ಧರ್ಮೋಪದೇಶಕಾಂಡ 10:1-22

  • ಕಲ್ಲಿನ ಹಲಗೆಗಳನ್ನ ಮತ್ತೆ ಮಾಡಿದ್ದು (1-11)

  • ಯೆಹೋವ ಕೇಳ್ಕೊಳ್ಳೋ ವಿಷ್ಯಗಳು (12-22)

    • ಯೆಹೋವನಿಗೆ ಭಯಪಡಿ ಆತನನ್ನ ಪ್ರೀತಿಸಿ (12)

10  ಆಗ ಯೆಹೋವ ‘ಈ ಮುಂಚೆ ನಾನು ನಿನಗೆ ಕೊಟ್ಟ ಕಲ್ಲಿನ ಹಲಗೆಗಳ ತರ ಬೇರೆ ಎರಡು ಕಲ್ಲಿನ ಹಲಗೆಗಳನ್ನ ಕೆತ್ತು.+ ಮರದ ಒಂದು ಮಂಜೂಷವನ್ನ* ಸಹ ಮಾಡು. ಬೆಟ್ಟ ಹತ್ತಿ ನನ್ನ ಹತ್ರ ಬಾ.  ನೀನು ಒಡೆದುಬಿಟ್ಟ ಕಲ್ಲಿನ ಹಲಗೆಗಳ ಮೇಲಿದ್ದ ಮಾತುಗಳನ್ನ ನಾನು ಅವುಗಳ ಮೇಲೂ ಬರಿತೀನಿ. ಆ ಕಲ್ಲಿನ ಹಲಗೆಗಳನ್ನ ಆ ಮರದ ಪೆಟ್ಟಿಗೆ ಒಳಗೆ ಇಡಬೇಕು’ ಅಂದನು.  ಹಾಗಾಗಿ ನಾನು ಅಕೇಶಿಯ ಮರದಿಂದ ಮಂಜೂಷ ಮಾಡ್ದೆ, ಮೊದಲಿನ ಕಲ್ಲಿನ ಹಲಗೆಗಳ ತರ ಎರಡು ಕಲ್ಲಿನ ಹಲಗೆಗಳನ್ನ ಕೆತ್ತಿ ಅವುಗಳನ್ನ ಕೈಯಲ್ಲಿ ಹಿಡ್ಕೊಂಡು ಬೆಟ್ಟ ಹತ್ತಿ ಹೋದೆ.+  ನೀವು ಹೋರೇಬ್‌ ಬೆಟ್ಟದ ಹತ್ರ ಸೇರಿಬಂದಿದ್ದ+ ದಿನ ಯೆಹೋವ ಬೆಟ್ಟದ ಮೇಲಿಂದ ಬೆಂಕಿ ಒಳಗಿಂದ ಮಾತಾಡಿ+ ಹೇಳಿದ ಆಜ್ಞೆಗಳನ್ನ ಅಂದ್ರೆ 10 ಆಜ್ಞೆಗಳನ್ನ*+ ಆ ಹಲಗೆಗಳ ಮೇಲೆ ಮತ್ತೆ ಬರೆದು+ ಯೆಹೋವ ಅದನ್ನ ನನಗೆ ಕೊಟ್ಟನು.  ನಾನು ಬೆಟ್ಟದಿಂದ ಇಳಿದು ಬಂದು+ ಯೆಹೋವ ಆಜ್ಞೆ ಕೊಟ್ಟ ಹಾಗೇ ಆ ಹಲಗೆಗಳನ್ನ ನಾನು ಮಾಡಿದ ಮಂಜೂಷದಲ್ಲಿ ಇಟ್ಟೆ. ಅವು ಇವತ್ತಿಗೂ ಅದ್ರಲ್ಲೇ ಇದೆ.  ಆಮೇಲೆ ಇಸ್ರಾಯೇಲ್ಯರು ಬೇರೋತ್‌ ಬೆನೇ-ಯಾಕಾನ್‌ ಬಿಟ್ಟು ಮೋಸೇರಕ್ಕೆ ಬಂದ್ರು. ಅಲ್ಲಿ ಆರೋನ ತೀರಿಹೋದ, ಅವನನ್ನ ಸಮಾಧಿ ಮಾಡಿದ್ರು.+ ಅವನ ಜಾಗದಲ್ಲಿ ಅವನ ಮಗ ಎಲ್ಲಾಜಾರ ಪುರೋಹಿತನಾಗಿ ಸೇವೆ ಮಾಡೋಕೆ ಶುರು ಮಾಡಿದ.+  ಮೋಸೇರದಿಂದ ಇಸ್ರಾಯೇಲ್ಯರು ಗುದ್ಗೋದಕ್ಕೆ ಬಂದ್ರು. ಗುದ್ಗೋದದಿಂದ ತೊರೆಗಳು ಹರಿಯೋ ಪ್ರದೇಶವಾದ ಯೊಟ್ಬಾತಕ್ಕೆ ಬಂದ್ರು.+  ಆ ಸಮಯದಲ್ಲಿ ಯೆಹೋವನ ಒಪ್ಪಂದದ ಮಂಜೂಷ ಹೊತ್ಕೊಂಡು ಹೋಗೋಕೆ,+ ಯೆಹೋವನ ಮುಂದೆ ನಿಂತು ಆತನ ಸೇವೆ ಮಾಡೋಕೆ, ಆತನ ಹೆಸ್ರಲ್ಲಿ ಆಶೀರ್ವಾದ ಮಾಡೋಕೆ+ ಯೆಹೋವ ಲೇವಿ ಕುಲದವರನ್ನ+ ಪ್ರತ್ಯೇಕಿಸಿದನು. ಅವರು ಇವತ್ತಿಗೂ ಆ ಕೆಲಸಗಳನ್ನೇ ಮಾಡ್ತಿದ್ದಾರೆ.  ಅದಕ್ಕೇ ಅವ್ರ ಸಹೋದರರಿಗೆ ಸಿಕ್ಕಿದ ಹಾಗೆ ಲೇವಿಯರಿಗೆ ಯಾವುದೇ ಪಾಲು ಅಥವಾ ಆಸ್ತಿ ಸಿಕ್ಕಿಲ್ಲ. ನಿಮ್ಮ ದೇವರಾದ ಯೆಹೋವ ಅವ್ರಿಗೆ ಹೇಳಿದ ಹಾಗೆ ಯೆಹೋವನೇ ಅವ್ರ ಆಸ್ತಿ.+ 10  ನಾನು ಮೊದಲ್ನೇ ಸಲ ಬೆಟ್ಟದ ಮೇಲಿದ್ದ ಹಾಗೇ ಈ ಸಲನೂ 40 ದಿನ ಹಗಲೂರಾತ್ರಿ+ ಬೆಟ್ಟದ ಮೇಲಿದ್ದೆ. ಯೆಹೋವ ಈ ಸಾರಿನೂ ನಾನು ಬೇಡ್ಕೊಂಡಾಗ ಕೇಳಿದನು.+ ಹಾಗಾಗಿ ಯೆಹೋವ ನಿಮ್ಮನ್ನ ನಾಶ ಮಾಡದೆ ಇರೋಕೆ ತೀರ್ಮಾನಿಸಿದನು. 11  ಆಮೇಲೆ ಯೆಹೋವ ನನಗೆ ‘ಇಲ್ಲಿಂದ ಹೋಗೋಕೆ ಜನ್ರನ್ನ ಸಿದ್ಧಮಾಡು. ಅವ್ರನ್ನ ಮುನ್ನಡೆಸು. ಈ ಜನ್ರಿಗೆ ಕೊಡ್ತೀನಿ ಅಂತ ಅವ್ರ ಪೂರ್ವಜರಿಗೆ ಆಣೆ ಮಾಡಿದ ದೇಶಕ್ಕೆ ಅವರು ಹೋಗಿ ಅದನ್ನ ವಶ ಮಾಡ್ಕೊಳ್ಳಲಿ’ + ಅಂದನು. 12  ಇಸ್ರಾಯೇಲ್ಯರೇ, ನಿಮ್ಮ ದೇವರಾದ ಯೆಹೋವ ನಿಮ್ಮಿಂದ ಏನು ಕೇಳ್ಕೊಳ್ತಿದ್ದಾನೆ?+ ನಿಮ್ಮ ದೇವರಾದ ಯೆಹೋವನಿಗೆ ಭಯಪಡಬೇಕು,+ ಎಲ್ಲ ವಿಷ್ಯಗಳಲ್ಲಿ ಆತನು ಹೇಳೋ ದಾರೀಲೇ ನಡಿಬೇಕು,+ ಆತನನ್ನ ಪ್ರೀತಿಸಬೇಕು, ಪೂರ್ಣ ಹೃದಯದಿಂದ, ಪೂರ್ಣ ಪ್ರಾಣದಿಂದ* ನಿಮ್ಮ ದೇವರಾದ ಯೆಹೋವನ ಸೇವೆ ಮಾಡಬೇಕು,+ 13  ನಾನು ಇವತ್ತು ಹೇಳ್ತಿರೋ ಯೆಹೋವನ ಆಜ್ಞೆಗಳನ್ನೂ ನಿಯಮಗಳನ್ನೂ ಪಾಲಿಸಬೇಕು, ಇಷ್ಟೆ ತಾನೇ? ಅವುಗಳನ್ನ ಪಾಲಿಸಿದ್ರೆ ನಿಮಗೇ ಒಳ್ಳೇದಾಗುತ್ತೆ.+ 14  ನೋಡಿ, ಉನ್ನತೋನ್ನತವಾದ ಆಕಾಶ, ಈ ಭೂಮಿ, ಅದ್ರಲ್ಲಿ ಇರೋದೆಲ್ಲ ನಿಮ್ಮ ದೇವರಾದ ಯೆಹೋವನದ್ದೇ.+ 15  ಯೆಹೋವ ನಿಮ್ಮ ಪೂರ್ವಜರಿಗೆ ಮಾತ್ರ ಆಪ್ತನಾಗಿ ಅವ್ರಿಗೆ ಪ್ರೀತಿ ತೋರಿಸಿದನು. ಅದಕ್ಕೆ ಭೂಮಿಯಲ್ಲಿ ಎಷ್ಟೋ ಜನ್ರಿದ್ರೂ ಅವ್ರ ಸಂತತಿಯವರಾದ ನಿಮ್ಮನ್ನೇ ಆತನು ತನ್ನ ಜನ್ರಾಗಿ ಆರಿಸ್ಕೊಂಡನು.+ ಹಾಗಾಗಿ ನೀವು ಇವತ್ತು ಆತನ ಜನ್ರಾಗಿ ಇದ್ದೀರ. 16  ನೀವೀಗ ನಿಮ್ಮ ಹೃದಯ ಶುದ್ಧ* ಮಾಡ್ಕೊಳ್ಳಿ.+ ಹಠಮಾರಿತನ ಬಿಟ್ಟುಬಿಡಿ.+ 17  ಯಾಕಂದ್ರೆ ನಿಮ್ಮ ದೇವರಾದ ಯೆಹೋವ ಬೇರೆಲ್ಲ ದೇವರುಗಳಿಗಿಂತ ತುಂಬಾ ದೊಡ್ಡವನು,+ ಒಡೆಯರ ಒಡೆಯನು. ಶ್ರೇಷ್ಠ, ಬಲಶಾಲಿ, ಭಯವಿಸ್ಮಯ ಹುಟ್ಟಿಸೋ ದೇವರು. ಆತನು ಯಾರಿಗೂ ಭೇದಭಾವ ಮಾಡಲ್ಲ.+ ಲಂಚ ತಗೊಳ್ಳಲ್ಲ. 18  ಅನಾಥ* ಮಕ್ಕಳಿಗೆ, ವಿಧವೆಯರಿಗೆ+ ಆತನು ನ್ಯಾಯ ಕೊಡಿಸ್ತಾನೆ. ನಿಮ್ಮ ಮಧ್ಯ ಇರೋ ವಿದೇಶಿಯರನ್ನ+ ಪ್ರೀತಿಸ್ತಾನೆ, ಅವ್ರಿಗೆ ಊಟಬಟ್ಟೆ ಕೊಡ್ತಾನೆ. 19  ಅದೇ ತರ ನೀವು ಸಹ ನಿಮ್ಮ ಮಧ್ಯ ಇರೋ ವಿದೇಶಿಯರನ್ನ ಪ್ರೀತಿಸಬೇಕು. ಯಾಕಂದ್ರೆ ನೀವೂ ಈಜಿಪ್ಟಲ್ಲಿ ವಿದೇಶಿಯರಾಗಿ ಇದ್ರಲ್ಲಾ.+ 20  ನಿಮ್ಮ ದೇವರಾದ ಯೆಹೋವನಿಗೆ ಭಯಪಡಬೇಕು, ಆತನ ಸೇವೆಯನ್ನೇ ಮಾಡಬೇಕು,+ ಆತನಿಗೆ ಆಪ್ತರಾಗಿ ಇರಬೇಕು. ಆತನ ಹೆಸ್ರಲ್ಲೇ ಆಣೆ ಮಾಡಬೇಕು. 21  ಆತನನ್ನ ಮಾತ್ರ ಹಾಡಿ ಹೊಗಳಬೇಕು.+ ಆತನೇ ನಿಮ್ಮ ದೇವರು. ನಿಮ್ಮ ಕಣ್ಮುಂದೆ ಅದ್ಭುತಗಳನ್ನ, ಭಯವಿಸ್ಮಯ ಹುಟ್ಟಿಸೋ ವಿಷ್ಯಗಳನ್ನ ಮಾಡಿದ್ದು ಆತನೇ.+ 22  ನಿಮ್ಮ ಪೂರ್ವಜರು ಈಜಿಪ್ಟಿಗೆ ಹೋದಾಗ 70 ಜನ ಮಾತ್ರ ಇದ್ರು.+ ಆದ್ರೆ ಈಗ ನಿಮ್ಮ ದೇವರಾದ ಯೆಹೋವ ನಿಮ್ಮನ್ನ ಆಕಾಶದ ನಕ್ಷತ್ರಗಳ ಹಾಗೆ ಲೆಕ್ಕ ಮಾಡೋಕೆ ಆಗದಷ್ಟು ಹೆಚ್ಚು ಮಾಡಿದ್ದಾನೆ.+

ಪಾದಟಿಪ್ಪಣಿ

ಅಥವಾ “ಪೆಟ್ಟಿಗೆಯನ್ನ.”
ಅಥವಾ “ದಶಾಜ್ಞೆಗಳನ್ನ.”
ಅಕ್ಷ. “ಹೃದಯಕ್ಕೆ ಸುನ್ನತಿ.”
ಅಥವಾ “ತಂದೆ ಇಲ್ಲದ.”