
8 ಆಗ ಆರೋಗ್ಯವಾಗಿ ಇರ್ತಿಯ,ನಿನ್ನ ಮೂಳೆಗಳಿಗೆ ಹೊಸ ಬಲ ಸಿಗುತ್ತೆ.
9 ನಿನ್ನ ಬೆಲೆ ಬಾಳೋ ವಸ್ತುಗಳಿಂದ ಯೆಹೋವನನ್ನ ಸನ್ಮಾನಿಸು,+ನಿನ್ನ ಬೆಳೆಯ* ಮೊದಲ* ಫಲದಿಂದ ಆತನನ್ನ ಗೌರವಿಸು.+
10 ಆಗ ನಿನ್ನ ಗೋಡೌನ್‌ಗಳು ತುಂಬಿ ತುಳುಕುತ್ತೆ,+ನಿನ್ನ ದ್ರಾಕ್ಷಿತೊಟ್ಟಿಗಳಲ್ಲಿ ಹೊಸ ದ್ರಾಕ್ಷಾಮದ್ಯ ತುಂಬಿ ಹರಿಯುತ್ತೆ.
11 ನನ್ನ ಮಗನೇ, ಯೆಹೋವ ಶಿಸ್ತು ಕೊಡುವಾಗ ಬೇಡ ಅನ್ನಬೇಡ,+ಆತನು ತಿದ್ದುವಾಗ ಬೇಜಾರು ಮಾಡ್ಕೊಳ್ಳಬೇಡ.+
12 ಅಪ್ಪ ತಾನು ಪ್ರೀತಿಸೋ ಮಗನನ್ನ ತಿದ್ದೋ ತರ,+ಯೆಹೋವ ಯಾರನ್ನ ಪ್ರೀತಿಸ್ತಾನೋ ಅವ್ರನ್ನೇ ತಿದ್ದುತ್ತಾನೆ.+
13 ವಿವೇಕ ಪಡ್ಕೊಳ್ಳುವವನು,+ವಿವೇಚನಾ ಶಕ್ತಿಯನ್ನ ಸಂಪಾದಿಸುವವನು ಖುಷಿಯಾಗಿ ಇರ್ತಾನೆ.
14 ಬೆಳ್ಳಿ ಪಡಿಯೋದಕ್ಕಿಂತ ವಿವೇಕ ಪಡಿಯೋದು ಒಳ್ಳೆದು,ಚಿನ್ನ ಪಡಿಯೋದಕ್ಕಿಂತ ವಿವೇಕ ಸಂಪಾದಿಸೋದು* ಒಳ್ಳೆದು.+
15 ವಿವೇಕಕ್ಕೆ ಹವಳಕ್ಕಿಂತ* ಬೆಲೆ ಜಾಸ್ತಿ,ನೀನು ಆಸೆಪಡೋ ಯಾವುದೂ ಅದಕ್ಕೆ ಸಮವಲ್ಲ.
16 ಅದ್ರ ಬಲಗೈಯಲ್ಲಿ ತುಂಬ ಆಯಸ್ಸಿದೆ,ಅದ್ರ ಎಡಗೈಯಲ್ಲಿ ಆಸ್ತಿ, ಅಂತಸ್ತು ಇದೆ.
17 ವಿವೇಕದ ದಾರಿಯಲ್ಲಿ ಹೋದ್ರೆ ಸಂತೋಷ ಸಿಗುತ್ತೆ,ಶಾಂತಿ ಸಮಾಧಾನ ಇರುತ್ತೆ.+
18 ವಿವೇಕ ಹಿಡ್ಕೊಳ್ಳುವವನಿಗೆ ಅದು ಜೀವದ ಮರ ಆಗಿರುತ್ತೆ,ಅದನ್ನ ಗಟ್ಟಿಯಾಗಿ ಹಿಡ್ಕೊಳ್ಳುವವನು ಸಂತೋಷವಾಗಿ ಇದ್ದಾನೆ ಅಂತ ಬೇರೆಯವ್ರಿಗೆ ಗೊತ್ತಾಗುತ್ತೆ.+
19 ಯೆಹೋವ ವಿವೇಕದಿಂದ ಭೂಮಿಗೆ ಅಡಿಪಾಯ ಹಾಕಿದ್ದಾನೆ,+ವಿವೇಚನಾ ಶಕ್ತಿಯಿಂದ ಆಕಾಶವನ್ನ ಗಟ್ಟಿಯಾಗಿ ನಿಲ್ಲಿಸಿದ್ದಾನೆ.+
20 ಆತನ ಜ್ಞಾನದಿಂದ ಆಳವಾದ ನೀರು ಎರಡು ಭಾಗ ಆಯ್ತು,ಮೋಡ ಕವಿದ ಆಕಾಶದಿಂದ ಇಬ್ಬನಿ ಬಿತ್ತು.+
21 ನನ್ನ ಮಗನೇ, ಇದನ್ನೆಲ್ಲ* ನಿನ್ನ ಮನಸ್ಸಲ್ಲಿ ಇಟ್ಕೊ,ವಿವೇಕವನ್ನ,* ಯೋಚ್ನೆ ಮಾಡೋ ಶಕ್ತಿಯನ್ನ ಕಾಪಾಡ್ಕೊ.
22 ಅವು ನಿನಗೆ ಜೀವ ಕೊಡುತ್ತೆ,ನಿನ್ನ ಕತ್ತಿಗೆ ಅಲಂಕಾರ ಆಗಿರುತ್ತೆ.
23 ಆಗ ನೀನು ನಿನ್ನ ದಾರಿಯಲ್ಲಿ ಸುರಕ್ಷಿತವಾಗಿ ನಡಿತೀಯ,ನಿನ್ನ ಕಾಲುಗಳು ಯಾವತ್ತೂ ಎಡವಲ್ಲ.+
24 ಭಯ ಇಲ್ಲದೆ ಮಲಗಿರ್ತಿಯ,+ಸುಖವಾಗಿ ನಿದ್ದೆ ಮಾಡ್ತೀಯ.+
25 ಅಚಾನಕ್ಕಾಗಿ ಕಷ್ಟ ಬಂದ್ರೂ ನೀನು ಹೆದರಲ್ಲ,+ಕೆಟ್ಟವನ ಮೇಲೆ ಬರೋ ಬಿರುಗಾಳಿಗೂ ನೀನು ಅಂಜಲ್ಲ.+
26 ಯಾಕಂದ್ರೆ ನಿನಗೆ ಯೆಹೋವನ ಮೇಲೆ ಪೂರ್ತಿ ನಂಬಿಕೆ ಇದೆ,+ನಿನ್ನ ಕಾಲುಗಳು ಉರುಲಿಗೆ ಸಿಕ್ಕಿಹಾಕೊಳ್ಳದ ಹಾಗೆ ಆತನು ನೋಡ್ಕೊಳ್ತಾನೆ.+
27 ನಿನ್ನ ಕೈಯಿಂದ ಒಳ್ಳೇದು ಮಾಡೋಕೆ ಆದ್ರೆ ಖಂಡಿತ ಮಾಡು,ಅಗತ್ಯ ಇರುವವ್ರಿಗೆ ಒಳ್ಳೇದು ಮಾಡದೇ ಇರಬೇಡ.+
28 ಅಕ್ಕಪಕ್ಕದ ಮನೆಯವ್ರಿಗೆ ನಿನ್ನಿಂದ ಏನಾದ್ರೂ ಕೊಡೋಕಾದ್ರೆ,“ಆಮೇಲೆ ಬಾ! ನಾಳೆ ಕೊಡ್ತೀನಿ” ಅಂತ ಹೇಳಬೇಡ.
29 ಪಕ್ಕದ ಮನೆಯವನು ನಿನ್ನ ಮೇಲೆ ನಂಬಿಕೆ ಇಟ್ಟು ವಾಸ ಮಾಡ್ತಾ ಇರುವಾಗ,+ಅವನಿಗೆ ಹಾನಿ ಮಾಡೋಕೆ ಪಿತೂರಿ ಮಾಡಬೇಡ.
30 ಒಬ್ಬ ವ್ಯಕ್ತಿ ನಿನ್ನ ವಿರುದ್ಧ ಏನೂ ಮಾಡಿರದಿದ್ರೆ,ಕಾಲು ಕೆರ್ಕೊಂಡು ಜಗಳಕ್ಕೆ ಹೋಗಬೇಡ.+
31 ಕ್ರೂರಿಯನ್ನ ನೋಡಿ ಹೊಟ್ಟೆಕಿಚ್ಚುಪಡಬೇಡ,+ಅವನ ತರ ನಡ್ಕೊಳ್ಳಬೇಡ.
32 ಯಾಕಂದ್ರೆ ಯೆಹೋವ ಮೋಸಗಾರನನ್ನ* ಇಷ್ಟಪಡಲ್ಲ,+ಆದ್ರೆ ಆತನು ಪ್ರಾಮಾಣಿಕನ ಆಪ್ತ ಸ್ನೇಹಿತ.+
33 ಕೆಟ್ಟವನ ಮನೆ ಮೇಲೆ ಯೆಹೋವನ ಶಾಪ ಇರುತ್ತೆ,+ಆದ್ರೆ ನೀತಿವಂತನ ಮನೆಯನ್ನ ಆತನು ಆಶೀರ್ವದಿಸ್ತಾನೆ.+
34 ಯಾಕಂದ್ರೆ ಆತನು ಗೇಲಿ ಮಾಡುವವ್ರನ್ನ ನೋಡಿ ನಗ್ತಾನೆ,+ಆದ್ರೆ ಸೌಮ್ಯ ಸ್ವಭಾವದವ್ರಿಗೆ ದಯೆ ತೋರಿಸ್ತಾನೆ.+
35 ವಿವೇಕಿಗಳಿಗೆ ದೇವರಿಂದ ಸಿಗೋ ಆಸ್ತಿ ಗೌರವ,ಆದ್ರೆ ಮೂರ್ಖರಿಗೆ ಸಿಗೋ ಆಸ್ತಿ ಅವಮಾನ.+
ಪಾದಟಿಪ್ಪಣಿ
^ ಅಥವಾ “ನನ್ನ ನಿಯಮವನ್ನ.”
^ ಅಕ್ಷ. “ಒಳನೋಟ.”
^ ಅಥವಾ “ಆದಾಯದ.”
^ ಅಥವಾ “ಅತ್ಯುತ್ತಮ.”
^ ಅಥವಾ “ವಿವೇಕದಿಂದ ಪಡಿಯೋ ಲಾಭ.”
^ ಇಲ್ಲಿ ಹಿಂದಿನ ವಚನಗಳಲ್ಲಿ ಹೇಳಿರೋ ದೇವರ ಗುಣಗಳನ್ನ ಸೂಚಿಸುತ್ತಿರಬೇಕು.
^ ಅಥವಾ “ನಿನಗೆ ಪ್ರಯೋಜನ ತರೋ ವಿವೇಕವನ್ನ.”
^ ಅಥವಾ “ಕಪಟಿಯನ್ನ.”