ಧರ್ಮೋಪದೇಶಕಾಂಡ 33:1-29

  • ಎಲ್ಲ ಕುಲಗಳನ್ನ ಮೋಶೆ ಆಶೀರ್ವದಿಸಿದ (1-29)

    • ಯೆಹೋವನ ‘ಕೈಗಳು ಯಾವಾಗ್ಲೂ ಆಧಾರ’ (27)

33  ಸತ್ಯದೇವರ ಮನುಷ್ಯನಾದ ಮೋಶೆ ಸಾಯೋ ಮುಂಚೆ ಇಸ್ರಾಯೇಲ್ಯರಿಗೆ ಆಶೀರ್ವಾದ ಮಾಡ್ತಾ+  ಹೀಗೆ ಹೇಳಿದ: “ಯೆಹೋವ ಸಿನಾಯಿ ಬೆಟ್ಟದಿಂದ ಬಂದ,+ಸೇಯೀರಿನಿಂದ ಅವ್ರ ಮೇಲೆ ಬೆಳಕು ಬೀರಿದ. ಪಾರಾನಿನ ಬೆಟ್ಟದಿಂದ ಮಹಿಮೆ ತೋರಿಸಿದ,+ಆತನ ಜೊತೆ ಕೋಟ್ಯಾನುಕೋಟಿ ಪವಿತ್ರ ದೇವದೂತರು ಇದ್ರು,+ಬಲಗಡೆ ಆತನ ಯುದ್ಧವೀರರು ಇದ್ರು.+   ಆತನು ತನ್ನ ಜನ್ರನ್ನ ಪ್ರೀತಿಸಿದ,+ಆ ಪವಿತ್ರ ಜನ್ರೆಲ್ಲ ನಿನ್ನ ಕೈಯಲ್ಲಿದ್ದಾರೆ.+ ಅವರು ನಿನ್ನ ಪಾದದ ಹತ್ರ ಕೂತು+ನಿನ್ನ ಮಾತನ್ನ ಕೇಳ್ತಿದ್ದಾರೆ.+   (ಮೋಶೆ ನಮಗೆ ಆಜ್ಞೆ, ನಿಯಮ ಪುಸ್ತಕ ಕೊಟ್ಟ,+ಅದು ಯಾಕೋಬನ ವಂಶದವರ ಆಸ್ತಿ.)+   ಜನ್ರ ಮುಖ್ಯಸ್ಥರು, ಇಸ್ರಾಯೇಲ್ಯರ ಎಲ್ಲ ಕುಲದವರು+ ಸೇರಿಬಂದ್ರು,+ಆಗ ದೇವರು ಯೆಶುರೂನಿನಲ್ಲಿ*+ ರಾಜನಾದ.   ರೂಬೇನ್‌ ಸಾಯದೆ ಸದಾ ಬದುಕ್ಲಿ,+ಅವನ ಜನ್ರ ಸಂಖ್ಯೆ ಕಮ್ಮಿ ಆಗದಿರಲಿ.”+   ಮೋಶೆ ಯೆಹೂದನಿಗೆ ಹೀಗೆ ಆಶೀರ್ವಾದ ಮಾಡಿದ:+ “ಯೆಹೋವನೇ, ಯೆಹೂದನ ವಿನಂತಿ ಕೇಳಿಸ್ಕೊ,+ಅವನನ್ನ ಮತ್ತೆ ಅವನ ಜನ್ರ ಜೊತೆ ಸೇರಿಸು. ಅವನು ತನಗೆ ಸೇರಬೇಕಾಗಿದ್ದನ್ನ ತನ್ನ ತೋಳು ಬಲದಿಂದ ಉಳಿಸ್ಕೊಂಡ,ತನ್ನ ಶತ್ರುಗಳನ್ನ ಸೋಲಿಸೋಕೆ ಅವನಿಗೆ ನೀನೇ ಸಹಾಯ ಮಾಡು.”+   ಲೇವಿ ಬಗ್ಗೆ ಮೋಶೆ ಹೀಗಂದ:+ “ದೇವರೇ, ನಿನ್ನ ತುಮ್ಮೀಮ್‌ ಮತ್ತು ಊರೀಮ್‌*+ ನಿನ್ನ ನಿಷ್ಠಾವಂತರಿಗೆ ಸೇರಿದೆ,+ನೀನು ಅವನನ್ನ ಮಸ್ಸದಲ್ಲಿ ಪರೀಕ್ಷಿಸಿದೆ,+ಅವನ ಜೊತೆ ಮೆರೀಬಾದ ನೀರಿನ ಹತ್ರ ಹೋರಾಡಿದೆ.+   ಅವನು ತನ್ನ ಅಪ್ಪಅಮ್ಮನನ್ನೂ ಲೆಕ್ಕಿಸಲಿಲ್ಲ,ಅಣ್ಣತಮ್ಮಂದಿರು ಅಂತಾನೂ ನೋಡಲಿಲ್ಲ,+ಸ್ವಂತ ಮಕ್ಕಳ ಪಕ್ಷ ವಹಿಸಲಿಲ್ಲ. ಅವರು ನಿನ್ನ ಮಾತು ಕೇಳಿದ್ರು,ನಿನ್ನ ಒಪ್ಪಂದನ ಪಾಲಿಸಿದ್ರು.+ 10  ಅವರು ನಿನ್ನ ತೀರ್ಪುಗಳನ್ನ ಯಾಕೋಬನಿಗೆ ಕಲಿಸ್ಲಿ,+ನಿನ್ನ ನಿಯಮ ಪುಸ್ತಕನ ಇಸ್ರಾಯೇಲನಿಗೆ ಕಲಿಸ್ಲಿ.+ ನಿನ್ನನ್ನ ಖುಷಿಪಡಿಸೋಕೆ ಸುವಾಸನೆ ಬರೋ ಧೂಪ ಅರ್ಪಿಸ್ಲಿ,+ನಿನ್ನ ಯಜ್ಞವೇದಿ ಮೇಲೆ ಸರ್ವಾಂಗಹೋಮ ಬಲಿ ಕೊಡ್ಲಿ.+ 11  ಯೆಹೋವನೇ, ಅವನಿಗೆ ಹೆಚ್ಚು ಬಲ ಕೊಡು,ಅವನ ಕೈಕೆಲಸ ನೋಡಿ ನೀನು ಆನಂದ ಪಡು. ಅವನ ಶತ್ರುಗಳ ಕಾಲುಗಳನ್ನ* ಮುರಿದುಹಾಕು,ಅವನನ್ನ ದ್ವೇಷಿಸೋರು ಇನ್ಯಾವತ್ತೂ ಅವನ ವಿರುದ್ಧ ಬರದೇ ಇರೋ ತರ ಮಾಡು.” 12  ಬೆನ್ಯಾಮೀನಿನ ಬಗ್ಗೆ ಮೋಶೆ ಹೀಗಂದ:+ “ಯೆಹೋವನಿಗೆ ಇಷ್ಟವಾದ ಇವನನ್ನ ಆತನು ಸಂರಕ್ಷಿಸಲಿ,ದಿನವಿಡೀ ಆತನ ಆಶ್ರಯದಲ್ಲಿರಲಿ,ಆತನ ಭುಜಗಳ ಮಧ್ಯ ವಾಸಿಸಲಿ.” 13  ಯೋಸೇಫನ ಬಗ್ಗೆ ಮೋಶೆ ಹೀಗಂದ:+ “ಯೆಹೋವ ಅವನ ಜಮೀನನ್ನ ಆಶೀರ್ವದಿಸಲಿ,+ಆಕಾಶದಿಂದ ಇಬ್ಬನಿ, ಆಶೀರ್ವಾದ ಅಲ್ಲಿ ಸುರಿಲಿ,ಬುಗ್ಗೆಗಳಿಂದ ನೀರು ಉಕ್ಕಿ ಹರಿಲಿ,+ 14  ಸೂರ್ಯನ ಕಿರಣಗಳಿಂದ ಒಳ್ಳೊಳ್ಳೇ ಗಿಡಮರ ಬೆಳೀಲಿ,ಪ್ರತಿ ತಿಂಗಳು ಒಳ್ಳೇ ಬೆಳೆ ಸಿಗಲಿ,+ 15  ಜಮಾನದ ಬೆಟ್ಟಗಳು,*+ ಶಾಶ್ವತ ಬೆಟ್ಟಗಳುಅತ್ಯುತ್ತಮ ವಸ್ತುಗಳನ್ನ ಕೊಡ್ಲಿ, 16  ಭೂಮಿಯ ಸಿರಿಸಂಪತ್ತು ಅವನಿಗೆ ಸೇರಲಿ,+ಮುಳ್ಳಿನ ಪೊದೆಯಲ್ಲಿ ಕಾಣಿಸ್ಕೊಂಡ ದೇವರು ಅವನನ್ನ ಮೆಚ್ಚಲಿ.+ ಈ ಆಶೀರ್ವಾದಗಳು ಯೋಸೇಫನ ತಲೆ ಮೇಲೆ ಸುರಿಲಿ,ತನ್ನ ಅಣ್ಣತಮ್ಮಂದಿರಲ್ಲಿ ಆರಿಸ್ಕೊಂಡವನ ಮೇಲೆ ಅವು ಯಾವಾಗ್ಲೂ ಇರಲಿ.+ 17  ಅವನ ಹಿರಿಮೆ ಮೊದ್ಲು ಹುಟ್ಟಿದ ಹೋರಿಯ ಹಿರಿಮೆ ತರ,ಅವನ ಕೊಂಬುಗಳು ಕಾಡು ಕೋಣದ ಕೊಂಬುಗಳ ತರ. ಅವನು ತನ್ನ ಕೊಂಬುಗಳಿಂದ ದೇಶ ದೇಶದ ಜನ್ರನ್ನಭೂಮಿಯ ಕಟ್ಟಕಡೆಯ ತನಕನೂ ನೂಕ್ತಾನೆ. ಆ ಕೊಂಬುಗಳೇ ಎಫ್ರಾಯೀಮಿನ ಸಾವಿರಾರು ವೀರರು,+ಮನಸ್ಸೆಯ ಸಾವಿರಾರು ಶೂರರು.” 18  ಜೆಬುಲೂನನ ಬಗ್ಗೆ ಮೋಶೆ ಹೀಗಂದ:+ “ಜೆಬುಲೂನನೇ, ನಿನ್ನ ವ್ಯಾಪಾರದಲ್ಲಿ ಖುಷಿಪಡು,ಇಸ್ಸಾಕಾರನೇ, ನಿನ್ನ ಡೇರೆಗಳಲ್ಲಿ ಸಂತೋಷಿಸು.+ 19  ಅವರಿಬ್ರು ಸಮುದ್ರಗಳ ಸಮೃದ್ಧ ಸಿರಿಸಂಪತ್ತನ್ನ ಬಾಚ್ಕೊಳ್ತಾರೆ,ಮರಳಲ್ಲಿ ಅಡಗಿರೋ ನಿಧಿನಿಕ್ಷೇಪಗಳನ್ನ ತಗೊಳ್ತಾರೆ. ಹಾಗಾಗಿ ಅವರು ಜನ್ರನ್ನ ಬೆಟ್ಟಕ್ಕೆ ಕರೀತಾರೆ. ಅಲ್ಲಿ ನೀತಿಯ ಬಲಿಗಳನ್ನ ಕೊಡ್ತಾರೆ.” 20  ಗಾದನ ಬಗ್ಗೆ ಮೋಶೆ ಹೀಗಂದ:+ “ಗಾದನ ಗಡಿಗಳನ್ನ ವಿಸ್ತರಿಸೋನು ಆಶೀರ್ವಾದ ಪಡೀತಾನೆ.+ ಅವನು ಸಿಂಹದ ತರ ಹೊಂಚು ಹಾಕಿದ್ದಾನೆ,ತನ್ನ ಬೇಟೆಯ ತೋಳನ್ನ ಸೀಳೋಕೆ, ತಲೆ ಛಿದ್ರ ಮಾಡೋಕೆ ಕಾಯ್ತಾ ಇದ್ದಾನೆ. 21  ದೇಶದ ಒಳ್ಳೇ ಭಾಗನ ಅವನು ಆರಿಸ್ಕೊಳ್ತಾನೆ,+ನಿಯಮದಾತ ಇದನ್ನೇ ಅವನಿಗಾಗಿ ಕಾದಿರಿಸಿಟ್ಟ.+ ಅವನು ಜನ್ರ ಮುಖ್ಯಸ್ಥರ ಜೊತೆ ಸೇರ್ತಾನೆ. ಯೆಹೋವನ ಪರವಾಗಿ ನ್ಯಾಯ ಸ್ಥಾಪಿಸ್ತಾನೆ,ಆತನ ತೀರ್ಪುಗಳನ್ನ ಇಸ್ರಾಯೇಲಿನಲ್ಲಿ ಜಾರಿಗೆ ತರ್ತಾನೆ.” 22  ದಾನನ ಬಗ್ಗೆ ಮೋಶೆ ಹೀಗಂದ:+ “ದಾನ ಸಿಂಹದ ಮರಿ.+ ಅವನು ಬಾಷಾನಿನಿಂದ ಜಿಗಿತಾನೆ.”+ 23  ನಫ್ತಾಲಿಯ ಬಗ್ಗೆ ಮೋಶೆ ಹೀಗಂದ:+ “ನಫ್ತಾಲಿಗೆ ಯೆಹೋವನ ಆಶೀರ್ವಾದ ಹೆಚ್ಚಾಗಿ ಸಿಗ್ಲಿ,ಆತನ ಮೆಚ್ಚಿಕೆ ಪಡೆದು ಸಂತೃಪ್ತನಾಗಲಿ. ನೀನು ಪಶ್ಚಿಮ, ದಕ್ಷಿಣದಲ್ಲಿರೋ ದೇಶನ ವಶ ಮಾಡ್ಕೋ.” 24  ಅಶೇರನ ಬಗ್ಗೆ ಮೋಶೆ ಹೀಗಂದ:+ “ಅಶೇರನ ವಂಶ ಬೆಳೀಲಿ. ಅವನು ಅಣ್ಣತಮ್ಮಂದಿರ ಮೆಚ್ಚಿಕೆ ಪಡಿಲಿ,ಅವನು ಎಣ್ಣೆಯಲ್ಲಿ ಸ್ನಾನ ಮಾಡ್ಲಿ.* 25  ನಿನ್ನ ಬಾಗಿಲ ಬೀಗಗಳು ಕಬ್ಬಿಣ ಮತ್ತು ತಾಮ್ರದ್ದು,+ನೀನು ಜೀವನಪೂರ್ತಿ ಸುರಕ್ಷಿತನಾಗಿ ಇರ್ತಿಯ. 26  ಯೆಶುರೂನನ+ ಸತ್ಯ ದೇವರ ತರ ಬೇರೆ ಯಾರೂ ಇಲ್ಲ,+ನಿನಗೆ ಸಹಾಯ ಮಾಡೋಕೆ ಆತನು ಆಕಾಶದಿಂದ ಸವಾರಿ ಮಾಡಿ ಬರ್ತಾನೆ,ಮೋಡಗಳ ಮೇಲೆ ಸವಾರಿ ಮಾಡ್ತಾ ವೈಭವದಿಂದ ಬರ್ತಾನೆ.+ 27  ದೇವರು ಆಗಿನ ಕಾಲದಿಂದಾನೂ ನಿನ್ನ ಆಶ್ರಯ ಆಗಿದ್ದಾನೆ,+ಆತನ ಕೈಗಳು ಯಾವಾಗ್ಲೂ ನಿನಗೆ ಆಧಾರವಾಗಿ ಇರುತ್ತೆ.+ ಆತನು ಶತ್ರುಗಳನ್ನ ನಿನ್ನ ಮುಂದಿನಿಂದ ಓಡಿಸಿಬಿಟ್ಟು,+‘ಅವರನ್ನ ನಾಶ ಮಾಡು!’ ಅಂತ ಹೇಳ್ತಾನೆ.+ 28  ಆ ದೇಶದಲ್ಲಿ ಇಸ್ರಾಯೇಲ ಸುರಕ್ಷಿತವಾಗಿ ವಾಸಿಸ್ತಾನೆ,ಅಲ್ಲಿ ಯಾಕೋಬನ ವಂಶ* ಮಾತ್ರ ಇರುತ್ತೆ,ಧಾನ್ಯ, ಹೊಸ ದ್ರಾಕ್ಷಾಮದ್ಯ ತುಂಬ ಇರುತ್ತೆ,+ಆಕಾಶದಿಂದ ಇಬ್ಬನಿ ಬೀಳ್ತಾ ಇರುತ್ತೆ.+ 29  ಇಸ್ರಾಯೇಲ್ಯರೇ, ನೀವು ಸಂತೋಷವಾಗಿ ಇರ್ತಿರ!+ ಯೆಹೋವನ ರಕ್ಷಣೆನ ಅನುಭವಿಸೋ ಜನ್ರು ನೀವೇ,+ನಿಮ್ಮನ್ನು ರಕ್ಷಿಸೋ ಗುರಾಣಿ ಆತನೇ,+ನಿಮ್ಮ ಅತಿಶ್ರೇಷ್ಠ ಕತ್ತಿ ಆತನೇ,ಇಂಥ ಸೌಭಾಗ್ಯ ಯಾರಿಗಿದೆ ಹೇಳಿ?+ ನಿಮ್ಮ ಶತ್ರುಗಳು ನಿಮ್ಮ ಮುಂದೆ ಭಯದಿಂದ ಮುದುರಿಕೊಳ್ತಾರೆ,+ನೀವು ಅವ್ರ ಬೆನ್ನ ಮೇಲೆ* ಹತ್ತಿ ಅವ್ರನ್ನ ತುಳಿದುಬಿಡ್ತೀರ.”

ಪಾದಟಿಪ್ಪಣಿ

ಅರ್ಥ “ನೀತಿವಂತ.” ಇದು ಇಸ್ರಾಯೇಲ್ಯರಿಗಿದ್ದ ಗೌರವಾನ್ವಿತ ಬಿರುದು.
ಅಥವಾ “ಸೊಂಟವನ್ನ.”
ಬಹುಶಃ, “ಪೂರ್ವದ ಬೆಟ್ಟಗಳು.”
ಅಕ್ಷ. “ಕಾಲು ಅದ್ದಲಿ.”
ಅಕ್ಷ. “ಬುಗ್ಗೆ.”
ಬಹುಶಃ, “ದೇವಸ್ಥಾನಗಳನ್ನ.”